Navaratri 2022: ನವರಾತ್ರಿ ಹಬ್ಬಕ್ಕೆ ಕಲಶ ಸ್ಥಾಪನೆ ಮಾಡುವುದು ಹೇಗೆ? ಪೂಜೆಯ ವಿಧಿ-ವಿಧಾನ ಇಲ್ಲಿದೆ

Navaratri 2022 Kalash Sthapana: ಇನ್ನು ಪೂಜೆಯನ್ನು ಪ್ರಾರಂಭಿಸುವ ಮೊದಲು, ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮತ್ತು ಅದನ್ನು ಅಲಂಕರಿಸುವುದು ಅವಶ್ಯಕ. ಕೆಲವು ಕಡೆ ಶುದ್ದೀಕರಣ ಸಲುವಾಗಿ ಮನೆಗೆ ಮತ್ತು ಮನೆಯ ಕುಟುಂಬದ ಸದಸ್ಯರ ಮೇಲೆ ಸಹ ಗಂಗಾ ಜಲವನ್ನು ಸಿಂಪಡಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಸಾಮಾನ್ಯವಾಗಿ ಗಮನಿಸಿ ನೋಡಿ, ಬಹುತೇಕ ಹಬ್ಬದ (Festival Time) ಸಂದರ್ಭದಲ್ಲಿ ಭಾರತೀಯ ಮನೆಗಳಲ್ಲಿ (Indian Homes) ಕಲಶ ಸ್ಥಾಪನೆ (Kalash Sthapana) ಮಾಡಲಾಗುತ್ತದೆ. ಕಲಶವಿಲ್ಲದೇ ಕೆಲ ಮನೆಗಳಲ್ಲಿ ಹಬ್ಬವನ್ನು ಮಾಡುವುದಿಲ್ಲ. ಕಲಶ ಸ್ಥಾಪನೆ ಮಾಡುವುದು ಸುಲಭದ ಮಾತಲ್ಲ. ಬಹಳ ಭಕ್ತಿ ಹಾಗೂ ಶ್ರದ್ಧೆಯಿಂದ ಮತ್ತು ನಾಜೂಕಿನಿಂದ, ಯಾವುದೇ ತಪ್ಪು ಆಗದಂತೆ ಕಲಶ ಸ್ಥಾಪನೆ ಮಾಡಬೇಕು. ಸದ್ಯ ನವರಾತ್ರಿ ಹಬ್ಬ (Navaratri 2022) ಆರಂಭವಾಗುತ್ತಿದೆ. ಈ ಸಮಯದಲ್ಲಿ ಸಹ ಗೊಂಬೆ ಕೂರಿಸುವುದರ ಜೊತೆಗೆ ಕಲಶವನ್ನು ಸಹ ಸ್ಥಾಪನೆ ಮಾಡಲಾಗುತ್ತದೆ. ಹಾಗಾದ್ರೆ ಹಬ್ಬಕ್ಕೆ ಕಲಶ ಸ್ಥಾಪನೆ ಮಾಡುವುದು ಹೇಗೆ? ವಿಧಿ ವಿಧಾನ ಇಲ್ಲಿದೆ.  

ಕಲಶ ಸ್ಥಾಪನೆ ಮಾಡಲು ಬೇಕಾಗುವ ವಸ್ತುಗಳು

ಹಿತ್ತಾಳೆ ಅಥವಾ ತಾಮ್ರದ ಚೊಂಬು

ನೀರು

ನಾಣ್ಯಗಳು

ಅಕ್ಕಿ

ಮಾವಿನ ಎಲೆ ಅಥವಾ ವೀಳ್ಯದ ಎಲೆಗಳು

ತೆಂಗಿನಕಾಯಿ

ಹೂವುಗಳು

ನವರಾತ್ರಿಗೆ ಇನ್ನೂ ವಿಶೇಷ ಕಲಶವನ್ನು ಸಹ ಮಾಡಲಾಗುತ್ತದೆ. ಅದನ್ನು ಮಾಡುವುದು ಹೇಗೆ ಎನ್ನುವುದು ಇಲ್ಲಿದೆ

ಅಗಲವಾದ ಮಣ್ಣಿನ ಮಡಕೆ

ಸ್ವಲ್ಪ ಮಣ್ಣು

ಏಳು ವಿಭಿನ್ನ ಧಾನ್ಯಗಳು

ಹಿತ್ತಾಳೆ ಕಲಶ

ಗಂಗಾಜಲ ಅಥವಾ ಶುದ್ಧವಾದ ನೀರು

ದಾರ

ವೀಳ್ಯದೆಲೆ

ಅಡಿಕೆ

ನಾಣ್ಯಗಳು

ಇದನ್ನೂ ಓದಿ: ಮದುವೆ ಹತ್ತಿರವಿದ್ದಾಗ ಈ ತಪ್ಪು ಮಾಡಿದ್ರೆ ನಿಮ್ಮ ಅಂದ ಹಾಳಾಗೋದು ಗ್ಯಾರೆಂಟಿ

ಮಾವಿನ 5 ಎಲೆಗಳು

ಅಕ್ಷತೆ

ತೆಂಗಿನಕಾಯಿ

ಕೆಂಪು ಬಟ್ಟೆ

ಹೂವುಗಳು

ಕಲಶ ಸ್ಥಾಪಿಸುವ ರೀತಿ ಹೀಗಿದೆ

ಮೊದಲು ಅಗಲವಾದ ಮಣ್ಣಿನ ಪಾತ್ರೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಒಣಗಿಸಿರಿ. ನಂತರ ಅದಕ್ಕೆ ಹದ ಗೊಳಿಸಿದ ಮಣ್ಣನ್ನು ಹಾಕಿ. ಅದರೊಳಗೆ ನೀವು 7 ರೀತಿಯ ವಿವಿಧ ಧಾನ್ಯಗಳನ್ನು ಹಾಕಿ. ಇದನ್ನು ಮಣ್ಣಿನ ಒಳಗೆ ಬಿತ್ತಬೇಕು. ಈಗ ಹಿತ್ತಾಳೆ ಅಥವಾ ತಾಮ್ರದ ಚೊಂಬು ಅಥವಾ ಕಲಶವನ್ನ ತೆಗೆದುಕೊಂಡು ಅದಕ್ಕೆ ದಾರವನ್ನು ಕಟ್ಟಿ. ಈಗ ಅದರ ತುಂವಾ ನೀರನ್ನು ತುಂಬಿಸಿ.

ಇಷ್ಟು ಮಾಡಿದ ನಂತರ ಅದಕ್ಕೆ  ವೀಳ್ಯದೆಲೆ, ಅಡಿಕೆ, ಅಕ್ಷತೆ ಮತ್ತು ನಾಣ್ಯಗಳನ್ನು ಆ ನೀರಿನ ಒಳಗೆ ಹಾಕಿ. ಈಗ ಕಲಶದ ಸುತ್ತ, ಅಂದರೆ ಒಳಗಡೆಯಿಂದ 5 ಮಾವಿನ ಎಲೆಗಳನ್ನು ಹಾಕಿ ಇಡಿ. ಅದಕ್ಕೆ ಮುಚ್ಚಳವನ್ನು ಮುಚ್ಚಿ. ನಂತರ ತೆಂಗಿನಕಾಯಿಯನ್ನು ತೆಗೆದುಕೊಂಡು ಕೆಂಪು ಬಟ್ಟೆಯಲ್ಲಿ ಅದನ್ನು ಕಟ್ಟಿ. ಅದಕ್ಕೆ ದಾರವನ್ನು ಸುತ್ತಿ ಕಲಶದ ಮೇಲೆ ಇಡಿ. ಈಗ ಮೊದಲು ತಯಾರಿಸಿದ ಧಾನ್ಯದ ಮಡಕೆಯ ಮೇಲೆ ಕಲಶವನ್ನು ಇಡಬೇಕು.

ಕಲಶವನ್ನು ಪೂಜೆ ಮಾಡುವುದು ಹೇಗೆ?

ಹಬ್ಬದ ಮೊದಲ ದಿನದಿಂದ ಆರಂಭಿಸಿ, 9 ದಿನಗಳ ಕಾಲ ಅಂದರೆ ಹಬ್ಬ ಮುಗಿಯುವ ತನಕ ನೀವು ಕಲಶವನ್ನು ಪೂಜೆ ಮಾಡಬೇಕು. ಪ್ರತಿದಿನ ಹೊಸ ಹೂವುಗಳಿಂದ ಕಲಶವನ್ನು ಅಲಂಕಾರಿಸಿ, ದೀಪ ಧೂಪಗಳಿಂದ ಶ್ರದ್ಧೆಯಿಂದ ಪೂಜೆ ಮಾಡಬೇಕು. ಅಲ್ಲದೇ, ಪ್ರತಿದಿನ ವಿವಿಧ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡಬೇಕು.

ಇದನ್ನೂ ಓದಿ: ನಾಲಿಗೆ ಕೆಟ್ಟು ಹೋಗಿ, ಏನ್ ತಿಂದ್ರೂ ಸಪ್ಪೆ ಅನಿಸುತ್ತಾ? ಹಾಗಿದ್ರೆ ಈ ವಸ್ತು ತಿನ್ನಿ, ಎಲ್ಲವೂ ರುಚಿಯಾಗುತ್ತೆ!

ಇನ್ನು ಪೂಜೆಯನ್ನು ಪ್ರಾರಂಭಿಸುವ ಮೊದಲು, ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮತ್ತು ಅದನ್ನು ಅಲಂಕರಿಸುವುದು ಅವಶ್ಯಕ. ಕೆಲವು ಕಡೆ ಶುದ್ದೀಕರಣ ಸಲುವಾಗಿ ಮನೆಗೆ ಮತ್ತು ಮನೆಯ ಕುಟುಂಬದ ಸದಸ್ಯರ ಮೇಲೆ ಸಹ ಗಂಗಾ ಜಲವನ್ನು ಸಿಂಪಡಿಸಲಾಗುತ್ತದೆ. ಮನೆಯನ್ನು ಸ್ವಚ್ಛ ಮಾಡುವುದರಿಂದ ಮನೆಯಲ್ಲಿರುವ ದುಷ್ಟ ಶಕ್ತಿಗಳು ಹೋಗಿ, ತಾಯಿ ಲಕ್ಷ್ಮೀಯು ಬಂದು ನೆಲೆಸಿ ಹರಸುತ್ತಾಳೆ ಎಂಬ ನಂಬಿಕೆ ಇದೆ.
Published by:Sandhya M
First published: