ಜಂಕ್​ ಫುಡ್​ ಸೇವನೆಯಿಂದ ನಿದ್ರಾಹೀನತೆ ಸಮಸ್ಯೆ: ಅಧ್ಯಯನದಿಂದ ಸಾಬೀತು

news18
Updated:June 5, 2018, 1:41 PM IST
ಜಂಕ್​ ಫುಡ್​ ಸೇವನೆಯಿಂದ ನಿದ್ರಾಹೀನತೆ ಸಮಸ್ಯೆ: ಅಧ್ಯಯನದಿಂದ ಸಾಬೀತು
news18
Updated: June 5, 2018, 1:41 PM IST
ನ್ಯೂಸ್ 18 ಕನ್ನಡ

ಹಸಿವಾದರೆ ಆಹಾರ ಸೇವಿಸುವುದೊಂದೇ ಪರಿಹಾರ, ಹೀಗಿರುವಾಗ ಮಧ್ಯರಾತ್ರಿ ಹಸಿವಾದರೆ ಹೇಳಬೇಕೆಂದಿಲ್ಲ. ಯಾವುದೇ ತಿಂಡಿಯಾದರೂ ಸರಿ ತಿನ್ನಲು ತಯಾರಿರುತ್ತಾರೆ. ಬಹುತೇಕ ಮಂದಿ ರಾತ್ರಿಯಲ್ಲಿ ತಿಂಡಿ ತಿನಿಸನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಇಂತಹ ಅಭ್ಯಾಸ ನಿಮ್ಮ ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಜಂಕ್ ಫುಡ್ ಸೇವನೆಯಿಂದ ನಿದ್ದೆ ಕಡಿಮೆಯಾಗುವುದರೊಂದಿಗೆ, ಬೊಜ್ಜು, ಮಧುಮೇಹ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸುವ ಸಾಧ್ಯತೆಯಿದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

'ನಿದ್ರೆಯ ಅಭಾವದಿಂದ ರಾತ್ರಿ ವೇಳೆ ಜಂಕ್ ಫುಡ್​ ಸೇವಿಸುವ ಬಯಕೆ ಉಂಟಾಗಬಹುದು, ಅದರೆ ಇದು ಅನಾರೋಗ್ಯವನ್ನು ಮತ್ತು ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂಬುದು ಪ್ರಯೋಗದಿಂದ ತಿಳಿದು ಬಂದಿದೆ' ಎಂದು ಅಮೆರಿಕದ ಅರಿಝೋನಾ ವಿಶ್ವವಿದ್ಯಾಲಯದ ಸೈಕಿಯಾಟ್ರಿ ವಿಭಾಗದ ಮೈಕೆಲ್ ಎ. ಗ್ರ್ಯಾಂಡ್ನರ್ ತಿಳಿಸಿದ್ದಾರೆ.

ಬಾಲ್ಟಿಮೋರ್​ನಲ್ಲಿ ನಡೆದ 'ಅಸೋಸಿಯೇಟೆಡ್ ಪ್ರೊಫೆಶನಲ್ ಸ್ಲೀಪ್ ಸೊಸೈಟೀಸ್ ಎಲ್ಎಲ್​ಸಿ (ಎಪಿಎಸ್ಎಸ್)' ಸಂಸ್ಥೆಯ 32ನೇ ವಾರ್ಷಿಕ ಸಭೆಯಲ್ಲಿ ಈ ಅಧ್ಯಯನವನ್ನು ಮಂಡಿಸಲಾಗಿದೆ. ಫೋನ್ ಮೂಲಕ ನಡೆಸಲಾದ ಈ ಸಮೀಕ್ಷೆಯಲ್ಲಿ ಒಟ್ಟು 3,105 ಮಂದಿ ಭಾಗವಹಿಸಿದ್ದರು. ಈ ಅಧ್ಯಯನದಲ್ಲಿ ಭಾಗವಹಿಸಿದ ಶೇ. 60ರಷ್ಟು ಮಂದಿಗೆ ರಾತ್ರಿ ತಿಂಡಿ ತಿನಿಸು ಹಾಗೂ ಜಂಕ್ ಫುಡ್ ಸೇವಿಸಿದ್ದರಿಂದ ನಿದ್ರಾಹೀನತೆ ಸಮಸ್ಯೆಗೊಳಗಾಗಿದ್ದಾರೆ. ಅಲ್ಲದೆ ರಾತ್ರಿ ವೇಳೆ ಜಂಕ್ ಫುಡ್​ ತಿನ್ನುವುದರಿಂದ ಮಧುಮೇಹ ರೋಗ ಉಂಟಾಗುವ ಸಾಧ್ಯತೆಯೂ ಹೆಚ್ಚು ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.

'ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳ ಅನಿವಾರ್ಯ. ನಿದ್ದೆಯನ್ನು ಹೆಚ್ಚಿಸಲು ಪೌಷ್ಟಿಕಾಂಶದ ಆಹಾರ ಅತ್ಯಗತ್ಯ. ಆರೋಗ್ಯವನ್ನು ಹೆಚ್ಚಿಸಲು ನಿದ್ರೆ ಮತ್ತು ಆಹಾರದ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಳ್ಳಲು ಈ ಅಧ್ಯಯನದಿಂದ ನೆರವಾಗಿದೆ' ಎಂದು ವಾರ್ಸಿಟಿಯ ಕ್ರಿಸ್ಟೋಫರ್ ಸ್ಯಾಂಚೆಜ್ ಹೇಳಿದ್ದಾರೆ.
First published:June 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ