Navratri 2022: ನವರಾತ್ರಿಯ 9 ದಿನಗಳು ದೇವಿಗೆ ಈ ನೈವೇದ್ಯ ಮಾಡಿದ್ರೆ ಬಹಳ ಒಳ್ಳೆಯದಂತೆ

Navaratri 2022 Forms Of Durga: ಈ ಒಂಬತ್ತು ದಿನಗಳಲ್ಲಿ ಪ್ರತಿಯೊಬ್ಬರು ದುರ್ಗಾ ಅಥವಾ ಶಕ್ತಿಯ ಒಂಬತ್ತು ವಿಭಿನ್ನ ರೂಪವನ್ನು ಪೂಜಿಸುತ್ತಾರೆ.  ನವರಾತ್ರಿಯ ಪ್ರತಿ ದಿನ ಪೂಜಿಸುವ ದುರ್ಗಾ ದೇವಿಯ ಒಂಬತ್ತು ರೂಪಗಳು ಯಾವುವು ಹಾಗೂ ಯಾವ ದಿನ ಯಾವ ನೈವೇದ್ಯ ಮಾಡಬೇಕು ಎಂಬುದು ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಂಸ್ಕೃತದಲ್ಲಿ ನವರಾತ್ರಿ (Navaratri 2022) ಎಂದರೆ ಒಂಬತ್ತು ರಾತ್ರಿಗಳು (Nine Nights)  ಎಂದರ್ಥ. ಪ್ರಪಂಚದಾದ್ಯಂತ ಇರುವ ಭಾರತೀಯರು (India) ಈ ಒಂಬತ್ತು ರಾತ್ರಿಗಳನ್ನು ಉತ್ಸಾಹದಿಂದ ಆಚರಿಸುತ್ತಾರೆ. ಹಬ್ಬಗಳ ಈ ಒಂಬತ್ತು ರಾತ್ರಿಗಳು ಬಹಳ ವಿಶೇಷ ಹಾಗೂ ವಿಭಿನ್ನ. ಈ ಹಿಂದೂ ಹಬ್ಬವನ್ನು (Hindu Festival) ದುರ್ಗಾ ದೇವಿ (Durga Devi) ಮತ್ತು ಅವಳ 9 ಅವತಾರಗಳಿಗೆ ಸಮರ್ಪಣೆ ಮಾಡಲಾಗಿದೆ. ಈ ಒಂಬತ್ತು ದಿನಗಳಲ್ಲಿ ಪ್ರತಿಯೊಬ್ಬರು ದುರ್ಗಾ ಅಥವಾ ಶಕ್ತಿಯ ಒಂಬತ್ತು ವಿಭಿನ್ನ ರೂಪವನ್ನು ಪೂಜಿಸುತ್ತಾರೆ.  ನವರಾತ್ರಿಯ ಪ್ರತಿ ದಿನ ಪೂಜಿಸುವ ದುರ್ಗಾ ದೇವಿಯ ಒಂಬತ್ತು ರೂಪಗಳು ಯಾವುವು ಹಾಗೂ ಯಾವ ದಿನ ಯಾವ ನೈವೇದ್ಯ ಮಾಡಬೇಕು ಎಂಬುದು ಇಲ್ಲಿದೆ.

ಶೈಲಪುತ್ರಿ ದೇವಿ

ದುರ್ಗೆಯ ಮೊದಲ ರೂಪ ಶೈಲಪುತ್ರಿ ದೇವಿ. ಶಾಸ್ತ್ರಗಳ ಪ್ರಕಾರ, ಅವಳು ಕೈಯಲ್ಲಿ ತ್ರಿಶೂಲ ಮತ್ತು ಕಮಲವನ್ನು ಹಿಡಿದಿರುತ್ತಾಳೆ.   ಶಿವಪುರಾಣದ ಪ್ರಕಾರ, ಶೈಲಪುತ್ರಿ ದೇವಿಯು ತನ್ನ ಹಿಂದಿನ ಜನ್ಮದಲ್ಲಿ ದಕ್ಷ ಪ್ರಜಾಪತಿಗೆ ಜನಿಸಿದ್ದು, ಪತಿಯ ಗೌರವಾರ್ಥವಾಗಿ ಬೆಂಕಿ ಹಚ್ಚಿಕೊಂಡು ಪ್ರಾಣ ತ್ಯಾಗ ಮಾಡಿದ್ದಳು. ತನ್ನ ಮುಂದಿನ ಜನ್ಮದಲ್ಲಿ ಸತಿಯು ಪರ್ವತಗಳ ಅಧಿಪತಿಯಾದ ಹಿಮಾಲಯನ ಮಗಳಾಗಿ ಜನಿಸಿ, ಶೈಲಪುತ್ರಿ ಎಂದು  ಹೆಸರುಗಳಿಸಿದ್ದಾಳೆ. ಶೈಲಪುತ್ರಿಯನ್ನು ಪಾರ್ವತಿ ಅಥವಾ ಹೇಮಾವತಿ ಎಂದೂ ಪೂಜಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಪೂಜಿಸಲು ಮೀಸಲಾಗಿದೆ. ಶೈಲಪುತ್ರಿಯ ಪಾದಕ್ಕೆ ಶುದ್ಧ ದೇಸಿ ತುಪ್ಪವನ್ನು ಅರ್ಪಿಸಿದರೆ ರೋಗಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ.

ಬ್ರಹ್ಮಚಾರಿಣಿ ದೇವಿ

ನವರಾತ್ರಿ ಎರಡನೇ ದಿನವನ್ನು ಬ್ರಹ್ಮಚಾರಿಣಿ ದೇವಿಗೆ ಸಮರ್ಪಿಸಲಾಗಿದೆ. ಆಕೆಯನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಸನ್ಯಾಸಿಗಳ ದೇವತೆಯಾಗಿ ಗುರುತಿಸಲಾಗುತ್ತದೆ. ಆಕೆಯನ್ನು ತಪಸ್ಯಾಚಾರಿಣಿ ಎಂದೂ ಕರೆಯುತ್ತಾರೆ. ಬ್ರಹ್ಮಚಾರಿಣಿ ದೇವಿಯು ಸರಳ ಆಹಾರ ಮತ್ತು ನೈವೇದ್ಯಗಳ ಪ್ರಿಯಳು. ಭಕ್ತರು ಬ್ರಹ್ಮಚಾರಿಣಿ ದೇವಿಗೆ ಸಕ್ಕರೆ ಮತ್ತು ಹಣ್ಣುಗಳ ನೈವೇದ್ಯ ಮಾಡುತ್ತಾರೆ.

ಚಂದ್ರಘಂಟಾ ದೇವಿ

ದುರ್ಗೆಯ ಮೂರನೇ ರೂಪವು ಚಂದ್ರಘಂಟಾ ದೇವಿ. ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ದೇವರು ಮತ್ತು ರಾಕ್ಷಸರ ನಡುವಿನ ಮಹಾಯುದ್ಧದ ಸಮಯದಲ್ಲಿ, ಅವಳ ಘಂಟಾ (ಗಂಟೆ) ಯಿಂದ ಉತ್ಪತ್ತಿಯಾಗುವ ಧ್ವನಿ ಕಂಪನಗಳು ಅನೇಕ ದುಷ್ಟ ಶತ್ರುಗಳ ಪ್ರಾಣ ಹಾರಿ ಹೋಗಿದ್ದವು. ಅಲ್ಲದೇ, ಈ ದೇವಿ ಎಲ್ಲಾ ದುಷ್ಟರನ್ನು ನಾಶಮಾಡುತ್ತಾಳೆ ಎಂದು ನಂಬಿಕೆ ಇದೆ. ದೇವಿಗೆ ಹಾಲು, ಸಿಹಿತಿಂಡಿ ಅಥವಾ ಪಾಯಸ ನೈವೇದ್ಯ ಮಾಡುವುದು ಬಹಳ ಒಳ್ಳೆಯದು.

ಕೂಷ್ಮಾಂಡಾ ದೇವಿ

ನವರಾತ್ರಿಯ ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಉಪವಾಸವನ್ನು ಆಚರಿಸುವ ಮೂಲಕ ದೇವಿಯನ್ನು ಪೂಜಿಸುವುದು ಉತ್ತಮ. ಈ ದಿನ ಮಾಲ್ಪೋವಾ ಸಿಹಿ ತಿಂಡಿಯನ್ನು ನೈವೇದ್ಯ ಮಾಡಲಾಗುತ್ತದೆ.  ದೇವಿ ಸ್ಕಂದಮಾತಾದುರ್ಗೆಯ ಐದನೇ ರೂಪ ಸ್ಕಂದಮಾತೆಯನ್ನು ನವರಾತ್ರಿಯ ಐದನೇ ದಿನದಂದು ಪೂಜಿಸಲಾಗುತ್ತದೆ. ಆಕೆಯ ನಿಲುವು ಶಾಂತ ಮತ್ತು ಪ್ರಶಾಂತವಾಗಿದೆ. ಈ ದಿನ ಬಾಳೆಹಣ್ಣು ಅಥವಾ ಅದರಿಂದ ಮಾಡಿದ ಪದಾರ್ಥಗಳ ನೈವೇದ್ಯವನ್ನು ದೇವಿಗೆ ಅರ್ಪಿಸಲಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿಯೇ ಈ ಫೇಸ್​ ಪ್ಯಾಕ್​ ತಯಾರಿಸಿ, ಸುಂದರ ತ್ವಚೆ ಪಡೆಯಿರಿ

ಕಾತ್ಯಾಯನಿ ದೇವಿ

ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಕಾತ್ಯಾಯನಿ ದೇವಿಯು ಶಕ್ತಿಯ ರೂಪವಾಗಿದ್ದು, ಕಾತ್ಯಾಯನಿ ದೇವಿಗೆ ಜೇನುತುಪ್ಪವನ್ನು ಪ್ರಸಾದವಾಗಿ ಅರ್ಪಿಸಬೇಕು. ಇದು ಜೀವನದಲ್ಲಿ ಕಹಿ ಹೋಗಲಾಡಿಸಲು ಸಂತೋಷ ನೆಲೆಸಿರುವಂತೆ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ.

ಕಾಳರಾತ್ರಿ ದೇವಿ

ನವರಾತ್ರಿಯ ಏಳನೇ ದಿನದಂದು ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ದುರ್ಗೆಯ ಉಗ್ರ ರೂಪ ಇದು. ಭಕ್ತರಿಗೆ ದುಷ್ಟ ಶಕ್ತಿಗಳು ಮತ್ತು ಶಕ್ತಿಗಳಿಂದ ರಕ್ಷಣೆ ನೀಡುತ್ತಾಳೆ ಎನ್ನುವ ನಂಬಿಕೆ ಇದೆ. ದೇವಿಗೆ ಬೆಲ್ಲ ಅಥವಾ ಬೆಲ್ಲದಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಬೇಕು.

ಮಹಾಗೌರಿ ದೇವಿ

ನವರಾತ್ರಿಯ ಎಂಟನೆ ದಿನವನ್ನು ಮಹಾಗೌರಿ ದೇವಿಗೆ ಸಮರ್ಪಿಸಲಾಗುತ್ತದೆ. ಮಹಾಗೌರಿ ದೇವಿಗೆ ತೆಂಗಿನಕಾಯಿಯನ್ನು ಅರ್ಪಿಸಬೇಕು. ಅಷ್ಟಮಿಯಂದು ಬ್ರಾಹ್ಮಣರಿಗೆ ತೆಂಗಿನಕಾಯಿಯನ್ನು ದಾನ ಮಾಡುವುದರಿಂದ ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಆಫೀಸ್​ನಿಂದ ಹಿಡಿದು ಮದುವೆಯವರೆಗೆ ನಿಮ್ಮ ಡ್ರೆಸ್​ಗೆ ಸೂಟ್​ ಆಗುವ ಕೆಲ ಜ್ಯೂವೆಲ್​ ಡಿಸೈನ್​ ಇಲ್ಲಿದೆ

ಸಿದ್ಧಿದಾತ್ರಿ

ಒಂಬತ್ತನೇ ದಿನದಂದು ಸಿದ್ಧಿದಾತ್ರಿ ಪೂಜಿಸಲಾಗುತ್ತದೆ. ಈ ದಿನ  ಎಳ್ಳನ್ನು ನೈವೇದ್ಯವಾಗಿ ಅರ್ಪಿಸಬೇಕು. ನಂಬಿದ ಭಕ್ತರ ಕಷ್ಟಗಳನ್ನು ಹೋಗಲಾಡಿಸುತ್ತಾಳೆ ತಾಯಿ ಎನ್ನುವ ನಂಬಿಕೆ ಇದೆ.
Published by:Sandhya M
First published: