ಆಹಾರದಲ್ಲಿ (Food) ನಾವು ಏನೆಲ್ಲಾ ಸಾಮಗ್ರಿಗಳನ್ನು ಹಾಕುತ್ತೇವೆ ಎಂಬುದು ಅಡುಗೆ ರುಚಿಯಲ್ಲಿ ಮತ್ತು ವಿನ್ಯಾಸದಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆಯೋ, ಅಷ್ಟೇ ಮಹತ್ವದ ಮತ್ತೊಂದು ವಿಷಯ ಎಂದರೆ ಎಂತಹ ಕಡಾಯಿಗಳಲ್ಲಿ ನಾವು ಅಡುಗೆ (Cook) ಮಾಡುತ್ತಿದ್ದೇವೆ ಎಂಬುದಾಗಿರುತ್ತದೆ. ಹೌದು, ಎಷ್ಟೋ ಸಲ ನಾವು ಕೆಲವೊಂದು ಆಹಾರ ಪದಾರ್ಥಗಳನ್ನು ತಯಾರಿಸುವಾಗ ಮನೆಯಲ್ಲಿರುವ ಹಿರಿಯರು ಕಬ್ಬಿಣದ ಕಡಾಯಿಯಲ್ಲಿ ಆ ಅಡುಗೆ ಮಾಡು, ತುಂಬಾನೇ ರುಚಿಯಾಗಿರುತ್ತದೆ ಅಂತ ಹೇಳುವುದನ್ನು ಅನೇಕ ಬಾರಿ ಕೇಳಿರುತ್ತೇವೆ. ಆದರೆ ಕಬ್ಬಿಣದ ಕಡಾಯಿಯಲ್ಲಿ (Iron Kadhai) ಅಡುಗೆ ಮಾಡುವುದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ ಅನ್ನೋ ಗೊಂದಲ ಸಹ ಅನೇಕರಲ್ಲಿ ಇದೆ.
ಕಬ್ಬಿಣದ ಕಡಾಯಿಯಲ್ಲಿ ಅಡುಗೆ ಮಾಡುವುದು ನಿಜಕ್ಕೂ ಒಳ್ಳೆಯದೇ?
ಕಬ್ಬಿಣದ ಕಡಾಯಿಯಲ್ಲಿ ಅಡುಗೆ ಮಾಡುವುದರಿಂದ ಭಕ್ಷ್ಯಗಳ ರುಚಿ ಮತ್ತು ಆರೋಗ್ಯದ ಅಂಶವನ್ನು ಹೆಚ್ಚಿಸಬಹುದು ಎಂದು ಹಿಂದಿನಿಂದಲೂ ನಂಬಲಾಗಿದೆ. ಆದರೆ ಕಬ್ಬಿಣದ ಕಡಾಯಿಯಲ್ಲಿ ನೀವು ಎಂದಿಗೂ ಬೇಯಿಸಬಾರದ ಕೆಲವು ಆಹಾರಗಳು ಇಲ್ಲಿವೆ ನೋಡಿ. ಏಕೆಂದರೆ ಕಬ್ಬಿಣದ ಕಡಾಯಿಯಲ್ಲಿ ಈ ಪದಾರ್ಥಗಳನ್ನು ಮಾಡುವುದರಿಂದ ಆಹಾರದ ರುಚಿ ಮತ್ತು ವಿನ್ಯಾಸ ಹಾಳಾಗಬಹುದಂತೆ.
ಇದನ್ನೂ ಓದಿ: ಸೊಳ್ಳೆ ಕಚ್ಚೋದ್ರಿಂದ ತುರಿಕೆ, ದಪ್ಪ ಏಕೆ ಆಗುತ್ತದೆ? ಇದಕ್ಕೂ ಒಂದು ಕಾರಣವಿದೆ
ಕಬ್ಬಿಣದ ಕಡಾಯಿಯಲ್ಲಿ ಮೀನನ್ನು ಬೇಯಿಸಬೇಡಿ
ಕಬ್ಬಿಣದ ಕಡಾಯಿ ಅಥವಾ ಕ್ಯಾಸ್ಟ್ ಐರನ್ ಪ್ಯಾನ್ ನಲ್ಲಿ ಮೀನು ಮತ್ತು ಸಮುದ್ರಾಹಾರ ಭಕ್ಷ್ಯಗಳನ್ನು ತಯಾರಿಸುವುದನ್ನು ಅನೇಕ ಸಾಂಪ್ರದಾಯಿಕ ಶೈಲಿಯ ಅಡುಗೆ ಒಳಗೊಂಡಿರುವುದರಿಂದ ಇದು ವಿಚಿತ್ರವಾಗಿ ಅನ್ನಿಸಬಹುದು. ಆದರೆ ತಜ್ಞರು ಕಬ್ಬಿಣದ ಕಡಾಯಿಯಲ್ಲಿ ಮೀನುಗಳನ್ನು ಬೇಯಿಸುವುದನ್ನು ಅಥವಾ ಎಣ್ಣೆಯಲ್ಲಿ ಕರಿಯುವುದನ್ನು ತಪ್ಪಿಸುವುದು ಉತ್ತಮ ಅಂತ ಹೇಳುತ್ತಾರೆ.
ಏಕೆಂದರೆ ಮೀನು ಬಾಣಲೆಯ ಕೆಳಭಾಗಕ್ಕೆ ಹೋಗಿ ಅಂಟಿಕೊಳ್ಳುತ್ತದೆ ಮತ್ತು ಖಾದ್ಯದ ವಿನ್ಯಾಸವನ್ನು ಹಾಳು ಮಾಡುತ್ತದೆ. ಕೆಲವು ಮೀನುಗಳ ಚಪ್ಪಟೆ ಮತ್ತು ಜಿಗುಟು ವಿನ್ಯಾಸವು ಇದಕ್ಕೆ ಕಾರಣ, ಇದು ಎಣ್ಣೆ ಮತ್ತು ಬೆಣ್ಣೆಯನ್ನು ಸೇರಿಸಿದರೂ ಅಂಟಿಕೊಳ್ಳುತ್ತದೆ. ಆದ್ದರಿಂದ, ಕಬ್ಬಿಣದ ಕಡಾಯಿಯಲ್ಲಿ ಮೀನಿನ ಮಾಂಸವನ್ನು ತಯಾರಿಸಬಾರದು.
ನಿಂಬೆಹಣ್ಣಿನ ಉಪ್ಪಿನಕಾಯಿಯನ್ನು ಈ ಕಡಾಯಿಯಲ್ಲಿ ಮಾಡಲೇಬೇಡಿ
ಕಬ್ಬಿಣದ ಕಡಾಯಿಯಲ್ಲಿ ನಿಂಬೆ ಆಧಾರಿತ ಭಕ್ಷ್ಯಗಳು ಅಥವಾ ಉಪ್ಪಿನಕಾಯಿಗಳನ್ನು ಬೇಯಿಸಲು ನೀವು ಯೋಜಿಸುತ್ತಿದ್ದರೆ, ಕಬ್ಬಿಣದ ಕಡಾಯಿಯನ್ನು ತಪ್ಪಿಸುವುದು ಉತ್ತಮ. ಏಕೆಂದರೆ ನಿಂಬೆ ರಸದ ಆಮ್ಲೀಯ ಸ್ವಭಾವವು ಕಬ್ಬಿಣದೊಂದಿಗೆ ವರ್ತಿಸುತ್ತದೆ ಮತ್ತು ಖಾದ್ಯಕ್ಕೆ ಲೋಹದ ರುಚಿಯನ್ನು ನೀಡುತ್ತದೆ.
ಪಾಸ್ತಾ, ನೂಡಲ್ಸ್ ಗಳನ್ನು ಈ ಕಡಾಯಿಯಲ್ಲಿ ಬೇಯಿಸಬೇಡಿ
ಎಷ್ಟೇ ಪ್ರಯತ್ನ ಪಟ್ಟರೂ ಸಹ ನೀವು ಮಾಡುವಂತಹ ಪಾಸ್ತಾ ಅಥವಾ ನೂಡಲ್ಸ್ ನಿಮ್ಮ ಕಬ್ಬಿಣದ ಕಡಾಯಿಗೆ ಏಕೆ ಅಂಟಿಕೊಳ್ಳುತ್ತಿದೆ ಅಂತ ನೀವು ಎಂದಾದರೂ ಯೋಚಿಸಿದ್ದೀರಾ? ಸರಿ, ನೂಡಲ್ಸ್ ಮತ್ತು ಪಾಸ್ತಾ ಎರಡನ್ನೂ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದು ಪ್ಯಾನ್ ಗೆ ಅಂಟಿಕೊಳ್ಳುವ ಮತ್ತು ಕಬ್ಬಿಣದ ಬಾಣಲೆಯ ಲೋಹದ ರುಚಿಯನ್ನು ಅಳವಡಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ. ಇದು ಖಾದ್ಯದ ವಿನ್ಯಾಸವನ್ನು ಹಾಳು ಮಾಡುವುದಲ್ಲದೆ, ಅದೇ ಸಮಯದಲ್ಲಿ ರುಚಿಯ ಮೇಲೂ ಸಹ ಭಾರೀ ಪರಿಣಾಮವನ್ನು ಬೀರುತ್ತದೆ.
ಹಲ್ವಾ ಮತ್ತು ಸಿಹಿತಿಂಡಿಗಳನ್ನು ಕಬ್ಬಿಣದ ಕಡಾಯಿಯಿಂದ ದೂರವಿಡಿ
ನೀವು ಹಲ್ವಾವನ್ನು ತಯಾರಿಸುತ್ತಿದ್ದರೇ ಅಥವಾ ಯಾವುದೇ ರೀತಿಯ ಸಿಹಿ ತಿಂಡಿಯನ್ನು ತಯಾರಿಸುತ್ತಿದ್ದರೂ, ಕಬ್ಬಿಣದ ಕಡಾಯಿ ಅಥವಾ ಬಾಣಲೆಯನ್ನು ಬಳಸಬೇಡಿ.
ಸಿಹಿತಿಂಡಿಯನ್ನು ನೀವು ಕಡಾಯಿಯಲ್ಲಿ ಮಾಡಿದರೆ ಸಿಹಿ ಖಾದ್ಯಕ್ಕೆ ಲೋಹದ ರುಚಿ ಮತ್ತು ಪರಿಮಳವನ್ನು ನೀಡಬಹುದು, ಇದು ನಿಮ್ಮ ಸಿಹಿ ಭೋಗವನ್ನು ಹಾಳು ಮಾಡಬಹುದು. ಆದ್ದರಿಂದ, ಅಂತಹ ಸಿಹಿ ತಿಂಡಿಗಳನ್ನು ಸ್ಟೇನ್ಲೆಸ್ ಸ್ಟೀಲ್ ಕಡಾಯಿಯಲ್ಲಿ ಮಾಡುವುದು ಒಳ್ಳೆಯದು.
ಟೊಮೆಟೊ ಜ್ಯೂಸ್/ ಸಾಸ್
ಟೊಮೆಟೊ ರಸದಲ್ಲಿನ ಸಿಟ್ರಿಕ್ ಆಮ್ಲದ ಉಪಸ್ಥಿತಿಯು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುವುದು ಮಾತ್ರವಲ್ಲದೆ, ಅದೇ ಸಮಯದಲ್ಲಿ ಖಾದ್ಯದ ರುಚಿ ಮತ್ತು ವಿನ್ಯಾಸವನ್ನು ಬದಲಾಯಿಸಬಹುದು. ಹೀಗಾಗಿ, ಲೋಹದ ರುಚಿ ಮತ್ತು ರಾಸಾಯನಿಕ ಪ್ರತಿಕ್ರಿಯೆಗಳನ್ನು ತಪ್ಪಿಸಲು ಕಬ್ಬಿಣದ ಕಡಾಯಿ ಅಥವಾ ಬಾಣಲೆಯಲ್ಲಿ ಟೊಮೆಟೊ ಜ್ಯೂಸ್ ಅಥವಾ ಸಾಸ್ ಮಾಡಲೇಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ