• Home
  • »
  • News
  • »
  • lifestyle
  • »
  • Neck Pain: ಕುತ್ತಿಗೆ ಮತ್ತು ಭುಜದ ನೋವಿನ ಸಮಸ್ಯೆ ಪರಿಹಾರಕ್ಕೆ ಈ ವ್ಯಾಯಾಮ ಮಾಡಿ!

Neck Pain: ಕುತ್ತಿಗೆ ಮತ್ತು ಭುಜದ ನೋವಿನ ಸಮಸ್ಯೆ ಪರಿಹಾರಕ್ಕೆ ಈ ವ್ಯಾಯಾಮ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾರು ಕುತ್ತಿಗೆ ಮತ್ತು ಭುಜದ ನೋವಿಗೆ ಗುರಿಯಾಗಿದ್ದಾರೋ ಅವರು ಸುಲಭವಾಗಿ ಮನೆಯಲ್ಲೇ ಪರಿಹಾರ ಕಂಡುಕೊಳ್ಳಲು ಕೆಲವು ವ್ಯಾಯಾಮ ಮಾಡಬಹುದು. ಕುತ್ತಿಗೆ ಮತ್ತು ಭುಜದ ನೋವಿನಿಂದ ಪರಿಹಾರ ಪಡೆಯಲು ನೆಕ್ ರಿಲೀಸ್ ವ್ಯಾಯಾಮ ಮಾಡಿದರೆ ತುಂಬಾ ಪ್ರಯೋಜನಕಾರಿ. ಈ ವ್ಯಾಯಾಮ ಮಾಡುವುದು ತುಂಬಾ ಸರಳ. ಮತ್ತು ನೋವು ನಿವಾರಣೆಗೆ ಪರಿಣಾಮಕಾರಿ.

ಮುಂದೆ ಓದಿ ...
  • Share this:

    ಕೆಲವೊಮ್ಮೆ ಮಲಗುವ ಭಂಗಿ (Sleeping Pose) ತಪ್ಪಾದಾಗ ಕುತ್ತಿಗೆ ಭಾಗ (Neck Part) ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಈ ಸಮಸ್ಯೆಯನ್ನು (Problem) ಪ್ರತಿಯೊಬ್ಬರೂ ಎದುರಿಸಿರಬಹುದು. ಇನ್ನು ಭುಜ (Shoulder) ಮತ್ತು ಕುತ್ತಿಗೆ ಭಾಗದಲ್ಲಿ ನೋವಿನ (Pain) ಸಮಸ್ಯೆ ತುಂಬಾ ಜನರಿಗೆ ಸಾಮಾನ್ಯವಾಗಿ ಬರುತ್ತದೆ. ಒಂದೇ ಸ್ಥಾನದಲ್ಲಿ ದೀರ್ಘಕಾಲ ಕೆಲಸ ಮಾಡುವುದು ಮತ್ತು ತಪ್ಪು ಭಂಗಿಯಲ್ಲಿ ಮಲಗುವುದು ಸಾಮಾನ್ಯವಾಗಿ ಕುತ್ತಿಗೆ ಮತ್ತು ಭುಜದ ನೋವಿಗೆ ಕಾರಣವಾಗಿರುತ್ತದೆ. ನನಗೆ ಕುತ್ತಿಗೆ ಹಿಡಿದಿದೆ ಅಂತಾ ಕೆಲವರು ಬೆಳಗ್ಗೆ ಮನೆಯವರ ಬಳಿ ಹೇಳುತ್ತಾರೆ. ಈ ಸಮಸ್ಯೆಯನ್ನು ಸಮಯಕ್ಕೆ ಪರಿಹರಿಸದೇ ಇದ್ದರೆ ಅದು ಗಂಭೀರ ಸಮಸ್ಯೆಯ ರೂಪ ಪಡೆಯುತ್ತದೆ.


    ಕುತ್ತಿಗೆ ಭಾಗದಲ್ಲಿ ಕಾಣಿಸಿಕೊಳ್ಳುವ ನೋವಿನ ಸಮಸ್ಯೆ


    ಮನೆಯಿಂದಲೇ ಕೆಲಸ ಮಾಡುವರ ಸಂಖ್ಯೆ ಈಗ ಹೆಚ್ಚಿದೆ. ಅಂತಹ ಜನರು ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡ್ಬೇಕಾಗುತ್ತೆ. ಇನ್ನು ಅವರು ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು, ಮಲಗುವಾಗ ಹೆಚ್ಚು ದಿಂಬು ಇಟ್ಟು ನಿದ್ರಿಸುವುದು, ಮತ್ತು ಹೆಚ್ಚು ವ್ಯಾಯಾಮ ಮಾಡುವುದು ಕುತ್ತಿಗೆ ಮತ್ತು ಭುಜಗಳ ನೋವಿಗೆ ಕಾರಣ ಆಗುತ್ತದೆ.


    ಮನೆಯಲ್ಲಿ ಕುಳಿತು ಕೆಲಸ ಮಾಡುವವರು ತಮಗೆ ಉಂಟಾಗು ಕುತ್ತಿಗೆ ಮತ್ತು ಭುಜದ ನೋವಿನ ಸಮಸ್ಯೆ ತೊಡೆದು ಹಾಕಲು ಕೆಲವು ವ್ಯಾಯಾಮಗಳನ್ನು ಮಾಡಬಹುದು. ಈ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಕುತ್ತಿಗೆ ಮತ್ತು ಭುಜ ನೋವಿನಿಂದ ಪರಿಹಾರ ಪಡೆಯಬಹುದು.




    ಕುತ್ತಿಗೆ ಮತ್ತು ಭುಜದ ನೋವು ಕಡಿಮೆ ಮಾಡಲು ವ್ಯಾಯಾಮ


    ಫಿಟ್ನೆಸ್ ಫಸ್ಟ್ ಕೋಚ್ ವಿಕಾಸ್ ಶರ್ಮಾ ಅವರು ಹೇಳುವ ಪ್ರಕಾರ, ಯಾರು ಕುತ್ತಿಗೆ ಮತ್ತು ಭುಜದ ನೋವಿಗೆ ಗುರಿಯಾಗಿದ್ದಾರೋ ಅವರು ಸುಲಭವಾಗಿ ಮನೆಯಲ್ಲೇ ಪರಿಹಾರ ಕಂಡುಕೊಳ್ಳಲು ಕೆಲವು ವ್ಯಾಯಾಮ ಮಾಡಬಹುದು ಎಂದು ತಿಳಿಸಿದ್ದಾರೆ. ಈ ವ್ಯಾಯಾಮಗಳನ್ನು ನಿಯಮಿತವಾಗಿ ಮತ್ತು ಸರಿಯಾಗಿ ಮಾಡಿದರೆ ನೋವಿನಿಂದ ಬೇಗನೆ ಪರಿಹಾರ ಪಡೆಯಬಹುದು ಎಂದು ಹೇಳಿದ್ದಾರೆ.


    ಕುತ್ತಿಗೆ ಹಿಡಿದಾಗ ಯಾವ ವ್ಯಾಯಾಮ ಮಾಡ್ಬೇಕು?


    ಕುತ್ತಿಗೆ ಮತ್ತು ಭುಜದ ನೋವಿನಿಂದ ಪರಿಹಾರ ಪಡೆಯಲು ನೆಕ್ ರಿಲೀಸ್ ವ್ಯಾಯಾಮ ಮಾಡಿದರೆ ತುಂಬಾ ಪ್ರಯೋಜನಕಾರಿ. ಈ ವ್ಯಾಯಾಮ ಮಾಡುವುದು ತುಂಬಾ ಸರಳ. ಮತ್ತು ನೋವು ನಿವಾರಣೆಗೆ ಪರಿಣಾಮಕಾರಿ.


    ಈ ವ್ಯಾಯಾಮ ಮಾಡಲು, ಮೊದಲು ಧ್ಯಾನ ಮಾಡುವ ಭಂಗಿಯಲ್ಲಿ ಚಾಪೆಯ ಮೇಲೆ ಕುಳಿತುಕೊಳ್ಳಿ. ನಂತರ ಬಲಗೈಯನ್ನು ತಲೆಯ ಮೇಲೆ ಇಟ್ಟುಕೊಂಡು, ಕುತ್ತಿಗೆಯನ್ನು ಎಡಕ್ಕೆ ತಿರುಗಿಸಿ ಮತ್ತು 30 ಸೆಕೆಂಡು ಅದೇ ಭಂಗಿಯಲ್ಲಿರಿ.


    ನಂತರ ಸಾಮಾನ್ಯ ಸ್ಥಿತಿಗೆ ಬನ್ನಿ. ಈಗ ಎಡಗೈಯನ್ನು ತಲೆಯ ಮೇಲೆ ಇಟ್ಟುಕೊಂಡು, ಕುತ್ತಿಗೆಯನ್ನು ಬಲಕ್ಕೆ ತಿರುಗಿಸಿ 30 ಸೆಕೆಂಡ್ ನಂತರ ಸಾಮಾನ್ಯ ಸ್ಥಿತಿಗೆ ಬನ್ನಿ. ನಂತರ ಕುತ್ತಿಗೆಯನ್ನು ಎದೆಯ ಕಡೆಗೆ ಬಗ್ಗಿಸಿ ಸಾಮಾನ್ಯ ಸ್ಥಿತಿಗೆ ಬನ್ನಿ.


    ನೀವು ದಿನದ ಯಾವುದೇ ಸಮಯದಲ್ಲಿ ಬೇಕಾದ್ರೂ ಈ ವ್ಯಾಯಾಮ ಮಾಡಬಹುದು. ಇದು ಕುತ್ತಿಗೆ ಮತ್ತು ಭುಜದ ನೋವಿಗೆ ಪರಿಹಾರ ನೀಡುತ್ತದೆ.


    ವಾರಿಯರ್ ವ್ಯಾಯಾಮ


    ಕುತ್ತಿಗೆ ಮತ್ತು ಭುಜದ ನೋವನ್ನು ನಿವಾರಿಸಲು ಇದು ಉತ್ತಮ ವ್ಯಾಯಾಮ. ಭುಜಗಳು ಮತ್ತು ಕತ್ತಿನ ನೋವಿಗೆ ಈ ವ್ಯಾಯಾಮ ಪರಿಹಾರ ನೀಡುತ್ತದೆ. ನೇರವಾಗಿ ನಿಂತು ಒಂದು ಕಾಲನ್ನು ಹಿಂದಕ್ಕೆ ಮತ್ತು ಇನ್ನೊಂದು ಕಾಲನ್ನು ಮುಂದಕ್ಕೆ ತನ್ನಿ. ನಂತರ ಮುಂದಕ್ಕೆ ಮೊಣಕಾಲನ್ನು ನಿಧಾನವಾಗಿ ಬಗ್ಗಿಸುವ ಮೂಲಕ ನಿಮ್ಮ ಮುಂಭಾಗದ ಕಾಲಿನತ್ತ ಬಗ್ಗಿ.


    ಇದನ್ನೂ ಓದಿ: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಬೆಸ್ಟ್ ಆಹಾರಗಳು


    ಇದನ್ನು ಮಾಡುವಾಗ ನಿಮ್ಮ ಎರಡೂ ತೋಳುಗಳನ್ನು ಮೇಲಿನ ಭುಜಗಳಿಗೆ ಅನುಗುಣವಾಗಿ ನಿಧಾನವಾಗಿ ಮೇಲಕ್ಕೆತ್ತಿ. ಒಂದು ಕೈ ನಿಮ್ಮ ಮುಂಭಾಗದ ಕಾಲಿನ ಬದಿಯಲ್ಲಿ ಮತ್ತು ಇನ್ನೊಂದು ಕೈ ನಿಮ್ಮ ಹಿಂಭಾಗದಲ್ಲಿರಲಿ. ಈ ಭಂಗಿಯಲ್ಲಿ ಸುಮಾರು 30 ಸೆಕೆಂಡ್ ಇದ್ದು ಮತ್ತೆ ಸಾಮಾನ್ಯ ಸ್ಥಿತಿಗೆ ಬನ್ನಿ. ಇದನ್ನೂ ಎರಡೂ ಬದಿ ಪುನರಾವರ್ತಿಸಿ. ನಿಯಮಿತವಾಗಿ ಮಾಡಿ.

    Published by:renukadariyannavar
    First published: