• Home
  • »
  • News
  • »
  • lifestyle
  • »
  • 2023 Resolutions: ಹೊಸ ವರ್ಷದಿಂದ ಇಷ್ಟು ಮಾಡಿ ಸಾಕು- ಲೈಫ್​ಲಿ ಹ್ಯಾಪಿಯಾಗಿ ಇರ್ತೀರಾ!

2023 Resolutions: ಹೊಸ ವರ್ಷದಿಂದ ಇಷ್ಟು ಮಾಡಿ ಸಾಕು- ಲೈಫ್​ಲಿ ಹ್ಯಾಪಿಯಾಗಿ ಇರ್ತೀರಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಿಮ್ಮ ದಿನವನ್ನು ಖುಷಿಯಿಂದ ಶುರು ಮಾಡಿ. ಈ ನಿಮ್ಮ ಮುಂಜಾನೆಯ ಮನಸ್ಥಿತಿ ಇಡೀ ದಿನ ನೀವು ಖುಷಿಯಾಗಿರಲು ಸಹಾಯ ಮಾಡುತ್ತದೆ ಅಂತ ಹೇಳಬಹುದು.

  • Share this:

ನೀವು ದಿನವಿಡೀ ನಗು ನಗುತ್ತಾ ಸಂತೋಷದಿಂದ(Happy) ಇರಬೇಕು ಅಂತ ಅಂದುಕೊಂಡರೆ, ಅದಕ್ಕಾಗಿ ನಿಮ್ಮ ಜೀವನಶೈಲಿಯನ್ನು(Lifestyle) ಸಹ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ನಿಮ್ಮ ದಿನವನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ(Social Media) ಯಾವುದೋ ಒಂದು ನಕಾರಾತ್ಮಕವಾದ ಕಾಮೆಂಟ್ ನೋಡಿ ಅಥವಾ ಪ್ರೀತಿಪಾತ್ರರೊಂದಿಗೆ ಜಗಳವಾಡುವ ಮೂಲಕ ನಿಮ್ಮ ದಿನವನ್ನು(Day) ಪ್ರಾರಂಭಿಸುತ್ತಿದ್ದರೆ, ಮೊದಲು ಅದನ್ನೆಲ್ಲಾ ಬಿಟ್ಟುಬಿಡಿ. ಏಕೆಂದರೆ ಇಂತಹ ಘಟನೆಗಳು ನಿಮ್ಮನ್ನು ಅಸಮಾಧಾನ ಪಡಿಸುವುದನ್ನು ಬಿಟ್ಟರೆ ಬೇರೇನೂ ಮಾಡುವುದಿಲ್ಲ.


ಆದ್ದರಿಂದ, ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಿಮ್ಮ ದಿನವನ್ನು ಖುಷಿಯಿಂದ ಶುರು ಮಾಡಿ. ಈ ನಿಮ್ಮ ಮುಂಜಾನೆಯ ಮನಸ್ಥಿತಿ ಇಡೀ ದಿನ ನೀವು ಖುಷಿಯಾಗಿರಲು ಸಹಾಯ ಮಾಡುತ್ತದೆ ಅಂತ ಹೇಳಬಹುದು.


ಅದೇ ನೀವು ಕೆಟ್ಟ ಮನಸ್ಥಿತಿಯಲ್ಲಿದ್ದರೆ, ಅದು ತಕ್ಷಣವೇ ನಿಮ್ಮ ಸುತ್ತಲಿನವರ ಮೇಲೆ ಪರಿಣಾಮ ಬೀರುತ್ತದೆ. ಅದು ನಿಮ್ಮ ಸಹೋದ್ಯೋಗಿಗಳಾಗಿರಲಿ ಅಥವಾ ಕುಟುಂಬದ ಸದಸ್ಯರಾಗಿರಲಿ, ಅವರೆಲ್ಲರೂ ನಿಮ್ಮ ಕೆಟ್ಟ ಮನಸ್ಥಿತಿಯಿಂದ ಕಿರಿಕಿರಿಯನ್ನು ಅನುಭವಿಸುತ್ತಾರೆ.


ಒಟ್ಟಿನಲ್ಲಿ ಹೇಳುವುದಾದರೆ ನಾವು ದಿನವನ್ನು ಹೇಗೆ ಪ್ರಾರಂಭಿಸಿದ್ದೇವೆ ಎಂಬುದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಬಹಳ ಗಮನಾರ್ಹ ಪರಿಣಾಮ ಬೀರುತ್ತದೆ. ಯುಎಸ್ ಮೂಲದ ಮಾನಸಿಕ ಆರೋಗ್ಯ ತಜ್ಞ ಮತ್ತು ಮನೋವೈದ್ಯಕೀಯ ತಜ್ಞ ಡಾ. ರಿಷಿ ಗೌತಮ್ ಅವರು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಆರೋಗ್ಯಕರ ಬೆಳಗಿನ ಅಭ್ಯಾಸಗಳ ಬಗ್ಗೆ ಹಂಚಿಕೊಂಡಿದ್ದಾರೆ ನೋಡಿ.


1. ಚೆನ್ನಾಗಿ ನಿದ್ರೆ ಮಾಡುವುದು


ಕನಿಷ್ಠ ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ ಎಂದು ಜನರು ಆಗಾಗ್ಗೆ ಹೇಳುವುದನ್ನು ನಾವು ಕೇಳಿರುತ್ತೇವೆ. ಇದು ಅಕ್ಷರಶಃ ನಿಜ ಅಂತಾನೆ ಹೇಳಬಹುದು, ಪ್ರತಿದಿನ ಬೆಳಿಗ್ಗೆ ಒಂದೇ ಸಮಯಕ್ಕೆ ಎಚ್ಚರಗೊಳ್ಳುವುದು ಬಹಳ ಮುಖ್ಯ ಎಂದು ಡಾ ಗೌತಮ್ ಹೇಳುತ್ತಾರೆ. ಏಕೆಂದರೆ, ಇದು ನಮ್ಮ ಮೆದುಳು ನಮ್ಮ ದಿನಚರಿಗೆ ಸರಿಯಾಗಿ ಹೊಂದಿಕೊಳ್ಳಲು ನೆರವಾಗುತ್ತದೆ. ಅಂತೆಯೇ, ರಾತ್ರಿ ಹೊತ್ತು ಸಹ ಒಂದೇ ಸಮಯಕ್ಕೆ ಸರಿಯಾಗಿ ಮಲಗಲು ಪ್ರಯತ್ನಿಸಿ ಮತ್ತು ಕನಿಷ್ಠ ಎಂಟರಿಂದ ಒಂಬತ್ತು ಗಂಟೆಗಳ ಕಾಲ ನಿದ್ರೆ ಮಾಡಿ.


ಇದನ್ನೂ ಓದಿ: Memory Loss: ವಯಸ್ಸಾದವರಲ್ಲಿ ಎಷ್ಟು ಪ್ರಮಾಣದ ನೆನಪಿನ ಶಕ್ತಿ ನಾಶ ಸಾಮಾನ್ಯ? ವೈದ್ಯರು ಹೇಳೋದೇನು ನೋಡಿ


2. ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಫೋನ್ ಅನ್ನು ನೋಡಬೇಡಿ


ನೀವು ಬೆಳಿಗ್ಗೆ ಎದ್ದ ನಂತರ, ನಿಮ್ಮ ನಗರ ಅಥವಾ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ನೀವು ಬಯಸುತ್ತೀರಿ. ಹಾಗಾದರೆ, ನೀವು ಏನು ಮಾಡುತ್ತೀರಿ? ನೀವು ನಿಮ್ಮ ಫೋನ್ ಅನ್ನು ಎತ್ತಿಕೊಂಡು ಮತ್ತು ವಿವಿಧ ಪೋಸ್ಟ್ ಗಳು ಅಥವಾ ಸೈಟ್ ಗಳನ್ನು ಪರಿಶೀಲಿಸಲು ಪ್ರಾರಂಭಿಸುತ್ತೀರಿ.


ಸಾಮಾಜಿಕ ಮಾಧ್ಯಮಗಳಿಗೆ ಒಡ್ಡಿಕೊಳ್ಳುವುದು, ಒತ್ತಡದ ಸುದ್ದಿ ಘಟನೆಗಳು, ಕೆಲಸದ ಒತ್ತಡಗಳು ಮತ್ತು ಮುಂಜಾನೆ ಸಮಯದಲ್ಲಿ ಮೊಬೈಲ್ ನೋಡುವುದು ಶಿಫಾರಸು ಮಾಡಲಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.


ರಾತ್ರಿ ಬಂದ ಇ-ಮೇಲ್ ಗಳಿಗೆ ಬೆಳಿಗ್ಗೆ ಎದ್ದ ತಕ್ಷಣವೇ ಉತ್ತರಿಸುವ ಅಭ್ಯಾಸವನ್ನು ಸಂಪೂರ್ಣವಾಗಿ ಬಿಟ್ಟು ಬಿಡಿ.


3. ಬೆಳಿಗ್ಗೆ 15 ನಿಮಿಷಗಳ ಕಾಲ ಧ್ಯಾನ ಮಾಡಿ


ನಿಮ್ಮ ಸ್ವಂತ ಆಲೋಚನೆಗಳೊಂದಿಗೆ ಸ್ವಲ್ಪ ಸಮಯವನ್ನು ಶಾಂತಿಯಿಂದ ಕಳೆಯುವುದು ಮನಸ್ಸಿಗೆ ವಿಶ್ರಾಂತಿ ಪಡೆಯಲು ಮತ್ತು ದಿನಕ್ಕಾಗಿ ತಯಾರಿ ನಡೆಸಲು ಸಹಾಯ ಮಾಡುತ್ತದೆ.


ಬೆಳಗ್ಗೆ ಆಳವಾದ ಉಸಿರಾಟ ಮತ್ತು ಯೋಗವನ್ನು ಅಭ್ಯಾಸ ಮಾಡಿ ಮತ್ತು ಅದರ ನಂತರ ನೀವು ಎಷ್ಟು ಸಕಾರಾತ್ಮಕ ಭಾವನೆ ಹೊಂದುತ್ತೀರಿ ಎಂದು ನೀವೇ ನೋಡಿ.


4. ತಪ್ಪದೇ ವ್ಯಾಯಾಮ ಮಾಡಿ


ದೇಹದಲ್ಲಿರುವ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ನೀವು ಬೆಳಿಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಬೆಳಗ್ಗೆಯ ದೈಹಿಕ ಚಟುವಟಿಕೆಯು ನಮ್ಮ ದೇಹವನ್ನು ಸಕ್ರಿಯವಾಗಿರಿಸುತ್ತದೆ ಮತ್ತು ನಿಮ್ಮ ಮೆದುಳಿಗೆ ಸಂತೋಷದ ರಾಸಾಯನಿಕಗಳಾದ ಎಂಡಾರ್ಫಿನ್ ಗಳ ಬಿಡುಗಡೆಗೆ ಕಾರಣವಾಗುತ್ತದೆ.


5. ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳಿ


ಸಾಮಾನ್ಯವಾಗಿ ನಾವೆಲ್ಲಾ ಶಾಲೆಯಲ್ಲಿದ್ದಾಗ ನಮ್ಮ ದಿನಚರಿ ಹೀಗೆ ಇರಬೇಕು ಅಂತ ಪೇಪರ್ ನಲ್ಲಿ ಅನೇಕ ಬಾರಿ ದಿನಚರಿಯನ್ನು ಬರೆದಿರುತ್ತೇವೆ. ನೀವು ಆ ದಿನಚರಿಯನ್ನು ಸರಿಯಾಗಿ ಫಾಲೋ ಮಾಡಲು ಒಂದು ಡೈರಿಯನ್ನು ನಿರ್ವಹಿಸುವುದು ತುಂಬಾ ಮುಖ್ಯವಾಗಿರುತ್ತದೆ.


ನಿಮ್ಮ ಭಾವನಾತ್ಮಕ ಜೀವನವನ್ನು ರಚನಾತ್ಮಕ ರೀತಿಯಲ್ಲಿ ಪ್ರತಿಬಿಂಬಿಸಲು ನಿಮಗೆ ಅನಿಸಿದ್ದನ್ನು ಬರೆಯುವುದು ಉತ್ತಮ ಮಾರ್ಗವಾಗಿದೆ. ಈ ರೀತಿಯಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ಉದ್ದೇಶಪೂರ್ವಕ ಪ್ರಯತ್ನವು ಮನಸ್ಸಿಗೆ ಹಿತಕರವಾಗಿದೆ ಎಂದು ಡಾ. ಗೌತಮ್ ಹೇಳುತ್ತಾರೆ. ನೀವು ಕೃತಜ್ಞರಾಗಿರುವ ವಿಷಯಗಳನ್ನು ನಿಮ್ಮ ಡೈರಿಯಲ್ಲಿ ಬರೆಯಿರಿ. ನಿಮ್ಮ ಸ್ನೇಹಿತರು ಅಥವಾ ಕುಟುಂಬ ಅಥವಾ ಆರೋಗ್ಯ ಅಥವಾ ಕೆಲಸವನ್ನು ಸಹ ನೀವು ಅದರಲ್ಲಿ ಉಲ್ಲೇಖಿಸಬಹುದು.


6. ಪೌಷ್ಠಿಕ ಆಹಾರ ಸೇವಿಸಿ


ಆರೋಗ್ಯಕರ ಉಪಾಹಾರ ನಮ್ಮ ದಿನದ ಆರಂಭದಲ್ಲಿ ತುಂಬಾನೇ ಮುಖ್ಯವಾಗಿರುತ್ತದೆ. ಉಪಾಹಾರದಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್ ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಮೊಟ್ಟೆ ಅಥವಾ ಚೀಸ್ ನಂತಹ ಪ್ರೋಟೀನ್ ಗಳನ್ನು ಒಳಗೊಂಡ ಬೆಳಗಿನ ಊಟವನ್ನು ಸೇವಿಸುವ ಜನರು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಂದ ಉತ್ತಮವಾಗಿ ರಕ್ಷಿಸಲ್ಪಡುತ್ತಾರೆ ಎಂದು ಸಂಶೋಧನೆಯು ಪದೇ ಪದೇ ತೋರಿಸಿದೆ.


7. ಸಾಕಷ್ಟು ನೀರು ಕುಡಿದು ಹೈಡ್ರೇಟ್ ಆಗಿರಬೇಕು


ರಾತ್ರಿಯಿಡೀ ದೀರ್ಘ ವಿರಾಮದ ನಂತರ ನಾವೆಲ್ಲರೂ ಬೆಳಿಗ್ಗೆ ಸ್ವಲ್ಪ ನಿರ್ಜಲೀಕರಣದಿಂದ ಎಚ್ಚರಗೊಳ್ಳುತ್ತೇವೆ, ಆದ್ದರಿಂದ ದೇಹದಲ್ಲಿ ಆರೋಗ್ಯಕರ ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನವು ಸುಧಾರಿತ ಅರಿವಿನ ಕಾರ್ಯವನ್ನು ಉತ್ತೇಜಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.


ಬೆಳಗ್ಗೆ ಎದ್ದ ನಂತರ ನಿಂಬೆ ರಸ ಮತ್ತು ಜೇನುತುಪ್ಪದೊಂದಿಗೆ ಒಂದು ದೊಡ್ಡ ಲೋಟ ನೀರನ್ನು ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ.


ಇದನ್ನೂ ಓದಿ: Breastfeeding Mom Diet: ಎದೆಹಾಲುಣಿಸುವ ತಾಯಂದಿರು ಈ ಆಹಾರಗಳಿಂದ ದೂರವಿರಿ- ಇಲ್ಲವಾದ್ರೆ ಮಗುವಿಗೆ ಕಷ್ಟ


8. ನಿಮ್ಮ ಹಾಸಿಗೆಯನ್ನು ನೀವೇ ಹಾಸಿಕೊಳ್ಳಿ


ಇದು ಕೇಳೋದಕ್ಕೆ ತುಂಬಾನೇ ಸಿಂಪಲ್ ಆಗಿರುವ ಕೆಲಸ ಅಂತ ನಿಮಗೆ ಅನ್ನಿಸಬಹುದು. ಆದರೆ ನಿಮ್ಮ ಹಾಸಿಗೆಯನ್ನು ನೀವೇ ಹಾಸಿಕೊಳ್ಳುವುದು ಅಥವಾ ನಿಮ್ಮ ಮಲಗುವ ಕೋಣೆಯನ್ನು ಅಚ್ಚುಕಟ್ಟಾಗಿ ಮಾಡುವುದು ಸಂತೋಷದ ದಿನದ ಸಮಯದ ಮನಸ್ಥಿತಿ ಮತ್ತು ಒಟ್ಟಾರೆಯಾಗಿ ಉತ್ತಮ ನಿದ್ರೆಯೊಂದಿಗೆ ಸಂಬಂಧ ಹೊಂದಿದೆ ಎಂದು ತೋರಿಸಲಾಗಿದೆ.


9. ಎದ್ದ ತಕ್ಷಣ ನಿಮ್ಮ ಕೋಣೆಯ ಕಿಟಕಿಗಳನ್ನು ತೆರೆಯಿರಿ


ಬೆಳಿಗ್ಗೆ ನೀವು ಎದ್ದ ತಕ್ಷಣ ನಿಮ್ಮ ಕೋಣೆಯ ಪರದೆಗಳು ಮತ್ತು ಕಿಟಕಿಗಳನ್ನು ತೆರೆಯುವ ಮೂಲಕ ನಿಮ್ಮ ಕೋಣೆ ಅಥವಾ ಮನೆಯನ್ನು ಬೆಳಗಿಸಿ. ನಿಮ್ಮ ಕೋಣೆಯೊಳಗೆ ಶುದ್ದ ಗಾಳಿ ಮತ್ತು ಬೆಳಕು ಬರಲು ಅನುವು ಮಾಡಿಕೊಡಬೇಕು.


10. ನೀವು ಏನು ಮಾಡಬೇಕು ಅಂತ ಮೊದಲೇ ಯೋಜಿಸಿ


ನೀವು ಸಂಘಟಿತವಾಗಿರಲು ಸಹಾಯ ಮಾಡುವ ಮತ್ತು ದಿನದ ಕೊನೆಯಲ್ಲಿ ಅಸಮರ್ಪಕತೆ, ಹತಾಶೆಯ ಭಾವನೆಗಳನ್ನು ತಡೆಗಟ್ಟುವಂತೆ ದಿನದಲ್ಲಿ ನೀವು ಮಾಡಬೇಕಾದ ಕಾರ್ಯಗಳ ಪಟ್ಟಿಯನ್ನು ಮಾಡಿ. ನಿಮ್ಮ ದಿನಚರಿಯ ಮೇಲಿನ ಬೇಡಿಕೆಗಳನ್ನು ಅವಲಂಬಿಸಿ ಅದನ್ನು ಸಮಂಜಸವಾಗಿರಿಸಿಕೊಳ್ಳಿ.


ನೀವು ಅತಿಯಾದ ಆಲಸ್ಯವನ್ನು ಅನುಭವಿಸಿದರೆ ಅಥವಾ ಕಳಪೆ ಪ್ರೇರಣೆಯನ್ನು ಹೊಂದಿದ್ದರೆ ಅಥವಾ ಖಿನ್ನತೆಯ ಮನಸ್ಥಿತಿಯಲ್ಲಿದ್ದರೆ ಅಥವಾ ಸುಲಭವಾಗಿ ಕಿರಿಕಿರಿಗೊಳಗಾದರೆ, ಅವು ಖಿನ್ನತೆಯ ಚಿಹ್ನೆಗಳಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Published by:Latha CG
First published: