Gifts: ನಿಮ್ಮ ಫ್ರೆಂಡ್‌ಗೆ ಗಿಫ್ಟ್ ಕೊಡೋದಾದ್ರೆ ಈ 5 ಪಾಕೆಟ್‌ ಸ್ನೇಹಿ ಗ್ಯಾಜೆಟ್‌ಗಳೇ ಬೆಸ್ಟ್

ನಿಮ್ಮ ಬೆಸ್ಟ್‌ ಫ್ರೆಂಡ್‌ಗೆ ನೀವು ಏನಾದರೂ ಗಿಫ್ಟ್‌ ಕೊಡಬೇಕೆಂದು ಅಂದುಕೊಂಡಿದ್ದರೆ, ಅದಕ್ಕೆ ನಾವು ನಿಮಗೆ ಕೆಲವು ಗಿಫ್ಟ್‌ ಐಡಿಯಾಗಳನ್ನು ನೀಡುತ್ತಿದ್ದೇವೆ. ಆಧುನಿಕ ಯುಗದಲ್ಲಿ ಯಾವುದೋ ಹಳೆ ಕಾಲದ ಗಿಫ್ಟ್‌ ಕೊಟ್ಟರೆ ಇಷ್ಟವಾಗುತ್ತಾ, ಇಲ್ಲ ಅಲ್ವಾ ಅದಕ್ಕೆ, ಈ ಡಿಜಿಟಲ್‌ ಯುಗದಲ್ಲಿ ಗ್ಯಾಜೆಟ್‌ಗಳನ್ನು ನಿಮ್ಮ ಫ್ರೆಂಡ್‌ಗೆ ನೀಡಿದರೆ ಅವರು ತುಂಬಾ ಖುಷಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ತಂದೆ-ತಾಯಿಯಿಲ್ಲದೇ ಇರೋರು ಇರಬಹುದು, ಸಂಬಂಧಿಕರು (Family) ಇಲ್ಲದೇ ಬದುಕು ನಡೆಸೋರು ಇರಬಹುದು, ಆದರೆ ಸ್ನೇಹಿತರು (Friends) ಇಲ್ಲದೇ ಇರೋ ಒಬ್ಬನೇ ಒಬ್ಬ ವ್ಯಕ್ತಿಯನ್ನು ತೋರಿಸಿ ನೋಡೋಣ. ಸಾಧ್ಯ ಇಲ್ಲ ಅಲ್ವಾ? ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ (Person) ಸ್ನೇಹಿತರು ಇದ್ದೆ ಇರುತ್ತಾರೆ. ಸ್ನೇಹಿತರೆಂದರೆ ಹಾಸ್ಟೆಲ್‌ನಲ್ಲಿ (Hostel) ಬೆಳಗಿನ ಜಾವ 4 ಗಂಟೆಗೆಲ್ಲ ಮ್ಯಾಗಿ ಮಾಡಿಕೊಂಡು ಟೆರೆಸ್‌ ಮೇಲೆ ಹೋಗಿ ತಿನ್ನುವುದು, ಕ್ಲಾಸ್‌ ಬಂಕ್‌ ಮಾಡಿ ಸಿನಿಮಾ (Movie) ನೋಡಕ್ಕೆ ಹೋಗೋದು ಹೀಗೆ. ಈ ತರ ಸ್ಪೆಶಲ್‌ ಕ್ರೇಜಿ ಕೆಲಸಗಳಲ್ಲಿ (Work) ನಮ್ಮ ಜೊತೆ ಪಾಲ್ಗೊಳ್ಳುವ ಈ ತರದ ಕ್ರೇಜಿ ವ್ಯಕ್ತಿಗಳು ಎಲ್ಲರ ಜೀವನದಲ್ಲಿ ಇದ್ದೇ ಇರುತ್ತಾರೆ. ಅವರನ್ನೆ ನಮ್ಮ ಬೆಸ್ಟ್‌ ಸ್ನೇಹಿತ ಅಥವಾ ಬೆಸ್ಟ್‌ ಸ್ನೇಹಿತೆ (Best Friend) ಎಂದು ನಾವೆಲ್ಲರೂ ಕರೆದುಕೊಳ್ಳುತ್ತೇವೆ.

ನಿಮ್ಮ ಬೆಸ್ಟ್‌ ಫ್ರೆಂಡ್‌ಗೆ ನೀವು ಏನಾದರೂ ಗಿಫ್ಟ್‌ ಕೊಡಬೇಕೆಂದು ಅಂದುಕೊಂಡಿದ್ದರೆ, ಅದಕ್ಕೆ ನಾವು ನಿಮಗೆ ಕೆಲವು ಗಿಫ್ಟ್‌ ಐಡಿಯಾಗಳನ್ನು ನೀಡುತ್ತಿದ್ದೇವೆ. ಆಧುನಿಕ ಯುಗದಲ್ಲಿ ಯಾವುದೋ ಹಳೆ ಕಾಲದ ಗಿಫ್ಟ್‌ ಕೊಟ್ಟರೆ ಇಷ್ಟವಾಗುತ್ತಾ? ಇಲ್ಲ ಅಲ್ವಾ ಅದಕ್ಕೆ, ಈ ಡಿಜಿಟಲ್‌ ಯುಗದಲ್ಲಿ ಗ್ಯಾಜೆಟ್‌ಗಳನ್ನು ನಿಮ್ಮ ಫ್ರೆಂಡ್‌ಗೆ ನೀಡಿದರೆ ಅವರು ತುಂಬಾ ಖುಷಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಹಾಗಿದ್ರೆ ನಿಮ್ಮ ಬೆಸ್ಟ್‌ ಫ್ರೆಂಡ್‌ಗೆ ಗಿಫ್ಟ್‌ ನೀಡಲು 5 ಪಾಕೆಟ್‌ ಸ್ನೇಹಿ ಗ್ಯಾಜೆಟ್‌ಗಳು ನಿಮಗಾಗಿ ಇಲ್ಲಿವೆ:
 1) ವೈರ್‌ಲೆಸ್‌ ಪವರ್‌ ಬ್ಯಾಂಕ್‌: ಈಗ ಮೊಬೈಲ್‌ ಮತ್ತು ಮೊಬೈಲ್‌ ಗ್ಯಾಜೆಟ್‌ಗಳಿಗೆ ಇರುವ ಪ್ರಾಮುಖ್ಯತೆ ನಿಮಗೆಲ್ಲ ಈಗಾಗಲೇ ತಿಳಿದಿದೆ. ಗ್ಯಾಜೆಟ್‌ ಎಂದ ತಕ್ಷಣ ಅದು ನಮ್ಮ ಪಾಕೆಟ್‌ ಬಜೆಟ್‌‍ನಲ್ಲಿ ಕೊಡಿಸಬಹುದಾದ ಗ್ಯಾಜೆಟ್‌‍ಗಳೆಂದರೆ ಈ ಮೊಬೈಲ್‌ಗೆ ಸಂಬಂಧಪಟ್ಟ ವಸ್ತುಗಳಾಗಿರುತ್ತವೆ. ಮೊಬೈಲ್‌ ಬ್ಯಾಟರಿ ಸಮಸ್ಯೆ ಎಲ್ಲರಿಗೂ ದಿನನಿತ್ಯ ಕಾಡುವ ಸಮಸ್ಯೆ ಆಗಿರುತ್ತೆ. ಕೇವಲ ಪವರ್‌ ಬ್ಯಾಂಕ್‌ ಕೊಟ್ಟರೆ ಅದರ ವೈರ್‌ಗೆ ಕೆಲವು ಸಲ ಸಮಸ್ಯೆ ಆಗಬಹುದು. ಆದ್ದರಿಂದ ವೈರ್‌ಲೆಸ್‌ ಪವರ್‌ ಬ್ಯಾಂಕ್‌ ಅನ್ನು ನಿಮ್ಮ ಬೆಸ್ಟ್‌ ಫ್ರೆಂಡ್‌ಗೆ ನೀಡಿದರೆ ಅವರು ಪುಲ್‌ ಖುಷಿ ಆಗುತ್ತಾರೆ.

ಇದನ್ನೂ ಓದಿ: Helicopter Journey: ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ! ಅದ್ಭುತ ಗಿಫ್ಟ್ ನೋಡಿ ಅಮ್ಮನ ಕಣ್ಣಲ್ಲಿ ನೀರು

2) ತಾಪಮಾನ ನಿಯಂತ್ರಿಂತ ಟ್ರಾವೆಲ್‌ ಮಗ್‌: ನೀರು ನಮ್ಮ ದೇಹಕ್ಕೆ ಮುಖ್ಯವಾದುದು ಆಗಿದೆ. ನೀರನ್ನು ಸರಿಯಾಗಿ ಕುಡಿಯದಿದ್ದರೆ ದೇಹವು ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಇದನ್ನು ತಪ್ಪಿಸಲು ಮನೆಯಲ್ಲಿಯೇ ಇರಲಿ ಅಥವಾ ಆಫಿಸ್‌ ಅಲ್ಲಿಯೇ ಇರಲಿ ಈ ತಾಪಮಾನ ನಿಯಂತ್ರಿತ ಮಗ್‌ ನೀಡುವುದರಿಂದ ಸೂಕ್ತ ತಾಪಮಾನದ ನೀರನ್ನು ಆಗಾಗ ಸೇವಿಸಿ, ದೇಹದ ಹೈಡ್ರೇಷನ್ ಕಾಪಾಡಿಕೊಳ್ಳಬಹುದು.

3) ಮಿನಿ ಕ್ಯಾರವಾನ್‌: ನಿಮ್ಮ ಬೆಸ್ಟ್‌ ಫ್ರೆಂಡ್‌ಗೆ ಹಾಡು ಕೇಳುವ ಹುಚ್ಚು ಹೆಚ್ಚಿದ್ದರೆ ಈ ಮಿನಿ ಕ್ಯಾರವಾನ್‌ ಗ್ಯಾಜೆಟ್‌ ಅನ್ನು ಗಿಫ್ಟ್‌ ಆಗಿ ನೀಡಬಹುದು. ಈ ಗ್ಯಾಜೆಟ್‌ ಅಮೆಜಾನ್‌ ಮತ್ತು ಫ್ಲಿಫ್‌ಕಾರ್ಟ್‌ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಅಲ್ಲಿ ಲಭ್ಯವಿವೆ. ಇದರಲ್ಲಿ ನಿರ್ದಿಷ್ಟವಾಗಿ ನೀವು ಲತಾ ಮಂಗೇಶ್ಕರ್‌, ಸೋನು ನೀಗಮ್‌ ಇಂತಹವರ ಆಲ್ಬಂ ಗೀತೆಗಳನ್ನು ಕೇಳಬಹುದು. ಈ ಗ್ಯಾಜೆಟ್‌, ಹಾಡನ್ನು ಕೇಳುವ ಸಂಗೀತ ಪ್ರಿಯರಿಗೆ ಉತ್ತಮವಾಗಿದೆ.

4) ಇನ್ಸ್‌ಟಾಕ್ಸ್‌ ಮಿನಿ ಕ್ಯಾಮೆರಾ: ನಮ್ಮ ದಿನನಿತ್ಯದ ಚೆಂದದ ಅನುಭವಗಳನ್ನು ಎಲ್ಲವನ್ನು ಮೊಬೈಲ್‌ ಅಲ್ಲಿ ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಬೆಸ್ಟ್‌ ಫ್ರೆಂಡ್‌ಗೆ ಈ ಮಿನಿ ಕ್ಯಾಮೆರಾ ಗಿಫ್ಟ್‌ ಕೊಡುವುದರಿಂದ ಅವರ ಜೀವನದ ಸುಂದರ ಚಿತ್ರಗಳನ್ನು ಇದರಲ್ಲಿ ಕ್ಲಿಕ್‌ ಮಾಡಬಹುದು. ಹಾಗೆಯೇ ಹಾರ್ಡ್‌ ಕಾಪಿ ಕೂಡ ಇದರಲ್ಲಿ ತೆಗೆಯಬಹುದು. ಕ್ಯಾಮೆರಾ ಪ್ರಿಯರಿಗೆ ಇದು ಸೂಕ್ತ ಗ್ಯಾಜೆಟ್‌.

ಇದನ್ನೂ ಓದಿ:  Baby Video: ಶ್ರೀಲಂಕಾ ಫ್ಲೈಟ್​ನಲ್ಲಿ ಸ್ಪೆಷಲ್ ಫ್ರೆಂಡ್! ಪುಟ್ಟ ಹೆಣ್ಣುಮಗುವಿನ ವಿಡಿಯೋ ವೈರಲ್

5) ಡೆಕೊರೆಟಿವ್‌ ದೀಪಗಳು: ನಿಮ್ಮ ಬೆಸ್ಟ್‌ ಫ್ರೆಂಡ್‌ ಜಾಸ್ತಿ ಅಲಂಕಾರಿಕ ವಸ್ತುಗಳನ್ನು ಇಷ್ಟ ಪಡುತ್ತಿದ್ದರೆ, ಈ ಡೆಕೊರೇಟಿವ್‌ ದೀಪಗಳನ್ನು ಸ್ನೇಹಿತರ ದಿನಾಚರಣೆಗೆ ವಿಶೇಷ ಗಿಫ್ಟ್‌ ಆಗಿ ನೀಡಬಹುದು.
Published by:Ashwini Prabhu
First published: