Stroke Symptoms: ಲೈವ್ ನ್ಯೂಸ್​ ರೀಡಿಂಗ್ ವೇಳೆಯಲ್ಲೇ ಆ್ಯಂಕರ್​ಗೆ ಸ್ಟ್ರೋಕ್​! ಈ ಲಕ್ಷಣಗಳನ್ನು ನೀವೂ ನಿರ್ಲಕ್ಷಿಸಬೇಡಿ

ಓಕ್ಲಹೋಮಾದಲ್ಲಿ ಟಿವಿ ಸುದ್ದಿ ನಿರೂಪಕಿ ಜೂಲಿ ಚಿನ್ ಅವರಿಗೆ ಸುದ್ದಿ ಓದುತ್ತಿರುವ ಸಂದರ್ಭದಲ್ಲೇ ಪಾರ್ಶ್ವವಾಯು ಸಂಭವಿಸಿದೆ. ನೀವೂ ಕೂಡ ನಾವು ಹೇಳುತ್ತಿರುವ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ.

ಜೂಲಿ ಚಿನ್​

ಜೂಲಿ ಚಿನ್​

  • Share this:
Stroke During Live: ಸ್ಟ್ರೋಕ್ ಸಂಭವಿಸುವಾಗ ಗಮನಹರಿಸಬೇಕಾದ  ಕೆಲವು ಆರಂಭಿಕ ಲಕ್ಷಣಗಳನ್ನು ನಾವು ಗುರುತಿಸಬಹುದು. ನಿಂತ ಸ್ಥಳದಲ್ಲೇ ಯಾವುದೇ ಸುಳಿವಿಲ್ಲದೆ ಆವರಿಸಿಕೊಳ್ಳುವ ಸ್ಟ್ರೋಕ್ (Stroke ) ಹಲವಾರು ಜನರನ್ನು ಕಾಡುತ್ತೆ. ಪಾರ್ಶ್ವವಾಯು ಅಥವಾ ಲಕ್ವಾ ಹೊಡೆಯೋದು ಅಂತಲೂ ಇದನ್ನು ಕರೆಯಬಹುದು. ಸಾಮಾನ್ಯವಾಗಿ ದೇಹದ ಯಾವುದೇ ಅಂಗಗಳಲ್ಲಿ ಇದು ಸಂಭವಿಸಬಹುದು. ಹಲವಾರು ಜನರು ಈ ಸಮಸ್ಯೆ (Problem) ಅನುಭವಿಸಿರುತ್ತಾರೆ. ನರಮಂಡಳಗಳ (Nervous System) ನಿರ್ಭಂದ ಮತ್ತು ಅಪದಮನಿಗಳ ಅಡಚಣೆಗಳಿಂದ ಪಾರ್ಶ್ವವಾಯು ಸಂಭವಿಸುತ್ತದೆ. ಓಕ್ಲಹೋಮಾದಲ್ಲಿ ಟಿವಿ ಸುದ್ದಿ ನಿರೂಪಕಿ (Anchor) ಜೂಲಿ ಚಿನ್ (Julie Chin) ಅವರು  ಸುದ್ದಿ ಓದುತ್ತಿರುವ ಸಂದರ್ಭದಲ್ಲೇ ಪಾರ್ಶ್ವವಾಯು ಸಂಭವಿಸಿದೆ. ಆ ಕುರಿತು ಸುದ್ದಿ ನಿರೂಪಕಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ನ್ಯೂಸ್​ ರೀಡಿಂಗ್​ ವೇಳೆಯಲ್ಲೇ ಸ್ಟೋಕ್​!

ಇತ್ತೀಚಿಗೆ ನಾಸಾದ ಮುಂದೂಡಲ್ಪಟ್ಟ ಆರ್ಟೆಮಿಸ್ 1 ರ ಉಡಾವಣೆಯ ಕುರಿತು ವರದಿ ಮಾಡುವಾಗ, ನಿರೂಪಕಿ ಚಿನ್ ಅವರಿಗೆ ಮಾತನಾಡುವಾಗ ಅಕ್ಷರಗಳು ತೊದಲುತ್ತಿದ್ದವು. ಸುದ್ದಿ ಓದಲು ಅಕ್ಷರಗಳ ಉಚ್ಛರಣೆ ತಪ್ಪಿ ವಾಕ್ಯ ಪೂರ್ತಿಗೊಳಿಸಲು ಹೆಣಗಾಡುತ್ತಿದ್ದರು. ಸುದ್ದಿ ವಾಚನದ ನಡುವೆಯೇ ನನ್ನನ್ನು ಕ್ಷಮಿಸಿ ಇಂದು ಬೆಳಗಿನಿಂದ ನಡೆಯುತ್ತಿರುವ ಅಡಚಣೆಗಳಿಗೆ ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಅವರು ಹೇಳಿದರು. ಸುದ್ದಿ ಮುಂದುವರಿಯುತ್ತೆ ನಾನಿದನ್ನು ಮತ್ತೊಬ್ಬ ಆ್ಯಂಕರ್​ ಅನ್ನಿ ಬ್ರೌನ್ ಅವರಿಗೆ ಹಸ್ತಾಂತರಿಸುತ್ತಿದ್ದೇನೆ ಎಂದರು. ಅದನ್ನು ಗಮನಿಸುತ್ತಿದ್ದ ಅವರ ಸಹೋದ್ಯೋಗಿ ತಕ್ಷಣ ವೈದ್ಯಕೀಯ ತುರ್ತು ಚಿಕಿತ್ಸೆಗೆ 119 ಗೆ ಕರೆಮಾಡಿದರು.

ಜೂಲಿ ಚಿನ್ ಟ್ವೀಟ್!

ಕಳೆದ ಕೆಲವು ದಿನಗಳಿಂದ ಅವರು ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದರು. ಆದರೆ ಈ ವಿಷಯವನ್ನು ಬಹಿರಂಗ ಪಡಿಸಿರಲಿಲ್ಲ. ಕಳೆದ ಶನಿವಾರ ಕೂಡ ಇದೇ ಸಮಸ್ಯೆಯಿಂದ ಬಳಲಿದ್ದೆ. ಇಂದು ಪ್ರತ್ಯಕ್ಷವಾಗಿ ನೀವೆಲ್ಲಾ ಗಮನಿಸಿದ್ದೀರಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಿಸುವ ಅದ್ಭುತ ಗಿಡಮೂಲಿಕೆಗಳಿವು, ಒಮ್ಮೆ ಬಳಸಿ ನೋಡಿ

ಸ್ಟ್ರೋಕ್ ಸಂಭವಿಸುವ ಮೊದಲು ಅವರಿಗೆ ಸಿಕ್ಕ ಮುನ್ಸೂಚನೆ!

ಸುದ್ದಿ ಓದುತ್ತಿರುವಾಗ ಮೊದಲು ಅವರಿಗೆ ಭಾಗಶಃ ಒಂದು ಕಣ್ಣು ಕಾಣಿಸುತ್ತಿರಲಿಲ್ವಂತೆ. ನಂತರ ಅವರ ಕೈ ಮತ್ತು ತೋಳು ತಮ್ಮ ಕಾರ್ಯ ನಿಲ್ಲಿಸಿದ್ದವು. ನಂತರ ಸುದ್ದಿಗಳು ಕಾಣಿಸುವ ಟೆಲಿಪ್ರಾಂಪ್ಟರ್ನಲ್ಲಿ ಇರುವ ಪದಗಳು ಸಂಪೂರ್ಣವಾಗಿ ಓದಲು ಅವರ ಬಾಯಿ ಸಹಕರಿಸಲಿಲ್ಲ ಎಂದು ಅವರು ಹೇಳಿದರು.


ಜೂಲಿ ಚಿನ್ ಹೆಲ್ತ್​​​ ರಿಪೋರ್ಟ್:

ಇಂಡಿಯನ್ ಸ್ಪೈನಲ್ ಇಂಜುರೀಸ್ ಸೆಂಟರ್​ನ ಹಿರಿಯ ಸಲಹೆಗಾರ ಅರುಣ್ ಗುಪ್ತ ಮಿದುಳಿನ ರಕ್ತನಾಳ ಚಿದ್ರಗೊಂಡಾಗ ಮತ್ತು ಮೆದುಳಿಗೆ ರಕ್ತ ಪೂರೈಕೆ ಆಗದೆ ಇದ್ದಾಗ ಪಾರ್ಶವಾಯು ಸಂಭವಿಸುತ್ತದೆ ಎಂದು ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ನಂತರ ಸಮಾಧಾನಕರ ವರದಿ ಬಂದಿದೆ. ಅವರಿಗೆ ಸಂಭವಿಸಿದ್ದು ಮೊದಲ ಹಂತದ ಸ್ಟ್ರೋಕ್ ಆಗಿದ್ದು. ಸಂಪೂರ್ಣ ಸ್ಟ್ರೋಕ್ ಸಂಭವಿಸಿಲ್ಲ ಎಂದು ವೈದ್ಯರು ಖಾತ್ರಿ ಪಡಿಸಿದ್ದಾರೆ. ಈ ಕುರಿತು ಹಲವರಿಗೆ ತುಂಬಾ ಪ್ರಶ್ನೆಗಳಿರಬಹು ಆದರೆ ತಾನು ಸದ್ಯದ ಮಟ್ಟಿಗೆ ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹೊಟ್ಟೆ ಸಂಬಂಧಿತ ಸಮಸ್ಯೆ ನಿವಾರಿಸಲು ಒಮ್ಮೆ ಈ ಜ್ಯೂಸ್ ಕುಡಿದು ನೋಡಿ

ರೋಗ ಲಕ್ಷಣಗಳು ಹೀಗಿರುತ್ತವೆ:

- ಒಂದೇ ಕ್ಷಣಕ್ಕೆ ದೇಹದ ಬ್ಯಾಲೆನ್ಸ್​ ತಪ್ಪುತ್ತೆ

- ಒಂದು ತೋಳಿನ ಶಕ್ತಿ ಕಳೆದುಕೊಳ್ಳಬಹುದು

- ಮಾತು ತೊದಲುತ್ತವೆ

- ತಲೆ ನೋವೂ ಕೂಡ ಕಾಣಿಸಿಕೊಳ್ಳುತ್ತೆ

- ದೇಹದ ಅಂಗಾಗಳು ಚಲಿಸಲು ಸಾಧ್ಯವಾಗದಂತೆ ಗಟ್ಟಿಯಾಗಬಹುದು

- ಹೆಚ್ಚಿನ ಆಯಾಸ

ಈ ರೀತಿ ಲಕ್ಷಣ ಕಂಡು ಬಂದ್ರೆ ಏನ್​ ಮಾಡ್ಬೇಕು?

ನಿಮ್ಮ ಸಮೀಪದಲ್ಲಿರುವ ಯಾರಿಗಾದರು ಈ ಲಕ್ಷಣಗಳು ಕಾಣಿಸಿಕೊಂಡರೆ ತುರ್ತು ವೈದ್ಯಕೀಯ ಸಹಾಯ ಪಡೆಯಬೇಕು. ಆದಷ್ಟು ಬೇಗ ಅಂಬುಲೆನ್ಸಗೆ ಕರೆಮಾಡಿ ಆಸ್ಪತ್ರೆಗೆ ಕರೆದೊಯ್ದರೆ ಜೀವ ಉಳಿಸಬಹುದು
First published: