HOME » NEWS » Lifestyle » NHPC RECRUITMENT 2020 ONLINE APPLICATION FOR TRAINEE ENGINEER AND OFFICER POSTS ZP

NHPC Recruitment 2020: ರಾಷ್ಟ್ರೀಯ ಜಲವಿದ್ಯುತ್ ನಿಗಮದ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಹಾಗೆಯೇ AICTE ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ (ಸಿವಿಲ್,ಮೆಕ್ಯಾನಿಕಲ್), ತಂತ್ರಜ್ಞಾನ / ಬಿಎಸ್ಸಿ (ಇಂಜಿನಿಯರಿಂಗ್) ಪದವಿಯನ್ನು ಪಡೆದಿರಬೇಕು.

news18-kannada
Updated:September 4, 2020, 10:20 PM IST
NHPC Recruitment 2020: ರಾಷ್ಟ್ರೀಯ ಜಲವಿದ್ಯುತ್ ನಿಗಮದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
  • Share this:
ರಾಷ್ಟ್ರೀಯ ಜಲವಿದ್ಯುತ್ ನಿಮಗದ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ-ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಅಪ್ಲಿಕೇಶನ್ ಹಾಕಲು ಕೊನೆಯ ದಿನಾಂಕ 29-09-2020. ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

ಹುದ್ದೆಗಳ ವಿವರ:

ತರಬೇತಿ ಇಂಜಿನಿಯರ್ (ಸಿವಿಲ್)- 30 ಹುದ್ದೆಗಳು
ತರಬೇತಿ ಇಂಜಿನಿಯರ್ (ಮೆಕ್ಯಾನಿಕಲ್)- 21 ಹುದ್ದೆಗಳು
ತರಬೇತಿ ಅಧಿಕಾರಿ (ಎಚ್‌ಆರ್)- 5 ಹುದ್ದೆಗಳು
ತರಬೇತಿ ಅಧಿಕಾರಿ (ಕಾನೂನು)- 8 ಹುದ್ದೆಗಳು
ತರಬೇತಿ ಅಧಿಕಾರಿ (ಹಣಕಾಸು)- 22 ಹುದ್ದೆಗಳುಒಟ್ಟು ಹುದ್ದೆಗಳು- 86

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಹಾಗೆಯೇ AICTE ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ (ಸಿವಿಲ್,ಮೆಕ್ಯಾನಿಕಲ್), ತಂತ್ರಜ್ಞಾನ / ಬಿಎಸ್ಸಿ (ಇಂಜಿನಿಯರಿಂಗ್) ಪದವಿಯನ್ನು ಪಡೆದಿರಬೇಕು. ಇದರೊಂದಿಗೆ ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು.

ವೇತನ: ಆಯಾ ವಿಭಾಗದ ಹುದ್ದೆಗಳಿಗೆ ಅನುಗುಣವಾಗಿ ವೇತನ ನಿಗದಿಪಡಿಸಲಾಗುತ್ತದೆ. ಇಲ್ಲಿ 50,000 ರಿಂದ 1,60,000 ರೂ.ವರೆಗೆ ವೇತನ ಪಡೆಯಬಹುದು.

ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 29, 2020
Youtube Video

ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published by: zahir
First published: September 4, 2020, 10:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories