Cancer: ಯುವಜನರಲ್ಲಿಯೇ ಹೆಚ್ಚುತ್ತಿದ್ಯಂತೆ ಮಹಾಮಾರಿ ಕ್ಯಾನ್ಸರ್‌! ಹಾಗಿದ್ರೆ ಇದಕ್ಕೆ ಕಾರಣವೇನು?

ಈಗ ಕ್ಯಾನ್ಸರ್‌ ಮಾರಿ ಯುವಜನರಲ್ಲಿ ಹೆಚ್ಚಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಮುಂಚಿನ ದಿನಗಳಲ್ಲಿ ಕ್ಯಾನ್ಸರ್‌ ರೋಗವು 50 ವರ್ಷ ಅಥವಾ 50 ವರ್ಷಕ್ಕಿಂತ ಕಡಿಮೆ ಇರುವವರಲ್ಲಿ ಕಾಣಿಸಿಕೊಳ್ಳುತ್ತಿತ್ತು. 1990 ರಿಂದ ಇಂದಿನವರೆಗೂ ಜಗತ್ತು ಬೃಹತ್‌ ಬದಲಾವಣೆಯನ್ನು ಹೊಂದಿದೆ. ಯುವಜನರಲ್ಲಿ ಕ್ಯಾನ್ಸರ್‌ ಅಪಾಯ ಹೆಚ್ಚುತ್ತಲಿದೆ ಎಂದು ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ ಸಂಶೋಧಕರು ಕಂಡುಹಿಡಿದಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕ್ಯಾನ್ಸರ್‌ (Cancer) ಎಂಬ ಮಹಾಮಾರಿ ಹುಟ್ಟಿದ ಹಸುಗೂಸಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಕಾಡುವ ಒಂದು ರೋಗವಾಗಿದೆ (Disease). ಈಗ ಕ್ಯಾನ್ಸರ್‌ ಮಾರಿ ಯುವಜನರಲ್ಲಿ (Youths) ಹೆಚ್ಚಾಗುತ್ತಿದೆ ಎಂದು ಹೊಸ ಅಧ್ಯಯನವೊಂದು (Study) ಬಹಿರಂಗಪಡಿಸಿದೆ. ಈ ಮುಂಚಿನ ದಿನಗಳಲ್ಲಿ ಕ್ಯಾನ್ಸರ್‌ ರೋಗವು 50 ವರ್ಷ ಅಥವಾ 50 ವರ್ಷಕ್ಕಿಂತ ಕಡಿಮೆ ಇರುವವರಲ್ಲಿ ಕಾಣಿಸಿಕೊಳ್ಳುತ್ತಿತ್ತು. 1990 ರಿಂದ ಇಂದಿನವರೆಗೂ ಜಗತ್ತು (World) ಬೃಹತ್‌ ಬದಲಾವಣೆಯನ್ನು ಹೊಂದಿದೆ. ಯುವಜನರಲ್ಲಿ ಕ್ಯಾನ್ಸರ್‌ ಅಪಾಯ (Danger) ಹೆಚ್ಚುತ್ತಲಿದೆ ಎಂದು ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ (Brigham and Women's Hospital) ಸಂಶೋಧಕರು ಕಂಡುಹಿಡಿದಿದ್ದಾರೆ.

ಈ ಕ್ಯಾನ್ಸರ್‌ಗಳಲ್ಲಿ ಮೂತ್ರಪಿಂಡ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಸ್ತನ, ಕೊಲೊನ್, ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್‌ಗಳು ಕೂಡ ಸೇರಿವೆ. ಈ ಸಂಶೋಧನಾ ಅಧ್ಯಯನದ ತೀರ್ಮಾನಗಳನ್ನು ನೇಚರ್ ರಿವ್ಯೂಸ್ ಕ್ಲಿನಿಕಲ್ ಆಂಕೊಲಾಜಿಯಲ್ಲಿ ಪ್ರಕಟಿಸಲಾಗಿದೆ.

ಕ್ಯಾನ್ಸರ್‌ ಗೆ ಮೂಲ ಕಾರಣಗಳು 
ಆಲ್ಕೋಹಾಲ್ ಸೇವನೆ, ನಿದ್ರಾಹೀನತೆ, ಧೂಮಪಾನ, ಸ್ಥೂಲಕಾಯತೆ ಮತ್ತು ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವುದು ಆರಂಭಿಕ ಕ್ಯಾನ್ಸರ್‌ನ ಅಪಾಯಕಾರಿ ಅಂಶಗಳಾಗಿವೆ. ಈ ಅಧ್ಯಯನದಲ್ಲಿ ತಿಳಿದು ಬಂದ ಆಶ್ಚರ್ಯಕರ ಸಂಗತಿ ಎಂದರೆ ಈ ಹಿಂದೆ ಯುವಕರು ಸಾಕಷ್ಟು ನಿದ್ರೆ ಮಾಡುತ್ತಿದ್ದರು. ಆದರೆ ಈಗ ಯುವಕರು ಸರಿಯಾಗಿ ಮತ್ತು ಸಾಕಷ್ಟು ನಿದ್ರೆ ಮಾಡುತ್ತಿಲ್ಲ. ಇದರಿಂದಲೂ ಭವಿಷ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

ಸಂಶೋಧನೆಯಲ್ಲಿ ಕಂಡುಬಂದಿರುವುದೇನು?
ಸಂಶೋಧಕರು ನಡೆಸಿದ ಸಂಪೂರ್ಣ ಮೌಲ್ಯಮಾಪನದ ಪ್ರಕಾರ, “ಒಬ್ಬರ ಆಹಾರ ಪದ್ಧತಿ, ಜೀವನಶೈಲಿ, ತೂಕ, ಪರಿಸರದ ಮಾನ್ಯತೆಗಳು ಮತ್ತು ಮೈಕ್ರೋಬಯೋಟಾವನ್ನು ಒಳಗೊಂಡಿರುವ ಆರಂಭಿಕ-ಜೀವನದ ಭಾಗವು ಇತ್ತೀಚಿನ ದಶಕಗಳಲ್ಲಿ ಗಮನಾರ್ಹ ಬದಲಾವಣೆಯನ್ನು ಕಂಡಿದೆ. ಆದ್ದರಿಂದ ಪಾಶ್ಚಿಮಾತ್ಯೀಕರಿಸಿದ ಆಹಾರ ಕ್ರಮ ಮತ್ತು ಜೀವನಶೈಲಿಯಿಂದ ಆರಂಭಿಕ ಕ್ಯಾನ್ಸರ್ ಯುವಕರಲ್ಲಿ ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗಿದೆ.

ಇದನ್ನೂ ಓದಿ:  Health Care: ದೇಹದಲ್ಲಿ ಜೀವಸತ್ವ ಮತ್ತು ಖನಿಜಗಳ ಕೊರತೆ ಆದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತೆ

1950ರ ದಶಕದಿಂದಲೂ, ಹೆಚ್ಚು ಸಂಸ್ಕರಿಸಿದ ಊಟ, ಸಕ್ಕರೆ ಪಾನೀಯಗಳು, ಸ್ಥೂಲಕಾಯತೆ, ಟೈಪ್ 2 ಮಧುಮೇಹ, ಜಡ ಜೀವನಶೈಲಿ ಮತ್ತು ಆಲ್ಕೋಹಾಲ್ ಬಳಕೆಯಂತಹ ಅಪಾಯಕಾರಿ ಅಂಶಗಳಲ್ಲಿ ರೋಗಗಳನ್ನು ಹೆಚ್ಚು ಮಾಡುವ ಅಂಶಗಳು ಕಂಡುಬಂದಿವೆ. ಇದು ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳಿದರು.

ಹಂತ ಹಂತವಾಗಿ ಹೆಚ್ಚಾಗ್ತಿದೆ ಕ್ಯಾನ್ಸರ್‌ ನ ಅಪಾಯ
ಯುವಜನರಲ್ಲಿ ಕ್ಯಾನ್ಸರ್‌ ಅಪಾಯ ಹೆಚ್ಚೆ ಎಂದು ತಿಳಿಯಲು ಸಂಶೋಧಕರು ಅನೇಕ ಪುಸ್ತಕಗಳು ಮತ್ತು ಆನ್‌ಲೈನ್‌ನಲ್ಲಿ ಸಿಗುವ ಹಲವು ದತ್ತಾಂಶಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. ಇದರಿಂದ ಅವರಿಗೆ ತಿಳಿದು ಬಂದ ಮಾಹಿತಿ ಎಂದರೆ ಯುವಜನರಲ್ಲಿ ಹಂತ ಹಂತವಾಗಿ ಕ್ಯಾನ್ಸರ್‌ ಅಪಾಯ ಹೆಚ್ಚಾಗುತ್ತಿದೆ.

ಕೆಲವು ಕ್ಯಾನ್ಸರ್ ರೂಪಗಳ ಸಂಭವದಲ್ಲಿನ ಈ ಹೆಚ್ಚಳವು ಕ್ಯಾನ್ಸರ್ ಸ್ಕ್ರೀನಿಂಗ್ ಕಾರ್ಯಕ್ರಮಗಳ ಮೂಲಕ ಆರಂಭಿಕ ರೋಗನಿರ್ಣಯಕ್ಕೆ ಏನು ಕಾರಣವೆಂದು ತಂಡವು ಅಂತಿಮ ತೀರ್ಮಾನವನ್ನು ಹೊಂದಿದೆ. ಹೆಚ್ಚಿದ ಹರಡುವಿಕೆಯ ಪ್ರಮಾಣವು ಸಂಪೂರ್ಣವಾಗಿ ಸ್ಕ್ರೀನಿಂಗ್ ಮತ್ತು ಆರಂಭಿಕ ಪತ್ತೆಯ ಕಾರಣದಿಂದಾಗಿರಬಹುದು ಎಂಬುದನ್ನು ನಿಖರವಾಗಿ ನಿರ್ಧರಿಸಲು ಅಸಾಧ್ಯವಾದ ಸಂಗತಿಯಾಗಿದೆ. ಸಂಶೋಧಕರು "ಬರ್ತ್ ಕೋಹಾರ್ಟ್ ಎಫೆಕ್ಟ್" ಅನ್ನು ಇಲ್ಲಿ ಅಲ್ಲಗಳೆಯುತ್ತಾರೆ. ಇದರರ್ಥ ಜನಿಸಿದ ಪ್ರತಿಯೊಂದು ಗುಂಪಿನ ಜನರು ನಂತರದ ಜೀವನದಲ್ಲಿ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸೂಚಿಸುತ್ತದೆ ಎಂದು ಹೇಳುವುದು ಸೂಕ್ತವಲ್ಲ.

ಮಧ್ಯಸೇವನೆ, ಧೂಮಪಾನ ಮಾಡುವ ಮುನ್ನ ಎಚ್ಚರ!
ಒಬ್ಬ ವ್ಯಕ್ತಿಯ ನಂತರದ ಜೀವನ ಶೈಲಿಯಲ್ಲಿ ಸೇವಿಸುವ ಆಹಾರ, ಮಧ್ಯಸೇವನೆ, ಧೂಮಪಾನ ಮುಂತಾದ ಅಂಶಗಳಿಂದ ಕ್ಯಾನ್ಸರ್‌ ಬರುತ್ತದೆ ಹೊರತು, ಹುಟ್ಟುತ್ತಲೇ ಅಲ್ಲ‌” ಎಂದು ಬ್ರಿಗಮ್‌ನಲ್ಲಿ ರೋಗಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕ ಮತ್ತು ವೈದ್ಯ-ವಿಜ್ಞಾನಿ ಶುಜಿ ಒಗಿನೊ ಅವರು ಹೇಳುತ್ತಾರೆ.

ಇದನ್ನೂ ಓದಿ:  Digestion Problem: ದೇಹದಲ್ಲಿ ಚಯಾಪಚಯ ಕ್ರಿಯೆ ಏರುಪೇರಾದರೆ ಯಾವ ಸಮಸ್ಯೆಗಳು ಕಾಡುತ್ತವೆ?

ಒಗಿನೊ ಅವರ ಪ್ರಕಾರ, “ಪ್ರತಿ ಪೀಳಿಗೆಯೊಂದಿಗೆ ಕ್ಯಾನ್ಸರ್‌ ಅಪಾಯವು ಹೆಚ್ಚುತ್ತಿದೆ ಎಂದು ಕಂಡುಹಿಡಿಯಲಾಯಿತು. 1950 ರಲ್ಲಿ ಜನಿಸಿದವರಿಗೆ ಹೋಲಿಸಿದರೆ, 1960 ರಲ್ಲಿ ಜನಿಸಿದವರು 50 ವರ್ಷ ತುಂಬುವ ಮೊದಲು ಕ್ಯಾನ್ಸರ್ ರೋಗದ ಅಪಾಯಕ್ಕೆ ಒಳಗಾಗುತ್ತಾರೆ. ಈ ಅಪಾಯದ ಮಟ್ಟವು ನಂತರದ ಪೀಳಿಗೆಯ ಅವಧಿಯಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ” ಎಂದು ಅವರು ಹೇಳಿದರು.
Published by:Ashwini Prabhu
First published: