Research: ಅತಿಯಾಗಿ ಸುದ್ದಿ ಓದುವ ಅಭ್ಯಾಸ ಅಪಾಯಕಾರಿಯೇ? ಇದೆಂತಾ ನ್ಯೂಸ್ ಅಂತ ನೆಗ್ಲೆಕ್ಟ್ ಮಾಡ್ಬೇಡಿ

ಕೆಲವರಿಗೆ ಈ ನ್ಯೂಸ್‌ ಕೇಳುವ, ಓದುವ ಅಭ್ಯಾಸ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಹೀಗೆ ಯಾವಾಗಲೂ ಸುದ್ದಿ ಓದುವ ಓದುಗರಿಗೆ ಅಧ್ಯಯನವೊಂದು ಶಾಕಿಂಗ್‌ ವರದಿ ನೀಡಿದೆ. ನಿರಂತರವಾಗಿ ಸುದ್ದಿಗಳನ್ನು (News) ಪರಿಶೀಲಿಸುವ ಅತಿಯಾದ ಅಭ್ಯಾಸ ಹೊಂದಿರುವ ಜನರಿಗೆ ಯಾವ ತೊಂದರೆ ಆಗುತ್ತೆ ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವರಿಗೆ ದಿನ ಶುರುವಾಗುವುದೇ ಪತ್ರಿಕೆ ಓದುವುದರಿಂದ (Reading). ಹಲವಾರು ಮಂದಿ ಮುಂಜಾನೆ ದಿನಪತ್ರಿಕೆ ಓದಿ ಜಗತ್ತಿನ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾರೆ. ಈಗ ಸಾಕಷ್ಟು ಡಿಜಿಟಲ್‌ ಮಾಧ್ಯಮಗಳು (Digital Media) ಸುದ್ದಿ ಬಿತ್ತರಿಸುವುದರಿಂದ ಮೊಬೈಲ್‌ ನಂತಹ (Mobile) ತಮ್ಮ ಗ್ಯಾಜೆಟ್‌ ಗಳ ಮೂಲಕವೂ ಪ್ರಚಲಿತ ಸುದ್ದಿಯನ್ನು ಪರಿಶೀಲಿಸುತ್ತಾರೆ. ಕೆಲವರಿಗೆ ಈ ನ್ಯೂಸ್‌ ಕೇಳುವ, ಓದುವ ಅಭ್ಯಾಸ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಹೀಗೆ ಯಾವಾಗಲೂ ಸುದ್ದಿ ಓದುವ ಓದುಗರಿಗೆ ಅಧ್ಯಯನವೊಂದು ಶಾಕಿಂಗ್‌ ವರದಿ ನೀಡಿದೆ. ನಿರಂತರವಾಗಿ ಸುದ್ದಿಗಳನ್ನು (News) ಪರಿಶೀಲಿಸುವ ಅತಿಯಾದ ಅಭ್ಯಾಸ ಹೊಂದಿರುವ ಜನರು ಒತ್ತಡ, ಚಿಂತೆ ಮತ್ತು ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ವರದಿ ಮಾಡಿದೆ. ಈ ಅಧ್ಯಯನವನ್ನು ಹೆಲ್ತ್ ಕಮ್ಯುನಿಕೇಷನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಸುದ್ದಿ ಓದುವ ಓದುಗರಿಗೆ ಶಾಕಿಂಗ್‌ ವರದಿ
ಸುದ್ದಿ ಮಾಧ್ಯಮ ಎಂದರೆ ಅಲ್ಲಿ ಎಲ್ಲಾ ವಿಚಾರಗಳು ಅಡಕವಾಗಿರುತ್ತವೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌, ಉಕ್ರೇನ್‌ನ ಮೇಲೆ ರಷ್ಯಾ ಯುದ್ಧ, ಸಾಮೂಹಿಕ ಗುಂಡಿನ ದಾಳಿಗಳು ಹೀಗೆ ಅನೇಕ ಆತಂಕಕಾರಿ ಜಾಗತಿಕ ಘಟನೆಗಳ ಸರಣಿಯ ಬಗ್ಗೆ ಪತ್ರಿಕೆ, ದೂರದರ್ಶನದ ಮೂಲಕ ತಿಳಿದುಕೊಂಡಿದ್ದೇವೆ. ಇಂತಹ ಸುದ್ದಿಗಳು ನಮ್ಮನ್ನು ಕೆಲವೊಮ್ಮೆ ತಾತ್ಕಾಲಿಕವಾಗಿ ಶಕ್ತಿಹೀನರನ್ನಾಗಿ ಮತ್ತು ದುಃಖಿತರನ್ನಾಗಿ ಮಾಡುತ್ತವೆ.

ಸುದ್ದಿ ವ್ಯಸನ.. ಒತ್ತಡ, ಚಿಂತೆ ಮತ್ತು ದೈಹಿಕ ಅನಾರೋಗ್ಯಕ್ಕೆ ಕಾರಣ
ನಿರಂತರವಾಗಿ ವಿಕಸನಗೊಳ್ಳುವ ಘಟನೆಗಳ ಬಗ್ಗೆ ದಿನದ 24 ತಾಸು ಅವುಗಳನ್ನು ಓದುವುದರಿಂದ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೊಸ ಸಂಶೋಧನೆ ತಿಳಿಸಿದೆ.
ಸುದ್ದಿ ಓದುವ ನಿರಂತರ ಅಭ್ಯಾಸ ಹೆಚ್ಚಿನ ಅಪಾಯ ಸ್ಥಿತಿಯನ್ನು ತರಬಹುದು ಎಂದು ಸಂಶೋಧನೆ ತಂಡದಲ್ಲಿ ಒಬ್ಬರಾದ ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬ್ರಿಯಾನ್ ಮೆಕ್ಲಾಫ್ಲಿನ್ ಹೇಳುತ್ತಾರೆ.ಆಡುಮಾತಿನಲ್ಲಿ ಸುದ್ದಿ ಚಟ ಎಂದು ಕರೆಯಲ್ಪಡುವ ಈ ವಿದ್ಯಮಾನವನ್ನು ಅಧ್ಯಯನ ಮಾಡಲು, ಮೆಕ್‌ಲಾಫ್ಲಿನ್ ಮತ್ತು ಅವರ ಸಹೋದ್ಯೋಗಿಗಳಾದ ಡಾ. ಮೆಲಿಸ್ಸಾ ಗಾಟ್ಲೀಬ್ ಮತ್ತು ಡಾ ಡೆವಿನ್ ಮಿಲ್ಸ್, 1,100 ಯುಎಸ್ ವಯಸ್ಕರ ಆನ್‌ಲೈನ್ ಸಮೀಕ್ಷೆಯ ಡೇಟಾವನ್ನು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: Sleeping Disorder: ಇದು ನಿದ್ರೆ ಸಮಸ್ಯೆಯ ವಿಧಗಳು, ನಿಮಗೆ ಯಾವ ತೊಂದರೆ ಇದೆ ನೋಡಿ

ಸಮೀಕ್ಷೆಯ ಪ್ರತಿಸ್ಪಂದಕರು ಅವರು ಸುದ್ದಿ ಓದದೇ ಇದ್ದಾಗ ಎಷ್ಟು ಬಾರಿ ಒತ್ತಡ ಮತ್ತು ಆತಂಕದ ಭಾವನೆಗಳನ್ನು ಅನುಭವಿಸಿದ್ದಾರೆ, ಹಾಗೆಯೇ ಆಯಾಸ, ದೈಹಿಕ ನೋವು, ಕಳಪೆ ಏಕಾಗ್ರತೆ ಮತ್ತು ಜಠರಗರುಳಿನ ಸಮಸ್ಯೆಗಳಂತಹ ದೈಹಿಕ ಕಾಯಿಲೆಗಳನ್ನು ಅನುಭವಿಸಿದ್ದಾರೆ ಎಂದು ಕೇಳಲಾಯಿತು. ಸಮೀಕ್ಷೆಯಲ್ಲಿ ಭಾಗಿಯಾದ 16.5% ಜನರು 'ತೀವ್ರವಾಗಿ ಸಮಸ್ಯಾತ್ಮಕ' ಸುದ್ದಿ ಬಳಕೆಯ ಲಕ್ಷಣಗಳನ್ನು ತೋರಿಸಿದ್ದಾರೆ ಎಂದು ಫಲಿತಾಂಶಗಳು ಬಹಿರಂಗಪಡಿಸಿವೆ. ಅಂತಹ ವ್ಯಕ್ತಿಗಳು ಆಗಾಗ್ಗೆ ಸುದ್ದಿಗಳಲ್ಲಿ ಮುಳುಗುತ್ತಾರೆ ಮತ್ತು ಅವರಿಗೆ ಬೇರೆ ಕೆಲಸದ ನೆನಪೇ ಇರುವುದಿಲ್ಲ ಎಂದು ಹೇಳಿಕೆಯನ್ನು ನಮೂದಿಸಿದ್ದಾರೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯ ಬೇಕಿದ್ದ ಸಮಯವನ್ನು ಅಡ್ಡಿಪಡಿಸುತ್ತದೆ, ಶಾಲೆ ಅಥವಾ ಕೆಲಸದ ಮೇಲೆ ಗಮನಹರಿಸಲು ಕಷ್ಟವಾಗುತ್ತವೆ ಮತ್ತು ಚಡಪಡಿಕೆ ಮತ್ತು ನಿದ್ರಾ ಹೀನತೆಗೂ ಕಾರಣವಾಗಿವೆ ಎಂದು ಹೇಳಿದ್ದಾರೆ.

ಸಮಸ್ಯಾತ್ಮಕ ಸುದ್ದಿಗಳನ್ನು ಓದುವ 61% ರಷ್ಟು ಜನರಲ್ಲಿ ತೊಂದರೆ ಗೋಚರ
ಸಮೀಕ್ಷೆಯಲ್ಲಿ ಭಾಗವಹಿಸುವವರು ಕಳೆದ ತಿಂಗಳು ಎಷ್ಟು ಬಾರಿ ಮಾನಸಿಕ ಆರೋಗ್ಯ ಅಥವಾ ದೈಹಿಕ ಅನಾರೋಗ್ಯದ ಲಕ್ಷಣಗಳನ್ನು ಅನುಭವಿಸಿದ್ದಾರೆಂದು ಕೇಳಿದಾಗ, ಈ ಸ್ಥಿತಿ 73.6% ರಷ್ಟು ಜನರಲ್ಲಿ ಕಂಡು ಬಂದಿದೆ ಎಂದು ಫಲಿತಾಂಶಗಳು ತಿಳಿಸಿವೆ. 73.6% ರಷ್ಟು ಜನರು ಸಮಸ್ಯಾತ್ಮಕ ಸುದ್ದಿ ಓದುವ ತೀವ್ರ ಮಟ್ಟವನ್ನು ಹೊಂದಿದ್ದಾರೆಂದು ವರದಿ ಮಾಡಿದ್ದಾರೆ ಮಾನಸಿಕ ಅಸ್ವಸ್ಥತೆಯನ್ನು ಸಹ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ. ಎಲ್ಲಾ ಇತರ ಅಧ್ಯಯನದಲ್ಲಿ ಭಾಗವಹಿಸುವವರಿಗೆ ಹೋಲಿಸಿದರೆ 61% ನಷ್ಟು ತೀವ್ರ ಮಟ್ಟದ ಸಮಸ್ಯಾತ್ಮಕ ಸುದ್ದಿಗಳನ್ನು ಹೊಂದಿರುವವರು ದೈಹಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದಾರೆಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ಮೆಕ್‌ಲಾಫ್ಲಿನ್ ಅವರ ಪ್ರಕಾರ, ಸುದ್ದಿಗಳೊಂದಿಗೆ ಆರೋಗ್ಯಕರ ಸಂಬಂಧವನ್ನು ಅಭಿವೃದ್ಧಿಪಡಿಸಲು ಜನರಿಗೆ ಸಹಾಯ ಮಾಡಲು ಕೇಂದ್ರೀಕೃತ ಮಾಧ್ಯಮ ಸಾಕ್ಷರತಾ ಅಭಿಯಾನದ ಅವಶ್ಯಕತೆಯಿದೆ ಎಂದು ಸಂಶೋಧನೆಯಲ್ಲಿ ಹೇಳಿದ್ದಾರೆ. "ಜನರು ಸುದ್ದಿಯನ್ನು ಓದುವುದು ಉತ್ತಮ ಅಭ್ಯಾಸವಾದರೂ ಓದುಗರು ಸುದ್ದಿಗಳೊಂದಿಗೆ ಆರೋಗ್ಯಕರ ಸಂಬಂಧವನ್ನು ಹೊಂದಿರುವುದು ಮುಖ್ಯವಾಗಿದೆ" ಎಂದು ಅವರು ಹೇಳಿದ್ದಾರೆ. ಸಮಸ್ಯಾತ್ಮಕ ಸುದ್ದಿ ಓದುವ ಸಂದರ್ಭದಲ್ಲಿ, ವ್ಯಕ್ತಿಗಳು ತಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ ಎಂದು ಗಮನಕ್ಕೆ ಬಂದರೆ ಅವರು ಆ ಸುದ್ದಿಯನ್ನು ತಕ್ಷಣ ನಿಲ್ಲಿಸಲು ಅಥವಾ ಕಡಿಮೆ ಮಾಡಲು ಸಂಶೋಧನೆ ಸಲಹೆ ನೀಡಿದೆ.

ಇದನ್ನೂ ಓದಿ: ಸುಮ್ಮಸುಮ್ಮನೆ ಗಾಬರಿ ಆಗೋ ಸಮಸ್ಯೆ ‘ಪ್ಯಾನಿಕ್ ಅಟ್ಯಾಕ್’, ಆಲಿಯಾ ಭಟ್ ಸಹೋದರಿಗೂ ಇದೆ ಈ ಖಾಯಿಲೆ

"ಸುದ್ದಿ ಮೂಲಗಳು ಎದುರಿಸುತ್ತಿರುವ ಆರ್ಥಿಕ ಒತ್ತಡಗಳು, ತಾಂತ್ರಿಕ ಪ್ರಗತಿಗಳು ಮತ್ತು 24-ಗಂಟೆಗಳ ಸುದ್ದಿ ಚಕ್ರವು ಸುದ್ದಿ ಗ್ರಾಹಕರ ಗಮನವನ್ನು ಸೆಳೆಯುವ "ಸುದ್ದಿಯೋಗ್ಯ" ಕಥೆಗಳನ್ನು ಆಯ್ಕೆಮಾಡಲು ಪತ್ರಕರ್ತರನ್ನು ಪ್ರೋತ್ಸಾಹಿಸಿದೆ" ಎಂದು ಮೆಕ್ಲಾಫ್ಲಿನ್ ಹೇಳುತ್ತಾರೆ. ನಮ್ಮ ಅಧ್ಯಯನದ ಫಲಿತಾಂಶಗಳು ಸುದ್ದಿ ಮಾಧ್ಯಮ ಎದುರಿಸುವ ವಾಣಿಜ್ಯ ಒತ್ತಡಗಳು ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವ ಗುರಿಗೆ ಹಾನಿಕಾರಕವಲ್ಲ, ಅವು ವ್ಯಕ್ತಿಗಳ ಆರೋಗ್ಯಕ್ಕೂ ಹಾನಿಕಾರಕವಾಗಬಹುದು ಎಂದು ಒತ್ತಿಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.
Published by:Ashwini Prabhu
First published: