ಸಂಬಂಧಗಳನ್ನು (Relationship) ಬೆಳೆಸುವುದಕ್ಕಿಂತ ಅವುಗಳನ್ನು ನಿರ್ವಹಿಸುವುದು ಹೆಚ್ಚು ಕಷ್ಟಕರವಾದ ಕೆಲಸ. ಸಂಬಂಧಗಳ ವಿಷಯಕ್ಕೆ (Matter) ಬಂದಾಗ ನಾವು ತುಂಬಾ ಸೂಕ್ಷ್ಮವಾಗಿ (Subtle) ವಿಚಾರ (Think) ಮಾಡಬೇಕಾಗುತ್ತದೆ. ನಾವು ಮಾಡುವ ಚಿಕ್ಕ ಚಿಕ್ಕ ತಪ್ಪುಗಳು ಒಳ್ಳೆಯ ಸಂಬಂಧವನ್ನು ಮುರಿದು (Break) ಹಾಕಲು ಕಾರಣವಾಗಬಹುದು. ಪ್ರತಿಯೊಂದು ಸಂಬಂಧವು ಸತ್ಯ (Truth) ಮತ್ತು ಪ್ರಾಮಾಣಿಕತೆಯ ಮೇಲೆ ನಿಂತಿರುತ್ತದೆ. ಯಾವುದೇ ವಿಷಯವೇ ಇರಲಿ ಮುಕ್ತವಾಗಿ ಹಂಚಿಕೊಂಡು ಚರ್ಚೆ ಮಾಡಿದರೆ ಸಂಬಂಧವನ್ನು ಉಳಿಸಲು ಪ್ರಯತ್ನಿಸಿದಂತಾಗುತ್ತದೆ. ನೀವೂ ಸಹ ನಿಮ್ಮ ಸಂಗಾತಿ (Partner) ಯೊಂದಿಗೆ ಪ್ರತಿಯೊಂದು ಸಣ್ಣ ವಿಷಯವನ್ನು ಹಂಚಿಕೊಳ್ಳುವುದು ಸಂಬಂಧವನ್ನು ಗಟ್ಟಿಯಾಗಿಸತ್ತದೆ. ಹೆಚ್ಚಿನ ದಂಪತಿಗಳು ಎಲ್ಲ ವಿಷಯಗಳನ್ನು ಮುಕ್ತವಾಗಿ ಪರಸ್ಪರ ಹಂಚಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಕೆಲವು ವಿಷಯಗಳನ್ನು ಮುಚ್ಚಿಡುವುದು ಒಳಿತು.
ಅಷ್ಟಕ್ಕೂ
ನಿಮ್ಮ ಸಂಗಾತಿಯೊಂದಿಗೆ ನೀವು ಹಂಚಿಕೊಳ್ಳಬಾರದಂತಹ ಅನೇಕ ವಿಷಯಗಳಿವೆ. ಕೆಲವು ಹಂಚಿಕೊಳ್ಳಬಾರದ ವಿಷಯಗಳನ್ನು ಹೇಳಿಕೊಂಡಾಗ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಈ ವಿಷಯಗಳು ನಿಮ್ಮ ಸಂಬಂಧದ ಮೇಲೆ ನೇರ ಪರಿಣಾಮ ಬೀರಬಹುದು. ಹಾಗಿದ್ದರೆ ನೀವು ನಿಮ್ಮ ಸಂಗಾತಿಯ ಜೊತೆಗೆ ಯಾವತ್ತೂ ಹೇಳಬಾರದ, ಹಂಚಿಕೊಳ್ಳಬಾರದ ವಿಷಯಗಳು ಯಾವವು ಅನ್ನೋದನ್ನ ನೋಡೋಣ...
ಹಳೆಯ ಸಂಬಂಧದ ಕುರಿತು ಮಾತನಾಡಬೇಡಿ:
ಹಳೆಯ ಸಂಬಂಧದ ಬಗ್ಗೆ ನಿಮ್ಮ ಸಂಗಾತಿಯ ಜೊತೆ ಮಾತನಾಡಬೇಡಿ. ಇಂದಿನ ಕಾಲದಲ್ಲಿ ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿ ಖಂಡಿತವಾಗಿ ಒಂದಲ್ಲ ಒಂದು ಸಂಬಂಧ ಹೊಂದಿರುತ್ತಾರೆ. ಈ ಬಗ್ಗೆ ನಾವು ಸಂಗಾತಿಯ ಬಳಿ ಹೇಳಿದಾಗ ಅವರು ತಮ್ಮ ಸಂಗಾತಿಯ ಹಿಂದಿನ ಸಂಬಂಧವನ್ನು ಸಹಿಸುವುದಿಲ್ಲ. ಮುಂದೆ ಪ್ರತಿ ಸಣ್ಣ ಜಗಳದಲ್ಲಿ ಜೀವನ ಸಂಗಾತಿ ನಿಮ್ಮ ಹಿಂದಿನ ಸಂಬಂಧದ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡಬಹುದು. ಇದರಿಂದ ನಿಮ್ಮ ಸಂಬಂಧ ಮುರಿಯಬಹುದು.
ಇದನ್ನೂ ಓದಿ: 60ರ ನಂತರ ಒಮ್ಮೆಲೇ ದಪ್ಪಗಾದ್ರಾ ? ವೈಟ್ಲಾಸ್ ಹೇಗೆ ?
ಸಂಗಾತಿಯ ಎದುರು ಆತನ ಕುಟುಂಬದ ಬಗ್ಗೆ ಅವಹೇಳನ ಮಾಡಬೇಡಿ:
ಹೌದು .. ನಿಮ್ಮ ಸಂಗಾತಿಯ ಎದುರು ಆತನ ತಂದೆ-ತಾಯಿಯ ಬಗ್ಗೆ ಕೆಟ್ಟದ್ದು ಹೇಳುವುದು, ಅವಹೇಳನ ಮಾಡುವುದು ಮಾಡಿದರೆ ಆತನಿಗೆ ಅದು ಇಷ್ಟವಾಗುವುದಿಲ್ಲ. ಇದರಿಂದ ನಿಮ್ಮ ಸಂಬಂಧ ಹಾಳಾಗಬಹುದು.
ನಿಮ್ಮ ಹಳೆಯ ಲವರ್ ಜತೆ ಕಾಂಟ್ಯಾಕ್ಟ್ ನಲ್ಲಿದ್ದರೆ ಸಂಗಾತಿಗೆ ತಿಳಿಸಬೇಡಿ:
ನಿಮ್ಮ ಹಳೆಯ ಲವರ್ ಈಗ ನಿಮ್ಮ ಜೊತೆ ಫ್ರೆಂಡ್ ಆಗಿಯೇ ಉಳಿದಿದ್ದರೂ ಸಹ ಈ ವಿಷಯವನ್ನು ನಿಮ್ಮ ಸಂಗಾತಿಗೆ ಹೇಳಬೇಡಿ. ಒಂದು ವೇಳೆ ಈ ವಿಷಯ ನಿಮ್ಮ ಸಂಗಾತಿಗೆ ತಿಳಿದರೆ ಅದನ್ನು ನಿಮ್ಮ ಸಂಗಾತಿ ಅರಗಿಸಿಕೊಳ್ಳುವುದಿಲ್ಲ. ನೀವು ಸಂಗಾತಿಗೆ ಮೋಸ ಮಾಡುತ್ತಿದ್ದೀರಿ ಎಂದು ಅಂದುಕೊಂಡು, ನಿಮ್ಮ ಸಂಬಂಧ ಕೊನೆಗೊಳ್ಳಬಹುದು.
ಹಳೆಯ ಸೆಕ್ಸ್ ಲೈಫ್ ಬಗ್ಗೆ ಮಾತನಾಡಬೇಡಿ:
ನಿಮ್ಮ ಸಂಗಾತಿಯ ಜೊತೆಗೆ ನೀವು ಎಷ್ಟೇ ಮುಕ್ತವಾಗಿ ವಿಷಯಗಳನ್ನ ಹಂಚಿಕೊಂಡರೂ ಕೂಡ ನಿಮ್ಮ ಜೀವನದಲ್ಲಿ ನಡೆದ ಹಳೆಯ ಸೆಕ್ಸ್ ಲೈಫ್ ಬಗ್ಗೆ ಹೇಳುವುದು, ಚರ್ಚಿಸುವುದು ಮಾಡಬೇಡಿ. ನಿಮ್ಮ ಸಂಗಾತಿಗೆ ಕೋಪ ಮತ್ತು ಕೆಟ್ಟ ಭಾವನೆ ಬಂದು ನಿಮ್ಮನ್ನು ಕೈ ಬಿಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಾಗ್ರತೆ ವಹಿಸಿ.
ಇದನ್ನೂ ಓದಿ: ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಲ್ಲಿ ತೂಕ ಹೆಚ್ಚಾಗುವುದು ಯಾಕೆ ಗೊತ್ತಾ?
ನಿಮ್ಮ ಸಂಗಾತಿಯಲ್ಲಿನ ಯಾವ ವಿಷಯ ಇಷ್ಟವಿಲ್ಲ ಎಂಬುದನ್ನು ಹೇಳಬೇಡಿ:
ನಿಮ್ಮ ಸಂಗಾತಿ ನಿಮ್ಮೊಂದಿಗೆ ಎಷ್ಟೇ ಫ್ರೆಂಡ್ಲಿಯಾಗಿ, ಮುಕ್ತವಾಗಿ ಮಾತನಾಡುವುದು, ಚರ್ಚಿಸುವುದನ್ನು ಮಾಡಿದರೂ ಕೂಡ, ಅವರ ಬಳಿ ಅವರ ನೆಗೆಟಿವ್ ವಿಷಯಗಳನ್ನು ಹೇಳಿ, ಇದು ನನಗೆ ಇಷ್ಟವಿಲ್ಲ ಎನ್ನಬೇಡಿ. ಇದರಿಂದ ಸಂಗಾತಿ ನಿಮ್ಮಲ್ಲಿನ ದೋಷ ಮತ್ತು ಕೆಲ ವಿಷಯಗಳನ್ನು ಎತ್ತಿ ತೋರಿಸಿ, ಅವಮಾನಿಸುವುದು ಮತ್ತು ಕೆಟ್ಟದಾಗಿ ಕಾಣುವ ಸಾಧ್ಯತೆ ಹೆಚ್ಚು. ಇದರಿಂದ ನಿಮ್ಮ ಸಂಬಂಧಕ್ಕೆ ಧಕ್ಕೆಯಾಗಬಹುದು.
ಇಲ್ಲಿಯವರೆಗೆ ನೀವು ಮುಚ್ಚಿಟ್ಟಿರುವ ವಿಷಯವನ್ನು ಹೇಳಬೇಡಿ:
ನಿಮ್ಮ ಸಂಗಾತಿ ಹಾಗೂ ನೀವು ಒಳ್ಳೆಯ ಮೂಡ್ ನಲ್ಲಿದ್ದಾಗ ಮತ್ತು ಹ್ಯಾಪಿಯಾಗಿದ್ದಾಗಲೂ ಸಹ ನೀವು ಅವರಿಂದ ಮುಚ್ಚಿಟ್ಟಿರುವ ವಿಷಯಗಳನ್ನು ಹೇಳಬೇಡಿ. ಇದರಿಂದ ನಿಮ್ಮ ಮೇಲಿನ ವಿಶ್ವಾಸ ಹೊರಟು ಹೋಗುತ್ತದೆ. ಇದು ನಿಮ್ಮ ಸಂಬಂಧಕ್ಕೆ ಹಾನಿಯುಂಟು ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ