Navratri 2022: ನವರಾತ್ರಿ ಹಬ್ಬದ ದಿನ ಈ ರೀತಿ ಪೂಜೆ ಮಾಡಿದ್ರೆ ಕಷ್ಟಗಳೆಲ್ಲಾ ಮಾಯವಾಗುತ್ತಂತೆ

Navratri 2022 History Significance: ದೇವಿಯನ್ನು ಅಲಂಕಾರ ಮಾಡುವಾಗ ಸಹ ಒಂದೊಂದು ದಿನಕ್ಕೆ ನಿರ್ದಿಷ್ಟವಾದ ಬಣ್ಣವಿದೆ. ಹೌದು, ದೇವಿಗೆ ಯಾವ ದಿನ ಯಾವ ಬಣ್ಣದ ಸೀರೆಯನ್ನು ಉಡಿಸಬೇಕು ಎಂಬುದು ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವರಾತ್ರಿ (Navaratri) ಹತ್ತಿರ ಬಂದಿದೆ. 9 ದಿನ ನಡೆಯುವ ವಿಶೇಷ ಹಬ್ಬಕ್ಕೆ (Special Festival)  ಮನೆಗಳು ಸಿಂಗಾರಕೊಂಡಿದೆ. ನವರಾತ್ರಿಗೆ 9 ದಿನ ದುರ್ಗಾಮಾತೆಯನ್ನು ಬೇರೆ ಬೇರೆ ರೂಪಗಳಲ್ಲಿ ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ ಸೀಸನ್ ಬಂದೊಡನೆ ಜನರು ದಸರಾ (Dasara) ತಯಾರಿಯನ್ನು ಉತ್ಸಾಹದಿಂದ ಪ್ರಾರಂಭಿಸುತ್ತಾರೆ. ಈ ವರ್ಷ ಸೆಪ್ಟೆಂಬರ್ 26ರಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ದಸರಾ ಎಂದರೆ ಬಣ್ಣಗಳು, ದೀಪಗಳು (Lights), ಸಿಹಿತಿಂಡಿಗಳು, ವಿನೋದ ಮತ್ತು ಉಲ್ಲಾಸದ ಹಬ್ಬ. ಈ ವಿಶೇಷ ಸಂದರ್ಭವು ಹಲವಾರು ಕಥೆಗಳು ಮತ್ತು ಅರ್ಥಗಳನ್ನು ಹೊಂದಿದೆ. ನವರಾತ್ರಿಗೆ 9 ದಿನ ದು ರ್ಗಾಮಾತೆ ಬೇರೆ ಬೇರೆ ರೂಪಗಳಲ್ಲಿ ದರ್ಶನ ಪಡೆಯುವ ಭಾಗ್ಯ ಭಕ್ತರಿಗೆ ಲಭ್ಯವಾಗುತ್ತದೆ. 9 ದಿನಕ್ಕೆ 9 ಬೇರೆ ಬೇರೆ ಬಣ್ಣದ ಬಟ್ಟೆ ಧರಿಸಬೇಕು. ಇದರಿಂದ ತಾಯಿ ದುರ್ಗಾದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ.

ದಸರಾ ಇತಿಹಾಸ

ಭಗವಾನ್ ರಾಮನು ರಾವಣನ ಮೇಲೆ ತನ್ನ ಅದ್ಭುತ ವಿಜಯವನ್ನು ಸಾಧಿಸಿದ ದಿನ ಇದು. ಭಗವಾನ್ ರಾಮನನ್ನು ವಿಷ್ಣುವಿನ ಎಂಟನೇ ಅವತಾರವೆಂದು ಪರಿಗಣಿಸಲಾಗಿದೆ. ಈ ನವರಾತ್ರಿಯ 10 ನೇ ದಿನದಂದು ರಾವಣನ ಸಂಹಾರ ಮಾಡಿದ ದಿನ ಹಾಗಾಗಿ ಇದನ್ನು ದುಷ್ಟ ಶಕ್ತಿಯ ನಾಶವಾದ ದಿನ ಎಂದು ಆಚರಿಸುತ್ತಾರೆ.  ಯುದ್ಧಕ್ಕೆ ಹೋಗುವಾಗ, ಭಗವಾನ್ ರಾಮನು ದುರ್ಗಾದೇವಿಗೆ ತನ್ನ ಪ್ರಾರ್ಥನೆಗಳನ್ನು ಸಲ್ಲಿಸಿ, ಅವಳನ್ನು ಪೂಜಿಸಿದ್ದ ಎನ್ನಲಾಗುತ್ತದೆ. ಅಲ್ಲದೇ ಈ ಸಮಯದಲ್ಲಿಯೇ ದುರ್ಗಾದೇವಿಯು ರಾಕ್ಷಸನಾದ ಮಹಿಷಾಸುರನನ್ನು ಕೊಂದ ಬಗ್ಗೆ ಸಹ ಹಲವಾರು ಕಥೆಗಳಿವೆ.

ಹಾಗಾದ್ರೆ ಈ 9 ದಿನಗಳ ಕಾಲ ಆಚರಣೆ ಹೇಗಿರಬೇಕು ಎಂಬುದು ಇಲ್ಲಿದೆ

ದಿನ 1: ಶೈಲಪುತ್ರಿ ಪೂಜೆ - ದುರ್ಗಾದೇವಿಯ ಮೊದಲ ರೂಪ ಶೈಲಪುತ್ರಿಯನ್ನು ಆರಾಧಿಸುವುದಿಂದ ಜೀವನದಲ್ಲಿ ಯಾವುದೇ ಕೆಡುಕಾಗದಂತೆ ತಡೆಯುತ್ತಾಳೆ ದೇವಿ ಎನ್ನುವ ನಂಬಿಕೆ ಇದೆ.

ದಿನ 2: ಬ್ರಹ್ಮಚಾರಿಣಿ ಪೂಜೆ - ಜ್ಯೋತಿಷ್ಯದ ಪ್ರಕಾರ ಈ ದಿನ ನಿಶ್ಕಲ್ಮಶ ಹೃದಯದಿಂದ ಪೂಜಿಸಿದರೆ ಬಹಳ ಒಳ್ಳೆಯದಾಗುತ್ತದೆ.

ದಿನ 3:  ಚಂದ್ರಘಂಟ ದೇವಿ- ಈ ದೇವಿಯನ್ನು ಪೂಜೆ ಮಾಡುವುದರಿಂದ ಧೈರ್ಯ ಲಭಿಸುತ್ತದೆ.

ದಿನ 4: ಕುಶ್ಮಾಂಡ ದೇವಿ - ಕುಶ್ಮಂಡಾ ದೇವಿ ನಮ್ಮ ಮುಂದಿನ ಜೀವನದಲ್ಲಿ ಬರುವ ಕಷ್ಟಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ದಿನ 5: ಸ್ಕಂದಮಾತಾ - ಸ್ಕಂದಮಾತಾ ಪೂಜೆ ಮಾಡುವುದರಿಂದ ನಮ್ಮ ರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ.

ದಿನ 6: ಕಾತ್ಯಾಯನಿ ದೇವಿ – ಕಾತ್ಯಾಯನಿ ದೇವಿ ತನ್ನ ಆರಾಧಕರಿಗೆ ಧೈರ್ಯ ನೀಡುತ್ತಾಳೆ.

ದಿನ 7: ಕಾಳರಾತ್ರಿ – ಈ ದಿನ ಪೂಜೆ ಮಾಡುವುದು ನಿಮ್ಮ ಶಕ್ತಿ ಹೆಚ್ಚಾಗಲು ಕಾರಣವಾಗುತ್ತದೆ.

ದಿನ 8: ಮಹಾಗೌರಿ - ಮಹಾಗೌರಿ ಜೀವನದಿಂದ ಹಾನಿಕಾರಕ ಪರಿಣಾಮಗಳನ್ನು ಅಳಿಸಿಹಾಕಲು ಸಹಾಯ ಮಾಡುತ್ತಾಳೆ.

ಇದನ್ನೂ ಓದಿ: ಉಪ್ಪು ಸೇರಿದಂತೆ ಈ ವಸ್ತುಗಳು ಪದೇ ಪದೇ ಕೈ ಜಾರಿ ಬಿದ್ರೆ ಅದು ಅಶುಭವಂತೆ

ದಿನ 9: ಸಿದ್ಧಿಧಾತ್ರಿ - ಸಿದ್ಧಿಧಾತ್ರಿ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ನೀಡುತ್ತಾಳೆ.

ದೇವಿಯನ್ನು ಅಲಂಕಾರ ಮಾಡುವಾಗ ಸಹ ಒಂದೊಂದು ದಿನಕ್ಕೆ ನಿರ್ದಿಷ್ಟವಾದ ಬಣ್ಣವಿದೆ. ಹೌದು, ದೇವಿಗೆ ಯಾವ ದಿನ ಯಾವ ಬಣ್ಣದ ಸೀರೆಯನ್ನು ಉಡಿಸಬೇಕು ಎಂಬುದು ಇಲ್ಲಿದೆ.

ಮೊದಲ ದಿನ ಶ್ರೀ ಸ್ವರ್ಣಕವಚಲಂಕೃತವಾಗಿ ದೇವಿಯನ್ನು ಅಲಂಕರಿಸಲಾಗುತ್ತದೆ. ದೇವಿಯನ್ನು ಕೆಂಪು ಬಟ್ಟೆಯಿಂದ ಅಲಂಕರಿಸಬೇಕು.

ಎರಡನೇ ದಿನ  ದೇವಿಯನ್ನು ಚಿನ್ನದ ಬಣ್ಣದ ಬಟ್ಟೆಯಿಂದ ಅಲಂಕರಿಸಬೇಕು.

ಮೂರನೇ ದಿನ ಹಳದಿ ಬಣ್ಣದ ಸೀರೆಯಿಂದ ದೇವಿಯನ್ನು ಅಲಂಕಾರಿಸಬೇಕು

ನಾಲ್ಕನೇ ದಿನ ಜೇನುತುಪ್ಪ ಬಣ್ಣದ ಸೀರೆಯನ್ನು ದೇವಿಗೆ ನೀಡುವುದು ಬಹಳ ಪೂಜನೀಯ

ಐದನೇ ದಿನ ಬಿಳಿ ಬಣ್ಣದ ಸೀರೆಯನ್ನು ದೇವಿಗೆ ಅರ್ಪಿಸಬೇಕು

ಆರನೇ ದಿನ ಕೂಡ ದೇವಿಗೆ ಕೆಂಪು ಬಣ್ಣದ ಸೀರೆಯನ್ನು ಬಳಸಿ ಅಲಂಕಾರ ಮಾಡಿ ಪೂಜಿಸಬೇಕು

ಕಾಳಿಯ ದೇವಿಯನ್ನು ಆರಾಧನೆ ಮಾಡುವ 7ನೇ ದಿನ, ದೇವಿಗೆ ಗುಲಾಬಿ ಬಣ್ಣದ ಸೀರೆಯನ್ನು ಸಮರ್ಪಿಸಿದರೆ , ದುಷ್ಟ ಶಕ್ತಿಗಳು ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಈ ವಾರ ಯಾರಿಗೆ ಶುಭ, ಯಾರಿಗೆ ಅಶುಭ? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ

ಗೌರಿಯನ್ನು ಆರಾಧಿಸುವ ಈ ದಿನದಂದು ಹಸಿರು ಬಣ್ಣದ ಸೀರೆಯಿಂದ ದೇವಿಯನ್ನು ಅಲಂಕರಿಸಿ

ನವಮಿಯಂದು ನೀಲಿ ಬಣ್ಣದ ಸೀರೆ ಹೆಚ್ಚು ಸೂಕ್ತ ಎನ್ನಲಾಗುತ್ತದೆ.
Published by:Sandhya M
First published: