ನೀವು ಏನು ತಿನ್ನುತ್ತೀರೋ ಅದು ನಮ್ಮ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದು ಸಂಪೂರ್ಣ ಸತ್ಯ. ನೀವು ತಿನ್ನುವುದು (Eating) ನಿಮ್ಮ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಆಹಾರ ಸೇವಿಸಿದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಇಂದು ಬದಲಾಗುತ್ತಿರುವ ಜೀವನಶೈಲಿಯಲ್ಲಿ ಮಧುಮೇಹ (Diabetes), ಹೃದ್ರೋಗ, ಥೈರಾಯ್ಡ್ ಮತ್ತು ತೂಕ ಹೆಚ್ಚಳದಂತಹ ಸಮಸ್ಯೆಗಳು (Problems) ಅನೇಕರನ್ನು ಕಾಡುತ್ತಿವೆ. ಎಷ್ಟೇ ಬ್ಯುಸಿ ಇದ್ದರೂ ಪೌಷ್ಠಿಕ ಆಹಾರ ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ. ಆದರೆ, ಕೆಲವೊಮ್ಮೆ ನಾವು ಆರೋಗ್ಯಕರ ಆಹಾರವನ್ನು ಸಹ ನೋಡಿ ಮಾಡಿ ಸೇವಿಸಬೇಕು. ಕೆಲವೊಂದು ಆಹಾರಗಳು ಎಲ್ಲಾ ಸಮಯದಲ್ಲಿ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಅಥವಾ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಯಸಿದರೆ, ನಿಮ್ಮ ಆಹಾರದಲ್ಲಿ ನೀವು ಪೋಷಕಾಂಶಗಳನ್ನು ಸೇರಿಸಿಕೊಳ್ಳಬೇಕು. ಈ ರೀತಿ ಇದ್ದಾಗ, ಸಾಮಾನ್ಯವಾಗಿ ಎಲ್ಲರೂ ಡ್ರೈ ಫ್ರೂಟ್ಸ್ಗಳನ್ನು ತಿನ್ನುತ್ತಾರೆ. ಇದರಿಂದ ತೂಕ ಇಳಿಕೆ ಆಗುತ್ತದೆ ಹಾಗೂ ಪೋಷಕಾಂಶಗಳು ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ, ಈ ಬಾದಾಮಿಯನ್ನು ಸಹ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ, ಬಾದಾಮಿ ಎಲ್ಲರಿಗೂ ಒಳ್ಳೆಯದಲ್ಲ. ಕೆಲವು ಸಂದರ್ಭಗಳಲ್ಲಿ, ಬಾದಾಮಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಹೆಚ್ಚು ಹಾನಿ ಮಾಡುತ್ತದೆ. ಬಾದಾಮಿಯನ್ನು ಯಾರೂ ತಿನ್ನಬಾರದು ಎಂಬ ಮಾಹಿತಿ ಇಲ್ಲಿದೆ.
ಜೀರ್ಣಕ್ರಿಯೆ ಸಮಸ್ಯೆ ಇದ್ದರೆ ಎಚ್ಚರ
ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ ಬಾದಾಮಿ ತಿನ್ನುವಾಗ ಜಾಗರೂಕರಾಗಿರಿ. ಒಂದು ಕೈಬೆರಳೆಣಿಕೆಯ ಬಾದಾಮಿಯು ಸುಮಾರು 170 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ದೇಹಕ್ಕೆ ಪ್ರತಿದಿನ 25 ರಿಂದ 40 ಗ್ರಾಂ ಫೈಬರ್ ಅಗತ್ಯವಿದೆ. ನೀವು ಪ್ರತಿದಿನ 3 ರಿಂದ 4 ಬಾದಾಮಿಗಳನ್ನು ಸೇವಿಸಿದರೆ, ನಿಮ್ಮ ಫೈಬರ್ ಅಗತ್ಯವನ್ನು ನೀವು ಪೂರೈಸುತ್ತೀರಿ. ಅತಿಯಾಗಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಮತ್ತು ಭೇದಿ ಉಂಟಾಗುತ್ತದೆ. ಹಾಗಾಗಿ, ಬಾದಾಮಿಯನ್ನು ಸೇವಿಸುವಾಗ ಎಚ್ಚರವಿರಲಿ.
ಇದನ್ನೂ ಓದಿ: ವಾರಕ್ಕೊಮ್ಮೆ ಎಣ್ಣೆಯಲ್ಲಿ ಬಾಯಿ ತೊಳಿಬೇಕಂತೆ, ಹಲ್ಲಿನ ಸಮಸ್ಯೆಗೆ ಇದೇ ಪರಿಹಾರ
ಯಾವುದೇ ಔಷಧಿ ತೆಗೆದುಕೊಳ್ಳುತ್ತಿದ್ದರೂ ಸಹ ಬಾದಾಮಿಯನ್ನು ಎಷ್ಟು ತಿನ್ನಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬಾದಾಮಿಯು ಬಹಳಷ್ಟು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. 3 ರಿಂದ 4 ಬಾದಾಮಿಗಳು 0.6 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಹೊಂದಿರುತ್ತವೆ.
ನಿಮ್ಮ ದೇಹಕ್ಕೆ ಪ್ರತಿದಿನ 1.8 ರಿಂದ 2.3 ಮಿಗ್ರಾಂ ಮೆಗ್ನೀಸಿಯಮ್ ಅಗತ್ಯವಿದೆ. ಆದರೆ ಹೆಚ್ಚು ಬಾದಾಮಿ ತಿನ್ನುವುದು ಔಷಧಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ರಕ್ತದಲ್ಲಿನ ಹೆಚ್ಚಿನ ಮಟ್ಟದ ಮೆಗ್ನೀಸಿಯಮ್ ಆಂಟಾಸಿಡ್ಗಳು ಮತ್ತು ರಕ್ತದೊತ್ತಡದ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಸುವಾಗ ಸಹ ಇರಲಿ ಗಮನ
ನೀವು ಈ ಬಗ್ಗೆ ವೈದ್ಯರ ಬಳಿ ಸಹ ಸಲಹೆ ಪಡೆಯುವುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಈ ಬಾದಾಮಿ ನಮಗೆ ಗೊತ್ತಿಲ್ಲದಂತೆ ಸಮಸ್ಯೆ ಉಂಟು ಮಾಡುತ್ತದೆ. ತೂಕ ಇಳಿಸಲು ಸಹ ನಾವು ಅತಿಯಾಗಿ ಬಾದಾಮಿ ಸೇವನೆ ಮಾಡಬಾರದು. ಬಾದಾಮಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಆದರೆ ಅವುಗಳನ್ನು ನಿಯಮಿತವಾಗಿ ಮತ್ತು ಮಿತವಾಗಿ ಸೇವಿಸಿದರೆ ಮಾತ್ರ. 3 ರಿಂದ 4 ಬಾದಾಮಿಗಳು 168 ಕ್ಯಾಲೋರಿಗಳು ಮತ್ತು 14 ಗ್ರಾಂ ಕೊಬ್ಬನ್ನು ಹೊಂದಿರುತ್ತವೆ. ಪ್ರತಿದಿನ ಒಂದು ಹಿಡಿ ಬಾದಾಮಿಯನ್ನು ತಿನ್ನುವುದರಿಂದ ಹೆಚ್ಚಿನ ಕ್ಯಾಲೋರಿಗಳು ಹೊಟ್ಟೆಗೆ ಹೋಗುತ್ತವೆ.
ಇದನ್ನೂ ಓದಿ; ಈ 5 ಬೀಜಗಳಿದ್ರೆ ಸಾಕು ಪೋಷಕಾಂಶಗಳ ಕೊರತೆ ಆಗಲ್ಲ
ಬಾದಾಮಿಯಲ್ಲಿ ಸಾಕಷ್ಟು ವಿಟಮಿನ್ ಇ ಇದೆ. ಹೆಚ್ಚು ಬಾದಾಮಿ ತಿನ್ನುವುದರಿಂದ ವಿಟಮಿನ್ ಇ ಮಿತಿಮೀರಿದ ಪ್ರಮಾಣಕ್ಕೆ ಕಾರಣವಾಗಬಹುದು. ಈ ವಿಟಮಿನ್ ಚರ್ಮ ಮತ್ತು ಕೂದಲಿಗೆ ಒಳ್ಳೆಯದು. ಆದರೆ 3 ರಿಂದ 4 ಬಾದಾಮಿಯಲ್ಲಿ 7.4 ಮಿಗ್ರಾಂ ವಿಟಮಿನ್ ಇ ಇರುತ್ತದೆ. ಅತಿಯಾದ ಸೇವನೆಯು ಅನಪೇಕ್ಷಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾದರೆ ಅಮೃತವೂ ವಿಷ ಎಂದು ಹಿರಿಯರು ಸುಮ್ಮನೆ ಹೇಳುವುದಿಲ್ಲ. ಹಾಗಾಗಿ ಎಲ್ಲವೂ ಮಿತಿಯಲ್ಲಿ ಇರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ