Makeup Tips: ಈ ವರ್ಷದ ಲೇಟೆಸ್ಟ್ ಮೇಕಪ್ ಟ್ರೆಂಡ್ ಬಗ್ಗೆ ಫುಲ್ ಡೀಟೆಲ್ಸ್ ಇಲ್ಲಿದೆ, ಪಾರ್ಟಿಗಳಲ್ಲಿ ಇನ್ನು ನಿಮ್ದೇ ಹವಾ!

ಹೊಸ ವರ್ಷದ ಪಾರ್ಟಿಗಳಲ್ಲಿ ಬಹು ಕಾಲದವರೆಗೆ ನಿಮ್ಮ ಮುಖವು ಕಾಂತಿಯುಕ್ತವಾಗಿ ಕಾಣಲು ಮ್ಯಾಟ್ ಫಿನಿಶ್ ರೀತಿಯಲ್ಲಿ ನಿಮ್ಮ ಮುಖ ಕಂಗೊಳಿಸಬೇಕು. ಹಾಗಾಗಿ ಸಾಧ್ಯವಾದಷ್ಟು ನಿಮ್ಮ ಮುಖವನ್ನು ಮ್ಯಾಟ್ ಫಿನಿಶಿಂಗ್ ಆಗಿರುವಂತೆ ಕಾಣುವಂತೆ ಇಟ್ಟುಕೊಳ್ಳಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸಾಮಾನ್ಯವಾಗಿ ನಾವು ಯಾವುದಾದರೂ ಹಬ್ಬ-ಹರಿದಿನಗಳು (Feast) ಬಂದಾಗ, ಎಲ್ಲರ ನಡುವೆ ನಾವೇ ಎದ್ದು ಕಾಣಬೇಕೆಂಬ ಅಭಿಲಾಷೆಯಿಂದ ಸುಂದರವಾಗಿ ಸಿಂಗರಿಸಿಕೊಳ್ಳುವುದು ಸಹಜ. ಅದಕ್ಕಾಗಿ ಏನೆಲ್ಲ ಕಸರತ್ತುಗಳನ್ನು ಮಾಡುತ್ತೇವೆ. ಅದರಲ್ಲೂ ಹೊಸ ವರ್ಷದ (New Year) ಸಂಭ್ರಮಾಚರಣೆ (Occasion) ಎಂದರೆ ಕೇಳಬೇಕೆ? ಅದೊಂದು ವರ್ಷದ ಕೊನೆ ಹಾಗೂ ಆರಂಭದ ಘಳಿಗೆಗಳು( Moments) ಅದ್ಭುತ ಕ್ಷಣಗಳ ಸಂದರ್ಭ. ಎಲ್ಲರೂ ಕಲೆತು-ಬೆರೆತು ಒಟ್ಟಾಗಿ ಹೊಸ ವರ್ಷವನ್ನು ಆಚರಿಸುವ ಪರಿ ಹೊಸತನದಿಂದಲೇ ಕೂಡಿರಬೇಕಲ್ಲವೆ? ಹಾಗಾಗಿ ಈ ಸಂದರ್ಭದಲ್ಲಿ ಬಹುಶಃ ಪುರುಷರು ಸೇರಿದಂತೆ ಮಹಿಳೆಯರೆಲ್ಲರೂ ಅದ್ಭುತವಾಗಿ ಮೇಕಪ್ (Amazing Make-Up) ಮಾಡಿಕೊಳ್ಳಬೇಕೆಂದು ಬಯಸುತ್ತಾರೆ.

ಆದರೆ, ಇಂದು ಮೇಕಪ್ ಎಂದಾಗ ಬಹು ಮುತುವರ್ಜಿಯಿಂದ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಪಾರ್ಟಿ ಇರುವ ಒಂದು ದಿನ ಮುಂಚಿತವಾಗಿಯೇ ಚರ್ಮದ ಕಾಂತಿಗಾಗಿ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ಪಾರ್ಟಿ ನಡೆಯುವ ಸಮಯಪೂರ್ತಿ ಅಥವಾ ದೀರ್ಘಕಾಲದವರೆಗೆ ಈ ಮೇಕಪ್ ಮುಖದಲ್ಲಿ ಹಾಳಾಗದಂತೆ ಉಳಿಯಬೇಕು.

ಇದನ್ನೂ ಓದಿ: Beauty Tips: ಮೇಕಪ್ ಹೆಚ್ಚು ಹೊತ್ತು ಉಳಿಯಬೇಕು ಅಂದ್ರೆ ಈ ಸುಲಭ ಟ್ರಿಕ್ಸ್ ಟ್ರೈ ಮಾಡಿ

ಮೇಕಪ್ ಮುಂಚಿನ ಸಿದ್ಧತೆ:
ದೀರ್ಘ ಕಾಲದವರೆಗೆ ನಿಮ್ಮ ಅಲಂಕಾರ ಮುಖದಲ್ಲಿ ಹಾಗೆ ಸಹಜವಾಗಿ ಉಳಿಯಬೇಕೆಂದರೆ ಹಾಗೂ ಈ ಸಮಯಾದ್ಯಂತೆ ನಿಮ್ಮ ಚರ್ಮ ಕಾಂತಿಯುತ ಹಾಗೂ ಶುಭ್ರವಾಗಿರಬೇಕೆಂದರೆ ಮೊದಲಿಗೆ ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಚರ್ಮದಲ್ಲಿರುವ ಎಣ್ಣೆ ಅಂಶ ಹಾಗೂ ಧೂಳು ಮಾಯವಾಗುತ್ತದೆ. ನೀರಿನಿಂದ ಮುಖ ತೊಳೆಯುವುದು ಹಾಗೂ ಚರ್ಮಕ್ಕೆ ಮಾಯಿಶ್ಚರೈಸರ್ ಬಳಸುವುದರಿಂದ ಮುಖದ ಚರ್ಮದಲ್ಲಿ ನೀರಿನಂಶ ಇರುವಂತಾಗಿ ಮೇಕಪ್ ಸುಲಭವಾಗಿ ಹಾಗೂ ಬೇಗನೆ ಹೋಗದಂತೆಯೂ ಮಾಡಬಹುದು.

ಪ್ರೈಮರ್:
ಪ್ರೈಮರ್ ಬಳಸುವುದು ಮೇಕಪ್ ನ ಬುನಾದಿ ಎಂದೇ ಹೇಳಬಹುದು. ಏಕೆಂದರೆ, ಇದು ಮೇಕಪ್ ಮುಂಚಿನ ಹಂತವಾಗಿದ್ದು ನಿಮ್ಮ ಮೇಕಪ್ ಗೆ ಒಂದು ರೀತಿಯ ಅದ್ಭುತವಾದ ವೇದಿಕೆ ಒದಗಿಸಿಕೊಡುತ್ತದೆ. ಮೇಕಪ್ ನಿಂದ ನಿಮ್ಮಲ್ಲಿರುವ ಗರಿಷ್ಠ ಸುಂದರತೆಯು ಹೊರಗೆದ್ದು ಕಾಣುವಂತೆ ಮಾಡುವಲ್ಲಿ ಸಹಕರಿಸುತ್ತದೆ ಪ್ರೈಮರ್, ಅಲ್ಲದೆ ಮೇಕಪ್ ನಿಮ್ಮ ಮುಖದಲ್ಲಿ ಬಹು ಹೊತ್ತು ಇರುವಂತೆ ನೋಡಿಕೊಳ್ಳುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಕೇವಲ ಒಂದು ಲೇಯರ್ ನಲ್ಲಿ ಮೇಕಪ್ ಬ್ರಶ್ ಅಥವಾ ನಿಮ್ಮ ಬೆರಳುಗಳನ್ನು ಪ್ರೈಮರ್ ಅನ್ನು ನಯವಾಗಿ ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ.

ಮ್ಯಾಟ್ ಫಿನಿಶಿಂಗ್:
ಹೊಸ ವರ್ಷದ ಪಾರ್ಟಿಗಳಲ್ಲಿ ಬಹು ಕಾಲದವರೆಗೆ ನಿಮ್ಮ ಮುಖವು ಕಾಂತಿಯುಕ್ತವಾಗಿ ಕಾಣಲು ಮ್ಯಾಟ್ ಫಿನಿಶ್ ರೀತಿಯಲ್ಲಿ ನಿಮ್ಮ ಮುಖ ಕಂಗೊಳಿಸಬೇಕು. ಹಾಗಾಗಿ ಸಾಧ್ಯವಾದಷ್ಟು ನಿಮ್ಮ ಮುಖವನ್ನು ಮ್ಯಾಟ್ ಫಿನಿಶಿಂಗ್ ಆಗಿರುವಂತೆ ಕಾಣುವಂತೆ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಮುಖದಲ್ಲಿರಬಹುದಾದ ಕಲೆಗಳು ಮುಚ್ಚಿ ನಿಮ್ಮ ಚರ್ಮ ಕ್ಲೀನ್ ಆಂಡ್ ಕ್ಲಿಯರ್ ಆಗಿ ಕಂಗೊಳಿಸಿತ್ತದೆ. ಈ ರೀತಿಯ ಮ್ಯಾಟ್ ಲುಕ್ ಬರಲು ಮ್ಯಾಟ್ ಪ್ರೈಮರ್ ಅನ್ನು ಬಳಸಿ ನಂತರ ತೆಳುವಾಗಿ ಅದರ ಮೇಲೆ ಫೌಂಡೇಷನ್ ಕ್ರೀಮ್ ಹಚ್ಚಿಕೊಳ್ಳಿ.

ಥೀಮ್ ಪ್ರಕಾರ ಮೇಕಪ್ ಮಾಡಿಕೊಳ್ಳಿ:
ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದಕ್ಕೆ ಪೂರಕವಾಗುವಂತೆ ಒಂದು ಥೀಮ್ ಪ್ರಕಾರ ಮೇಕಪ್ ಮಾಡಿಕೊಂಡಾಗ ಅದು ನೀವು ಎಲ್ಲರಲ್ಲೂ ಎದ್ದು ಕಾಣುವಂತೆ ಮಾಡುತ್ತದೆ. ಚೆರಿ ಬಣ್ಣದಂತಹ ಕೆಂಪು ಬಣ್ಣದ ಲಿಪ್ ಸ್ಟಿಕ್ ಜೊತೆಗೆ ಥೀಮ್ ಬೇಸ್ಡ್ ಮೇಕಪ್ ನಿಮ್ಮ ಸುಂದರತೆಗೆ ಹೆಚ್ಚಿನ ಮೆರುಗನ್ನು ನೀಡುತ್ತದೆ. ಕಪ್ಪಾದ ಐ ಲೈನರ್ ಜೊತೆಗೆ ಹೆಸಿರು ಅಥವಾ ಕೆಂಬಣ್ಣದ ಐ ಶ್ಯಾಡೋವ್ ಮಾಡಿಕೊಳ್ಳುವುದರಿಂದ ನಿಮ್ಮ ಒಟ್ಟ್ಟಾರೆ ಮುಖದ ಸೌಂದರ್ಯ ಅದ್ಭುತವಾಗಿ ಗೋಚರಿಸುತ್ತದೆ.

ಇದನ್ನೂ ಓದಿ: Beauty Tips: ಕಪ್ಪು ಕಲೆ ಹೋಗಲಾಡಿಸಿ ಮುಖದ ಅಂದ ಕಾಪಾಡಿಕೊಳ್ಳಲು ಮನೆಯಲ್ಲಿ ಹೀಗೆ ಮಾಡಿ ಸಾಕು

ಮೇಕಪ್ ಸೆಟ್ ಆಗುವಂತೆ ಮಾಡುವುದು:
ನೀವು ನಿಮ್ಮ ಮುಖ ಅದ್ಭುತವಾಗಿ ಕಾಣುವಂತೆ ಎಲ್ಲ ರೀತಿಯ ಕ್ರೀಮ್, ಫೌಂಡೇಶನ್, ಐ ಲೈನರ್ ಮುಂತಾದವುಗಳನ್ನೆಲ್ಲ ಬಳಸಿ ಸಿಂಗರಿಸಿಕೊಂಡ ನಂತರ ಅವು ನಿಮ್ಮ ಮುಖದಲ್ಲಿ ಹಾಗೇ ಉಳಿಯುವಂತೆ ಸೆಟ್ ಮಾಡಿಕೊಳ್ಳುವುದು ಬಲು ಅವಶ್ಯಕ. ಅದಕ್ಕಾಗಿ ನೀವು ಸೆಟ್ಟಿಂಗ್ ಸ್ಪ್ರೇ ಅನ್ನು ಬಳಸಬಹುದು. ಈ ಸೆಟ್ಟಿಂಗ್ ಸ್ಪ್ರೇ ಒಂದು ಅದ್ಭುತವಾದ ಟ್ರಿಕ್ ಆಗಿದ್ದು ನೀವು ಮಾಡಿಕೊಂಡ ಮೇಕಪ್ ಎಲ್ಲಿಯೂ ಕೆಡದಂತೆ ಹಾಗೂ ದೀರ್ಘ ಕಾಲದವರೆಗೆ ನಿಮ್ಮ ಮುಖದ ಮೇಲೆ ಹಾಗೆಯೆ ಉಳಿಯುವಂತೆ ನೆರವಾಗುತ್ತದೆ. ಈಗ ನೀವು ನಿಮ್ಮ ಪಾರ್ಟಿಯಲ್ಲಿ ಕಂಗೊಳಿಸಲು ಪೂರ್ಣವಾಗಿ ಸಜ್ಜಾಗಿರುತ್ತೀರಿ. ಈ ಸಮಯ ಹಾಗೂ ಸಂದರ್ಭವನ್ನು ಹೆಚ್ಚು ಆನಂದಿಸಿ.
Published by:vanithasanjevani vanithasanjevani
First published: