NIMHANS Recruitment: ಬೆಂಗಳೂರು ನಿಮಾನ್ಸ್​ನಲ್ಲಿದೆ ಉದ್ಯೋಗಾವಕಾಶ

NIMHANS Recruitment: ಆಯಾ ಹುದ್ದೆಗಳಿಗೆ ಅದರದ್ದೆಯಾದ ವೇತನ ಸಿಗದಿಪಡಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,000 ರಿಂದ 50 ಸಾವಿರದವರೆಗೆ ವೇತನ ಸಿಗಲಿದೆ.

zahir | news18-kannada
Updated:November 20, 2019, 3:08 PM IST
NIMHANS Recruitment: ಬೆಂಗಳೂರು ನಿಮಾನ್ಸ್​ನಲ್ಲಿದೆ ಉದ್ಯೋಗಾವಕಾಶ
JOB
  • Share this:
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ(NIMHANS) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ಭರ್ತಿಯನ್ನು 'IMPACT in South Asia' ಹೊಸ ಪ್ರಾಜೆಕ್ಟ್‌ ಗುತ್ತಿಗೆ ಆಧಾರದ ಅಡಿಯಲ್ಲಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

ಹುದ್ದೆಗಳ ಹುದ್ದೆಗಳ ಮತ್ತು ಸಂಖ್ಯೆ:
ಆಡಳಿತಗಾರ- 01

ರಿಸರ್ಚ್‌ ಫೆಲೋ - 01
ರಿಸರ್ಚ್‌ ಫೆಲೋ 2- 2
ರಿಸರ್ಚ್ ಅಸಿಸ್ಟಂಟ್- 04

ವಿದ್ಯಾರ್ಹತೆ:
Loading...

ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅದರೊಂದಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಭಾಗಗಳಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು. ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಗರಿಷ್ಠ ವಯೋಮಿತಿ:
35 ವರ್ಷಗಳು.

ವೇತನ:
ಆಯಾ ಹುದ್ದೆಗಳಿಗೆ ಅದರದ್ದೆಯಾದ ವೇತನ ಸಿಗದಿಪಡಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,000 ರಿಂದ 50 ಸಾವಿರದವರೆಗೆ ವೇತನ ಸಿಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ರೆಸ್ಯೂಮ್ ಹಾಗೂ ಅಗತ್ಯ ದಾಖಲೆಗಳನ್ನು impactnimhans@gmail.com ಗೆ ಇ-ಮೇಲ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕ:
ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30 ನವೆಂಬರ್ 2019

ಹೆಚ್ಚಿನ ಮಾಹಿತಿಗಾಗಿ ನಿಮಾನ್ಸ್‌ನ ಅಧಿಕೃತ ವೆಬ್‌ಸೈಟ್ www.nimhans.ac.in ಗೆ ಭೇಟಿ ನೀಡಬಹುದು.

(ವಿ.ಸೂ: ಕೆಲವೊಂದು ಆ್ಯಪ್​ಗಳಲ್ಲಿ ಲಿಂಕ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ News18 Kannada App ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ಲಿಂಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು)
First published:November 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...