News18 India World Cup 2019

ನೋವು ನಿವಾರಕ ಮಾತ್ರೆಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡಲಿದೆ ಬಿಯರ್!

ಬಿಯರ್​ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದಲ್ಲದೆ ಬಿಯರ್​ನಿಂದ ಸಾಕಷ್ಟು ಲಾಭಗಳಿವೆಯಂತೆ. ಗ್ರೀನ್​ವಿಚ್​ ವಿಶ್ವವಿದ್ಯಾಲಯದ ಸಂಶೋಧಕರು ಬಿಯರ್​ನಿಂದಾಗುವ ಲಾಭಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.

Rajesh Duggumane | news18
Updated:June 10, 2019, 1:35 PM IST
ನೋವು ನಿವಾರಕ ಮಾತ್ರೆಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡಲಿದೆ ಬಿಯರ್!
ಸಾಂದರ್ಭಿಕ ಚಿತ್ರ
Rajesh Duggumane | news18
Updated: June 10, 2019, 1:35 PM IST
ನಿಮ್ಮ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ, ‘ಒಂದು ಪೆಗ್​ ಬಿಯರ್​ ಹಾಕು ಎಲ್ಲವೂ ಸರಿ ಹೋಗುತ್ತದೆ’ ಎಂದು ಗೆಳೆಯರು ನಗೆ ಚಟಾಕಿ ಹಾರಿಸಿರುವುದನ್ನು ಕೇಳಿರುತ್ತೀರಿ. ಅಚ್ಚರಿ ಎಂದರೆ ಈ ವಿಚಾರ ಈಗ ನಿಜವಾಗಿದೆ! ಹೊಸ ಅಧ್ಯಯನ ಹೇಳುವ ಪ್ರಕಾರ ನೋವು ನಿವಾರಕ ಮಾತ್ರೆಗಿಂತ ಬಿಯರ್​ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡಲಿದೆಯಂತೆ.

ಬಿಯರ್​ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಅಲ್ಲದೆ ಬಿಯರ್​ನಿಂದ ಸಾಕಷ್ಟು ಲಾಭಗಳಿವೆಯಂತೆ. ಗ್ರೀನ್​ವಿಚ್​ ವಿಶ್ವವಿದ್ಯಾಲಯದ ಸಂಶೋಧಕರು ಬಿಯರ್​ನಿಂದಾಗುವ ಲಾಭಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರು ಹೇಳುವ ಪ್ರಕಾರ ದೇಹದಲ್ಲಿ ನೋವು ಕಾಣಿಸಿಕೊಂಡಾಗ ಪ್ಯಾರಸಿಟಮಾಲ್​ ಟ್ಯಾಬ್ಲೆಟ್​ ನುಂಗುವ ಬದಲು ಎರಡು ಪಿಂಟ್​ ಬಿಯರ್​ ಕುಡಿದರೆ ನೋವು ಮಾಯವಾಗುತ್ತದೆ!

“ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದರೆ ರಕ್ತಕ್ಕೆ ಶೇ. 0.008ರಷ್ಟು ಆಲ್ಕೋಹಾಲ್​ ಪ್ರಮಾಣ ಸೇರುತ್ತದೆ. ಇದು ದೇಹದಲ್ಲಿ ಕಾಣಿಸಿಕೊಂಡ ನೋವನ್ನು ತಡೆಯುವ ಶಕ್ತಿ ನೀಡುವುದರ ಜೊತೆಗೆ ನೋವನ್ನು ಕಡಿಮೆ ಮಾಡುತ್ತದೆ,” ಎಂಬುದು ತಜ್ಞರ ಮಾತು.

ಇದನ್ನೂ ಓದಿ: ಕಾಫಿ ಪೌಡರ್, ಮಿಲ್ಕ್ ಪೌಡರ್ ಆಯ್ತು, ಬರುತ್ತಿದೆ ಬಿಯರ್ ಪೌಡರ್..!

“ಬಿಯರ್​ ಸೇವನೆಯಿಂದ ಅಪಾಯ ಎಂದು ಅನೇಕ ಅಧ್ಯಯನ ಹೇಳಿದೆ. ಆದರೆ, ಯಾವುದಕ್ಕಾದರೂ ಮಿತಿ ಎಂಬುದಿರುತ್ತದೆ. ಮಿತವಾಗಿ ಬಿಯರ್​ ಕುಡಿದರೆ ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನೋವು ನಿವಾರಕ ಮಾತ್ರೆಗಳಿಂತ ಹೆಚ್ಚು ಪ್ರಭಾವಶಾಲಿ," ಎನ್ನುತ್ತಾರೆ ಗ್ರೀನ್​ವಿಚ್​ ವಿಶ್ವವಿದ್ಯಾಲಯದ ಸಂಶೋಧಕರು.

First published:June 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...