ಬ್ಯಾಂಕ್​ ಗ್ರಾಹಕರೇ ಎಚ್ಚರ : ಪತಿಯ ಎಟಿಎಂ ಕಾರ್ಡನ್ನು ಪತ್ನಿ ಬಳಸುವಂತಿಲ್ಲ !

news18
Updated:June 9, 2018, 3:24 PM IST
ಬ್ಯಾಂಕ್​ ಗ್ರಾಹಕರೇ ಎಚ್ಚರ : ಪತಿಯ ಎಟಿಎಂ ಕಾರ್ಡನ್ನು ಪತ್ನಿ ಬಳಸುವಂತಿಲ್ಲ !
news18
Updated: June 9, 2018, 3:24 PM IST
ಸಾಮಾನ್ಯವಾಗಿ ಗಂಡ-ಹೆಂಡತಿಯ ನಡುವೆ ಯಾವುದೇ ರಹಸ್ಯಗಳಿಗೆ ಜಾಗವಿರುವುದಿಲ್ಲ. ಎಲ್ಲಾ ಸೀಕ್ರೆಟ್​ಗಳನ್ನು ಹಂಚಿಕೊಳ್ಳುವ ದಂಪತಿಗಳು ಎಟಿಎಂ ಪಿನ್ ನಂಬರ್ ಅನ್ನು ಹಂಚಿಕೊಳ್ಳದೇ ಇರುತ್ತಾರೆಯೇ? ಅಲ್ಲದೆ ಶಾಪಿಂಗ್​ ಅಥವಾ ಇನ್ನಿತರ ಅವಶ್ಯಕತೆಗಳಿಗೆ ಎಟಿಎಂ ಕಾರ್ಡನ್ನು ಪರಸ್ಪರ ಬಳಸಿಕೊಳ್ಳುತ್ತಾರೆ. ಆದರೆ ಇನ್ಮುಂದೆ ನಿಮ್ಮ ಎಟಿಎಂ ಕಾರ್ಡನ್ನು ಯಾರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂದು ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾ (ಎಸ್​​ಬಿಐ) ತಿಳಿಸಿದೆ.

ಬೆಂಗಳೂರಿನಲ್ಲಿ ನಡೆದ ಘಟನೆಯಿಂದಾಗಿ ಈ ರೀತಿಯ ನಿಯಮವೊಂದು ಬೆಳಕಿಗೆ ಬಂದಿದೆ. ಪತ್ನಿಯ ಎಟಿಎಂ ಕಾರ್ಡ್​ ಬಳಸಿ ಹಣವನ್ನು ವಿತ್ ಡ್ರಾ ಮಾಡಲು ಪತಿ ಮುಂದಾಗಿದ್ದರು. ಈ ಸಂದರ್ಭದಲ್ಲಿ ಎಟಿಎಂ ಮಿಷಿನ್​ನಿಂದ ಬಂದಿರಲಿಲ್ಲ. ಆದರೆ ಇದೇ ವೇಳೆ ಅಕೌಂಟ್​ನಿಂದ ಹಣ ವಿತ್​ ಡ್ರಾ ಆಗಿರುವ ಸ್ಲಿಪ್​ ಬಂದಿದೆ. ಈ ಬಗ್ಗೆ ಬ್ಯಾಂಕ್​ ಹೋಗಿ ಪ್ರಶ್ನಿಸಿದಾಗ ಹಣ ಹಿಂತಿರುಗಿಸಲು ಬ್ಯಾಂಕ್ ನಿರಾಕರಿಸಿದೆ.

2013 ರಲ್ಲಿ ಬೆಂಗಳೂರಿನಲ್ಲಿ ಇಂತಹದೊಂದು ಘಟನೆ ನಡೆದಿದೆ. ತಾಯ್ತನದ ರಜೆಯಲ್ಲಿದ್ದ ಪತ್ನಿಯು, ಪತಿಗೆ ಎಟಿಎಂ ನಿಂದ 25 ಸಾವಿರ ರೂಪಾಯಿಗಳನ್ನು ತೆಗೆಯಲು ಎಟಿಎಂ ಕಾರ್ಡ್​ ನೀಡಿದ್ದರು. ಎಸ್​ಬಿಐ ಎಟಿಎಂನಲ್ಲಿ ಹಣವನ್ನು ವಿತ್​ ಡ್ರಾ ಮಾಡಲು ಮುಂದಾದಾಗ ಬರೀ ಸ್ಲಿಪ್​ ಮಾತ್ರ ಬಂದಿದೆ. ಸ್ಲಿಪ್​ನಲ್ಲಿ ಅಕೌಂಟ್​ನಿಂದ 25 ಸಾವಿರ ಕಡಿತವಾಗಿರುವುದು ತೋರಿಸಿದೆ. ಈ ಬಗ್ಗೆ ಬ್ಯಾಂಕ್​ಗೆ ದೂರ ನೀಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.  ಬೆಂಗಳೂರಿನ ಈ ದಂಪತಿಗಳು ಇದರ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದರು. 3 ವರ್ಷಗಳ ಕಾಲ ನಡೆಸಿದ ಕಾನೂನಿನ ಹೋರಾಟದ ತೀರ್ಪು ಕೊನೆಗೂ ಪ್ರಕಟವಾಗಿದೆ.

ಕೋರ್ಟಿನಲ್ಲಿ ಎಟಿಎಂ ಕಾರ್ಡಿನ ಪಿನ್​ ನಂಬರನ್ನು​​ ಇತರರಿಗೆ ಹಂಚಿಕೊಳ್ಳಬಾರದು. ರಹಸ್ಯ ಪಿನ್​ ನಂಬರನ್ನು ಪತಿಯೊಂದಿಗೆ ಹಂಚಿಕೊಂಡಿರುವುದು ಬ್ಯಾಂಕ್ ಭದ್ರತಾ ನಿಯಮದ ಉಲಂಘನೆ ಎಂದು ಬ್ಯಾಂಕ್ ಪರ ವಕೀಲರು ವಾದ ಮಂಡಿಸಿದ್ದರು. ಇದರಿಂದಾಗಿ ತೀರ್ಪು ಮಹಿಳೆಯ ವಿರುದ್ದವಾಗಿತ್ತು.

ಇದಾದ ಬಳಿಕ ಬ್ಯಾಂಕ್​ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಆದರೆ ಸಿಸಿಟಿವಿಯಲ್ಲಿ ಪತ್ನಿಯ ಎಟಿಎಂ ಕಾರ್ಡನ್ನು ಪತಿ ಬಳಸಿರುವುದು ಸ್ಪಷ್ಟವಾಗಿತ್ತು. ಖಾತೆದಾರರಲ್ಲದೆ ಬೇರೆಯವರು ಎಟಿಎಂ ಬಳಸಬಾರದು ಎಂಬ ನಿಯಮವನ್ನು ಬ್ಯಾಂಕ್ ತಿಳಿಸಿತ್ತು.

ಗ್ರಾಹಕ ನ್ಯಾಯಾಲಯವು ಎಟಿಎಂ ಕಾರ್ಡ್​ ನೀಡುವ ಬದಲು ಚೆಕ್​ ನೀಡಿ ಬ್ಯಾಂಕಿನಿಂದ ಹಣ ಪಡೆಯಬಹುದಿತ್ತು. ಯಾವುದೇ ಕಾರಣಕ್ಕೂ ಎಟಿಎಂ ಪಿನ್​ ಅನ್ನು ಯಾರಿಗೂ ಹಂಚಿಕೊಳ್ಳಬಾರದು ಎಂದು ಬ್ಯಾಂಕ್ ವಾದವನ್ನು ಎತ್ತಿ ಹಿಡಿಯಿತು. ಅಲ್ಲದೆ ಪ್ರಕರಣದ ತೀರ್ಪನ್ನು ಬ್ಯಾಂಕ್ ಪರವಾಗಿ ತಿಳಿಸಿ, ಕೇಸನ್ನು ವಜಾಗೊಳಿಸಿದೆ.

 
Loading...

ಬ್ಯಾಂಕಿಂಗ್ ನಿಯಮಗಳ ಪ್ರಕಾರ ಖಾತೆದಾರರು ಮಾತ್ರ ಎಟಿಎಂ ಕಾರ್ಡನ್ನು ಬಳಸಿಕೊಳ್ಳಬಹುದು ಹೊರತು ಬೇರೆಯವರಿಗೆ ವರ್ಗಾವಣೆ ಮಾಡುವಂತಿಲ್ಲ.  ಬೇರೆಯವರು ಎಟಿಎಂ ಕಾರ್ಡನ್ನು ಬಳಸುವುದು ಬ್ಯಾಂಕ್​ ಭದ್ರತಾ ನಿಯಮದ ಉಲಂಘನೆ ಎಂದು ಎಸ್​​ಬಿಐ ಬ್ಯಾಂಕ್ ತಿಳಿಸಿದೆ. ಒಪ್ಪಿಗೆಯ ಮೇರೆಗೆ ಎಟಿಎಂ ಕಾರ್ಡ್​ ಬಳಸಿ ಹಣ ನಷ್ಟಕ್ಕೆ ಕಾರಣವಾದರೆ ಖಾತೆದಾರ ಅಥವಾ ಬಳಕೆದಾರ ಹೊಣೆಯಾಗುತ್ತಾನೆ ಎಂದು ಬ್ಯಾಂಕ್  ಸ್ಪಷ್ಟಪಡಿಸಿದೆ.
First published:June 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...