ಗೋವಾ ಪ್ರವಾಸಕ್ಕೆ ಹೋಗುವವರೇ ಇತ್ತ ಗಮನಿಸಿ...

news18
Updated:July 21, 2018, 5:06 PM IST
ಗೋವಾ ಪ್ರವಾಸಕ್ಕೆ ಹೋಗುವವರೇ ಇತ್ತ ಗಮನಿಸಿ...
news18
Updated: July 21, 2018, 5:06 PM IST
-ನ್ಯೂಸ್ 18 ಕನ್ನಡ

ಗೋವಾಗೆ ಪ್ರವಾಸಕ್ಕೆ ಹೋಗುವವರೇ ಇತ್ತ ಗಮನಿಸಿ. ಇನ್ನು ಮುಂದೆ ಗೋವಾದಲ್ಲಿ ಮದ್ಯಪಾನ ಮಾಡುವಂತಿಲ್ಲ ಅಂದಿದ್ದಾರೆ ಮುಖ್ಯಮುಂತ್ರಿ ಮನೋಹರ್ ಪರಿಕ್ಕರ್ !. ಆಶ್ಚರ್ಯಪಡಬೇಡಿ, ಗೋವಾ ಸಿಎಂ ಈ ಹೊಸ ಕಾನೂನು ರೂಪಿಸುತ್ತಿರುವುದು ಸಾರ್ವಜನಿಕ ಮದ್ಯಪಾನಕ್ಕೆ ಕಡಿವಾಣ ಹಾಕಲು ಅಷ್ಟೇ.

ಹೌದು, ಗೋವಾದಲ್ಲಿ ಸಾರ್ವಜನಿಕ 'ಎಣ್ಣೆ' ಹೊಡೆಯುವುದನ್ನು ತಡೆಗಟ್ಟಲು ಅಲ್ಲಿನ ಸರ್ಕಾರ ದಂಡ ವಿಧಿಸಲು ತೀರ್ಮಾನಿಸಿದೆ. ಶೀಘ್ರದಲ್ಲೇ ಈ ಹೊಸ ನಿಯಮ ಜಾರಿಗೆ ಬರಲಿದ್ದು, ಇದರ ಬಳಿಕ ಗೋವಾ ಪ್ರದೇಶದಲ್ಲಿ ಸಾರ್ವಜನಿಕವಾಗಿ ಕಿಕ್​ ಏರಿಸಿದರೆ 2500 ರೂ ದಂಡ ಪಾವತಿಸಬೇಕಾಗುತ್ತದೆ.

ರಾಜಧಾನಿ ಪಣಜಿಯಲ್ಲೂ ಎಲ್ಲೆಂದರಲ್ಲಿ ಬಿಯರ್ ಬಾಟಲ್​ಗಳು ಎಸೆಯಲಾಗುತ್ತಿದ್ದು, ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳು ಸಹ ನದಿ ದಡಗಳಲ್ಲಿ ಪಾನಮತ್ತರಾಗಿ ತಿರುಗಾಡುತ್ತಿದ್ದಾರೆ. ಇವೆಲ್ಲವನ್ನು ಗಮನದಲ್ಲಿರಿಸಿ ಗೋವಾ ಸರ್ಕಾರ ರಾಜ್ಯದಲ್ಲಿ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ.

'ಈ ಹಿಂದೆ ಎರಡು ಮೂರು ಕಾಲೇಜು ವಿದ್ಯಾರ್ಥಿಗಳು ಬಿಯರ್​ ಬಾಟಲಿಗಳೊಂದಿಗೆ ನದಿಯ ದಡದಲ್ಲಿರುವುದನ್ನು ಗಮನಿಸಿದ್ದೇನೆ. ಕುಡಿದ ಬಳಿಕ ಬಾಟಲಿಗಳನ್ನು ಕಲ್ಲಿಗೆ ಎಸೆದು ಹೊಡೆದಾಕಿದ್ದರು. ಇದೇ ಬಾಟಲಿ ಚೂರುಗಳು ಮುಂದೆ ಸಾರ್ವಜನಿಕರಿಗೆ ತೊಂದರೆಯಾಗಿ ಪರಿಣಮಿಸುತ್ತದೆ' ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರವಾಸಿಗರ ಸ್ವರ್ಗ ಎಂದು ಹೇಳಲಾಗುವ ಗೋವಾದಲ್ಲಿ ಮೋಜು ಮಸ್ತಿಗೆ ಕಡಿವಾಣ ಹಾಕುವ ನಿಷೇಧ ಇದೇ ಮೊದಲೇನಲ್ಲ. ಈ ಹಿಂದೆ 2017 ರಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ  ಎಂದು ರಾತ್ರಿ 10 ಗಂಟೆಯ ನಂತರ ಪಾರ್ಟಿಗೆ ನಿಷೇಧ ಹೇರಲಾಗಿತ್ತು.

ಹಾಗೆಯೇ  ಪರಿಸರ ಮಾಲಿನ್ಯವಾಗುತ್ತಿದೆ ಎಂದು ಪ್ರವಾಸಿಗರು ಸಾರ್ವಜನಿಕವಾಗಿ ಅಡುಗೆ ತಯಾರಿಸುವುದನ್ನು ನಿಷೇಧಿಸಲಾಗಿತ್ತು. ಇದಲ್ಲದೆ ಸೂರ್ಯಾಸ್ತಮಾನದ ಬಳಿಕ ಸಮುದ್ರ ತೀರದಲ್ಲಿ ಈಜಾಡುವುದನ್ನು ನಿಯಂತ್ರಿಸಲು ಗೋವಾ ಸರ್ಕಾರ ಕ್ರಮ ಕೈಗೊಂಡಿತ್ತು.
Loading...

ಈ ಹಿಂದೆ  ಹೆಣ್ಮಕ್ಕಳು ಬಿಯರ್ ಕುಡಿಯುವುದನ್ನು ನೋಡಿದರೆ ಆತಂಕವಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಗೋವಾ ಸಿಎಂ ನೀಡಿದ್ದರು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ #GirlsWhoDrinkBeer ಎಂಬ ಹ್ಯಾಶ್​ಟ್ಯಾಗ್​ನಲ್ಲಿ ಅಭಿಯಾನ ಕೂಡ ಶುರುವಾಗಿತ್ತು.

ಇದೀಗ ಮೋಜು ಮಸ್ತಿಗೆಂದೇ ಗೋವಾಗೆ ತೆರಳುವ ಪ್ರವಾಸಿಗರು ಇಕ್ಕಟ್ಟಿಗೆ ಸಿಲುಕುವಂತಹ 'ಸಾರ್ವಜನಿಕ ಕುಡಿತಕ್ಕೆ ದಂಡ' ಹಾಕುವ ಹೊಸ ನಿಯಮವನ್ನು ಜನರು ಯಾವ ರೀತಿಯಾಗಿ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾಲವೇ ಉತ್ತರಿಸಲಿದೆ.
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...