Diet Food: ಫಿಟ್‌ನೆಸ್ ಗುರಿಯನ್ನು ಸಾಧಿಸಬೇಕೇ? ಹಾಗಿದ್ರೆ ಜಂಕ್ ಫುಡ್‌ಗೆ ಟಾಟಾ ಹೇಳಿ

ಕರಿದ ಸಂಸ್ಕರಿಸಿದ ಆಹಾರಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ…ಜಂಕ್ ಫುಡ್‌ಗಳೆಂದರೆ ಹಾಗೆ ರುಚಿಯಲ್ಲಿ ತಲ್ಲೀನಗೊಳಿಸುವ ಶಕ್ತಿಯನ್ನು ಹೊಂದಿರುತ್ತವೆ ಅಂತೆಯೇ ತಿಂದಷ್ಟು ಇನ್ನೂ ತಿನ್ನಬೇಕೆಂಬ ಚಪಲವನ್ನು ಉಂಟುಮಾಡುತ್ತವೆ. ಇಂತಹ ಚಪಲವನ್ನು ಬದಿಗೊತ್ತಿದರೆ ಮಾತ್ರವೇ ಆರೋಗ್ಯಕರ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಬಹುದು ಅಂತೆಯೇ ಫಿಟ್‌ನೆಸ್ ಜರ್ನಿಯಲ್ಲಿ ನೀವು ಏನಾದರೂ ಸಾಧಿಸಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕರಿದ ಸಂಸ್ಕರಿಸಿದ ಆಹಾರಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ…ಜಂಕ್ ಫುಡ್‌ಗಳೆಂದರೆ (Junk Food) ಹಾಗೆ ರುಚಿಯಲ್ಲಿ ತಲ್ಲೀನಗೊಳಿಸುವ ಶಕ್ತಿಯನ್ನು ಹೊಂದಿರುತ್ತವೆ ಅಂತೆಯೇ ತಿಂದಷ್ಟು ಇನ್ನೂ ತಿನ್ನಬೇಕೆಂಬ ಚಪಲವನ್ನು ಉಂಟುಮಾಡುತ್ತವೆ. ಇಂತಹ ಚಪಲವನ್ನು ಬದಿಗೊತ್ತಿದರೆ ಮಾತ್ರವೇ ಆರೋಗ್ಯಕರ ಜೀವನಶೈಲಿಯನ್ನು (Healthy Lifestyle) ನಿಮ್ಮದಾಗಿಸಿಕೊಳ್ಳಬಹುದು ಅಂತೆಯೇ ಫಿಟ್‌ನೆಸ್ ಜರ್ನಿಯಲ್ಲಿ (Fitness Journey) ನೀವು ಏನಾದರೂ ಸಾಧಿಸಬಹುದು. ಹಾಗಿದ್ದರೆ ನಿಮ್ಮ ಸಂಪೂರ್ಣ ಆಹಾರ ಸೇವನೆಯ ವಿಧಾನವನ್ನೇ ಬದಲಾಯಿಸುವ ಈ ಸರಳ ಹಂತಗಳನ್ನು ನೀವು ಪಾಲಿಸಲೇಬೇಕು. ಇಂದಿನ ಲೇಖನದಲ್ಲಿ ಇಂತಹ ಜಂಕ್ ಫುಡ್‌ಗಳ ಬದಲಿಗೆ ಪರ್ಯಾಯವಾಗಿ ಅಷ್ಟೇ ರುಚಿಕರವಾಗಿರುವ ಅಂತೆಯೇ ಆರೋಗ್ಯಕರವಾಗಿರುವ ತಿನಿಸುಗಳನ್ನು (Healthy Food) ನೀಡುತ್ತಿದ್ದೇವೆ. ನಿಮಗೆ ಜಂಕ್ ಫುಡ್ ತಿನ್ನಲೇಬೇಕೆಂಬ ಹಂಬಲವುಂಟಾದಾಗ ಆರೋಗ್ಯಕರ ಆಯ್ಕೆಯಾಗಿ ಇವುಗಳನ್ನು ಸೇವಿಸಿ.

ಆಲೂಗಡ್ಡೆ ಚಿಪ್ಸ್ ಬದಲಿಗೆ ಕೋಸಿನ ಚಿಪ್ಸ್
ಆಲೂಗಡ್ಡೆ ಚಿಪ್ಸ್ ಬದಲಿಗೆ ಕೋಸಿನ ಚಿಪ್ಸ್ ಅನ್ನು ಆರೋಗ್ಯಕರ ಆಯ್ಕೆಯಾಗಿ ನೀವು ಆರಿಸಿಕೊಳ್ಳಬಹುದು. ಕೋಸಿನ ಚಿಪ್ಸ್ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ಚಿಪ್ಸ್ ಕರಿದು ಅದಕ್ಕೆ ಉಪ್ಪು ಹಾಗೂ ಮೆಣಸಿನ ಹುಡಿ ಸೇರಿಸುವುದು ಆಯ್ಕೆಗೆ ಬಿಟ್ಟ ವಿಷಯವಾಗಿದೆ. ತಿನ್ನುವ ಪ್ರಮಾಣವನ್ನು ಕಡಿಮೆ ಮಾಡುವುದು ಇಂತಹ ಚಿಪ್ಸ್‌ಗಳಿಂದ ಸಾಧ್ಯವಾಗುತ್ತದೆ. ಪ್ರಮಾಣವನ್ನು ಮೊದಲೇ ನಿರ್ಧರಿಸುವುದು ಮುಖ್ಯವಾಗಿದೆ ಮತ್ತು ಅಷ್ಟು ಮಾತ್ರ ಸೇವಿಸಬೇಕು

ಚಾಕಲೇಟ್ ಬದಲಿಗೆ ಡಾರ್ಕ್ ಚಾಕಲೇಟ್
ಚಾಕಲೇಟ್ ಅನ್ನು ಹೆಚ್ಚು ಹೆಚ್ಚು ಸಂಸ್ಕರಿಸಿದಂತೆ ಆರೋಗ್ಯಕರ ಅಂಶಗಳು ನಷ್ಟವಾಗುತ್ತವೆ. ಕೋಕೋದಲ್ಲಿ ಕಂಡುಬರುವ ಫೈಟೊನ್ಯೂಟ್ರಿಯೆಂಟ್‌ಗಳು ಉತ್ಕರ್ಷಣ ನಿರೋಧಕ ಅಂಶಗಳನ್ನು ಒಳಗೊಂಡಿರುತ್ತವೆ ಇನ್ನು ಕಹಿ ಅಂಶವನ್ನು ಮರೆಮಾಚಲು ಹುದುಗುವಿಕೆ, ಕ್ಷಾರ ಮತ್ತು ಹುರಿಯುವ ಹಂತವನ್ನು ಅನುಸರಿಸಲಾಗುತ್ತದೆ ಇದರಿಂದ ಫೈಟೊನ್ಯೂಟ್ರಿಯೆಂಟ್‌ಗಳು ಕಣ್ಮರೆಯಾಗುತ್ತವೆ.

ಮಿಲ್ಕ್‌ಶೇಕ್ ಬದಲಿಗೆ ಮನೆಯಲ್ಲೇ ತಯಾರಿಸಿದ ಸ್ಮೂಥಿ
ಸ್ಮೂಥಿ ತಯಾರಿಸುವಾಗ ನೀವು ಇನ್ನಷ್ಟು ತರಕಾರಿ ಹಾಗೂ ಹಣ್ಣುಗಳನ್ನು ಸೇರಿಸಿ ರುಚಿಕರವನ್ನಾಗಿಸಬಹುದು. ಹೆಚ್ಚು ತರಕಾರಿ ಹಣ್ಣುಗಳ ಸೇವನೆ ಆರೋಗ್ಯಕರ ಜೀವನಕ್ಕೆ ರಹದಾರಿಯಾಗಿದೆ. ದೇಹದ ತೂಕವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಕಾರಿಯಾಗಿದೆ.

ಸೋಡಾ ಬದಲಿಗೆ ಲಿಂಬೆ ನೀರು
ರಿಫ್ರೆಶಿಂಗ್ ಡ್ರಿಂಕ್ ಆಗಿ ಖ್ಯಾತಗೊಂಡಿರುವ ಲಿಂಬೆ ನೀರು ವಿಟಮಿನ್ ಸಿ ಅಂಶವನ್ನೊಳಗೊಂಡಿದೆ ಹಾಗೂ ನಿಮ್ಮ ಆಹಾರದಲ್ಲಿ ಉತ್ಕರ್ಷಣ ನಿರೋಧಿ ಅಂಶಗಳನ್ನೊಳಗೊಂಡಿದೆ. ನೀರಿಗೆ ಸ್ವಲ್ಪ ಲಿಂಬೆ ರಸ ಸೇರಿಸಿ ಅದನ್ನು ಸೇವಿಸುವುದು ಸೋಡಾ ಕುಡಿಯುವ ಹಂಬಲವನ್ನು ಕಡಿಮೆ ಮಾಡುತ್ತದೆ.

ಫ್ರೆಂಚ್ ಫ್ರೈ ಬದಲಿಗೆ ಹುರಿದ ತರಕಾರಿ ಫ್ರೈ
ತರಕಾರಿಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ಅದಕ್ಕೆ ಚೂರು ಉಪ್ಪು ಸೇರಿಸಿ ಇನ್ನಷ್ಟು ರುಚಿಕರವಾಗಿ ನಿಮ್ಮ ತಿನಿಸನ್ನು ಮಾರ್ಪಡಿಸಬಹುದಾಗಿದೆ. ಕ್ಯಾರೆಟ್ ಹಾಗೂ ಸಿಹಿಗೆಣಸಿನ ಫ್ರೈಗಳನ್ನು ನೀವು ಟ್ರೈ ಮಾಡಬಹುದು.

ಇದನ್ನೂ ಓದಿ: Drinking Less Water: ಕಡಿಮೆ ನೀರು ಕುಡಿಯುವ ಅಭ್ಯಾಸ ಇದ್ರೆ ಈ ಸಮಸ್ಯೆಗಳು ತಪ್ಪಿದ್ದಲ್ಲ

ಜಂಕ್ ಪುಡ್ ಬದಲಿಗೆ ನೀವು ಪ್ರಯತ್ನಿಸಬಹುದಾದ ಇನ್ನಷ್ಟು ತಿನಿಸುಗಳ ಪಟ್ಟಿ ಇಲ್ಲಿದ್ದು ಫಿಸಿಯೋಥೆರಪಿಸ್ಟ್ ಡಾ ರೆಬೆಕಾ ಪಿಂಟೊ ಆರೋಗ್ಯಕರ ಆಹಾರ ಪದ್ಧತಿಗಳಿಗೆ ನಾವು ಏಕೆ ಬದಲಾಗಬೇಕು ಎಂಬ ಅಂಶಕ್ಕೆ ಒತ್ತು ನೀಡಿದ್ದಾರೆ. ಜಂಕ್ ಫುಡ್ ಸೇವನೆಯು ಬೊಜ್ಜು, ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯಗಳಿಗೆ ನೇರ ಕಾರಣವಾಗಿವೆ. ಅದಕ್ಕಾಗಿಯೇ ಪರ್ಯಾಯ ಆಹಾರ ಪದ್ಧತಿಗಳನ್ನು ಅನುಸರಿಸಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.

ಫ್ರೆಂಚ್ ಫ್ರೈ ಬದಲಿಗೆ ಬೇಕ್ ಮಾಡಿದ ಸಿಹಿಗೆಣಸು ಫ್ರೈ
ಸಿದ್ಧಪಡಿಸಿದ ಹುರಿದ ಫ್ರೆಂಚ್ ಫ್ರೈ ಬದಲಿಗೆ ಮನೆಯಲ್ಲೇ ಬೇಕ್ ಮಾಡಿದ ಸಿಹಿಗೆಣಸು ಫ್ರೈ ಆಯ್ಕೆಯನ್ನು ನಿಮ್ಮದಾಗಿಸಿಕೊಳ್ಳಿ. ಸಿಹಿಗೆಣಸನ್ನು ಸಣ್ಣಗೆ ಹೆಚ್ಚಿ ಇದಕ್ಕೆ ಸ್ವಲ್ಪ ಉಪ್ಪು, ಕಾಳುಮೆಣಸು, ಪಾಪ್ರಿಕ, ತೆಂಗಿನ ತುರಿ, ಆಲೀವ್ ಆಯಿಲ್ ಹಚ್ಚಿ. ಇನ್ನು 20 ನಿಮಿಷ ಅದನ್ನು ಹೀಟ್ ಮಾಡಿ

ಕುಕೀಸ್ ಬದಲಿಗೆ ಮನೆಯಲ್ಲೇ ತಯಾರಿಸಿದ ಗ್ರನೋಲಾ ಬಾರ್
ಗ್ರನೋಲಾ ಬಾರ್‌ಗಳನ್ನು ಮನೆಯಲ್ಲೇ ತಯಾರಿಸಬಹುದಾಗಿದೆ. ಗ್ರನೋಲಾ, ಬಾದಾಮಿ, ಪೀನಟ್ ಬಟರ್, ದಾಲ್ಚಿನಿ, ಉಪ್ಪು, ಡ್ರೈ ಫ್ರುಟ್ಸ್ ಹಾಗೂ ಜೇನು ಇದಿಷ್ಟನ್ನು ಮಿಶ್ರ ಮಾಡಿ ನಂತರ ಒಂದು ಪಾತ್ರೆಗೆ ಹಾಕಿ ಒಂದು ಗಂಟೆ ಹಾಗೆಯೇ ಬಿಡಿ ಗ್ರನೋಲಾ ಬಾರ್ ರೆಡಿ.

ಚಿಕನ್ ವಿಂಗ್ಸ್ ಬದಲಿಗೆ ತಂದೂರಿ ರೋಸ್ಟೆಡ್ ಕೋಸು
ತಂದೂರಿ ರೋಸ್ಟೆಡ್ ಹೂಕೋಸು ಚಿಕನ್ ವಿಂಗ್ಸ್‌ಗಿಂತ ಹೆಚ್ಚು ರುಚಿಕರವಾದುದು. ನೀವು ಮನೆಯಲ್ಲೇ ಇದನ್ನು ತಯಾರಿಸಬಹುದಾಗಿದೆ

ಬಿಳಿ ಬ್ರೆಡ್ ಬದಲಿಗೆ ಮಲ್ಟಿಗ್ರೇನ್ ಬ್ರೆಡ್
ಬಿಳಿ ಬ್ರೆಡ್ ಬದಲಿಗೆ ಮಲ್ಟಿಗ್ರೇನ್ ಬ್ರೆಡ್ ಆಯ್ಕೆಯನ್ನು ಮಾಡಿ. ಬಿಳಿ ಬ್ರೆಡ್ ಅನ್ನು ಮೈದಾದಿಂದ ತಯಾರಿಸುತ್ತಾರೆ ಇದರಿಂದ ತೂಕ ಏರಿಕೆ, ಬೊಜ್ಜು, ಮಧುಮೇಹ ವಿಧ 2 ನಿಮ್ಮನ್ನು ಕಾಡಬಹುದು.

ಇದನ್ನೂ ಓದಿ:  Acupressure Points For Health: ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಈ ಪ್ರೆಶರ್ ಪಾಯಿಂಟ್​ಗಳಲ್ಲಿದೆ ಪರಿಹಾರ

ಚಿಪ್ಸ್ ಬದಲಿಗೆ ಮಖಾನಾ
ತುಪ್ಪ ಹಾಗೂ ಉಪ್ಪು ಸೇರಿಸಿ ಟೋಸ್ಟ್ ಮಾಡಿದ ಮಖಾನಾ ನಿಮ್ಮ ಉತ್ತಮ ಆಯ್ಕೆಯಾಗಿರುತ್ತದೆ. ಹೀಗೆ ಆರೋಗ್ಯಕರ ಆಯ್ಕೆಗಳನ್ನು ನೀವು ಮಾಡಬಹುದಾಗಿದೆ.
Published by:Ashwini Prabhu
First published: