• Home
  • »
  • News
  • »
  • lifestyle
  • »
  • Jaggery Sweet: ರಾತ್ರಿ ಊಟದ ನಂತರ ಸಿಹಿ ತಿನ್ನುವ ಬಯಕೆ ತಣಿಸಲು ಈ ಆಹಾರ ಸೇವಿಸಿ!

Jaggery Sweet: ರಾತ್ರಿ ಊಟದ ನಂತರ ಸಿಹಿ ತಿನ್ನುವ ಬಯಕೆ ತಣಿಸಲು ಈ ಆಹಾರ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾತ್ರಿಯ ಊಟದ ನಂತರ ನೀವು ಸಿಹಿ ತಿನ್ನಲು ಬಯಸಿದರೆ ನೀವು ಬೆಲ್ಲ ಮತ್ತು ಎಳ್ಳಿನಿಂದ ಮಾಡಿದ ಸಿಹಿ ಚಿಕ್ಕಿ ತಿನ್ನಬಹುದು. ಇದು ಆರೋಗ್ಯಕರ ಹಾಗೂ ನಿಮ್ಮ ಕಡುಬಯಕೆಗಳನ್ನು ಪೂರೈಸುತ್ತದೆ. ಎಳ್ಳಿನ ರೋಟಿ ರೆಸಿಪಿ ಚಳಿಗಾಲದ ಸಾಂಪ್ರದಾಯಿಕ ಭಕ್ಷ್ಯ ಆಗಿದೆ. ಇದನ್ನು ನಿಮ್ಮ ರಾತ್ರಿಯ ಊಟ ಅಥವಾ ಸಂಜೆಯ ಚಹಾದ ಜೊತೆ ತಿನ್ನಬಹುದು.

ಮುಂದೆ ಓದಿ ...
  • Share this:

    ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜನರು (People) ಆಹಾರದ (Food) ಆಯ್ಕೆಯಲ್ಲೂ ಬದಲಾವಣೆ (Changes) ಮಾಡುತ್ತಾರೆ. ಆದರೆ ಯಾವುದೇ ಕಾಲಮಾನದಲ್ಲಿ ಬದಲಾಗದ ಆಹಾರ ಪದಾರ್ಥವೆಂದರೆ ಸಿಹಿ ತಿನಿಸಿನ (Sweet Food) ಬಯಕೆ. ಸಿಹಿ ತಿನ್ನುವ ಬಯಕೆ ಯಾವಾಗಲೂ ಸ್ಥಿರವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚಾಗಿ ರಾತ್ರಿ ಸಿಹಿ ತಿನ್ನುವ ಬಯಕೆ ಹೆಚ್ಚುತ್ತದೆ. ಅಂತಹ ವೇಳೆ ತುಂಬಾ ಜನರು ಬೇಕರಿಯಿಂದ ಹಲವು ಸಿಹಿ ತಿನಿಸು ತಂದು ಸೇವನೆ ಮಾಡ್ತಾರೆ. ಸಿಹಿ ತಿನ್ನುವ ಕಡು ಬಯಕೆ ಹೋಗಲಾಡಿಸಲು ಹೆಚ್ಚು ಸಕ್ಕರೆ ಪದಾರ್ಥ ಸೇವಿಸುವುದು ಆರೋಗ್ಯಕ್ಕೆ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ.


    ರಾತ್ರಿ ಊಟದ ನಂತರ ತಿನ್ನಲು ಸಿಹಿ ಪದಾರ್ಥ ರೆಸಿಪಿ


    ಹಾಗಾಗಿ ರಾತ್ರಿಯ ಊಟದ ನಂತರ ನೀವು ಸಿಹಿ ತಿನ್ನಲು ಬಯಸಿದರೆ ನೀವು ಬೆಲ್ಲ ಮತ್ತು ಎಳ್ಳಿನಿಂದ ಮಾಡಿದ ಸಿಹಿ ಚಿಕ್ಕಿ ತಿನ್ನಬಹುದು. ಇದು ಆರೋಗ್ಯಕರ ಹಾಗೂ ನಿಮ್ಮ ಕಡುಬಯಕೆಗಳನ್ನು ಪೂರೈಸುತ್ತದೆ. ಎಳ್ಳಿನ ರೋಟಿ ರೆಸಿಪಿ ಚಳಿಗಾಲದ ಸಾಂಪ್ರದಾಯಿಕ ಭಕ್ಷ್ಯ ಆಗಿದೆ.


    ಇದನ್ನು ನಿಮ್ಮ ರಾತ್ರಿಯ ಊಟ ಅಥವಾ ಸಂಜೆಯ ಚಹಾದ ಜೊತೆ ತಿನ್ನಬಹುದು. ಇದರಲ್ಲಿ ಎಳ್ಳು ಕಾಳುಗಳಿದೆ. ಇಲ್ಲಿ ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದ್ದೇವೆ. ಹಾಗಾಗಿ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಆರಾಮವಾಗಿ ಸೇವಿಸಬಹುದು. ಯಾವುದೇ ಚಿಂತೆಯಿಲ್ಲದೆ ಸೇವಿಸಬಹುದು. ಬೆಲ್ಲ ಮತ್ತು ಎಳ್ಳಿನ ಪಾಕ ವಿಧಾನ ಮಾಡುವುದು ಹೇಗೆ ಅಂತಾ ನೋಡೋಣ.




    ಎಳ್ಳು ಮತ್ತು ಬೆಲ್ಲದ ರೊಟ್ಟಿ ಮಾಡಲು ಬೇಕಾಗುವ ಸಾಮಗ್ರಿಗಳು


    ಎಳ್ಳು ಬೀಜಗಳು 3 ಟೀಸ್ಪೂನ್, ಎಣ್ಣೆ 2 ಟೀಸ್ಪೂನ್, ಕಪ್ಪು ಎಳ್ಳು ಬೀಜಗಳು ಟೀಸ್ಪೂನ್, ಬೆಲ್ಲದ ಪುಡಿ ಅರ್ಧ ಕಪ್, ಏಲಕ್ಕಿ ಬೇಕು. ಗೋಧಿ ಹಿಟ್ಟು, 1 ಟೀಸ್ಪೂನ್ ಎಣ್ಣೆ, ಉಗುರುಬೆಚ್ಚಗಿನ ನೀರು 1 ಕಪ್, ಉಪ್ಪು 1 ಟೀಸ್ಪೂನ್ ಬೇಕು.


    ಎಳ್ಳು ಮತ್ತು ಬೆಲ್ಲದ ಬ್ರೆಡ್ ರೆಸಿಪಿ


    ಮೊದಲು ಹಿಟ್ಟಿನ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ನಯವಾಗಿ ಹಿಟ್ಟು ಬೆರೆಸಿ. ನಂತರ ಅದನ್ನು 10 ನಿಮಿಷಗಳ ಕಾಲ ಲಘುವಾಗಿ ಒದ್ದೆಯಾದ ಕರವಸ್ತ್ರ ಅಥವಾ ಟವೆಲ್ನಿಂದ ಮುಚ್ಚಿ. ಎಲ್ಲಾ ಸ್ಟಫಿಂಗ್ ಪದಾರ್ಥಗಳನ್ನು ಮಿಶ್ರಣ ಮಾಡಿ. ಮತ್ತು ನಯವಾದ ಮಿಶ್ರಣ ಮಾಡಿ.


    ಈಗ ಹಿಟ್ಟಿನ ಚೆಂಡು ಮಾಡಿ. ಅದರೊಳಗೆ ಸ್ಟಫಿಂಗ್ ತುಂಬಿ, ಚಪಾತಿಯಂತೆ ಲಟ್ಟಿಸಿ. ಗ್ಯಾಸ್ ಮೇಲೆ ಪ್ಯಾನ್ ಇರಿಸಿ, ಬಿಸಿ ಮಾಡಿ. ನಂತರ ಎಳ್ಳಿನ ಸ್ಟಫಿಂಗ್ ರೋಲ್ ನ್ನು ಪ್ಯಾನ್ ಮೇಲೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ಈಗ ಎಳ್ಳಿನ ತಿನಿಸು ರೆಡಿ. ಊಟದ ನಂತರ ನೀವು ಆರಾಮವಾಗಿ ಸೇವಿಸಬಹುದು.


    ಎಳ್ಳು ಮತ್ತು ಬೆಲ್ಲದ ರೊಟ್ಟಿ ಹೇಗೆ ಪ್ರಯೋಜನಕಾರಿ?


    ಎಲ್ಲಾ ಪೋಷಕಾಂಶಗಳ ಸರಿಯಾದ ಮಿಶ್ರಣ ಮಾಡಿ. ಎಳ್ಳು ಮತ್ತು ಬೆಲ್ಲದ ರೊಟ್ಟಿ ಎಲ್ಲಾ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನ ನೀಡುತ್ತದೆ. ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸುತ್ತದೆ.


    ಇದನ್ನೂ ಓದಿ: ನುಗ್ಗೆಸೊಪ್ಪಿನ ಆರೋಗ್ಯ ಪ್ರಯೋಜನ, ಅಡ್ಡ ಪರಿಣಾಮಗಳು


    ದೇಹವನ್ನು ಬೆಚ್ಚಗಿಡುತ್ತದೆ. ಬೆಲ್ಲ ಮತ್ತು ಎಳ್ಳನ್ನು ಹೊಂದಿದೆ. ಇದು ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ದೇಹದೊಳಗೆ ಉಳಿದಿರುವ ವಿಷವನ್ನು ತೆಗೆದು ಹಾಕಲು ಸಹ ಇದು ಸಹಾಯ ಮಾಡುತ್ತದೆ. ನೈಸರ್ಗಿಕ ಸಕ್ಕರೆಯಾಗಿದೆ ಬೆಲ್ಲ. ಯಾವುದೇ ರೀತಿಯ ಸಮಸ್ಯೆ ಆಗಲ್ಲ. ಆಹಾರಕ್ರಮದಲ್ಲಿ ಸೇರಿಸಬಹದು.

    Published by:renukadariyannavar
    First published: