ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಖಾಲಿಯಿರುವ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಉದ್ಯೋಗದ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.
ಹುದ್ದೆಗಳ ಹೆಸರು ಮತ್ತು ಸಂಖ್ಯೆ:
ಕನ್ಸಲ್ಟಂಟ್- ಮೆಟರ್ನಲ್ ಹೆಲ್ತ್ ಮತ್ತು ಫ್ಯಾಮಿಲಿ ಪ್ಲಾನಿಂಗ್- 1
ಕನ್ಸಲ್ಟಂಟ್- ಮೆಟರ್ನಲ್ ಡೆತ್ (ಎಂಡಿಆರ್) ಮತ್ತು ಚೈಲ್ಡ್ ಹೆಲ್ತ್ ರಿವ್ಯೂ- 1
ಸ್ಟೇಟ್ ಲೆಪ್ರೊಸಿ ಕಂನ್ಸಲ್ಟಂಟ್ (ಎಸ್ಎಲ್ಸಿ)- 1
ಪಿಐಪಿ / ಪ್ಲಾನಿಂಗ್- 1
ಸ್ಟೇಟ್ ಪ್ರೋಗ್ರಾಮ್ ಕೊಆರ್ಡಿನೇಟರ್- 1
ಐಇಸಿ ಕನ್ಸಲ್ಟಂಟ್- 1
ಡಿಆರ್ಟಿಬಿ-ಕೊಆರ್ಡಿನೇಟರ್- 1
ಸೀನಿಯರ್ ಲ್ಯಾಬ್ ಟೆಕ್ ಫಾರ್ ಐಆರ್ಎಲ್ - 1
ಎಪಿಡೆಮಿಯೋಲಾಜಿಸ್ಟ್ (ಅಸಿಸ್ಟಂಟ್.ಪ್ರೊಗ್ರಾಮ್ ಆಫೀಸರ್ )-1
ಜಿಲ್ಲಾ ವಿಬಿಡಿ ಕನ್ಸಲ್ಟಂಟ್- 2
ಪ್ರೋಗ್ರಾಮ್ ಮ್ಯಾನೇಜರ್ (ಆಯುಷ್)- 1
ಕನ್ಸಲ್ಟಂಟ್ ಮೆಂಟಲ್ ಹೆಲ್ತ್- 1
ಪ್ರೋಗ್ರಾಮರ್ / ಆಪರೇಷನಲ್ ಮ್ಯಾನೇಜರ್- 1
ಡೈರೆಕ್ಟ್ ವಿಬಿಡಿ ಕನ್ಸಲ್ಟಂಟ್- 1
ಮೆಡಿಕಲ್ ಆಫೀಸರ್ (ಎಂಒ-ಎಸ್ಟಿಸಿ)- 1
ಟಿಬಿ ಹೆಚ್ಐವಿ ಕೊ-ಆರ್ಡಿನೇಟರ್- 1
ವಿದ್ಯಾರ್ಹತೆ: ಈ 15 ವಿಭಾಗಗಳಲ್ಲಿನ ಉದ್ಯೋಗಕ್ಕೆ ಆಯಾ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಎಂಬಿಬಿಎಸ್, ಬಿಎಸ್ಸಿ ಸೇರಿದಂತೆ ನಾನಾ ಪದವಿಗಳನ್ನು ಹೊಂದಿರಬೇಕಾಗುತ್ತದೆ. ಹಾಗೆಯೇ ಕನ್ನಡ ಭಾಷೆಯನ್ನು ಮಾತನಾಡಲು, ಓದಲು, ಬರೆಯಲು ಹಾಗೂ ಟೈಪಿಂಗ್ ಮಾಡಲು ಗೊತ್ತಿರಬೇಕು. ಇದರೊಂದಿಗೆ ಕಂಪ್ಯೂಟರ್ ಜ್ಞಾನ ಅತ್ಯಗತ್ಯ.
ವಯೋಮಿತಿ: ಅಧಿಸೂಚನೆಯಲ್ಲಿ ತಿಳಿಸಿದ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ 40 ವರ್ಷದೊಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವೇತನ: ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 23,000 ರಿಂದ ರೂ.65,000 ಸಾವಿರದವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-09-2020. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರು ಸಂಜೆ 5.30 ರೊಳಗೆ ಅಪ್ಲಿಕೇಶನ್ ಹಾಕಬೇಕು.
ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಅಧಿಕೃತ ವೆಬ್ಸೈಟ್
karunadu.karnataka.gov.in/hfw ಗೆ ಭೇಟಿ ನೀಡಿ. ಹಾಗೆಯೇ ಅಧಿಸೂಚನೆಯನ್ನು ಪರಿಶೀಲಿಸಲು
ಇಲ್ಲಿ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ