• Home
  • »
  • News
  • »
  • lifestyle
  • »
  • Navya Naveli Nanda: ತಾತನ ಜೊತೆ ಪಿರಿಯಡ್ಸ್​ ಬಗ್ಗೆ ಮಾತನಾಡ್ತಾರಂತೆ ಬಿಗ್​ ಬಿ ಮೊಮ್ಮಗಳು ನವ್ಯ ನವೇಲಿ

Navya Naveli Nanda: ತಾತನ ಜೊತೆ ಪಿರಿಯಡ್ಸ್​ ಬಗ್ಗೆ ಮಾತನಾಡ್ತಾರಂತೆ ಬಿಗ್​ ಬಿ ಮೊಮ್ಮಗಳು ನವ್ಯ ನವೇಲಿ

ನವ್ಯಾ ನವೇಲಿ ನಂದಾ

ನವ್ಯಾ ನವೇಲಿ ನಂದಾ

Navya Nanda And Amitabh Bachchan: ನವ್ಯಾ ಇತ್ತೀಚೆಗೆ ತಮ್ಮದೇ ಆದ ಪಾಡ್ಕಾಸ್ಟ್ ‘ವಾಟ್ ದಿ ಹೆಲ್ ನವ್ಯಾ’ ಅನ್ನು ಸಹ ಪ್ರಾರಂಭಿಸಿದರು, ಅದರ ಬಗ್ಗೆ ಅವರು ತಮ್ಮ ತಾಯಿ ಶ್ವೇತಾ ಬಚ್ಚನ್ ಮತ್ತು ಅವರ ಅಜ್ಜಿ ಜಯಾ ಬಚ್ಚನ್ ಅವರೊಂದಿಗೆ ಸಹ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

  • Share this:

ಮೊದಲೆಲ್ಲಾ ಈ ಋತುಚಕ್ರದ (Periods) ಬಗ್ಗೆ ಎಂದರೆ ಮುಟ್ಟಿನ ಬಗ್ಗೆ ಮತ್ತು ಅದರಿಂದಾಗುವ ಸಮಸ್ಯೆಗಳ (Problems) ಬಗ್ಗೆ ಮತ್ತು ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚಾಗಿ ಮಹಿಳೆಯರು ಮುಕ್ತವಾಗಿ ಮಾತಾಡುತ್ತಿರಲಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಸಮಯ ಬದಲಾಗಿದೆ, ಏಕೆಂದರೆ ಈಗ ತಮ್ಮ ಮಕ್ಕಳು ಹದಿಹರೆಯದ ವಯಸ್ಸಿಗೆ ಬರುವ ಮೊದಲೇ ಈ ಋತುಚಕ್ರದ ಬಗ್ಗೆ ಮತ್ತು ಅದರ ಆರೋಗ್ಯದ ಬಗ್ಗೆ ತಾಯಂದಿರು ತಮ್ಮ ಹೆಣ್ಣು ಮಕ್ಕಳ ಜೊತೆ ಕುಳಿತು ಮಾತಾಡುತ್ತಾರೆ ಮತ್ತು ಅದನ್ನು ನಿಭಾಯಿಸುವುದು ಹೇಗೆ ಅಂತ ಸಹ ಹೇಳಿಕೊಡುತ್ತಿದ್ದಾರೆ ಅಂತ ಹೇಳಬಹುದು. ಇಲ್ಲೊಬ್ಬ ಮೊಮ್ಮಗಳು (Grand Daughter) ತನ್ನ ತಾತನ (Grand Mother) ಬಳಿ ಇದರ ಬಗ್ಗೆ ಎಲ್ಲಾ ಮಾತಾಡುತ್ತಾಳಂತೆ ನೋಡಿ.


ಅಮಿತಾಭ್ ಮೊಮ್ಮಗಳು ಏನ್ ಹೇಳ್ತಾರೆ ನೋಡಿ..


ಹೌದು., ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಇತ್ತೀಚೆಗೆ ಸುದ್ದಿ ಮಾಧ್ಯಮದ ಒಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಲ್ಲಿ ಅವರು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ದೇಶದ ಮಹಿಳೆಯರಿಗೆ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸರಿಯಾದ ಒಂದು ತಿಳುವಳಿಕೆಯನ್ನು ನೀಡುವಲ್ಲಿ ಮತ್ತು ಸರಿಯಾದ ಅರಿವು ಮೂಡಿಸುವಲ್ಲಿ ಇನ್ನೂ ಬಹಳ ದೂರ ಸಾಗಬೇಕಾಗಿದೆ ಎಂದು ನವ್ಯಾ ಹೇಳಿದರು. ಈ


ಋತುಸ್ರಾವದ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ನಿಷೇಧಿತ ವಿಷಯಗಳಂತೆ ಭಾವಿಸುವುದನ್ನು ಮತ್ತು ತಿಳಿದುಕೊಳ್ಳುವುದನ್ನು ಮೊದಲು ನಿಲ್ಲಿಸುವುದು ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಇದನ್ನು ಮಾಡಲು, ಜನರು ಅವುಗಳನ್ನು ತಮ್ಮ ಸ್ನೇಹಿತರು, ಕುಟುಂಬ ಮತ್ತು ಗೆಳೆಯರೊಂದಿಗೆ ಚರ್ಚಿಸಲು ಸಿದ್ಧರಿರಬೇಕು ಎಂದು ನವ್ಯಾ ಹೇಳಿದರು.
"ಋತುಸ್ರಾವವು ಬಹಳ ಸಮಯದಿಂದ ಒಂದು ಸಂಕೋಚಕರವಾದ ವಿಷಯವಾಗಿದೆ. ಆದರೆ ಇದೀಗ ಇದರಲ್ಲಿ ತುಂಬಾನೇ ಬದಲಾವಣೆ ಮತ್ತು ಪ್ರಗತಿ ಕಂಡುಬಂದಿದೆ ಅಂತ ಹೇಳಬಹುದು. ನಾನು ಇಂದು ನನ್ನ ಅಜ್ಜನೊಂದಿಗೆ ಒಂದು ವೇದಿಕೆಯ ಮೇಲೆ ಕುಳಿತು ಋತುಚಕ್ರದ ಬಗ್ಗೆ ಮಾತನಾಡುತ್ತಿದ್ದೇನೆ, ಅದು ಸ್ವತಃ ಪ್ರಗತಿಯ ಸಂಕೇತವಾಗಿದೆ" ಎಂದು ನವ್ಯಾ ಹೇಳಿದರು.


ಇದನ್ನೂ ಓದಿ: ದ್ವಿದಳ ಧಾನ್ಯಗಳ ಪ್ರಯೋಜನ ಒಂದೆರೆಡಲ್ಲ, ಸೆಲೆಬ್ರಿಟಿ ಟ್ರೈನರ್ ರುಜುತಾ ದಿವೇಕರ್ ಹೇಳ್ತಾರೆ ಕೇಳಿ


ಋತುಸ್ರಾವದ ಬಗ್ಗೆ ಮುಕ್ತ ಸಂಭಾಷಣೆ ಮುಖ್ಯ


ಈ ವಿಷಯಗಳ ಬಗ್ಗೆ ಮುಕ್ತ ಸಂಭಾಷಣೆ ನಡೆಸುವುದು ಮಹಿಳೆಯರು ಮತ್ತು ಯುವತಿಯರಿಗೆ ಸೀಮಿತವಾಗಬಾರದು ಎಂದು ನವ್ಯಾ ಹೇಳಿದರು. "ಋತುಸ್ರಾವವನ್ನು ಸಾಮಾನ್ಯವಾದ ಸಂಭಾಷಣೆಯನ್ನಾಗಿ ಮಾಡುವ ಈ ಧ್ಯೇಯದಲ್ಲಿ ಮಹಿಳೆಯರು ಮಾತ್ರವಲ್ಲ, ಪುರುಷರು ಸಹ ಸೇರಿಕೊಂಡಿರುವುದು ಅದ್ಭುತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮನೆಯಲ್ಲಿ, ಏಕೆಂದರೆ ಬದಲಾವಣೆಯು ಯಾವಾಗಲೂ ಮನೆಯಿಂದಲೇ ಪ್ರಾರಂಭವಾಗುತ್ತದೆ.


ಮಹಿಳೆಯರು ಸಮಾಜದಲ್ಲಿ ಹೊರಗೆ ಹೋಗಿ ಅದರ ಬಗ್ಗೆ ಮಾತನಾಡುವ ಮೊದಲು ಮನೆಯಲ್ಲಿ ತಮ್ಮ ಸ್ವಂತ ದೇಹದ ಬಗ್ಗೆ ಆರಾಮದಾಯಕವಾಗಿರಬೇಕು" ಎಂದು ಹೇಳಿದರು. ಇಂತಹ ಮನೆಯಲ್ಲಿ ಅವಳು ಬೆಳೆಯುವುದು ಸಾಕಷ್ಟು ಅದೃಷ್ಟದ ವಿಷಯ ಎಂದು ಅವರು ಹೇಳಿದರು, ಅಲ್ಲಿ ಅವರು ಏನು ಬಯಸುತ್ತಾರೆ ಎಂಬುದರ ಬಗ್ಗೆ ಮಾತನಾಡಲು ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಿದರು.


ಇದನ್ನೂ ಓದಿ: ಹೃದಯಾಘಾತವಾದಾಗ ನಿಮಗೆ ನೀವೇ CPR ನೀಡಬಹುದಾ? ವೈದ್ಯರು ಹೇಳೋದು ಹೀಗೆ


ನವ್ಯಾ ಅವರು ಆರಾ ಹೆಲ್ತ್ ಎಂಬ ಸಂಸ್ಥೆಗಳ ಸಹ-ಸಂಸ್ಥಾಪಕರಲ್ಲಿ ಒಬ್ಬರು, ಇದನ್ನು 'ಮಹಿಳೆಯರಿಗೆ ಸುರಕ್ಷಿತ, ತೀರ್ಪುರಹಿತ ಮತ್ತು ವಿಶ್ವಾಸಾರ್ಹ ವರ್ಚುವಲ್ ಆರೋಗ್ಯ ವೇದಿಕೆ' ಮತ್ತು ಪ್ರಾಜೆಕ್ಟ್ ನವೇಲಿ ಎಂದು ಹೇಳಲಾಗುತ್ತಿದೆ. ಇದರ ಮೂಲಕ ಅವರು ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ಮಾನಸಿಕ ಮತ್ತು ದೈಹಿಕ ಆರೋಗ್ಯ ಮತ್ತು ಕೌಟುಂಬಿಕ ಹಿಂಸಾಚಾರದ ಕ್ಷೇತ್ರಗಳಲ್ಲಿ ಲಿಂಗ ಅಸಮಾನತೆಯ ವಿರುದ್ಧ ಹೋರಾಡುತ್ತಾರೆ.


ನವ್ಯಾ ಇತ್ತೀಚೆಗೆ ತಮ್ಮದೇ ಆದ ಪಾಡ್ಕಾಸ್ಟ್ ‘ವಾಟ್ ದಿ ಹೆಲ್ ನವ್ಯಾ’ ಅನ್ನು ಸಹ ಪ್ರಾರಂಭಿಸಿದರು, ಅದರ ಬಗ್ಗೆ ಅವರು ತಮ್ಮ ತಾಯಿ ಶ್ವೇತಾ ಬಚ್ಚನ್ ಮತ್ತು ಅವರ ಅಜ್ಜಿ ಜಯಾ ಬಚ್ಚನ್ ಅವರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸಿದ್ದಾರೆ.

Published by:Sandhya M
First published: