ಹೆರಿಗೆಯ (Delivery) ನಂತರ ಒಂದು ವರ್ಷದೊಳಗಿನ ಮಕ್ಕಳ ಆರೈಕೆ (Child Care) ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ಶಿಶುಗಳ (Baby) ಆರೋಗ್ಯ (Health) ತುಂಬಾ ಸೂಕ್ಷ್ಮವಾಗಿರುತ್ತೆ. ಹಾಗಾಗಿ ಶಿಶುಗಳ ಮೊದಲ ವರ್ಷ ಚೆನ್ನಾಗಿ ಮತ್ತು ಉತ್ತಮವಾಗಿ ಆರೈಕೆ ಮಾಡಬೇಕಾಗುತ್ತದೆ. ಶಿಶುಗಳು ಬೇಗ ಶೀತ, ಕಫ, ಅಲರ್ಜಿ, ಸೋಂಕು ಮತ್ತು ರೋಗಕ್ಕೆ ಬೇಗ ಮತ್ತು ಹೆಚ್ಚು ಗುರಿ ಆಗುತ್ತಾರೆ. ಹಾಗಾಗಿ ಬದಲಾಗುವ ಋತುವಿನಲ್ಲಿ ಶಿಶುಗಳ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಅಗತ್ಯವಾಗಿರುತ್ತದೆ. ಶಿಶುಗಳು ಕೆಲವೊಮ್ಮೆ ತುಂಬಾ ಅಳುತ್ತವೆ. ಅದಕ್ಕೆ ಕಾರಣ ಗೊತ್ತಾಗದೇ, ಪೋಷಕರು ಹೆಚ್ಚು ತೊಂದರೆ ಪಡುತ್ತಾರೆ. ವಿಶೇಷವಾಗಿ 6 ತಿಂಗಳಿಗಿಂತ ಕಡಿಮೆ ವಯಸ್ಸಿನ ನವಜಾತ ಶಿಶುಗಳ ಆರೈಕೆ ಮಾಡುವುದು ಸವಾಲಿನ ಸಂಗತಿಯೇ ಸರಿ.
ಶಿಶುಗಳ ಆರೈಕೆ ತುಂಬಾ ಅಗತ್ಯ
ಶಿಶುಗಳು ಕಾಲೋಚಿತ ಸೋಂಕು ಮತ್ತು ಅಲರ್ಜಿಯಂಥ ಆರೋಗ್ಯ ತೊಂದರೆಗೆ ಹೆಚ್ಚು ಗುರಿಯಾಗುತ್ತಾರೆ. ಮೊದಲ ಹೆರಿಗೆಯಾದ ಹೊಸ ತಾಯಂದಿರು, ಶಿಶುಗಳು ಸೋಂಕಿಗೆ ಗುರಿಯಾಗದಂತೆ ಕೇರ್ ತೆಗೆದುಕೊಳ್ಳಬೇಕು.
ಶಿಶುಗಳು ಅನಾರೋಗ್ಯ ತಪ್ಪಿಸಲು ಮಗುವಿನ ಆರೋಗ್ಯದಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಯನ್ನು ಗಮನಿಸಬೇಕು. ಹಾಗಾದ್ರೆ ನಾವು ಇಲ್ಲಿ ಶಿಶುಗಳು ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಗುರಿಯಾಗುತ್ತವೆ ಎಂಬುದನ್ನು ನೋಡೋಣ.
ಶಿಶುಗಳು ಯಾವ ಆರೋಗ್ಯ ತೊಂದರೆ ಅನುಭವಿಸುತ್ತವೆ?
ಕಾಮಾಲೆ ಕಾಯಿಲೆ
ನವಜಾತ ಶಿಶುಗಳು ಕಾಮಾಲೆ ಕಾಯಿಲೆಗೆ ತುತ್ತಾಗುವುದು ತುಂಬಾ ಸಾಮಾನ್ಯ ಸಂಗತಿಯಾಗಿದೆ. ನವಜಾತ ಶಿಶುಗಳ ರಕ್ತದಲ್ಲಿ ಹೆಚ್ಚಿನ ಮಟ್ಟದ ಬೈಲಿರುಬಿನ್ ಆದಾಗ ಕಾಮಾಲೆ ಮಕ್ಕಳಲ್ಲಿ ಉಂಟಾಗುತ್ತದೆ. ಈ ಬೈಲಿರುಬಿನ್ ಎಂಬುದು ಚರ್ಮದ ಬಣ್ಣ ಹಳದಿ ಬಣ್ಣಕ್ಕೆ ಬದಲಾವಣೆ ಮಾಡುತ್ತದೆ. ಹೆಚ್ಚಿನ ಶಿಶುಗಳು ಜನನದ ವೇಳೆಯೇ ಕಾಮಾಲೆ ಕಾಯಿಲೆಗೆ ತುತ್ತಾಗಿರುತ್ತವೆ. ಹಾಗಾಗಿ ಒತ್ತಡಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಸೂಕ್ತ ಕಾಳಜಿ ತೆಗೆದುಕೊಳ್ಳಬೇಕು..
ಬ್ಲಾಕ್ಡ್ ಕಣ್ಣೀರಿನ ನಾಳಗಳು
ಶಿಶುಗಳಲ್ಲಿನ ಕಣ್ಣೀರಿನ ನಾಳಗಳು ತುಂಬಾ ಚಿಕ್ಕದಾಗಿರುತ್ತವೆ. ಹಾಗೂ ಚಿಕ್ಕ ಪ್ರಮಾಣದ ಸ್ರವಿಸುವಿಕೆ ಅಥವಾ ಕಣ್ಣೀರು ನಾಳಗಳನ್ನು ನಿರ್ಬಂಧಿಸುತ್ತವೆ. ಕಣ್ಣು ರೆಪ್ಪೆಯ ಮಧ್ಯಭಾಗಕ್ಕೆ ಚೆನ್ನಾಗಿ ಮೃದುವಾಗಿ ಮಸಾಜ್ ಮಾಡಿ. ಇದು ಶಿಶುಗಳು ಕಣ್ಣೀರಿನ ನಾಳದ ಸಮಸ್ಯೆಯಿಂದ ಹೊರ ಬರಲು ಸಹಕಾರಿ ಆಗಿದೆ.
ಶಿಶುಗಳಲ್ಲಿ ವಾಂತಿ ಸಮಸ್ಯೆ
ಮಕ್ಕಳು ಆಹಾರ ತಿನ್ನುವುದಿಲ್ಲ. ಅವರಿಗೆ ಊಟ ಮಾಡಿಸಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಕೆಲವೊಮ್ಮೆ ಆಹಾರ ತಿನ್ನದೇ ಉಗುಳುತ್ತಾರೆ. ವಾಂತಿ ಮಾಡುತ್ತಾರೆ. ಹೀಗೆ ಶಿಶುಗಳು ಮಾಡಿದ ವಾಂತಿ ಹಸಿರು ಅಥವಾ ಹಳದಿ ಬಣ್ಣದಿಂದ ಕೂಡಿದ್ದರೆ ಅದು ಗಂಭೀರ ಸಮಸ್ಯೆಗಳ ಸಂಕೇತವಾಗಿದ್ದು, ಸೂಕ್ತ ಕಾಳಜಿಯ ಅವಶ್ಯಕತೆ ಇದೆ.
ಶಿಶುಗಳಲ್ಲಿ ಕಿವಿ ಸೋಂಕು ಸಮಸ್ಯೆ
ಶಿಶುಗಳು ಮತ್ತು ಮಕ್ಕಳಲ್ಲಿ ಕಿವಿ ಸೋಂಕು ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಇದು ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಮಗು ಪದೇ ಪದೇ ತನ್ನ ಕಿವಿ ಎಳೆಯುವುದು, ಅಳುವುದು, ಕಿರಿಕಿರಿ ಮಾಡುವುದು ಸಮಸ್ಯೆ ಬಗ್ಗೆ ಸೂಚಿಸುತ್ತದೆ. ಸೂಕ್ತ ಕಾಳಜಿ ವಹಿಸುವುದು ಮುಖ್ಯ.
ಶಿಶುಗಳಲ್ಲಿ ಚರ್ಮ ಸಮಸ್ಯೆ
ಶಿಶುಗಳು ಮತ್ತು ಮಕ್ಕಳಲ್ಲಿ ದದ್ದು, ಗುಳ್ಳೆ ಸಮಸ್ಯೆ ಬಾಧಿಸುತ್ತದೆ. ನವಜಾತ ಶಿಶುಗಳಲ್ಲಿ ಡಯಾಪರ್ ನಿಂದ ದದ್ದು ಉಂಟಾಗುತ್ತದೆ. ಮಗುವಿನ ಡಯಾಪರ್ ಆಗಾಗ್ಗೆ ಬದಲಾಯಿಸಿ. ಇದು ಚರ್ಮದ ದದ್ದು ಸಮಸ್ಯೆ ಹೆಚ್ಚು ಮಾಡುತ್ತದೆ. ಡಯಾಪರ್ ರಾಶಸ್ ಕ್ರೀಂ ಹಚ್ಚಿ. ಮಕ್ಕಳ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಇದನ್ನೂ ಓದಿ: ಪೋಷಕಾಂಶಗಳ ಗಣಿ ತೆಂಗಿನ ಹಾಲು ಸ್ಮೂಥಿ ಮಾಡೋದು ಹೀಗೆ
ಶಿಶುಗಳಲ್ಲಿ ಅತಿಸಾರ ಸಮಸ್ಯೆ
ಶಿಶುಗಳಲ್ಲಿ ಅತಿಸಾರ ಸಮಸ್ಯೆ ಸಾಮಾನ್ಯ. ಮಗು ಔಷಧಿ ಅಥವಾ ಆಹಾರದಿಂದ ಹೊಟ್ಟೆ ಅಸಮಾಧಾನಗೊಂಡಿದ್ದರೆ ಅತಿಸಾರ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಮಗುವನ್ನು ಆಗಾಗ್ಗೆ ಹೈಡ್ರೀಕರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ