• Home
  • »
  • News
  • »
  • lifestyle
  • »
  • Women Health: ಸ್ತ್ರೀರೋಗ ತಜ್ಞರಿಂದ ಅಪ್ಪಿ-ತಪ್ಪಿ ಈ ವಿಚಾರಗಳನ್ನು ಮುಚ್ಚಿಡಬೇಡಿ

Women Health: ಸ್ತ್ರೀರೋಗ ತಜ್ಞರಿಂದ ಅಪ್ಪಿ-ತಪ್ಪಿ ಈ ವಿಚಾರಗಳನ್ನು ಮುಚ್ಚಿಡಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gynecologist Must Know These Things: ಮಹಿಳೆಯರಿಗೆ ಸಂಬಂಧಿಸಿದ ಲೈಂಗಿಕ ಸಮಸ್ಯೆಗಳು ಸಹ ಅಂತಹ ಒಂದು ಸಮಸ್ಯೆಯಾಗಿದ್ದು, ಹೆಚ್ಚಿನ ಮಹಿಳೆಯರು ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಮತ್ತು ತಮ್ಮ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಲು ಹೆದರುತ್ತಾರೆ ಅಥವಾ ನಾಚಿಕೆಪಡುತ್ತಾರೆ.

ಮುಂದೆ ಓದಿ ...
  • Share this:

ಅನಾರೋಗ್ಯಕ್ಕೆ (Health Issue) ಒಳಗಾದಾಗ ವೈದ್ಯರ (Doctor) ಬಳಿಗೆ ಹೋಗದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರು ಅನೇಕರಿದ್ದಾರೆ. ಕೆಲವು ರೋಗಗಳನ್ನು ಮನೆಮದ್ದುಗಳಿಂದ (Home Remedies) ಗುಣಪಡಿಸಬಹುದು, ಆದರೆ ಎಲ್ಲಾ ಚಿಕಿತ್ಸೆಗಳು ಪರಿಣಾಮಕಾರಿಯಾಗಿ ಇರುವುದಿಲ್ಲ. ಏಕೆಂದರೆ ಕೆಲವೊಮ್ಮೆ ಅದರ ಲಕ್ಷಣಗಳು ಮತ್ತು ಇತಿಹಾಸವು ವಿಭಿನ್ನವಾಗಿರುತ್ತದೆ. ಇದಲ್ಲದೆ, ಅನೇಕ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಮಹಿಳೆಯರಿಗೆ (Women)  ಸಂಬಂಧಿಸಿದ ಲೈಂಗಿಕ ಸಮಸ್ಯೆಗಳು ಸಹ ಅಂತಹ ಒಂದು ಸಮಸ್ಯೆಯಾಗಿದ್ದು, ಹೆಚ್ಚಿನ ಮಹಿಳೆಯರು ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಮತ್ತು ತಮ್ಮ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಲು ಹೆದರುತ್ತಾರೆ ಅಥವಾ ನಾಚಿಕೆಪಡುತ್ತಾರೆ.


ಅನೇಕ ಬಾರಿ ಮಹಿಳೆಯರು ಸ್ತ್ರೀರೋಗತಜ್ಞರ ಬಳಿ ಹೋಗುತ್ತಾರೆ ಆದರೆ ನಾಚಿಕೆಯ ಕಾರಣದಿಂದ ತಮ್ಮ ಲೈಂಗಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ರೋಗಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಾಗುವುದಿಲ್ಲ ಮತ್ತು ಅಂತಿಮವಾಗಿ ರೋಗವು ತುಂಬಾ ಗಂಭೀರವಾಗುತ್ತದೆ. ಇದರಿಂದ ಮಹಿಳೆಯರಿಗೆ ಸಮಸ್ಯೆಗಳು ಹೆಚ್ಚು ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ದೊಡ್ಡ ಅಪಾಯವಾಗಬಹುದು. ಆದ್ದರಿಂದ ಮಹಿಳೆಯರು ವೈದ್ಯರಿಗೆ ಯಾವುದೇ ವಿಚಾರವನ್ನು ಮುಚ್ಚಿಡದೇ ತಿಳಿಸಬೇಕು.


ಮುಖ್ಯವಾಗಿ ಮಹಿಳೆಯರು ಯಾವ ವಿಚಾರಗಳನ್ನು ಸ್ತ್ರೀರೋಗತಜ್ಞರಿಂದ ಮುಚ್ಚಿಡಬಾರದು ಎಂಬುದು ಇಲ್ಲಿದೆ.


ಮುಟ್ಟಿಗೆ ಸಂಬಂಧಿಸಿದ ವಿಷಯಗಳು


ನಿಮ್ಮ ಪಿರಿಯಡ್ಸ್​ ಅನಿಯಮಿತವಾಗಿದ್ದರೆ, ನಿಗದಿತ ದಿನಾಂಕಕ್ಕಿಂತ ಹೆಚ್ಚು ಮುಂಚಿತವಾಗಿ ಅಥವಾ ತಡವಾಗಿ ಅಥವಾ ತಿಂಗಳಿಗೆ ಎರಡು ಬಾರಿ ಅಥವಾ ಯಾವುದೇ ಇತರ ಮುಟ್ಟಿನ ಸಂಬಂಧಿತ ಸಮಸ್ಯೆ ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ ಮತ್ತು ಸ್ತ್ರೀರೋಗತಜ್ಞರನ್ನು ಭೇಟಿ ಮಾಡಿ, ಅದನ್ನು ಸರಿಯಾಗಿ ವಿವರಿಸಿ.


ನಿಮಗೆ ಪಿರಿಯಡ್ಸ್​ ಸಮಸ್ಯೆಗಳಿದ್ದರೆ, ಬಂಜೆತನ, ಖಿನ್ನತೆ ಮತ್ತು ಥೈರಾಯ್ಡ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿರಬಹುದು, ಆದ್ದರಿಂದ ವಿಳಂಬ ಮಾಡಬೇಡಿ ಮತ್ತು ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ, ಸಲಹೆ ಪಡೆಯಿರಿ.


ಇದನ್ನೂ ಓದಿ: ಬೋರೆಹಣ್ಣು ತಿಂದ್ರೆ ಮೂಳೆ ಸ್ಟ್ರಾಂಗ್ ಆಗುತ್ತಂತೆ, ಸೀಸನ್​ನಲ್ಲಿ ಮಾತ್ರ ತಿನ್ನಿ


ನೀವು ಗರ್ಭನಿರೋಧಕ ಮಾತ್ರೆಗಳು ಅಥವಾ ನೋವು ನಿವಾರಕಗಳು ಸೇರಿದಂತೆ ಯಾವುದೇ ಇತರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ,  ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಮುಟ್ಟಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಈ ವಿಚಾರಗಳನ್ನು ಸಹ ವೈದ್ಯರ ಬಳಿ ಮುಚ್ಚಿಡಬಾರದು.




ಅಲ್ಲದೆ, ಸಂಭೋಗದ ಸಮಯದಲ್ಲಿ ನೋವು ಇದ್ದರೆ, ನಿಮ್ಮ ಸಮಸ್ಯೆಯ ಬಗ್ಗೆ ನಿಮ್ಮ ಸ್ತ್ರೀರೋಗತಜ್ಞರೊಂದಿಗೆ ಮಾತನಾಡಲು ಹಿಂಜರಿಯಬೇಡಿ. ಅಲ್ಲದೆ ಯೋನಿ ರಕ್ತಸ್ರಾವದ ಇತರ ಸಮಸ್ಯೆಗಳಿದ್ದರೆ, ಮನೆಮದ್ದುಗಳನ್ನು ಮಾಡಬೇಡಿ, ಬದಲು  ಸ್ತ್ರೀರೋಗತಜ್ಞರ ಬಳಿಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯಿರಿ.


ಯೋನಿ ವಾಸನೆ


ಯೋನಿಯಲ್ಲಿ ತುರಿಕೆ ಅಥವಾ ಬಲವಾದ ವಾಸನೆ ಇದ್ದರೆ, ನಿರ್ಲಕ್ಷಿಸದೆ ವೈದ್ಯರ ಬಳಿಗೆ ಹೋಗಬೇಕು. ಇಂತಹ ಲೈಂಗಿಕ ಸಮಸ್ಯೆಗಳು ಸೋಂಕಿನಿಂದ ಉಂಟಾಗುತ್ತವೆ, ಆದ್ದರಿಂದ ಇದನ್ನು ನಿರ್ಲಕ್ಷಿಸಬೇಡಿ, ಇದನ್ನು ನಿಮ್ಮ ಸ್ತ್ರೀರೋಗತಜ್ಞರಿಗೆ ತಿಳಿಸಿ ಪರಿಹಾರ ಪಡೆಯಿರಿ.


ಹೊಟ್ಟೆ ನೋವು


ನಿಮ್ಮ ಹೊಟ್ಟೆ, ಬೆನ್ನು ಅಥವಾ ಸೊಂಟದಲ್ಲಿ ನೀವು ತಡೆಯಲಾರದ ನೋವನ್ನು ಅನುಭವಿಸಿದರೆ ಮತ್ತು  ಆ ನೋವು ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ, ಅದನ್ನು ನಿರ್ಲಕ್ಷಿಸಬೇಡಿ.  ಚಿಕಿತ್ಸೆಗಾಗಿ ಸ್ತ್ರೀರೋಗತಜ್ಞರ ಬಳಿಗೆ ಹೋಗಿ. ಇಲ್ಲದಿದ್ದರೆ ಆ ಸಮಸ್ಯೆ  ಹೆಚ್ಚಾಗಬಹುದು.


ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಈ ಅಹಾರಗಳನ್ನು ತಿನ್ನಿ


ನಿಮ್ಮ ಯಾವುದೇ ಲೈಂಗಿಕ ಸಮಸ್ಯೆಗಳ ಬಗ್ಗೆ ಸ್ತ್ರೀರೋಗತಜ್ಞರೊಂದಿಗೆ ಮಾತನಾಡಲು ಹಿಂಜರಿಯಬೇಡಿ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯಿರಿ. ಲೈಂಗಿಕ ಸಮಸ್ಯೆಗಳು ಅನೇಕ ರೋಗಗಳಿಗೆ ಕಾರಣ, ಆದ್ದರಿಂದ ಅವುಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಸಮಸ್ಯೆಗಳನ್ನು ನಿಮ್ಮ ವೈದ್ಯರಿಗೆ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ಆದ್ದರಿಂದ ನೀವು ಅವರೊಂದಿಗೆ ಮಾತನಾಡಲು ಮುಜುಗರಕ್ಕೊಳಗಾಗುವುದಿಲ್ಲ. ಇದರಿಂದ ಸಮಸ್ಯೆಗಳಿಗೆ ಸಹ ಪರಿಹಾರ ಸಿಗುತ್ತದೆ.

Published by:Sandhya M
First published: