ನ್ಯೂಸ್ 18 ಕನ್ನಡ ಆಹಾರ ಮೇಳಕ್ಕೆ ಆಗಮಿಸಲಿರುವ ಫೇಮಸ್ ನಟಿ!

70 ಫುಡ್ ಸ್ಟಾಲ್ ಇರುತ್ತೆ! ನಾರ್ಥು ಸೌತು ಎಲ್ಲಾ ತರಹದ ಆಹಾರ! ಜೊತೆಗೆ ಶಾಪಿಂಗು, ಕುಣಿತ, ಗಾನ ಬಜಾನ. ಇದೆಲ್ಲವೂ ಒಂದೇ ಕಡೆ. ಎಲ್ಲಿ ಅಂತೀರಾ? ನಿಮ್ಮ ನ್ಯೂಸ್ 18 ಕನ್ನಡ ಮತ್ತೆ ಆಯೋಜಿಸ್ತಿರೋ ಆಹಾರ ಮೇಳದಲ್ಲಿ.

zahir | news18
Updated:January 31, 2019, 7:30 PM IST
ನ್ಯೂಸ್ 18 ಕನ್ನಡ ಆಹಾರ ಮೇಳಕ್ಕೆ ಆಗಮಿಸಲಿರುವ ಫೇಮಸ್ ನಟಿ!
News18 Kannada Food Festival
  • News18
  • Last Updated: January 31, 2019, 7:30 PM IST
  • Share this:
ಫೆಬ್ರವರಿ 1,2,3ಕ್ಕೆ ಸಂಜೆ ಆಗ್ತಿದ್ದ ಹಾಗೇ ನಿಮಗೆ ಸಿಗೋದು ಮಜಾ.. ಮಜಾ.. ಮಜಾ! ಯಾಕಂದ್ರೆ ಈ ಮೂರು ದಿನಗಳ ಕಾಲ ನ್ಯೂಸ್ 18 ಕನ್ನಡ ಆಹಾರ ಮೇಳಕ್ಕೆ ಬರ್ತಾರೆ ಸೆಲಬ್ರಿಟಿಗಳು. ವಿಧವಿಧವಾದ ಖಾನವಳಿ ಕಾದಿರುತ್ತೆ. ಇಷ್ಟಕ್ಕೂ ಫೆಬ್ರವರಿ 1ನೇ ತಾರೀಖು ಯಾವೆಲ್ಲಾ ಕಾರ್ಯಕ್ರಮಗಳಿವೆ? ಏನೆಲ್ಲಾ ಮನರಂಜನೆ ಸಿಗಲಿದೆ? ಯಾವ ಸೆಲಬ್ರಿಟಿಗಳು ಬರುತ್ತಾರೆ ಅಂತೀರಾ? ಮುಂದೆ ಓದಿ..

ಮೋಜು ಮಸ್ತಿ ಜೊತೆಗೆ ಸೆಲೆಬ್ರಿಟಿಗಳು ಬರ್ತಾರೆ. ಶಾಪಿಂಗ್ ಮಾಡುತ್ತಾ ನಾನಾ ಟೆಸ್ಟಿ ಫುಡ್ ಗಳನ್ನ ಸವಿಬಹುದು. ಫೆಬ್ರವರಿ 1ನೇ ತಾರೀಖು ನ್ಯೂಸ್ 18 ಕನ್ನಡ ಐದನೇ ಆವೃತ್ತಿಯ ಆಹಾರ ಮೇಳದ ಉದ್ಘಾಟನ ಸಮಾರಂಭ ನಡೆಯಲಿದೆ. ಸಂಜೆ 6 ಗಂಟೆಗೆ ಶುರುವಾಗುವ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಬರ್ತಾರೆ. ಅವರೇ ಅನುಪ್ರಭಾಕರ್ .

ಇನ್ನೂ ಕಾರ್ಯಕ್ರಮಕ್ಕೆ ಫೇಮಸ್ ಕುಕ್ಕರಿ ಶೋ ಹೋಸ್ಟ್ ಆದ, ಬಿಗ್ ಬಾಸ್ 6ರ ಸ್ಪರ್ಧಿಯಾದ ಒಗ್ಗರಣೆ ಡಬ್ಬಿ ಮುರುಳಿ ಅವರು ಬರಲಿದ್ದಾರೆ. ನ್ಯೂಸ್ 18 ಕನ್ನಡದ ಸಂಪಾದಕರಾದ ಸಿದ್ದಪ್ಪ ಗೋಪಾಲ್ ಕಾಳೋಜಿ, ನ್ಯೂಸ್ 18 ಕನ್ನಡ ಪ್ರೊಡಕ್ಷನ್ ಹೆಡ್ ಸ್ವರೂಪ್ ಮುರ್ಗೋಡ್ ಕೂಡ ಉದ್ಘಾಟನಾ ಸಮಾರಂಭದಲ್ಲಿರಲಿದ್ದಾರೆ. ಇನ್ನು ದಾತ್ರಿ ಡೆವಲಪರ್ಸ್ ಎಂ.ಡಿ ಮಂಜುನಾಥ್ ಮತ್ತು ಸ್ಪರ್ಶ್ ಮಸಾಲ ಸಿಓಓ ದೀಕ್ಷಾ ಕೂಡ ಆಗಮಿಸಲಿದ್ದಾರೆ.

ಇದಿಷ್ಟು ಫೆಬ್ರವರಿ 1ನೇ ತಾರೀಖು ನಡೆಯುವ ಕಾರ್ಯಕ್ರಮದ ಡೀಟೆಲ್ಸ್ . ಫೆಬ್ರವರಿ 2ನೇ ತಾರೀಖು ಇನ್ನಷ್ಟು ಮಜಾ ಸಿಗಲಿರುವ ಮನರಂಜನಾ ಕಾರ್ಯಕ್ರಮಗಳು ಇವೆ. ಅವುಗಳ ಬಗ್ಗೆ ತಿಳಿಸ್ತೀವಿ ಮುಂದಿನ ಆರ್ಟಿಕಲ್ ನಲ್ಲಿ.

ಸ್ಥಳ: ಆರ್ ಗುಂಡುರಾವ್ ಮೈದಾನ, ಮಲ್ಲೇಶ್ವರಂ ವೆಸ್ಟ್ , ಬೆಂಗಳೂರು.

First published:January 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ