ಈ ಮೇಕಪ್​ ಉತ್ಪನ್ನಗಳನ್ನು ದಿನಂಪ್ರತಿ ಬಳಸಿದರೆ ದುಷ್ಪರಿಣಾಮ ಕಟ್ಟಿಟ್ಟ ಬುತ್ತಿ

news18
Updated:May 10, 2018, 5:25 PM IST
ಈ ಮೇಕಪ್​ ಉತ್ಪನ್ನಗಳನ್ನು ದಿನಂಪ್ರತಿ ಬಳಸಿದರೆ ದುಷ್ಪರಿಣಾಮ ಕಟ್ಟಿಟ್ಟ ಬುತ್ತಿ
news18
Updated: May 10, 2018, 5:25 PM IST
ನ್ಯೂಸ್ 18 ಕನ್ನಡ

ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ? ಹೀಗಾಗಿ ಹೆಚ್ಚಿನವರು ಸೌಂದರ್ಯ ವರ್ಧಕ ಉತ್ಪನ್ನಗಳಿಗೆ ಮಾರು ಹೋಗುತ್ತಾರೆ. ಪ್ರತಿದಿನ ಬಳಸುವ ಮೇಕಪ್​ ವಸ್ತುಗಳ ಬಗ್ಗೆ ಅರಿವಿರಲ್ಲದಿದ್ದರೆ ಅವುಗಳು ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಸಾಮಾನ್ಯ ಮೇಕಪ್​ ಉತ್ಪನ್ನಗಳನ್ನು ಬಳಸುವಾಗ ಗಮನಿಸಬೇಕಾದ ಕೆಲ ಅಂಶಗಳು ಇಲ್ಲಿವೆ.

ಮೇಕಪ್ ಪ್ರೈಮರ್
ಸಾಮಾನ್ಯವಾಗಿ ಮೇಕಪ್​ ಪ್ರೈಮರ್ ಅನ್ನು ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಹೆಚ್ಚಿನ ಹೆಣ್ಣು ಮಕ್ಕಳ ಮೇಕಪ್ ಕಿಟ್​ಗಳಲ್ಲಿ ಇದನ್ನು ಕಾಣಬಹುದು. ಇವುಗಳಲ್ಲಿ ಸಿಲಿಕಾನ್ ಅಂಶಗಳು ಇರುವುದರಿಂದ ತ್ವಚೆಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಸೌಂದರ್ಯ ಹೆಚ್ಚಿಸುವ ಸಲುವಾಗಿ ಮೇಕಪ್​ ಪ್ರೈಮರ್​ ಅನ್ನು ಪ್ರತಿದಿನ ಬಳಸಿದರೆ ಮುಖದಲ್ಲಿ ಮೊಡವೆಗಳು ಕಂಡು ಬರುತ್ತದೆ.

ಮೆಡಿಕೇಟೆಡ್ ಲಿಪ್ ಬಾಮ್
ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಾಮಾನ್ಯ. ಒಡೆದ ತುಟಿಗಳನ್ನು ರಕ್ಷಿಸಲು ಸಾಮಾನ್ಯವಾಗಿ ಔಷಧೀಯ ಗುಣವುಳ್ಳ ಲಿಪ್​ ಬಾಮ್​​ ಅನ್ನು ಬಳಸುತ್ತಾರೆ. ದಿನಂಪ್ರತಿ ಲಿಪ್ ಬಾಮ್ ಬಳಸುವುದರಿಂದ ತುಟಿಯು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನೈಸರ್ಗಿಕವಾಗಿ ತುಟಿಯ ಸಂರಕ್ಷಣೆಗೆ ರಾತ್ರಿ ವೇಳೆ ತುಪ್ಪ ಅಥವಾ ಹಾಲಿನ ಕೆನೆಯನ್ನು ತುಟಿಗೆ ಹಚ್ಚಿಕೊಳ್ಳಬಹುದು.

ವಾಟರ್​ಪ್ರೂಫ್​ ಮಸ್ಕರಾ
Loading...

ಕಣ್ಣುಗಳ ಅಂದವನ್ನು ಹೆಚ್ಚಿಸುವಲ್ಲಿ ಮಸ್ಕರಾ ಪಾತ್ರ ಮುಖ್ಯವಾದದು. ಪ್ರತಿದಿನ ವಾಟರ್​ಪ್ರೂಫ್ ಮಸ್ಕರಾವನ್ನು ನೀವು ಬಳಸುತ್ತಿದ್ದರೆ, ಅಂತಹ ಅಭ್ಯಾಸದಿಂದ ದೂರವಿರುವುದು ಉತ್ತಮ. ಏಕೆಂದರೆ ವಾಟರ್​ಪ್ರೂಫ್​ ಮಸ್ಕರಾ ಬಳಕೆಯಿಂದ ಐ-ಲ್ಯಾಶಸ್ ಭಾಗವು ಒಣಗಿರುತ್ತದೆ. ಅಷ್ಟೇ ಅಲ್ಲದೆ ಕಣ್ಣಿನ ಭಾಗವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಇದರಿಂದ ಕಣ್ಣಿನ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಡ್ರೈ ಶಾಂಪೂ
ಇತ್ತೀಚೆಗೆ ಡ್ರೈ ಶಾಂಪೂ ಬಳಕೆಯು ಜೀವನಶೈಲಿಯ ಭಾಗವಾಗಿದೆ. ತುರ್ತು ಸಂದರ್ಭದಲ್ಲಿ ಹೆಚ್ಚಿನವರು ಡ್ರೈ ಶಾಂಪೂ ಮೊರೆ ಹೋಗುತ್ತಾರೆ. ಡ್ರೈ ಶಾಂಪೂವನ್ನು ದಿನಂಪ್ರತಿ ಬಳಸುವುದರಿಂದ ಕೂದಲ ಸಮಸ್ಯೆಗಳು ಉಂಟಾಗುತ್ತದೆ. ಇದರ ಬಳಕೆಯಿಂದ ಕೂದಲ ಬುಡವು ಸಡಿಲವಾಗಿ ಕೂದಲ ಉದುರುವಿಕೆ ಪ್ರಾರಂಭವಾಗುತ್ತದೆ. ಅಲ್ಲದೆ ಬಿಳಿ ಕೂದಲ ಸಮಸ್ಯೆಗಳೂ ಕೂಡ ಅತಿಯಾದ ಡ್ರೈ ಶಾಂಪೂ ಬಳಕೆಯಿಂದ ಕಾಣಿಸುತ್ತದೆ.
First published:May 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...