Navratri 2022: ನವರಾತ್ರಿ ಹಬ್ಬದ ಸಮಯದಲ್ಲಿ ಈ ಸ್ಪೆಷಲ್​ ರೆಸಿಪಿಗಳನ್ನು ಮಿಸ್​ ಮಾಡ್ಬೇಡಿ

Best Navratri Recipes: ನವರಾತ್ರಿ ಎನ್ನುವ ಪದವು ದುರ್ಗಾ ದೇವಿಯನ್ನು ಪೂಜಿಸುವ ಒಂಬತ್ತು ಮಂಗಳಕರ ರಾತ್ರಿಗಳ ಸಂಕೇತವಾಗಿದ್ದು, ನವರಾತ್ರಿಯ ಸಮಯದಲ್ಲಿ ಹೆಚ್ಚಿನ ಜನರು ಮಾಂಸಾಹಾರವನ್ನು ತ್ಯಜಿಸುತ್ತಾರೆ ಮತ್ತು ಇತರರು ತಮ್ಮ ಊಟದಲ್ಲಿ ಈರುಳ್ಳಿ (Onion) ಮತ್ತು ಬೆಳ್ಳುಳ್ಳಿಯನ್ನು ಸಹ ತಿನ್ನುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವರಾತ್ರಿ (Navaratri) ಮತ್ತೆ ಬಂದಿದೆ. ಸಂಭ್ರಮ ಸಡಗರದಿಂದ ಹಬ್ಬ (Festival Celebration)  ಆಚರಿಸಲು ಜನ ಸಿದ್ದರಾಗಿದ್ದಾರೆ. ಕುಂಕುಮ, ಬಳೆಗಳು, ಹೂವುಗಳು ಮತ್ತು ರತ್ನದ ವಸ್ತ್ರಗಳಿಂದ ದೇವಿಯನ್ನು ಅಲಂಕರಿಸಿ ಜನ ಸಂತಸದಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ದಿನ 9 ದಿನಗಳ ಉಪವಾಸವನ್ನು (Fasting) ಸಹ ಹಲವಾರು ಜನ ಮಾಡುತ್ತಾರೆ. ಕೆಲವರು ಪೂರ್ಣ ಪ್ರಮಾಣದ ಉಪವಾಸ ಮಾಡಿ ಒಂದು ಹೊತ್ತು ಆಹಾರ ಸೇವನೆ (Food) ಮಾಡಿದರೆ ಕೆಲವರು ನಿರ್ದಿಷ್ಟವಾದ ಪದಾರ್ಥಗಳನ್ನು ಮಾತ್ರ ತಿನ್ನುತ್ತಾರೆ.  ನವರಾತ್ರಿ ಎನ್ನುವ ಪದವು ದುರ್ಗಾ ದೇವಿಯನ್ನು ಪೂಜಿಸುವ ಒಂಬತ್ತು ಮಂಗಳಕರ ರಾತ್ರಿಗಳ ಸಂಕೇತವಾಗಿದ್ದು, ನವರಾತ್ರಿಯ ಸಮಯದಲ್ಲಿ ಹೆಚ್ಚಿನ ಜನರು ಮಾಂಸಾಹಾರವನ್ನು ತ್ಯಜಿಸುತ್ತಾರೆ ಮತ್ತು ಇತರರು ತಮ್ಮ ಊಟದಲ್ಲಿ ಈರುಳ್ಳಿ (Onion) ಮತ್ತು ಬೆಳ್ಳುಳ್ಳಿಯನ್ನು ಸಹ ತಿನ್ನುವುದಿಲ್ಲ. ಸಾಬುದಾನ ಕಿಚಡಿ, ಫ್ರೂಟ್ ಚಾಟ್, ಖೀರ್ ಹೀಗೆ ಬೇರೆ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ.  

ನವರಾತ್ರಿಯ ಉಪವಾಸದ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ ಕೆಲ ಆಹಾರ ಪದಾರ್ಥಗಳ ಲಿಸ್ಟ್​ ಇಲ್ಲಿದೆ.

ಸಾಬುದಾನ ಕಿಚಡಿ

ಸಾಬುದಾನವು ಪಿಷ್ಟ ಅಥವಾ ಕಾರ್ಬೋಹೈಡ್ರೇಟ್‌ಗಳಿಂದ ತುಂಬಿರುತ್ತದೆ, ಇದು ಉಪವಾಸದ ಸಮಯದಲ್ಲಿ ನಿಮಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಸಾಬುದಾನ, ಕಡಲೆಕಾಯಿ ಮತ್ತು ಮಸಾಲೆಗಳೊಂದಿಗೆ ತಯಾರಿಸಿದ ಈ ಆಹಾರವನ್ನು ಸುಲಭವಾಗಿ ಸಹ ಮಾಡಬಹುದು. ನೀವು ಸಾಬುದಾನ ಖೀರ್ ಅಥವಾ ಸಾಬುದಾನ ವಡಾವನ್ನು ಸಹ ನೀವು ಈ ಸಮಯದಲ್ಲಿ ಮಾಡಬಹುದು.

ಇದನ್ನೂ ಓದಿ: ಆಫೀಸ್​ನಿಂದ ಹಿಡಿದು ಮದುವೆಯವರೆಗೆ ನಿಮ್ಮ ಡ್ರೆಸ್​ಗೆ ಸೂಟ್​ ಆಗುವ ಕೆಲ ಜ್ಯೂವೆಲ್​ ಡಿಸೈನ್​ ಇಲ್ಲಿದೆ

ಆಲೂಗೆಡ್ಡೆ ಕರಿ 

ಆಲೂಗಡ್ಡೆಗಳೊಂದಿಗೆ ತಯಾರಿಸಿದ ಈ ಕರಿ ಬಹಳ ರುಚಿಕರ ಹಾಗೂ ಉಪವಾಸಕ್ಕೆ ಬೆಸ್ಟ್​ ಸಹ. ಇದನ್ನು ಉತ್ತರ ಭಾರತದಲ್ಲಿ ಇದನ್ನು  ಆಲೂ ಕಧಿ ಎಂದು ಕರೆಯುತ್ತಾರೆ. ಇದನ್ನು ನೀವು ಸಹ ಮಾಡಿ ಸವಿಯಬಹುದು.

ಬಾಳೆಹಣ್ಣು ವಾಲ್‌ನಟ್ ಲಸ್ಸಿ

ಈ ಪೌಷ್ಟಿಕ ಆಹಾರ ಉಪವಾಸದ ಸಮಯದಲ್ಲಿ ನಿಮ್ಮ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಸರು, ಬಾಳೆಹಣ್ಣು, ಜೇನು ಮತ್ತು ವಾಲ್‌ನಟ್ಸ್‌ನಿಂದ ತಯಾರಿಸಿದ ಈ ಲಸ್ಸಿ ಬಹಳ ಆರೋಗ್ಯಕರ.

ಹಣ್ಣುಗಳ ಸಲಾಡ್​

ಪ್ರೋಟೀನ್​ಗಳನ್ನು ಹೊಂದಿರುವ ಹಣ್ಣುಗಳು ನಿಮಗೆ ಇಡೀ ದಿನ ಸಹಾಯ ಮಾಡುತ್ತದೆ. ಉಪವಾಸದ ಸಮಯದಲ್ಲಿ ಆರೋಗ್ಯಕರವಾಗಿ ಹಾಗೂ ಶಕ್ತಿಯುವಾಗಿ ಇಡಲು ಹಣ್ಣುಗಳ ಸೇವನೆ ಬಹಳ ಅವಶ್ಯಕ ಎಂಬುದು ನೆನಪಿಡಿ.ಹಾಗಾಗಿ ನೀವು ಸಲಾಡ್​ ಮಾಡಿಕೊಂಡು ತಿನ್ನುವುದು ಸೂಕ್ತ. ಸೇಬು, ಬಾಳೆಹಣ್ಣು, ಸಪೋಟ, ಪಪ್ಪಾಯ, ಕಲ್ಲಂಗಡಿ ಮತ್ತು ದ್ರಾಕ್ಷಿಯನ್ನು ಸೇರಿಸಿ ಸಲಾಡ್ ಮಾಡಿ ತಿನ್ನಿ.

ಮೊಸರು  

ಪ್ರೋಟೀನ್​ ಮತ್ತು ಕ್ಯಾಲೊರಿ ಹೊಂದಿರುವ ಮೊಸರು ಉಪವಾಸದ ಸಮಯದಲ್ಲಿ ಬಹಳ ಉತ್ತಮವಾದ ಆಹಾರ ಎನ್ನಲಾಗುತ್ತದೆ. ಹಾಗಾಗಿ ಈ ದಿನ ಮೊಸರನ್ನು ಬಳಸಿ ನಿಮಗೆ ಬೇಕಾದ ರುಚಿಕರ ಆಹಾರವನ್ನು ತಯಾರಿಸಿಕೊಂಡು ಸೇವನೆ ಮಾಡುವುದು ಬಹಳ ಸೂಕ್ತ. ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿದ್ದು ಮತ್ತು ಕಡಿಮೆ ಕೊಬ್ಬು ಇರುವುದರಿಂದ ನೀವು ಬೆಳಗ್ಗೆ ಸೇವನೆ ಮಾಡಿದರೆ ಬೇಗ ಹಸಿವಾಗುವುದಿಲ್ಲ. ಹಾಗೆಯೇ ಯೋಗರ್ಟ್​ ಸೇವನೆ ಮಾಡುವುದು ಸಹ ಒಳ್ಳೆಯ ಆಯ್ಕೆ.

ಇದನ್ನೂ ಓದಿ: ನವರಾತ್ರಿಯ 9 ದಿನಗಳು ದೇವಿಗೆ ಈ ನೈವೇದ್ಯ ಮಾಡಿದ್ರೆ ಬಹಳ ಒಳ್ಳೆಯದಂತೆ

ಮಖಾನ್ ಪಾಯಸ

ನಿಮಗೆ ಈ ಫೂಲ್ ಮಖಾನ್​ ಗೊತ್ತಿರಬಹುದು. ಕೆಲವರು ಇದನ್ನು ಕಮಲದ ಹೂವಿನ ಬೀಜ ಎಂದು ಸಹ ಕರೆಯುತ್ತಾರೆ. ಇದನ್ನು ಬಳಸಿ ಪಾಯಸ ಮಾಡಿ ಈ ಸಮಯದಲ್ಲಿ ತಿನ್ನಬಹುದು. ಮಖಾನಗಳನ್ನು ಬೇಕಾದರೆ ಕತ್ತರಿಸಿ, ಇಲ್ಲ ಹಾಗೆಯೇ ಬಿಡಿ. ಈಗ ಅದನ್ನು ಸುಮಾರು 15 ರಿಂದ 20 ನಿಮಿಷಗಳು ಹಾಲಿನಲ್ಲಿ ಚೆನ್ನಾಗಿ ಕುದಿಸಿ ಬೆಲ್ಲವನ್ನು ಹಾಕಿ ಜೊತೆಗೆ ಗೋಡಂಬಿ, ಬಾದಾಮಿ ಬೇಕಾದರೆ ಹಾಕಿ ಪಾಯಸ ಮಾಡಿ.
Published by:Sandhya M
First published: