ರಾತ್ರಿ ಪಾಳಿ ಮಾಡಿದ್ರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ, ಡಿಎನ್ಎಗೂ ಅಪಾಯ!

ಇಂದಿನ ಯುವ ಜನತೆ ಮೊಬೈಲ್​, ಕಂಪ್ಯೂಟರ್​ ಬಳಕೆ ಹೆಚ್ಚು ಮಾಡುತ್ತಿದೆ. ಇದರಿಂದ ರಾತ್ರಿ ತಡವಾಗಿ ನಿದ್ರಿಸುವ ಸಾಧ್ಯತೆಗಳಿರುತ್ತವೆ. ಇದು ಕೂಡ ಕ್ಯಾನ್ಸರ್​ ಹಾಗೂ ಡಿಎನ್​ಎ ವಿಘಟನೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

Rajesh Duggumane | news18
Updated:January 30, 2019, 10:01 AM IST
ರಾತ್ರಿ ಪಾಳಿ ಮಾಡಿದ್ರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ, ಡಿಎನ್ಎಗೂ ಅಪಾಯ!
ಪ್ರಾತಿನಿಧಿಕ ಚಿತ್ರ
  • News18
  • Last Updated: January 30, 2019, 10:01 AM IST
  • Share this:
ಮಹಾನಗರಗಳಲ್ಲಿ ಕೆಲಸ ಮಾಡುವವರಿಗೆ ರಾತ್ರಿ ಪಾಳಿ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ನೈಟ್​ ಶಿಫ್ಟ್​ ಮಾಡುವುದರಿಂದ ನಿದ್ರೆಯ ಕೊರತೆ ಮಾತ್ರ ಎದುರಾಗುತ್ತದೆ ಎಂಬುದು ಹಲವರ ನಂಬಿಕೆ. ಆದರೆ, ರಾತ್ರಿ ನಿದ್ರೆ ಮಾಡದೇ ಕೆಲಸ ಮಾಡುತ್ತಾ ಕೂತರೆ ದೊಡ್ಡ ದೊಡ್ಡ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇದೆಯಂತೆ. ಹೊಸ ಅಧ್ಯಯನದಿಂದ ಈ ವಿಚಾರ ಬಹಿರಂಗಗೊಂಡಿದೆ.

ಈ ಬಗ್ಗೆ ಅಮೆರಿಕ ಅಧ್ಯಯನಕಾರರು ಸುದೀರ್ಘವಾಗಿ ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ಅವರಿಗೆ ತಿಳಿದು ಬಂದ ವಿಚಾರ ಏನೆಂದರೆ, ನಿರಂತರವಾಗಿ ರಾತ್ರಿ ಪಾಳಿ ಮಾಡುವುದು ಡಿಎನ್​ಎ ವಿಘಟನೆಯಾಗಲು ಕಾರಣವಾಗುತ್ತದೆಯಂತೆ. ಒಂದೊಮ್ಮೆ ಡಿಎನ್​ಎಗೆ ಹೊಡೆತ ಬಿದ್ದರೆ ಅದರಿಂದ ಮುಂದಿನ ಪೀಳಿಗೆಗೆ ಸಮಸ್ಯೆ ಉಂಟಾಗಲಿದೆ ಎನ್ನುತ್ತದೆ ವೈದ್ಯಲೋಕ.

ಇಂದಿನ ಯುವ ಜನತೆ ಮೊಬೈಲ್​, ಕಂಪ್ಯೂಟರ್​ ಬಳಕೆ ಹೆಚ್ಚು ಮಾಡುತ್ತಿದೆ. ಇದರಿಂದ ರಾತ್ರಿ ತಡವಾಗಿ ನಿದ್ರಿಸುವ ಸಾಧ್ಯತೆಗಳಿರುತ್ತವೆ. ಇದು ಕೂಡ ಕ್ಯಾನ್ಸರ್​ ಹಾಗೂ ಡಿಎನ್​ಎ ವಿಘಟನೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಮಲಗುವ ಮುನ್ನ ಎರಡು ಏಲಕ್ಕಿ ಸೇವಿಸಿ: ಆಮೇಲೆ ಕಾಣುವಿರಿ ಸಕಾರಾತ್ಮಕ ಪರಿಣಾಮ

“ರಾತ್ರಿ ನಿದ್ರೆ ಮಾಡದೆ ಇದ್ದರೆ ಅದರಿಂದ ದೈಹಿಕವಾಗಿ ಸಮಸ್ಯೆ ಉಂಟಾಗಲಿದೆ. ಅಷ್ಟೇ ಅಲ್ಲದೆ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ವ್ಯಕ್ತಿ ಎಡವುತ್ತಾನೆ. ಡಿಎನ್​ಎ ವಿಘಟನೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಲಿದೆ,” ಎಂದು ಎಚ್ಚರಿಕೆ ನೀಡುತ್ತಾರೆ ವೈದ್ಯರು.

ಅಷ್ಟೇ ಅಲ್ಲದೆ, ಆದಷ್ಟು ಈ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ ಎಂಬುದು ವೈದ್ಯರ ಸೂಚನೆ. “ರಾತ್ರಿ ಮೊಬೈಲ್​ ಬಳಕೆ ಕಡಿಮೆ ಮಾಡಿ ಬೇಗ ನಿದ್ರಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಮುಂದೆ ಬರಬಹುದಾದ ಒಂದಷ್ಟು ಸಮಸ್ಯೆಗಳನ್ನು ತಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಿ, ಮತ್ತಷ್ಟು ವಿಚಾರಗಳನ್ನು ಹೊರತೆಗೆಯುತ್ತೇವೆ,” ಎಂಬುದು ತಜ್ಞರ ಮಾತು.

ಇದನ್ನೂ ಓದಿ: ನೀರಿಲ್ಲದೆ ಏನಿಲ್ಲ; ಜಿಮ್​ನಲ್ಲಿದ್ದಾಗ ಯಾಕೆ ನೀರು ಕುಡಿಯಬೇಕು ಗೊತ್ತಾ?
First published:January 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ