ಅಡುಗೆ (Cooking) ಮಾಡುವುದು ಒಂದು ಕಲೆ (Art) ಅಂತ ಹೇಳುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಅಡುಗೆಯನ್ನು ಅನೇಕರು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾರೆ ಅಂತ ಹೇಳಬಹುದು. ಅದಕ್ಕೆ ಇದನ್ನು ಒಂದು ಕಲೆ ಅಂತ ಹೇಳುತ್ತಾರೆ. ಹಾಗಾದರೆ ಈ ಅಡುಗೆ ಮಾಡುವಾಗ ನಾವು ನಮಗೆ ಗೊತ್ತು ಗೊತ್ತಿಲ್ಲದೆಯೋ ಅನೇಕ ತಪ್ಪುಗಳನ್ನು (Mistakes)ಮಾಡುತ್ತೇವೆ. ಈ ಚಿಕ್ಕ-ಪುಟ್ಟ ತಪ್ಪುಗಳು ನಾವು ಅಡುಗೆ ಮಾಡುವಾಗ ದೊಡ್ಡ ತೊಂದರೆಗಳಿಗೆ (Problems) ದಾರಿ ಮಾಡಿಕೊಡಬಹುದು.ಅಡುಗೆ ಮಾಡಿಕೊಳ್ಳುವಾಗ ನೀವು ಅಡುಗೆ ಮಾಡಲು ಬೇಕಾದ ಎಲ್ಲಾ ಸಾಮಗ್ರಿಗಳನ್ನು (All Items) ನಿಮ್ಮ ಅಡುಗೆ ಮಾಡುವ ಪ್ಲಾಟ್ಫಾರ್ಮ್ ನ ಮೇಲೆ ರೆಡಿ (Reday) ಇಟ್ಟುಕೊಂಡಿರುತ್ತಿರಿ.
ಆದರೆ ನೀವು ಅಡುಗೆ ಮಾಡುವ ಕ್ಷಣದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತೀರಿ. ನೀವು ಹೇಗೆ ಅಡುಗೆ ಮಾಡುವಾಗ ಎಲ್ಲವನ್ನೂ ಸಿದ್ಧವಾಗಿಟ್ಟುಕೊಳ್ಳಬೇಕು ಅಂತ ನ್ಯೂಯಾರ್ಕ್ ನ ಬ್ರೂಕ್ಲಿನ್ ನಲ್ಲಿರುವ ಬೋನಿಸ್ ಮಾಲೀಕ ಮತ್ತು ಚೆಫ್ ಕ್ಯಾಲ್ವಿನ್ ಎಂಗ್ ಅವರು ಹೇಳುತ್ತಾರೆ ನೋಡಿ.
ತನ್ನ 5ನೇ ವಯಸ್ಸಿನಿಂದ ಅಡುಗೆ ಮಾಡಲು ಶುರು ಮಾಡಿದ್ದು ಮತ್ತು 27ನೇ ವಯಸ್ಸಿನಲ್ಲಿ ತನ್ನದೇ ಆದ ರೆಸ್ಟೋರೆಂಟ್ ಅನ್ನು ತೆರೆದಿರುವ ಎಂಗ್, ಅವರು ಮನೆಯಲ್ಲಿ ಅಡುಗೆ ಮಾಡುವಾಗ ಎಂದಿಗೂ ಈ 5 ತಪ್ಪುಗಳನ್ನು ಮಾಡುವುದಿಲ್ಲವಂತೆ ನೋಡಿ.
1. ಪಾತ್ರೆಗಳನ್ನು ತೊಳೆಯುವ ಯಂತ್ರ ತುಂಬಿರುವಾಗ ಅಡುಗೆ ಮಾಡುವುದು
ಅಡುಗೆಮನೆಯಲ್ಲಿ ಅವ್ಯವಸ್ಥೆ ಉಂಟಾದರೆ ಇಡೀ ಅಡುಗೆ ಮಾಡುವ ಪ್ರಕ್ರಿಯೆಯೇ ಕೆಡುತ್ತದೆ ಅಂತ ಹೇಳಬಹುದು. ಅಡುಗೆ ಮಾಡುವ ಮುಂಚೆ ನಿಮ್ಮ ಆಡುಗೆಮನೆಯಲ್ಲಿ ಪಾತ್ರೆ ತೊಳೆಯುವ ಯಂತ್ರವು ಪೂರ್ತಿಯಾಗಿ ಖಾಲಿ ಇದೆಯೇ ಅಂತ ನೋಡಿಕೊಳ್ಳಿ.
ಮೊದಲೇ ಅದು ಪಾತ್ರೆಗಳಿಂದ ತುಂಬಿದ್ದು, ಅಡುಗೆ ಮಾಡಿದ ನಂತರ ಇನ್ನಷ್ಟು ಪಾತ್ರೆಗಳನ್ನು ಅದರಲ್ಲಿ ಹಾಕಲು ಆಗುವುದಿಲ್ಲ. ಇದು ತುಂಬಾನೇ ಅವ್ಯವಸ್ಥೆಯನ್ನು ಉಂಟು ಮಾಡುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಆದ್ದರಿಂದ ಈ ಚೆಫ್ ಅಡುಗೆಮನೆಗೆ ಹೋದಾಗ ಅದನ್ನೆಲ್ಲಾ ಮೊದಲು ಸ್ವಚ್ಛಗೊಳಿಸಲು ಇಷ್ಟಪಡುತ್ತಾರಂತೆ. “ನಾನು ಅಡುಗೆ ಮಾಡುವಾಗ ಕೊಳಕಾದ ಪಾತ್ರೆಗಳನ್ನು ನಾನು ನೇರವಾಗಿ ಪಾತ್ರೆ ತೊಳೆಯುವ ಯಂತ್ರದಲ್ಲಿ ಹಾಕಬಹುದು” ಎಂದು ಅವರು ಹೇಳಿದರು.
2. ತರಕಾರಿ ಕತ್ತರಿಸಲು ಮಂಡಾದ ಚಾಕು ಬಳಸುವುದು
"ಚೂಪಾದ ಚಾಕುವಿಗಿಂತ ಮಂಡಾಗಿರುವ ಚಾಕುವಿನಿಂದ ತರಕಾರಿಗಳನ್ನು ಕತ್ತರಿಸುವುದು ಹೆಚ್ಚು ಅಪಾಯಕಾರಿ. ಏಕೆಂದರೆ ಮಂಡಾದ ಚಾಕುವಿನಿಂದ ತರಕಾರಿಗಳನ್ನು ಕತ್ತರಿಸಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ" ಎಂದು ಎಂಗ್ ವಿವರಿಸಿದರು.
ಮಂಡಾದ ಚಾಕುಗಳು ತರಕಾರಿ ಕತ್ತರಿಸುವಾಗ ಕೈಯಿಂದ ಜಾರುತ್ತವೆ ಮತ್ತು ಅಪಘಾತಗಳು ಸಂಭವಿಸಬಹುದು. ಅಡುಗೆಮನೆಯಲ್ಲಿರುವ ಚಾಕುಗಳನ್ನು ತಿಂಗಳಿಗೊಮ್ಮೆಯಾದರೂ ತೀಕ್ಷ್ಣಗೊಳಿಸಿಕೊಳ್ಳಬೇಕು ಎಂದು ಎಂಗ್ ಹೇಳುತ್ತಾರೆ.
3. ಕಸದ ಬುಟ್ಟಿಯನ್ನು ಇಟ್ಟುಕೊಳ್ಳದೇ ಅಡುಗೆ ಮಾಡಲು ಪ್ರಾರಂಭಿಸುವುದು
ನೀವು ಅಡುಗೆ ಮಾಡುವಾಗ ತರಕಾರಿಗಳನ್ನು ಕತ್ತರಿಸಿಕೊಳ್ಳುತ್ತೀರಿ, ಆಗ ಮಿಕ್ಕಿರುವುದನ್ನು ಬಿಸಾಡಲೂ ನೀವು ಪದೇ ಪದೇ ಮನೆಯ ಹಿಂಭಾಗದಲ್ಲಿ ಇರಿಸಿದ ಕಸದ ಬುಟ್ಟಿಯ ಬಳಿಗೆ ಹೋಗಿ ಅಲ್ಲಿ ಆ ಕಸವನ್ನು ಬಿಸಾಡಿ ಬರಬೇಕಾಗುತ್ತದೆ. ನಿಮ್ಮ ಹತ್ತಿರವೇ ಒಂದು ಚಿಕ್ಕ ಕಸದ ಬುಟ್ಟಿಯನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಸಮಯ ಮತ್ತು ಶಕ್ತಿ ಎರಡು ಉಳಿಯುತ್ತವೆ.
"ನಾನು ಯಾವಾಗಲೂ ನನ್ನ ಅಡುಗೆ ಮಾಡುವ ಸ್ಥಳ ಹತ್ತಿರವೇ ಒಂದು ಸಣ್ಣ ಕಸದ ಬುಟ್ಟಿಯನ್ನು ಹೊಂದಲು ಇಷ್ಟಪಡುತ್ತೇನೆ, ಆದ್ದರಿಂದ, ನಾನು ಅದರೊಳಗೆ ಸಿಪ್ಪೆ ಸುಲಿಯಬಹುದು, ನಾನು ಅದರೊಳಗೆ ಸ್ಕ್ರ್ಯಾಪ್ ಗಳನ್ನು ಹಾಕಬಹುದು. ಇದರಿಂದ ನೀವು ಪದೇ ಪದೇ ಅಡ್ಡಾಡುವುದು ತಪ್ಪುತ್ತದೆ" ಎಂದು ಅವರು ಹೇಳುತ್ತಾರೆ.
4. ಕಟಿಂಗ್ ಬೋರ್ಡ್ ಅನ್ನು ಸ್ಥಿರವಾಗಿಟ್ಟುಕೊಳ್ಳಲು ಮರೆತು ಬಿಡುವುದು
ಅಡುಗೆ ಮಾಡುವಾಗ ತರಕಾರಿಗಳನ್ನು ಹೆಚ್ಚಿಕೊಳ್ಳಲು ಬೇಕಾಗುವ ಕಟಿಂಗ್ ಬೋರ್ಡ್ ಅನ್ನು ಸ್ಥಿರವಾಗಿ ಇರಿಸಿಕೊಳ್ಳುವುದನ್ನು ನಾವು ಮರೆತು ಬಿಟ್ಟರೆ, ತರಕಾರಿಗಳನ್ನು ಕತ್ತರಿಸುವಾಗ ನಮ್ಮ ಬೆರಳುಗಳಿಗೆ ಚಾಕು ತಗುಲಬಹುದು.
ಆದ್ದರಿಂದ ಮೊದಲು ನಿಮ್ಮ ಕಟಿಂಗ್ ಬೋರ್ಡ್ ಅನ್ನು ಭದ್ರವಾಗಿರಿಸಿಕೊಳ್ಳಿ. ನಿಮ್ಮ ತರಕಾರಿಗಳನ್ನು ಕತ್ತರಿಸುವಾಗ ಅದು ಸ್ವಲ್ಪವೂ ಅಲುಗಾಡಬಾರದಂತೆ ಎಚ್ಚರ ವಹಿಸಿ.
"ಇದು ಮಂಡಾದ ಚಾಕುವಿನಷ್ಟೇ ಅಪಾಯಕಾರಿ" ಎಂದು ಎಂಗ್ ಹೇಳುತ್ತಾರೆ. "ನಿಮ್ಮ ಕಟಿಂಗ್ ಬೋರ್ಡ್ ಜಾರುವುದು ನಿಮಗೆ ಕಿರಿಕಿರಿ ಉಂಟು ಮಾಡಬಹುದು.
ಆದ್ದರಿಂದ ನೀವು ಅದನ್ನು ಸ್ಥಿರಗೊಳಿಸಿಕೊಳ್ಳಬೇಕು ಮತ್ತು ಬೋರ್ಡ್ ನ ಕೆಳಗೆ ಒದ್ದೆಯಾದ ಕಾಗದದ ಟವೆಲ್ ಅನ್ನು ಹಾಕುವ ಮೂಲಕ ಅದನ್ನು ಮಾಡಬಹುದು" ಎಂದು ಹೇಳುತ್ತಾರೆ.
5. ಲೇಬಲ್ ಮಾಡದೆ ಫ್ರೀಜರ್ ನಲ್ಲಿ ಇರಿಸುವುದು
ನೀವು ಏನನ್ನಾದರೂ ಲೇಬಲ್ ಮಾಡದೆ ಫ್ರೀಜರ್ ನಲ್ಲಿ ಇಟ್ಟರೆ, ನಾವು ಅದನ್ನು ಮರೆತುಬಿಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
"ನಾನು ಯಾವಾಗಲೂ ಎಲ್ಲವನ್ನೂ ಲೇಬಲ್ ಮಾಡುತ್ತೇನೆ ಮತ್ತು ಅದಕ್ಕೆ ದಿನಾಂಕ ಹಾಕಿ ಇಡುತ್ತೇನೆ. ಹೀಗೆ ಮಾಡುವುದರಿಂದ ನೀವು ಫ್ರೀಜರ್ ನಲ್ಲಿ ಅಥವಾ ಫ್ರಿಡ್ಜ್ ನಲ್ಲಿ ಏನನ್ನು ಇಟ್ಟಿದ್ದೀರಿ ಎನ್ನುವುದು ನಿಮಗೆ ನಿಖರವಾಗಿ ತಿಳಿದಿರುತ್ತದೆ. ಹೀಗೆ ದಿನಾಂಕ ಹಾಕಿ ಇಟ್ಟ ಹಳೆಯ ಪದಾರ್ಥಗಳನ್ನು ಮೊದಲು ಬಳಸಲು ಸಾಧ್ಯವಾಗುತ್ತದೆ" ಎಂದು ಎಂಗ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ