ಫ್ಯಾಷನ್ ಜಗತ್ತು ಎಷ್ಟು ವೇಗವಾಗಿ ಓಡುತ್ತಿದೆ ಎಂದರೆ ಇಂದು ಇದ್ದ ಟ್ರೆಂಡ್ (Trend) ನಾಳೆ ಇರಲ್ಲ, ನಾಳೆ ಇದ್ದಿದ್ದು ಮುಂದಿನ ದಿನ ಇರಲ್ಲ. ಹೀಗೆ ಬದಲಾಗುತ್ತಿರುವ ಜನರ ರುಚಿಗೆ, ಫ್ಯಾಷನ್ (Fashion) ಸೆನ್ಸ್‌ಗೆ ಈ ಸ್ಟೈಲ್ ಸ್ಟೇಟ್‌ಮೆಂಟ್ ಅನ್ನೋದು ಬದಲಾಗುತ್ತಲೇ ಇರುತ್ತದೆ. ಬಟ್ಟೆ, ಆಭರಣ, ಮೇಕಪ್ ಅಷ್ಟೇ ಯಾಕೆ ಕಾಲಿಗೆ ಹಾಕಿಕೊಳ್ಳುವ ಚಪ್ಪಲಿಗಳ (Chappals) ಟ್ರೆಂಡ್ ಸಹ ಬದಲಾಗುತ್ತಿದೆ. ಜನ ಫ್ಯಾಷನ್ ಜೊತೆಜೊತೆಯೇ ಕಂಫರ್ಟ್‌ನೆಸ್ ಹುಡುಕುವುದರಿಂದ ಆ ನಿಟ್ಟಿನಲ್ಲೂ ಬಟ್ಟೆ, ಚಪ್ಪಲಿ, ಶೂಗಳನ್ನು ವಿನ್ಯಾಸಗೊಳಿಸುತ್ತಿವೆ ಕಂಪನಿಗಳು. ಚಪ್ಪಲಿ ಅಂತಾ ಬಂದರೆ ಜನ ತುಂಬಾ ಹೊಂದಿಕೊಳ್ಳುವ ಅಂಶವನ್ನು ಗಮನಿಸುತ್ತಾರೆ, ಅಂದರೆ ಅದು ಸಡಿಲ ಅಥವಾ ಬಿಗಿಯಾಗಿ ಇರದಂತೆ, ಕೆಲವರಿಗೆ ಚಪ್ಪಲಿಗಳು ಎತ್ತರವಾಗಿಯೂ ಕೂಡ ಇರಬಾರದು. ಇನ್ನೂ ಕೆಲವರಿಗೆ ಹೀಲ್ಸ್ (Heels) ಇಷ್ಟ, ಆದರೆ ಕಾಲುನೋವು ಅಂತಾ ಅದರ ಸಹವಾಸಕ್ಕೆ ಹೋಗಲ್ಲ.
ಹೀಲ್ಸ್‌ಗಳನ್ನು ಚಪ್ಪಲಿ ನೋಡಲು ಇಷ್ಟ, ತೊಡಲು ಕಷ್ಟ,
ಆದರೆ ಇನ್ನುಮುಂದೆ ಚಿಂತೆ ಮಾಡಬೇಕಿಲ್ಲ, ಏಕೆಂದರೆ ಮಾರುಕಟ್ಟೆಯಲ್ಲಿ ಕನ್ವರ್ಟಬಲ್ ಚಪ್ಪಲಿಗಳು ಬಂದಿವೆ. ಚಪ್ಪಲಿ ಅಂದರೆ ಅದರಲ್ಲಿ ಹಲವಾರು ವಿಧಗಳಿವೆ ಕೆಲವರಿಗೆ ಈ ಹೈಹೀಲ್ಸ್ ಅಂದರೆ ಇಷ್ಟ. ಆದರೆ ಹೈಹೀಲ್ಸ್ ಸ್ವಲ್ಪ ಹೊತ್ತಿಗಷ್ಟೇ ಚಂದ ಆಮೇಲೆ ಕಾಲು ನೋವು ಶುರುವಾಗಿ ಬಿಡುತ್ತದೆ. ಆವಾಗ ವಿಧಿ ಇಲ್ಲದೇ ಕಾಲು ನೋವಲ್ಲೇ ಅವುಗಳನ್ನು ಧರಿಸಿಕೊಳ್ಳಬೇಕಾಗುತ್ತದೆ. ಕೆಲವರಂತೂ ಎತ್ತರದ ಚಪ್ಪಲಿ ಸಹವಾಸವೇ ಬೇಡಾ ಎನ್ನುತ್ತಾರೆ.
ಈ ಕನ್ವರ್ಟಬಲ್ ಹೈಹೀಲ್ಸ್ ನೀವು ಖರೀದಿ ಮಾಡಿಕೊಂಡರೆ ಕಾಲು ನೋವು ಬರಲ್ಲ, ಚಪ್ಪಲಿ ತೆಗೆಯುವ ಪ್ರಸಂಗವೂ ಬರುವುದಿಲ್ಲ. ಹೀಲ್ಸ್ ಬೇಕು ಅನಿಸಿದಾಗ ಹಾಕಿಕೊಂಡು ಓಡಾಡಬಹುದು, ಬೇಡ ಅಂದಾಗ ಅದನ್ನು ತೆಗೆದು ಪ್ಲಾಟ್ ಚಪ್ಪಲ್ ಮಾಡಿಕೊಳ್ಳಬಹುದಾಗಿ.
ಮಾರುಕಟ್ಟೆಗೆ ಬಂದ ಕನ್ವರ್ಟಬಲ್ ಹೀಲ್ಸ್ ಚಪ್ಪಲ್
ಆದರೆ ಇಲ್ಲೊಂದು ಚಪ್ಪಲಿ ವಿಡಿಯೋ ಬಂದಿದೆ. ಈ ಹೈಹೀಲ್ಸ್ ನೀವು ಖರೀದಿ ಮಾಡಿಕೊಂಡರೆ ಕಾಲು ನೋವು ಬರಲ್ಲ, ಚಪ್ಪಲಿ ತೆಗೆಯುವ ಪ್ರಸಂಗವೂ ಬರುವುದಿಲ್ಲ. ಯಾವುದದು ಕಾಲು ನೋವು ಬರದ ಹೈಹೀಲ್ಸ್ ಅಂತೀರಾ ಅದೇ ನೋಡಿ ಈ ಕನ್ವರ್ಟಬಲ್ ಹೀಲ್ಸ್. ಹೀಲ್ಸ್ ಧರಿಸಲೇಬೇಕು ಅಂತಿದ್ದರೆ ಈ ಚಪ್ಪಲಿ ಹಾಕಿಕೊಳ್ಳೋದು. ಸ್ವಲ್ಪ ಸಮಯದ ಬಳಿಕ ಕಾಲು ನೋವು ಬಂದ ತಕ್ಷಣ ಹೀಲ್ಸ್ ಅನ್ನು ಚಪ್ಪಲಿಯಾಗಿ ಅಂದರೆ ಫ್ಲಾಟ್ ಚಪ್ಪಲಿಗಳನ್ನಾಗಿ ಮಾಡಿಕೊಳ್ಳೋದು.
ಹೈ ಹೀಲ್ ಚಪ್ಪಲಿಗಳು ಹಿಮ್ಮಡಿ ಭಾಗದಲ್ಲಿ ಎತ್ತರದಲ್ಲಿರುತ್ತವೆ. ಹೀಗೆ ಎತ್ತರವಿದ್ದರೆ ಅದು ಹೈಹೀಲ್ಡ್ ಎನಿಸಿಕೊಳ್ಳುತ್ತದೆ. ಅದೇ ಎತ್ತರದ ಭಾಗ ಇಲ್ಲದಿದ್ದರೆ ಅದು ಫ್ಲಾಟ್ ಚಪ್ಪಲಿ ಎಂದೆನಿಸಿಕೊಳ್ಳುತ್ತದೆ.
ಟ್ವಿಟರ್‌ನಲ್ಲಿ ವಿಡಿಯೋ ವೈರಲ್
ಈಗೆಲ್ಲಾ ಬರುತ್ತಿರುವ ಹೈಹೀಲ್‌ಗಳಲ್ಲಿ ಜೋಡಿಸಿಕೊಳ್ಳುವ ಸೌಲಭ್ಯವನ್ನು ಹೊಸದಾಗಿ ಪರಿಚಯಿಸಲಾಗುತ್ತದೆ. ಈ ಚಪ್ಪಲಿಗಳು ಬೇರ್ಪಡಿಸಬಹುದಾದ ಮತ್ತು ಅಂಟಿಸಬಹುದಾದ ಅಡಿಭಾಗಗಳನ್ನು ಹೊಂದಿವೆ. ಇಲ್ಲಿ ನೀವು ಹೀಲ್ಸ್ ಬೇಕು ಅಂದರೆ ಅಡಿಭಾಗವನ್ನು ಜೋಡಿಸಿಕೊಳ್ಳಬಹುದು, ಬೇಡ ಎಂದರೆ ಅದನ್ನು ತೆಗೆದು ಚಪ್ಪಲಿ ಮಾಡಿಕೊಳ್ಳಬಹುದು.
ಹೌದು, ಹೈ ಹೀಲ್‌ನಿಂದ ಫ್ಲಾಟ್‌ಗೆ ಬದಲಾಯಿಸಬಹುದಾದ ಕನ್ವರ್ಟಬಲ್ ಜೋಡಿ ಮಹಿಳಾ ಪಾದರಕ್ಷೆಯ ವಿಡಿಯೋ ಈಗ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ಇದೊಂಥರ ಚೆನ್ನಾಗಿದೆ ಅಂತಾ ನೀವೂ ಅಂತೀರಾ ಬೇಕಾದ್ರೆ.
Girl just take my money. pic.twitter.com/fHeYaV9Ypz
— Big Kay (@Keyearstun) March 29, 2023
ಬಿಗ್ ಕೇ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ಜೋಡಿಸಿಕೊಳ್ಳಬಹುದಾದ ಚಪ್ಪಲಿಗಳ ವಿಡಿಯೋವನ್ನು ಫ್ಯಾಶನ್ ಫುಟ್‌ವೇರ್‌ನ ಸಿಇಒ ಹೇಲಿ ಪಾವೊನ್ ಹಂಚಿಕೊಂಡಿದ್ದಾರೆ. ಚಪ್ಪಲಿಯನ್ನು ಫ್ಲಾಟ್ ಮತ್ತು ಹೀಲ್ಸ್ ಆಗಿ ಪರಿವರ್ತಿಸಬಹುದಾದ ಹೊಸ ಉತ್ಪನ್ನದ ಬಗ್ಗೆ ಆಕೆ ವಿವರಿಸಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದ್ದು, 1.4 ಲಕ್ಷ ಲೈಕ್ಸ್, ಕಾಮೆಂಟ್ ಪಡೆದುಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಚಪ್ಪಲಿ ಹ್ಯಾಕ್‌ಗಳಲ್ಲಿ ಈ ವಿಡಿಯೋಗಳು ವೈರಲ್ ಆಗಿದ್ದವು, ಈಗ ನಿಜವಾಗಿಯೂ ಮಾರುಕಟ್ಟೆಗೆ ಜೋಡಿಸಿಕೊಳ್ಳಬಹುದಾದ ಚಪ್ಪಲಿಗಳು ಬಂದಿವೆ.
ಈ ವಿಡಿಯೋಗೆ ಹಲವು ಬಳಕೆದಾರರು ಪ್ರತಿಕ್ರಿಯಿಸಿದ್ದು ಹಲವರು ಈಗಾಗಲೇ ಈ ಚಪ್ಪಲಿ ಮತ್ತು ಹೀಲ್ಸ್‌ಗಳನ್ನು ಬಳಸುತ್ತಿರುವುದಾಗಿ ಹೇಳಿದರೆ, ಇನ್ನೂ ಹಲವರು ಉತ್ತಮ ಪರಿಕಲ್ಪನೆ, ಕಾಲು ನೋವಿನಿಂದ ತಪ್ಪಿಸಿಕೊಳ್ಳಲು ಒಳ್ಳೆಯ ಉಪಾಯ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಮದುವೆ ಹುಡುಗಿಗೆ ಇವು ಹೇಳಿ ಮಾಡಿಸಿದ ಹೈಹಿಲ್ಸ್ ಎಂದು ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ