ವ್ಯಾಯಾಮ ನಿರ್ಲಕ್ಷ್ಯ: ಮಾರಣಾಂತಿಕ ಖಾಯಿಲೆಗೆ ತುತ್ತಾಗಿದ್ದಾರೆ 104 ಕೋಟಿ ಜನರು!

news18
Updated:September 6, 2018, 1:35 PM IST
ವ್ಯಾಯಾಮ ನಿರ್ಲಕ್ಷ್ಯ: ಮಾರಣಾಂತಿಕ ಖಾಯಿಲೆಗೆ ತುತ್ತಾಗಿದ್ದಾರೆ 104 ಕೋಟಿ ಜನರು!
news18
Updated: September 6, 2018, 1:35 PM IST
-ನ್ಯೂಸ್ 18 ಕನ್ನಡ

ಇತ್ತೀಚೆಗಷ್ಟೇ ಸ್ಥೂಲಕಾಯತೆ ಎಂಬುದು ವಿಶ್ವದ ಗಂಭೀರ ಸಮಸ್ಯೆಗಳಲ್ಲಿ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಇದೀಗ ವಿಶ್ವದಾದ್ಯಂತ 1.4  ಬಿಲಿಯನ್ (104 ಕೋಟಿ) ಜನರು ಯಾವುದೇ ರೀತಿಯ ವ್ಯಾಯಾಮ ಮಾಡದೇ ಮಾರಣಾಂತಿಕ ಖಾಯಿಲೆಗೆ ತುತ್ತಾಗಿದ್ದಾರೆ ಎಂದು ವೈದ್ಯರ ತಂಡವೊಂದು ಎಚ್ಚರಿಸಿದೆ. ಆಧುನಿಕ ಜೀವನ ಶೈಲಿ ಮತ್ತು ವ್ಯಾಯಾಮವಿಲ್ಲದ ಬದುಕು ಈ ಅಪಾಯವನ್ನು ಹೆಚ್ಚಲು ಕಾರಣ ಎನ್ನಲಾಗಿದೆ.

ಅಭಿವೃದ್ದಿ ಹೊಂದಿರುವ ರಾಷ್ಟ್ರಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚಿರುವುದಾಗಿ ತಿಳಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಈ ರೀತಿಯ ಅನಾರೋಗ್ಯದಿಂದ ಬಳಲುತ್ತಿರುವರಲ್ಲಿ ವಿಶ್ವ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಸ್ತ್ರೀಯರು ಮತ್ತು ನಾಲ್ಕನೇ ಒಂದು ಭಾಗದಷ್ಟು ಪುರುಷರಿದ್ದಾರೆ ಎಂದು ತಿಳಿಸಿದೆ. ಹೀಗೆ ದೈಹಿಕ ವ್ಯಾಯಾಮವನ್ನು ನಿರ್ಲಕ್ಷಿಸಿದ ವ್ಯಕ್ತಿಗಳಲ್ಲಿ ಹೃದಯ ರೋಗ, ಮಧುಮೇಹ ಮತ್ತು ಕ್ಯಾನ್ಸರ್​ನಂತಹ ಅಪಾಯಕಾರಿ ರೋಗಗಳು ಕಾಣಿಸಿಕೊಂಡಿದೆ.

'ದೈಹಿಕ ಚಟುವಟಿಕೆಯಿಂದ ದೂರುವಿರುವ ವ್ಯಕ್ತಿಗಳಲ್ಲಿ ಅಪಾಯಕಾರಿ ರೋಗಗಳು ಕಾಣಿಸುತ್ತಿದ್ದು, ಇದರಿಂದ ಮಾನಸಿಕ ಆರೋಗ್ಯ ಮತ್ತು ಜೀವನದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತಿದೆ' ಎಂದು ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್​ ಜರ್ನಲ್ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಯಸ್ಕರು ಪ್ರತಿ ವಾರ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ವಾರಕ್ಕೆ 75 ನಿಮಿಷಗಳ ಕಾಲ ತೀವ್ರ ವ್ಯಾಯಾಮ ನಿರ್ವಹಿಸುವುದು ಕೂಡ ಉತ್ತಮ ಎಂದು WHO ತಿಳಿಸಿದೆ.

ಈ ಅಧ್ಯಯನಕ್ಕಾಗಿ 2016 ರಿಂದ ಪ್ರಪಂಚದಾದ್ಯಂತ 168 ರಾಷ್ಟ್ರಗಳ 1.9 ಮಿಲಿಯನ್ ಜನರ ದೈಹಿಕ ಚಟುವಟಿಕೆಯ ಮಟ್ಟವನ್ನು ಅಧ್ಯಯನ ಮಾಡಲಾಗಿದೆ. ಈ ವೇಳೆ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಹೊರತಾಗಿ, 2001ರಿಂದ ದೈಹಿಕ ಚಟುವಟಿಕೆಯ ಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನದ ಫಲಿತಾಂಶದ ಪ್ರಕಾರ ವಿಶ್ವದ ವಯಸ್ಕರಲ್ಲಿ 1.4 ಬಿಲಿಯನ್ ಜನರು ದೈಹಿಕ ಚಟುವಟಿಕೆಯಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ತಿಳಿಸಲಾಗಿದೆ.

ಜನರನ್ನು ವ್ಯಾಯಾಮದತ್ತ ಸೆಳೆಯಲು ನಾವು ಖಂಡಿತವಾಗಿಯೂ ಯಾವುದೇ ಪ್ರೋತ್ಸಾಹಕರ ಕಾರ್ಯಕ್ರಮ ನೀಡಿಲ್ಲ ಎಂದು ತಿಳಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ರೆಜಿನಾ ಗುಥೊಲ್ಡ್, ಹೀಗಾಗಿ ಜನರ ಆರೋಗ್ಯದಲ್ಲಿ ಪ್ರಗತಿಯನ್ನು ನಿರೀಕ್ಷಿಸುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Loading...

ಅದೇ ರೀತಿ ಈ ಅಧ್ಯಯನದ ಮೂಲಕ ಶ್ರೀಮಂತ ರಾಷ್ಟ್ರಗಳ ಮತ್ತು ಬಡ ರಾಷ್ಟ್ರಗಳಲ್ಲಿನ ಜನರ ಆರೋಗ್ಯ ಗುಣಮಟ್ಟ ಮತ್ತು ವ್ಯಾಯಾಮ ವಿಧಾನಗಳು, ಪುರುಷ ಮತ್ತು ಮಹಿಳೆಯರ ಆರೋಗ್ಯ ಸ್ಥಿತಿ ಗತಿಗಳ ಮೇಲೆ ಈ ಅಧ್ಯಯನ ಬೆಳಕು ಚೆಲ್ಲಲಾಗಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ