ಉತ್ತಮ ಧ್ಯೇಯದೊಂದಿಗಿನ ಹೋರಾಟ – ಡಯಾಬಿಟಿಕ್ ರೆಟಿನೋಪಥಿ ವಿರುದ್ಧ ಭಾರತ

NetraSuraksha ಆನ್ಲೈನ್ ಸ್ವಯಂ ತಪಾಸಣೆಯನ್ನು ಇಲ್ಲಿ ಮಾಡಿಕೊಳ್ಳಿ.

ನೇತ್ರ ಸುರಕ್ಷಾ

ನೇತ್ರ ಸುರಕ್ಷಾ

 • Share this:
  ಭಾರತದಲ್ಲಿ ಡಯಾಬಿಟೀಸ್ ನಿಸ್ಸಂದೇಹವಾಗಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. 2021ರ ಭಾರತದ ವಯಸ್ಕರ ಜನಸಂಖ್ಯೆಯ ಅನುಸಾರ ಸುಮಾರು 74 ಮಿಲಿಯನ್ ಡಯಾಬಿಟೀಸ್ ಪ್ರಕರಣಗಳಿವೆ ಎಂದು ದಿ ಇಂಟರ್‌ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್ ಅಟ್ಲಾಸ್ 2021 (The International Diabetes Federation Atlas 2021) ಅಂದಾಜಿಸಿದೆ. ಈ ಸಂಖ್ಯೆಯು 2030ರಲ್ಲಿ 93 ಮಿಲಿಯನ್‌ಗೆ ಹಾಗೂ 2045ರಲ್ಲಿ 124 ಮಿಲಿಯನ್‌ಗೆ ತಲುಪಲಿದೆ ಎಂದೂ ಸಹ ಅದು ಅಂದಾಜಿಸಿದೆ.

  ಡಯಾಬಿಟೀಸ್‌ನ ಅತ್ಯಂತ ಕಳವಳಕಾರಿ ತೊಡಕುಗಳಲ್ಲಿ ಒಂದು ಎಂದರೆ ಅದು ಡಯಾಬಿಟಿಕ್ ರೆಟಿನೋಪಥಿ. ಡಯಾಬಿಟೀಸ್ ಇರುವ 17%ರಷ್ಟು ರೋಗಿಗಳು ರೆಟಿನೋಪಥಿಯಿಂದ ಬಳಲುತ್ತಿದ್ದಾರೆ ಎಂಬುದು AIIMS, ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ನ್ಯಾಷನಲ್ ಪ್ರೋಗ್ರಾಂ ಫಾರ್ ಕಂಟ್ರೋಲ್ ಆಫ್ ಬ್ಲೈಂಡ್‌ನೆಸ್ ಅಂಡ್ ವಿಷುವಲ್ ಇಂಪೇರ್‌ಮೆಂಟ್ ಭಾರತದ 21 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ1. ಡಯಾಬಿಟಿಕ್ ರೆಟಿನೋಪಥಿ ಎಂಬುದು ಸುಳಿವೇ ನೀಡದಂತಹ ಕಾಯಿಲೆಯಾಗಿದೆ. ಪ್ರಾಥಮಿಕ ಹಂತಗಳಲ್ಲಿ ಗ್ರಹಿಸಲು ಸಾಧ್ಯವಾಗುವ ಲಕ್ಷಣಗಳು ಇರುವುದಿಲ್ಲ – ಕೆಲವರು ತಮಗೆ ಓದುವಾಗ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿರುತ್ತಾರೆ, ಆದರೆ ಅದು ಬಂದು ಹೋಗುತ್ತದಷ್ಟೇ. ನಂತರದ ಹಂತಗಳಲ್ಲಿ, ರೆಟಿನಾದಲ್ಲಿರುವ ರಕ್ತನಾಳಗಳಲ್ಲಿ ರಕ್ತಸ್ರಾವವಾಗಲು ಆರಂಭವಾಗುತ್ತದೆ, ಅದರಿಂದಾಗಿ ಫ್ಲೋಟಿಂಗ್ ಸ್ಪಾಟ್‌ಗಳು ರಚನೆಯಾಗುತ್ತವೆ ಹಾಗೂ ಕೆಲವು ಸಂಕೀರ್ಣ ಪ್ರಕರಣಗಳಲ್ಲಿ ಸಂಪೂರ್ಣ ದೃಷ್ಟಿ ಕಳೆದುಹೋಗುತ್ತದೆ2.

  ನ್ಯಾಷನಲ್ ಐ ಇನ್‌ಸ್ಟಿಟ್ಯೂಟ್ (US ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಹೆಲ್ತ್‌ನ ಒಂದು ಅಂಗ ಸಂಸ್ಥೆ)2 ಪ್ರಕಾರ, ಡಯಾಬಿಟೀಸ್ ರೋಗವು ದೇಹದಲ್ಲಿರುವ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಕಣ್ಣುಗಳಲ್ಲಿರುವ ರಕ್ತನಾಳಗಳು ಹಾನಿಗೆ ಒಳಗಾದಾಗ, ಅವು ಸೋರುತ್ತವೆ ಅಥವಾ ಅವುಗಳಲ್ಲಿ ರಕ್ತಸ್ರಾವವಾಗುತ್ತದೆ. ಕೆಲವು ರಕ್ತನಾಳಗಳು ರಕ್ತಪೂರೈಕೆ ನಿಲ್ಲಿಸಬಹುದು. ಡಯಾಬಿಟಿಕ್ ರೆಟಿನೋಪಥಿಯು ಡಯಾಬಿಟಿಕ್ ಮೇಕ್ಯುಲಾರ್ ಎಡಿಮಾ ಸ್ಥಿತಿಗೂ (Diabetic Macular Edema) ಸಹ ಕಾರಣವಾಗಬಹುದು – 15ರಲ್ಲಿ 1 ಡಯಾಬಿಟೀಸ್ ರೋಗಿಗಳಲ್ಲಿ ಉಂಟಾಗುವ ಸ್ಥಿತಿ ಇದಾಗಿದ್ದು, ಮಸುಕಾದ ದೃಷ್ಟಿಗೆ ಕಾರಣವಾಗುತ್ತದೆ. ಡಯಾಬಿಟಿಕ್ ರೆಟಿನೋಪಥಿಯು ರೆಟಿನಾದ ಹೊರಗೆ ಅಸಹಜ ರಕ್ತನಾಳಗಳ ಬೆಳವಣಿಗೆಗೂ ಕಾರಣವಾಗುತ್ತದೆ, ಆ ಮೂಲಕ ಕಣ್ಣಿನ ತೇವಾಂಶ ಬರಿದಾಗುವುದನ್ನು ತಡೆಯುತ್ತದೆ. ಇದು ಒಂದು ರೀತಿಯ ಗ್ಲುಕೋಮಾ ಉಂಟು ಮಾಡುತ್ತದೆ, ಆ ಮೂಲಕ ಅಂಧತ್ವಕ್ಕೆ ಕಾರಣವಾಗುತ್ತದೆ.

  ಒಂದು ವೇಳೆ ನಾವಿಲ್ಲಿ ಸಂಖ್ಯೆಗಳ ಕಡೆಗೆ ಗಮನಹರಿಸಿದರೆ, 2021ರಲ್ಲಿಯೇ ಅಂದಾಜು 12.5 ಮಿಲಿಯನ್ ಜನರು ಡಯಾಬಿಟಿಕ್ ರೆಟಿನೋಪಥಿಯಿಂದ ಬಳಲುತ್ತಿದ್ದಾರೆ. 

  ಈ ಸಂಖ್ಯೆಗಳು ಭಯಹುಟ್ಟಿಸುತ್ತಿವೆಯಾದರೂ, ಈ ರೋಗವು ಅಷ್ಟೊಂದು ಭಯಹುಟ್ಟಿಸುವಂತಿಲ್ಲ. ವಾಸ್ತವವಾಗಿ, ನಿಯಮಿತ ಕಣ್ಣು ಪರೀಕ್ಷೆ ಹಾಗೂ ಕೆಲವು ಜೀವನಶೈಲಿ ಮಾರ್ಪಾಡುಗಳ ಮೂಲಕ ಡಯಾಬಿಟಿಕ್ ರೆಟಿನೋಪಥಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ಹಲವಾರು ದೇಶಗಳಲ್ಲಿ ವ್ಯವಸ್ಥಿತ ಸ್ಕ್ರೀನಿಂಗ್ ಅನ್ನು ಅಳವಡಿಸಿಕೊಳ್ಳಲಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಯಸ್ಕ ಜನಸಂಖ್ಯೆಯಲ್ಲಿ ಅಂಧತ್ವಕ್ಕೆ ಡಯಾಬಿಟಿಕ್ ರೆಟಿನೋಪಥಿಯು ಒಂದು ಪ್ರಮುಖ ಕಾರಣವಾಗಿ ಉಳಿದಿಲ್ಲ. ವಾಸ್ತವವಾಗಿ, ವೇಲ್ಸ್‌ನಲ್ಲಿ, ನಿಯಮಿತ ಸ್ಕ್ರೀನಿಂಗ್ ಅನ್ನು ಅನುಷ್ಠಾನಗೊಳಿಸಿದ ಕೇವಲ 8 ವರ್ಷಗಳಲ್ಲಿ ದೃಷ್ಟಿಹೀನತೆಯ ಹೊಸ ಪ್ರಕರಣಗಳು 40-50%ರಷ್ಟು ಕಡಿಮೆಯಾಗಿವೆ3

  ನಿಖರವಾಗಿ ಇದಕ್ಕಾಗಿಯೇ Network18, Novartis ಸಹಯೋಗದೊಂದಿಗೆ 'Netra Suraksha' - India Against Diabetes ಉಪಕ್ರಮವನ್ನು ಆರಂಭಿಸಿದ್ದು, ಜಾಗೃತಿ ಮೂಡಿಸುವುದು ಹಾಗೂ ಭಾರತದ ವೈದ್ಯ ಸಮೂಹ, ಥಿಂಕ್ ಟ್ಯಾಂಕ್ಸ್ ಮತ್ತು ನೀತಿ ನಿರೂಪಕರೊಂದಿಗೆ ಪರಿಣಾಮಕಾರಿ ಪಾಲುದಾರಿಕೆಯನ್ನು ನಿರ್ಮಿಸಲು ಉದ್ದೇಶಿಸಿದೆ. ಈ ಉಪಕ್ರಮವು ನವೆಂಬರ್ 27, 2021ರಂದು ಆರಂಭಗೊಂಡಿದ್ದು, ಅದು ದುಂಡು ಮೇಜಿನ ಚರ್ಚೆಗಳ ಸರಣಿಗಳನ್ನು ಒಳಗೊಂಡಿದ್ದು, ಅದರಲ್ಲಿ ಮೊದಲ ಸರಣಿಯನ್ನು ಅದೇ ದಿನ ಸಂಜೆ 6 ಗಂಟೆಗೆ CNN News18 TVಯಲ್ಲಿ ನೇರಪ್ರಸಾರ ಮಾಡಲಾಗಿದೆ. ನೀವು ಅದನ್ನು YouTube, News18.com ಮತ್ತು https://www.facebook.com/cnnnews18/ನಲ್ಲಿಯೂ ಸಹ ವೀಕ್ಷಿಸಬಹುದು. ಪತ್ತೆ ಹಚ್ಚುವಿಕೆ, ಸಮಯೋಚಿತ ತಡೆಗಟ್ಟುವಿಕೆ ಮತ್ತು ಲಭ್ಯವಿರುವ ಚಿಕಿತ್ಸೆಗಳನ್ನು ಈ ಚರ್ಚೆಗಳು ಕೇಂದ್ರೀಕರಿಸಿವೆ. ಇದರ ಮುಂದುವರಿದ ಭಾಗವಾಗಿ ಮುಂಬರುವ ವಾರಗಳಲ್ಲಿ ಇನ್ನೂ 2 ದುಂಡು ಮೇಜಿನ ಸೆಷನ್‌ಗಳು ನಡೆಯಲಿವೆ. ರೋಗದ ಬಗೆಗಿನ ವಿವಿಧ ವಿಷಯಗಳ ಬಗ್ಗೆ ಅರಿವು ಮೂಡಿಸಲು ನಾವು ವಿವರಣಾತ್ಮಕ ವೀಡಿಯೊಗಳು ಹಾಗೂ ಲೇಖನಗಳನ್ನು ಬಳಸುತ್ತೇವೆ ಮತ್ತು ಡಯಾಬಿಟೀಸ್ ರೋಗಿಗಳು ತಮಗೆ ಅಗತ್ಯವಿರುವ ಕ್ರಮಗಳನ್ನು ತಮ್ಮ ಇಷ್ಟಕ್ಕೆ ಅನುಸಾರವಾಗಿ ತೆಗೆದುಕೊಳ್ಳಲು ಪ್ರೇರೇಪಿಸುತ್ತವೆ ಎಂಬ ಭರವಸೆ ಹೊಂದಿದ್ದೇವೆ. 

  ಅಲ್ಲಿ ಮಾಹಿತಿ ನೀಡುವುದರೊಂದಿಗೆ ಹಾಗೂ ಈ ಕಾಯಿಲೆಯನ್ನು ಸುಲಭವಾಗಿ ನಿರ್ವಹಿಸುವುದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ, ಕಾಯಿಲೆಯಿಂದ ಬಳಲುತ್ತಿರುವವರ ಈ ಬೃಹತ್ ಸಂಖ್ಯೆಯನ್ನು ಸ್ವಲ್ಪವಾದರೂ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂಬ ಭರವಸೆ ನಮಗಿದೆ.

  ಈಗ ನೀವು ಜಾಗೃತಬೇಕಾದ ಸಮಯ ಬಂದಿದೆ. ಇಂದು ನೀವು ನಗರ ಭಾರತದಲ್ಲಿ ವಾಸಿಸುತ್ತಿರುವಿರಾದರೆ, ನಿಮ್ಮ ಸ್ನೇಹಿತರ ವಲಯದಲ್ಲಿ, ಸಹೋದ್ಯೋಗಿಗಳಲ್ಲಿ ಅಥವಾ ಪ್ರೀತಿಪಾತ್ರರಲ್ಲಿ ಯಾರಾದರೂ ಒಬ್ಬರು ಡಯಾಬಿಟೀಸ್‌ನಿಂದ ಬಳಲುತ್ತಿರುತ್ತಾರೆ. ಈ ಉಪಕ್ರಮದ ಬಗ್ಗೆ ಅವರೊಂದಿಗೆ ಮಾತನಾಡಿ (ಅಥವಾ ಈ ಲೇಖನವನ್ನು ಅವರೊಂದಿಗೆ ಹಂಚಿಕೊಳ್ಳಿ!) ಮತ್ತು ಅವರು ಕೊನೆಯ ಬಾರಿ ಯಾವಾಗ ತಮ್ಮ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡಿದ್ದರು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಪರೀಕ್ಷೆ ಮಾಡಿಸಿ ಕೆಲವು ತಿಂಗಳುಗಳೇ ಆಗಿಹೋಗಿದ್ದರೆ, ಇಲ್ಲಿ (hyperlink) ಡಯಾಬಿಟಿಕ್ ರೆಟಿನೋಪಥಿ ಸ್ವಯಂ-ಪರೀಕ್ಷೆ ಮಾಡಿಕೊಳ್ಳಲು ಮತ್ತು ಸರಳವಾದ, ನೋವುರಹಿತ ಕಣ್ಣಿ ಪರೀಕ್ಷೆ ಮಾಡಿಸಿಕೊಳ್ಳಲು ಅವರ ವೈದ್ಯರನ್ನು ಭೇಟಿ ಮಾಡುವಂತೆ ಅವರನ್ನು ವಿನಂತಿಸಿಕೊಳ್ಳಿ.

  ನೀವು ಇದೆಲ್ಲಾ ಮಾಡುತ್ತಿರುವಾಗ, ನೀವೂ ಸಹ ಪರೀಕ್ಷೆ ಮಾಡಿಕೊಳ್ಳಿ. ಇಂಟರ್‌ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್ ಅಟ್ಲಾಸ್ 2021ರ ಪ್ರಕಾರ, ಭಾರತದ 39.3 ಮಿಲಿಯನ್ ಜನರು ಚಿಕಿತ್ಸೆಯಿಂದ ಹೊರಗುಳಿದಿರುವ ಡಯಾಬಿಟೀಸ್‌ಗೆ ರೋಗಿಗಳಾಗಿದ್ದಾರೆ. ಈ ಸಂಖ್ಯೆಗೆ ನೀವೂ ಒಬ್ಬರಾಗಿ ಸೇರಿಕೊಳ್ಳದಿರಿ. Netra Suraksha ಉಪಕ್ರಮದ ಬಗ್ಗೆ ಇನ್ನಷ್ಟು ಅಪ್‌ಡೇಟ್‌ಗಳಿಗಾಗಿ News18.com ಅನ್ನು ಅನುಸರಿಸಿ ಮತ್ತು ಡಯಾಬಿಟಿಕ್ ರೆಟಿನೋಪಥಿ ವಿರುದ್ಧದ ಭಾರತದ ಹೋರಾಟದೊಂದಿಗೆ ಕೈಜೋಡಿಸಲು ಸಿದ್ಧರಾಗಿ.    1. ನ್ಯಾಷನಲ್ ಬ್ಲೈಂಡ್‌ನೆಸ್ ಅಂಡ್ ವಿಷುವಲ್ ಇಂಪೇರ್‌ಮೆಂಟ್ ಸರ್ವೇ 2015-2019, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ. ಡಾ. ರಾಜೇಂದ್ರ ಪ್ರಸಾದ್ ನೇತ್ರ ವಿಜ್ಞಾನಗಳ ಕೇಂದ್ರ, AIIMS, ನವದೆಹಲಿ.

   2. https://www.nei.nih.gov/learn-about-eye-health/eye-conditions-and-diseases/diabetic-retinopathy 


  • IDF ಅಟ್ಲಾಸ್, ಇಂಟರ್‌ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್, 10ನೇ ಆವೃತ್ತಿ, 2021

  Published by:Soumya KN
  First published: