ಹೊಸ ವರ್ಷದ ದಿನದಂದು ವಿಶ್ವದಲ್ಲೇ ಜನಿಸುವ ಮಕ್ಕಳ ಸಂಖ್ಯೆ ಅಧಿಕ; ಇದರಲ್ಲಿ ಭಾರತಕ್ಕೆ ಮೊದಲ ಸ್ಥಾನ

Seema.R | news18
Updated:December 26, 2018, 6:06 PM IST
ಹೊಸ ವರ್ಷದ ದಿನದಂದು ವಿಶ್ವದಲ್ಲೇ ಜನಿಸುವ ಮಕ್ಕಳ ಸಂಖ್ಯೆ ಅಧಿಕ; ಇದರಲ್ಲಿ ಭಾರತಕ್ಕೆ ಮೊದಲ ಸ್ಥಾನ
ಪ್ರಾತಿನಿಧಿಕ ಚಿತ್ರ
Seema.R | news18
Updated: December 26, 2018, 6:06 PM IST
ಹೊಸ ವರ್ಷ ಎಂದರೆ ಅಲ್ಲಿ ಹೊಸ ಸಂಭ್ರಮ. ಆ ಸಂತೋಷದೊಂದಿಗೆ ಅನೇಕ ಖುಷಿ ಘಟನೆಗಳು ನಡೆಯಲಿ ಎಂದು ಆಶಿಸುವವರು ಅನೇಕರು. ಈ ಮೂಲಕ ಅವರ ಖುಷಿಯನ್ನು ದುಪ್ಪಟ್ಟು ಮಾಡಿಕೊಳ್ಳುವ ಇಚ್ಛೆ ಅವರದು. ಅದೇ ರೀತಿ ತಾಯಿಯಾಗುವವರಿಗೂ ಈ ಹೊಸ ಸಂವತ್ಸರದಂತೆ ತಮ್ಮ ಮುದ್ದಿನ ಮಗುವಿಗೆ ಜನ್ಮ ನೀಡುವ ಚಡಪಟಿಕೆ ಕೂಡ ಹೆಚ್ಚಿರುತ್ತದೆ.

ಹೊಸ ವರ್ಷದೊಂದೆ ನಮ್ಮ ಮನೆಗೆ ಹೊಸ ಸದಸ್ಯನ ಆಗಮನ ಆಗಲಿ ಎಂದು ಅನೇಕ ತಾಯಂದಿರು ಅದೇ ದಿನದಂದು ಶಸ್ತ್ರಚಿಕಿತ್ಸೆ​ ಮೂಲಕ ಕೂಡ ಮಗುವಿನ ಜನ್ಮ ನೀಡಲು  ಮುಂದಾಗುತ್ತಾರೆ. ಈ ರೀತಿ ಅಭಿಲಾಷೆಯನ್ನು ಹೊಂದಿರುವ ತಾಯಂದಿರು ವಿಶ್ವದ ಎಲ್ಲ ಮೂಲೆಗಳಲ್ಲೂ ಕಂಡು ಬರುತ್ತಾರೆ. ಅದರಲ್ಲಿ ಭಾರತೀಯರಿಗೆ ಈ ರೀತಿ ಆಸೆ ಹೆಚ್ಚು ಎನ್ನುತ್ತಿವೆ ದಾಖಲೆಗಳು.

ಕಳೆದ ವರ್ಷದ ಯುನೆಸ್ಕೋ ದಾಖಲೆ ಪ್ರಕಾರ ಜನವರಿ 1, 2018ರಂದು ವಿಶ್ವಾದ್ಯಾಂತ ಜನಿಸಿದ ಮಕ್ಕಳ ಸಂಖ್ಯೆ 3,86,000. ಇದರಲ್ಲಿ ಭಾರತದಲ್ಲಿ 70 ಸಾವಿರ ಮಕ್ಕಳು ಜನಿಸಿದರೆ, ಚೀನಾದಲ್ಲಿ 44,760, ನೈಜೀರಿಯಾದಲ್ಲಿ 20,280, ಪಾಕಿಸ್ತಾನದಲ್ಲಿ 14,914, ಇಂಡೋನೇಷ್ಯಾದಲ್ಲಿ 13,370 ಅಮೆರಿಕದಲ್ಲಿ 11,280, ಕಾಂಗೋದಲ್ಲಿ 9,400, ಇಥಿಯೋಪಿಯಾದಲ್ಲಿ 9,020 ಹಾಗೂ ಬಾಂಗ್ಲಾದೇಶದಲ್ಲಿ 8,370 ಮಕ್ಕಳು ಜನಿಸಿದೆ,

ಇದನ್ನು ಓದಿ : ನಮ್ಮೂರ ಹೆಮ್ಮೆ 'ಡಾಕ್ಟರ್' ನರಸಮ್ಮ: 15 ಸಾವಿರ ಹೆರಿಗೆ ಮಾಡಿಸಿದ ಮಹಾ'ತಾಯಿ'

ಹೊಸ ವರ್ಷದಂದು ಮಕ್ಕಳು ಹುಟ್ಟುವುದು ಎಲ್ಲರ ಬಯಕೆಯಾಗಿರುತ್ತದೆ. ಹಾಗೆಂದು ಕೆಲವು ಪೋಷಕರು ಅದಕ್ಕಾಗಿ ತಮ್ಮ ಹೆರಿಗೆ ಸಮಯವನ್ನು ಮುಂಚಿತ ಹಾಗೂ ತಡವಾಗಿ ಮಾಡುವಂತೆ ವೈದ್ಯರಿಗೆ ಸೂಚಿಸುತ್ತಾರೆ. ಈ ರೀತಿ ಮಾಡುವುದು ತಾಯಿಯ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಮರೆತು ವೈದ್ಯರಿಗೆ ಸೂಚಿಸುವುದು ನಿಜಕ್ಕೂ ಆಘಾತಕಾರಿಯಾಗಿದೆ. ಮಗು ಹುಟ್ಟಿತು ಎಂಬುದೆ ಒಂದು ನೆನಪಿನಲ್ಲಿ ಉಳಿಯುವ ಘಟನೆ ಅದರಲ್ಲಿ ಜ.1 ಆಗಬೇಕು ಎಂಬುದು ತಪ್ಪು ನಿರ್ಧಾರ ಎನ್ನುತ್ತಾರೆ ವೈದ್ಯರು.

First published:December 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ