HOME » NEWS » Lifestyle » NESTLE CEREGROW WAYS OF PROVIDING NUTRIENT SUPPORT FOR YOUR GROWING CHILD SNVS

ನಿಮ್ಮ ಮಗುವಿಗೆ ಸರಿಯಾದ ಪೋಷಣೆ ಸಿಗುತ್ತದೆ ಎಂದು ಹೇಗೆ ಖಚಿತಪಡಿಸಿಕೊಳ್ಳುವುದು?

ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಉತ್ತಮವಾದದ್ದನ್ನು ಬಯಸುತ್ತಾರೆ. ಇದು ಮಕ್ಕಳು ಸಹ ಇಷ್ಟಪಡುವ ರೀತಿಯಲ್ಲಿ ಸರಿಯಾದ ಪೌಷ್ಠಿಕಾಂಶವನ್ನು ಒದಗಿಸುವ ಮಾರ್ಗಗಳಿಗಾಗಿ ನಿರಂತರ ಹುಡುಕಾಟಕ್ಕೆ ಕಾರಣವಾಗುತ್ತದೆ.

news18
Updated:January 20, 2021, 3:14 PM IST
ನಿಮ್ಮ ಮಗುವಿಗೆ ಸರಿಯಾದ ಪೋಷಣೆ ಸಿಗುತ್ತದೆ ಎಂದು ಹೇಗೆ ಖಚಿತಪಡಿಸಿಕೊಳ್ಳುವುದು?
ಸಾಂದರ್ಭಿಕ ಚಿತ್ರ
  • News18
  • Last Updated: January 20, 2021, 3:14 PM IST
  • Share this:
ಗಡಿಬಿಡಿಯಲ್ಲಿರುವ ನಿಮ್ಮ ಪುಟ್ಟ ಮಗುವನ್ನು ಹೆಚ್ಚು ಪೌಷ್ಠಿಕ ಆಹಾರವನ್ನು ಸೇವಿಸಲು ಮನವೊಲಿಸಲು ನೀವು ದಿನಕ್ಕೊಂದು ಹೊಸ ದಾರಿ ಹುಡುಕುತ್ತಾ ಹೆಣಗಾಡುತ್ತಿದ್ದಲ್ಲಿ, ಅದು ನೀವೊಬ್ಬರೆ ಅಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿನ ಸಣ್ಣ ಹೊಟ್ಟೆಯನ್ನು ತಾಜಾ ಮತ್ತು ಪೌಷ್ಟಿಕ ಆಹಾರದಿಂದ ತುಂಬಿಸುವ ದೈನಂದಿನ ಸವಾಲನ್ನು ಎದುರಿಸುತ್ತಾರೆ. ಸದಾ ತಿನ್ನಿಸುತ್ತಿರುವುದು ಮತ್ತು ಖಾಲಿಯಾದ ಕ್ಯಾಲೊರಿಗಳನ್ನು ನಿರಂತರವಾಗಿ ಭರ್ತಿ ಮಾಡುವುದು ಕಷ್ಟವಾಗಬಹುದು.

ಆದರೂ, ಮಕ್ಕಳು ವಿಭಿನ್ನ ಅಭಿರುಚಿಗಳನ್ನು ಅನ್ವೇಷಿಸುತ್ತಿದ್ದಂತೆ, ಅವರು ತಿನ್ನುವುದರ ಬಗ್ಗೆ ತಕರಾರು ತೆಗೆಯುವುದು ಸಹಜ. ಇದು ಆಗಾಗ್ಗೆ ಗಮನಕ್ಕೆ ಬಾರದಂತೆ ಅವರನ್ನು ಕೊರತೆಗಳೊಂದಿಗೆ ಇರಿಸಿಬಿಡುತ್ತದೆ. ಆದರೂ, ಕೊರತೆಯಿರುವ ಮಕ್ಕಳು ಕಿರಿಕಿರಿಯುಂಟುಮಾಡಬಹುದು, ಕಡಿಮೆ ಹಸಿವು, ತಲೆನೋವು ಅಥವಾ ತಲೆತಿರುಗುವಿಕೆ, ಸ್ನಾಯು ಮತ್ತು ಮೂಳೆ ದೌರ್ಬಲ್ಯವನ್ನು ತೋರಿಸಬಹುದು, ಆಗಾಗ್ಗೆ ಹೊಟ್ಟೆಯ ಸೋಂಕನ್ನು ಹೊಂದಬಹುದು ಮತ್ತು ಅವರು ಸರಿಯಾದ ಪೌಷ್ಠಿಕಾಂಶವನ್ನು ಪಡೆಯದಿದ್ದರೆ ಇತರ ಹಲವು ಲಕ್ಷಣಗಳು ಕಂಡುಬರಬಹುದು. *

ಆದರೆ ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಉತ್ತಮವಾದದ್ದನ್ನು ಬಯಸುತ್ತಾರೆ. ಇದು ಮಕ್ಕಳು ಸಹ ಇಷ್ಟಪಡುವ ರೀತಿಯಲ್ಲಿ ಸರಿಯಾದ ಪೌಷ್ಠಿಕಾಂಶವನ್ನು ಒದಗಿಸುವ ಮಾರ್ಗಗಳಿಗಾಗಿ ನಿರಂತರ ಹುಡುಕಾಟಕ್ಕೆ ಕಾರಣವಾಗುತ್ತದೆ. ಅವರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಾಮರ್ಥ್ಯಗಳ ಜೊತೆಗೆ ಮಗುವಿನ ರೋಗನಿರೋಧಕ ಶಕ್ತಿ ಬೆಳೆಯುತ್ತಿರುವ ಆರಂಭಿಕ ವರ್ಷಗಳಲ್ಲಿ ಇದು ನಿರ್ಣಾಯಕವಾಗಿದೆ.

ಆರಂಭಿಕ ವರ್ಷಗಳಲ್ಲಿ ಪೋಷಣೆ ಏಕೆ ಮುಖ್ಯ?

2–5 ವರ್ಷದ ಪ್ರಿಸ್ಕೂಲ್ ವಯಸ್ಸಿನವರು ಸೇರಿದಂತೆ ಬಾಲ್ಯದಲ್ಲಿ ನಿಮ್ಮ ಮಗು ಏನು ತಿನ್ನುತ್ತದೆ ಎಂಬುದು ಅವರ ಭವಿಷ್ಯದ ಆರೋಗ್ಯದ ಮೇಲೆ ಹಿರಿದಾದ ಪರಿಣಾಮ ಬೀರುತ್ತದೆ. ಮೆದುಳು, ಮೂಳೆಗಳು, ಹಲ್ಲುಗಳು ಮತ್ತು ಅವರ ಮನಸ್ಸಿನಂತಹ ಅಗತ್ಯ ವಸ್ತುಗಳನ್ನು ನಿರ್ಮಿಸಲು ಸಮರ್ಪಕ ಮತ್ತು ಆರೋಗ್ಯಕರ ಪೌಷ್ಠಿಕಾಂಶವು ನಿರ್ಣಾಯಕವಾಗಿರುವ ಅವರ ಜೀವನದ ಹಂತ ಇದಾಗಿರುತ್ತದೆ. ಐರನ್, ಅಯೋಡಿನ್, ವಿಟಮಿನ್ ಎ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳು ಹೆಚ್ಚು ಅಗತ್ಯವೆನಿಸುವ ಸಮಯ ಇದು. ವೈವಿಧ್ಯಮಯವಾದ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರ ಸೇವನೆಯು ಅವರ ಆರಂಭಿಕ ವರ್ಷಗಳಲ್ಲಿ ಮಕ್ಕಳಿಗೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ಕೋಟಾವನ್ನು ಪೂರೈಸಲು ಸಹಾಯ ಮಾಡುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ.

ಉತ್ತಮ ಆಹಾರ ಪದ್ಧತಿಯನ್ನು ಬೆಳೆಸುವುದು ಮತ್ತು ಆರಂಭಿಕ ಹಸ್ತಕ್ಷೇಪ ತಂತ್ರಗಳನ್ನು ನಿಯೋಜಿಸುವುದರಿಂದ ನಿಮ್ಮ ಮಗುವಿಗೆ ವಿಟಮಿನ್ ಎ, ಐರನ್, ಸತು, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯಂತಹ ಸಾಮಾನ್ಯ ನ್ಯೂನತೆಗಳನ್ನು ತಡೆಯಲು ಬೇಕಾದ ಎಲ್ಲಾ ಸಾಧನಗಳನ್ನು ನೀಡುತ್ತದೆ. ಈ ವಯಸ್ಸಿನಲ್ಲಿ ಇದು ದೀರ್ಘಾವಧಿಯಲ್ಲಿ ಸಹ ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುವ ಮಾದರಿಯನ್ನು ಹೊಂದಿಸುವುದು ಮುಖ್ಯವಾಗುತ್ತದೆ. ಮುಖ್ಯವಾಗಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯ ಪರಿಣಾಮವಾಗಿ ಲಕ್ಷಾಂತರ ಮಕ್ಕಳು ಅರಿವಿನ ವಿಳಂಬ, ದುರ್ಬಲಗೊಂಡ ರೋಗನಿರೋಧಕ ಶಕ್ತಿ ಮತ್ತು ಕುಂಠಿತ ಬೆಳವಣಿಗೆಯೊಂದಿಗೆ ಹೋರಾಡುತ್ತಾರೆ. **

ಪ್ರತಿ ಮಗು ಪಡೆಯಬೇಕಾದ ಅಗತ್ಯತೆಗಳು ಯಾವುವು?ಪ್ರಿಸ್ಕೂಲ್‌ಗೆ ಹೋಗುವ ಮಕ್ಕಳ ದೇಹಕ್ಕೆ ಪೋಷಕಾಂಶದಿಂದ ಸಮೃದ್ಧವಾದ ಆಹಾರಗಳು ಬೇಕಾಗುತ್ತವೆ, ಅದು ಸಾಕಷ್ಟು ವಿಟಮಿನ್‌ಗಳು, ಖನಿಜಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬುಗಳನ್ನು ಹೊಂದಿರುತ್ತದೆ. ಬಾಲ್ಯದಲ್ಲಿ ಈ ಐದು ಅಗತ್ಯಗಳನ್ನು ಪಡೆಯುವ ಮಕ್ಕಳು ಉತ್ತಮ ಅರಿವಿನ ಆರೋಗ್ಯವನ್ನು ತೋರಿಸುತ್ತಾರೆ ಮತ್ತು ಇದು  ನಂತರದ ಜೀವನದಲ್ಲಿ ದೀರ್ಘಕಾಲದ ಕಾಯಿಲೆಗಳ ಆಕ್ರಮಣವನ್ನು ಕಡಿಮೆ ಮಾಡುತ್ತದೆ.

ಒಂದು ಕ್ಷಣ ನಿಲ್ಲಿ ಮತ್ತು ನಿಮ್ಮ ಮಗು ಈ ಐದು ಅಗತ್ಯ ವಸ್ತುಗಳನ್ನು ಸಾಕಷ್ಟು ಪಡೆಯುತ್ತಿದೆ ಎಂದು ನೀವು ಖಚಿತವಾಗಿ ಹೇಳಬಹುದೇ ಎಂದು ಯೋಚಿಸಿ?

1) ಅಕ್ಕಿ, ಗೋಧಿ, ರಾಗಿ, ಬ್ರೆಡ್ ಮುಂತಾದ ಧಾನ್ಯಗಳು.
2) ತಾಜಾ ಹಣ್ಣುಗಳು.
3) ಸೊಪ್ಪುಗಳು ಸೇರಿದಂತೆ ತರಕಾರಿಗಳು.
4) ಮೊಟ್ಟೆ, ಸಮುದ್ರಾಹಾರ, ಕೋಳಿಮಾಂಸ, ಬೀನ್ಸ್ ಮತ್ತು ಮಾಂಸದಂತಹ ಪ್ರೋಟೀನ್ ಭರಿತ ಆಹಾರಗಳು.
5) ಡೈರಿ ಉತ್ಪನ್ನಗಳಾದ ಹಾಲು, ಚೀಸ್ ಮತ್ತು ಮೊಸರು.

ಆಗಾಗ್ಗೆ ಆಶ್ಚರ್ಯ ಪಡುವ ಇತರ ಅನೇಕ ಪೋಷಕರಂತೆ, ಇದನ್ನೆಲ್ಲ ಬಿಡುವಿಲ್ಲದ ದಿನದ ಆಹಾರ ಕ್ರಮದಲ್ಲಿ ಸೇರಿಸುವುದು ಒಂದು ಕಷ್ಟವಾದ ಕಾರ್ಯವಾಗಿದೆ. ನಿಮ್ಮ ಮಗು ಒಂದೆಡೆ  ಕುಳಿತುಕೊಳ್ಳದಿರುವುದು, ತಿನ್ನುವುದಕ್ಕಿಂತ ಆಡುವುದಕ್ಕೆ ಆದ್ಯತೆ ನೀಡುವುದು ಅಥವಾ ಅವರ ಸೊಪ್ಪಿನ ಆಹಾರದ ಒಂದು ತುತ್ತನ್ನು ಮುಟ್ಟದೆ ಇರುವುದು ಕಷ್ಟದ ಮಟ್ಟವನ್ನು ಇನ್ನಷ್ಟು ದ್ವಿಗುಣಗೊಳಿಸುತ್ತದೆ.

Photo by Tanaphong Toochinda on Unsplash
Photo by Tanaphong Toochinda on Unsplash


ನಿಮ್ಮ ಮಗು ಆರೋಗ್ಯಕರ ಆಹಾರವನ್ನು ತಿನ್ನಲು ನಿರಾಕರಿಸಿದಾಗ ಏನು ಮಾಡಬೇಕು?

ಮಕ್ಕಳು ಸಾಕಷ್ಟು ಪೌಷ್ಠಿಕಾಂಶಯುಕ್ತ ಆಹಾರವನ್ನು ತಿನ್ನಲು ನಿರಾಕರಿಸಿದಾಗ, ಅವರಿಗೆ ಎಲ್ಲಾ ಪೋಷಕಾಂಶಗಳನ್ನು ಪ್ರತಿದಿನ ನೀಡುವಂತಹ ಇನ್ನೂ ಖಚಿತವಾದ ಪರಿಹಾರ ನಿಮಗೆ ಬೇಕು.

ಇದನ್ನು ಮಾಡಲು ಕೆಲವು ಸುಲಭ ಮಾರ್ಗಗಳು:
* ಅವರಿಗೆ ಆರೋಗ್ಯಕರ ಆಯ್ಕೆಗಳನ್ನು ನೀಡಿ, ಇದರಿಂದ ಅವರು ಏನನ್ನು ಆಯ್ಕೆ ಮಾಡಿದರೂ ಅದು ಅವರಿಗೆ ಒಳ್ಳೆಯದು.
* ಆರೋಗ್ಯಕರ ಆಹಾರವನ್ನು ನೀವೇ ತಿನ್ನುವ ಮೂಲಕ ಉತ್ತಮ ಆದರ್ಶಪ್ರಾಯರಾಗಿ ಮತ್ತು ಅವರು ಅದನ್ನು ಕಲಿಯುವಂತೆ ಮಾಡಿ. ಮಕ್ಕಳು ಗಮನಿಸುವುದರ ಮೂಲಕ ಬಹಳಷ್ಟು ಕಲಿಯುತ್ತಾರೆ.
* ಮ್ಯಾಜಿಕಲ್ ಪವರ್ ಪೀ ಸೂಪ್, ಮಶೀ ಮುಶೀ ಆಲೂ ಅಥವಾ ಟೂಟೀ ಫ್ರೂಟೀ ಮಿಲ್ಕ್‌ಶೇಕ್‌ನಂತಹ ಮೋಜಿನ ಹೆಸರುಗಳೊಂದಿಗೆ ಆರೋಗ್ಯಕರ ಆಹಾರಕ್ಕೆ ಹೊಸ ಹೆಸರನ್ನು ನೀಡಿ. ಮಕ್ಕಳು ಉತ್ತಮ ಕಥೆ ಮತ್ತು ಮೋಜಿನ ಹೆಸರನ್ನು ಪ್ರೀತಿಸುತ್ತಾರೆ.
* ಕೆಲವು ಸುಲಭವಾದ, ಆರೋಗ್ಯಕರ ಭಕ್ಷ್ಯಗಳನ್ನು ತಯಾರಿಸುವುದನ್ನು ಕಲಿಯುವುದರ ಮೂಲಕ ಅವರು ಕೆಲಸವನ್ನು ಪ್ರಾರಂಭಿಸಲಿ. ಮಕ್ಕಳು ತಾನು ಶೆಫ್ ಆಗುವುದನ್ನು ಇಷ್ಟಪಡುತ್ತಾರೆ!
* ಜಂಕ್ ಫುಡ್ ಬದಲಿಗೆ, ಹೆಚ್ಚು ಆರೋಗ್ಯಕರ ತಿಂಡಿಗಳನ್ನು ಕೈಗೆಟುಕುವಂತೆ ಇರಿಸಿ, ಇದರಿಂದ ಮಕ್ಕಳು ಅವುಗಳನ್ನು ತಿನ್ನುತ್ತಾರೆ.

ಪೌಷ್ಠಿಕಾಂಶಯುಕ್ತ ಸಮೃದ್ಧ ಧಾನ್ಯವನ್ನು ದಿನದ ಪ್ರಮುಖ ಆಹಾರವಾದ ಉಪಹಾರಕ್ಕೆ ಸೇರಿಸುವುದನ್ನು ಪರಿಗಣಿಸಿ. ಇದು ಚಿಕ್ಕ ಮಕ್ಕಳ ಆಹಾರದ ದೈನಂದಿನ ಪೌಷ್ಠಿಕಾಂಶವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಯಾವುದೇ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು  ಯಶಸ್ವಿಯಾಗಿ ನಿವಾರಿಸುತ್ತದೆ.

ಆರೋಗ್ಯಕರ Nestlé ಯ Ceregrow ವನ್ನು ಮಗುವಿನ ಅಸ್ತಿತ್ವದಲ್ಲಿರುವ ಆಹಾರಕ್ರಮಕ್ಕೆ ಸೇರಿಸುವ ಮೂಲಕ ಆರೋಗ್ಯದ ಕಡೆಗೆ ಸಮತೋಲನವನ್ನು ಹೊಂದುವುದು ಈಗ ಸಾಧ್ಯ. ಪ್ರಿಸರ್ವೇಟಿವ್-ಮುಕ್ತ ಮತ್ತು ಯಾವುದೇ ಹೆಚ್ಚುವರಿ ಸುವಾಸನೆಯಿಲ್ಲದೆ ಇದು 2 ರಿಂದ 5 ವರ್ಷದ ಮಕ್ಕಳಿಗೆ ರುಚಿಕರವಾದ ಉಪಹಾರ ಆಯ್ಕೆಯಾಗಿದೆ. Ceregrow ನ ಪ್ರತಿಯೊಂದು ಬಟ್ಟಲಿನಲ್ಲಿ ಕಬ್ಬಿಣ, ವಿಟಮಿನ್ ಎ, ಸಿ ಮತ್ತು ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಧಾನ್ಯಗಳು, ಹಾಲು ಮತ್ತು ಹಣ್ಣಿನ ಸತ್ವದೊಂದಿಗೆ, ಈಗ ನೀವು ಎಲ್ಲಿಯಾದರೂ, ಯಾವುದೇ ಸಮಯದಲ್ಲಾದರೂ ನಿಮ್ಮ ಮಗುವಿಗೆ ಸಂಪೂರ್ಣ ಸರ್ವತೋಮುಖ ಪೋಷಣೆಯನ್ನು ನೀಡಬಹುದು.

Nestlé Ceregrow ಬಗ್ಗೆ ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ; ನಿಮ್ಮ ಅಮೂಲ್ಯವಾದ ಪುಟ್ಟ ಕಂದನಿಗೆ ರುಚಿಕರವಾದ ಮತ್ತು ಪೌಷ್ಟಿಕ ಉಪಹಾರ ಧಾನ್ಯ.

*RDA 4-6 yr children as per ICMR 2010

ಆಧಾರ :
*https://www.ceregrow.in/child-nutrition/nutrient-deficiency-symptoms
** https://www.unicef.org/nutrition/index_iodine.html

ಇದು ಒಂದು ಪಾಲುದಾರಿಕೆಯ ಪೋಸ್ಟ್ ಆಗಿದೆ.
Published by: Vijayasarthy SN
First published: January 20, 2021, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories