Weight Loss: ಮನೆಯಲ್ಲೇ ಇದ್ದು ಬೇಗನೆ ತೂಕ ಇಳಿಸಿಕೊಳ್ಳಬೇಕಾ? ಹಾಗಾದ್ರೆ ಈ ಮನೆಕೆಲಸಗಳನ್ನು ನಿತ್ಯ ಮಾಡಿ

ತೂಕ ಇಳಿಸಿಕೊಳ್ಳುವುದು ಹೇಗೆ ? ಫಿಟ್ ಆಗಿರುವುದು ಹೇಗೆ? ನಿಮ್ಮ ಮನೆಗೆ ಸಂಬಂಧಿಸಿದ ಕೆಲವು ನಿತ್ಯದ ಕೆಲಸಗಳನ್ನು ನೀವೇ ಮಾಡಿಕೊಳ್ಳುವುದರಿಂದ ಇದು ಸಾಧ್ಯವಿದೆ. ಅಂತಹ ಕೆಲಸಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರತಿಯೊಬ್ಬರಿಗೂ ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕು (Body Weight Loss) ಅಥವಾ ಫಿಟ್ (Fit) ಆಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆಸೆ ಇದ್ದರೆ ಸಾಲದು, ಜೊತೆಗೆ ದೇಹಕ್ಕೆ ಸೂಕ್ತ ವ್ಯಾಯಾಮದ (Exercise) ಅಗತ್ಯವೂ ಇರುತ್ತದೆ. ಆದರೆ ಕೆಲವರಿಗೆ ಜಿಮ್‍ಗೆ (Gym) ಹೋಗಲು ಸೋಮಾರಿತವಿದ್ದರೆ (Lazy), ಇನ್ನು ಕೆಲವರಿಗೆ ಸಮಯದ ಅಭಾವ ಇರುತ್ತದೆ. ಹಾಗಾದರೆ, ತೂಕ ಇಳಿಸಿಕೊಳ್ಳುವುದು ಹೇಗೆ ? ಫಿಟ್ ಆಗಿರುವುದು ಹೇಗೆ? ನಿಮ್ಮ ಮನೆಗೆ ಸಂಬಂಧಿಸಿದ ಕೆಲವು ನಿತ್ಯದ ಕೆಲಸಗಳನ್ನು ನೀವೇ ಮಾಡಿಕೊಳ್ಳುವುದರಿಂದ ಇದು ಸಾಧ್ಯವಿದೆ. ಅಂತಹ ಕೆಲಸಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಮನೆ ಸ್ವಚ್ಚ ಮಾಡುವುದು 
ನಿತ್ಯವೂ ಒಂದು ಗಂಟೆಗಳ ಕಾಲ ಮನೆಯಲ್ಲಿ ಸ್ವಚ್ಚಗೊಳಿಸುವುದು ಮತ್ತು ಪೀಠೋಪಕರಣಗಳನ್ನು ಸ್ವಚ್ಚಗೊಳಿಸುವುದು, ಖಂಡಿತಾ ನಿಮ್ಮ ದೇಹಕ್ಕೆ ವ್ಯಾಯಾಮ ನೀಡುತ್ತದೆ ಮತ್ತು ದೇಹದಲ್ಲಿ ಅನಗತ್ಯ ಬೊಜ್ಜನ್ನು ಕರಗಿಸುತ್ತದೆ. ಒಂದು ಗಂಟೆಯ ಸ್ವಚ್ಚತಾ ಕೆಲಸ 230 ಕ್ಯಾಲೋರಿಗಳನ್ನು ಕರಗಿಸುತ್ತದೆ.

ಧೂಳು ಕೊಡವುವುದು 
ಧೂಳು ಮುಕ್ತ ಮನೆ ಮತ್ತು ಕ್ಯಾಲೋರಿ ಮುಕ್ತ ದೇಹ ಎರಡೂ ಕೂಡ ನೆಮ್ಮದಿ ನೀಡುತ್ತದೆ ಅಲ್ಲವೇ? ಎರಡನ್ನೂ ನೀವು ಹೊಂದಲು ಸಾಧ್ಯವಿದೆ. ಹೇಗಂತೀರಾ? ಒಂದು ಗಂಟೆಯ ಕಾಲ ನಿಮ್ಮ ಮನೆಯ ಕಿಟಕಿ, ಪೀಠೋಪಕರಣಗಳು ಇತ್ಯಾದಿಗಳ ಧೂಳು ಹೊಡೆದು ಸ್ವಚ್ಚಗೊಳಿಸಿ. ಅದು ನಿಮಗೆ 240 ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Weight Loss Tips: ಈ ತಪ್ಪು ಮಾಡಿದ್ರೆ ನೀವು ಸಣ್ಣ ಆಗೋ ಬದ್ಲು, ದಪ್ಪ ಆಗ್ತೀರಿ ಹುಷಾರ್

ಗೋಡೆಗಳಿಗೆ ಪೈಂಟ್ ಹೊಡೆಯುವುದು 
ನಿಮ್ಮ ಮನೆಯ ಗೋಡೆಯ ಅದೇ ಹಳೆಯ ಬಣ್ಣಗಳನ್ನು ನೋಡಿ ಸಾಕಾಗಿ ಹೋಗಿದೆಯೇ? ಹಾಗಂತ ಪೇಂಟರ್‍ಗಳನ್ನು ಕರೆಸಿ, ಬಣ್ಣ ಹೊಡೆಸುವುದು ಖರ್ಚಿನ ಬಾಬ್ತು. ಅದರ ಬದಲು ನೀವೇ ನಿಮ್ಮ ಮನೆಯ ಗೋಡೆಗಳಿಗೆ ಬಣ್ಣ ಹೊಡೆಯುವ ಕೆಲಸ ಕೈಗೆತ್ತಿಕೊಳ್ಳುವುದು ಮತ್ತು ಆ ಮೂಲಕ ತೂಕವನ್ನು ಕೂಡ ಇಳಿಸಿಕೊಳ್ಳುವುದು ಉತ್ತಮ ಆಲೋಚನೆ. ಈ ಕೆಲಸದಿಂದ ನೀವು ಗಂಟೆಗೆ 306 ಕ್ಯಾಲೊರಿಗಳನ್ನು ಕರಗಿಸಿಕೊಳ್ಳಲು ಸಾಧ್ಯ.

ಬಟ್ಟೆ ಒಗೆಯುವುದು 
ವಾಶಿಂಗ್ ಮೆಶಿನ್‍ನಲ್ಲಿ ಬಟ್ಟೆ ಒಗೆಯುವುದು ಸುಲಭ ನಿಜ. ಆದರೆ, ಕೈಯಲ್ಲಿ ಬಟ್ಟೆ ಒಗೆದುಕೊಳ್ಳುವುದು ಕಷ್ಟವೆನಿಸಿದರೂ, ಅದು ನಿಮ್ಮ ದೇಹದ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ನಿಮಗೆ ವರ್ಕೌಟ್ ಮಾಡಲು ಸೋಮಾರಿತನ ಎನಿಸಿದರೆ, ಬಟ್ಟೆ ಒಗೆಯುವುದು ತೂಕ ಇಳಿಸಿಕೊಳ್ಳಲು ಅತ್ಯಂತ ಸುಲಭ ಮಾರ್ಗಗಳಲ್ಲಿ ಒಂದು. ಬಟ್ಟೆ ಒಗೆಯುವುದರಿಂದ ನೀವು 66 ಕ್ಯಾಲೋರಿಗಳನ್ನು ಕರಗಿಸಿಕೊಳ್ಳಬಹುದು.

ಮಗುವಿನ ಆರೈಕೆ 
ನಿಮ್ಮ ಮನೆಯಲ್ಲಿ ಮಗು ಇದೆಯೇ? ಆ ಕಾರಣದಿಂದ ನಿಮಗೆ ಜಿಮ್ ಹೋಗಲು ಸಮಯ ಸಿಗುತ್ತಿಲ್ಲವೇ? ಚಿಂತಿಸುವ ಅಗತ್ಯ ಇಲ್ಲ. ಮಗುವಿನ ಆರೈಕೆ ಮಾಡುವುದು, ಅದರ ಬೇಕು ಬೇಡಗಳನ್ನು ನೋಡಿಕೊಳ್ಳುವುದು ಮತ್ತು ಅದರ ಜೊತೆ ಆಡುವುದರಿಂದ ನೀವು ಗಂಟೆಗೆ 204 ಕ್ಯಾಲೋರಿಗಳನ್ನು ಕರಗಿಸಿಕೊಳ್ಳಬಹುದು.

ಇದನ್ನೂ ಓದಿ:  Drinking Water: ಬೇಸಿಗೆಯಲ್ಲಿ ಅತಿಯಾಗಿ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ನಿಮ್ಮನ್ನು ಕಾಡಬಹುದು ಎಚ್ಚರ!

ಪಾತ್ರೆ ತೊಳೆಯುವುದು 
ನಿಮ್ಮ ಮನೆಯ ಪಾತ್ರೆಗಳನ್ನು ನೀವೇ ತೊಳೆಯುವುದು ಸರಳ ವ್ಯಾಯಾಮದ ವಿಧಾನಗಳಲ್ಲಿ ಒಂದು. ಪಾತ್ರೆಗಳನ್ನು ತೊಳೆಯುವುದರಿಂದ ನೀವು ಹೆಚ್ಚು ತೂಕವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬುದೇನೋ ನಿಜ. ಆದರೂ ಪಾತ್ರೆ ತೊಳೆಯುವುದರಿಂದ ಗಂಟೆಗೆ 85 ಕ್ಯಾಲೋರಿಗಳನ್ನಂತೂ ಕರಗಿಸಿಕೊಳ್ಳಲು ಸಾಧ್ಯವಿದೆ.

ಲಾನ್‍ನಲ್ಲಿ ಕಟಾವು ಮಾಡಿ 
ಪವರ್ ಮೋವರ್ ಬಳಸಿಕೊಂಡು ಲಾನ್‍ನಲ್ಲಿ ಕಟಾವು ಮಾಡುವುದರಿಂದ ಗಂಟೆಗೆ 374 ಕ್ಯಾಲೋರಿಗಳನ್ನು ಕರಗಿಸಿಕೊಳ್ಳಬಹುದು. ನೀವು ಒಂದು ಲ್ಯಾಂಡ್ ಮೋವರ್ ಜೊತೆಗೆ ನಡೆಯುತ್ತಾ, ಕಟಾವು ಮಾಡಿದರೆ ಗಂಟೆಗೆ 308 ಕ್ಯಾಲೋರಿಗಳನ್ನು ಕರಗಿಸಲು ಸಾಧ್ಯವಿದೆ.

ವ್ಯಾಕ್ಯೂಮ್ ಕೆಲಸ ಮಾಡುವುದು 
ನಿಮ್ಮ ಇಡೀ ಮನೆಯನ್ನು ವ್ಯಾಕ್ಯೂಮ್ ಕ್ಲೀನಿಂಗ್‍ಗೆ ಒಂದು ಗಂಟೆಯನ್ನು ಮೀಸಲಿಟ್ಟರೆ, 283 ಕ್ಯಾಲೋರಿಗಳನ್ನು ಕರಗಿಸಿಕೊಳ್ಳಬಹುದು. ಹಾಗಾಗಿ, ತೂಕ ಇಳಿಸಿಕೊಳ್ಳಬೇಕು ಎಂದಿದ್ದರೆ, ವ್ಯಾಕ್ಯೂಮ್ ಕ್ಲೀನರ್ ಕೈಗೆತ್ತಿಕೊಂಡು, ಸ್ವಚ್ಚತೆಯ ಕೆಲಸದಲ್ಲಿ ತೊಡಗಿಕೊಳ್ಳಲು ಸಿದ್ಧರಾಗಿ.

ಗಾರ್ಡನಿಂಗ್
ಗಿಡಗಳ ಆರೈಕೆಯಲ್ಲಿ ತೊಡಗಿಕೊಳ್ಳುವುದರಿಂದ ದೇಹ ಮತ್ತು ಮನಸ್ಸು ಎರಡಕ್ಕೂ ಲಾಭವಿದೆ. ಮನೆಯ ಕೈತೋಟದಲ್ಲಿ ಗಿಡಗಳ ಆರೈಕೆಗೆ ಎಂದು ನೀವು ಎರಡು ಗಂಟೆಗಳನ್ನು ವ್ಯಯಿಸಿದರೆ ಸಾಕು, 500 ಕ್ಯಾಲೋರಿಗಳನ್ನು ಕರಗಿಸಿಕೊಳ್ಳಬಹುದು.

ಇದನ್ನೂ ಓದಿ:  Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

ನೆಲ ಒರೆಸುವುದು 
ನೆಲ ಒರೆಸುವುದರಿಂದ ನೀವು ಗಂಟೆಗೆ 238 ಕ್ಯಾಲೊರಿಗಳನ್ನು ಕರಗಿಸಿಕೊಳ್ಳಲು ಸಾಧ್ಯವಿದೆ. ಅಷ್ಟೇ ಅಲ್ಲ ಈ ಕೆಲಸ ನಿಮ್ಮ ಕೈಕಾಲುಗಳಿಗೂ ಸಾಮರ್ಥ್ಯ ನೀಡುತ್ತದೆ.
Published by:Ashwini Prabhu
First published: