ನೈಸರ್ಗಿಕ ಪದಾರ್ಥಗಳಿಂದ (Natural Ingredients) ನಿಮ್ಮ ಕೂದಲನ್ನು ತೊಳೆಯುವುದು (Hair Wash) ಮತ್ತು ನಿಮ್ಮ ಕೂದಲನ್ನು ವಿವಿಧ ಸಮಸ್ಯೆಗಳಿಂದ (Problems) ರಕ್ಷಿಸಲು ಮತ್ತು ಕೂದಲನ್ನು ಆರೋಗ್ಯಕರವಾಗಿಡಲು (Health) ಇದು ಸಹಾಯ ಮಾಡುತ್ತದೆ. ತಲೆಹೊಟ್ಟು ಮುಂತಾದ ಸಾಮಾನ್ಯ ಸಮಸ್ಯೆಗಳನ್ನು ತೊಡೆದು ಹಾಕಲು ನೀವು ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಕೆ ಮಾಡಬಹುದು. ತಲೆಹೊಟ್ಟು ನಿವಾರಣೆ ಮಾಡಲು ನೀವು ಆಮ್ಲಾ ಮತ್ತು ಬೇವಿನ ಜೊತೆ ಕೂದಲನ್ನು ರಕ್ಷಣೆ ಮಾಡಿಕೊಳ್ಳಬಹುದು. ಈ ಎರಡು ಅಂಶಗಳು ಕೂದಲಿಗೆ ತುಂಬಾ ಪ್ರಯೋಜನಕಾರಿ. ಕೂದಲು ತೊಳೆಯಲು ನಿಮಗೆ ಬೇಕಾಗುವ ವಸ್ತುಗಳು ಒಣಗಿದ ಬೇವಿನ ಎಲೆಗಳು ಮತ್ತು ಆಮ್ಲಾ ರಸ 10 ರಿಂದ 12 ಹನಿಗಳು.
ಬೇವು ಮತ್ತು ಆಮ್ಲಾದಿಂದ ಕೂದಲ ರಕ್ಷಣೆ
250 ಮಿಲಿ ನೀರನ್ನು ನೀವು ಕೂದಲಿಗೆ ಬಳಕೆ ಮಾಡಬಹುದು. ನಿಮ್ಮ ಕೂದಲನ್ನು ತೊಳೆದ ನಂತರ ಅದನ್ನು ಅನ್ವಯಿಸಿ. ನಿಮ್ಮ ನೆತ್ತಿ ಮತ್ತು ಕೂದಲಿನ ಉದ್ದಕ್ಕೂ ಅನ್ವಯಿಸುವುದು ತುಂಬಾ ಮುಖ್ಯ. ಉತ್ತಮ ಹೀರಿಕೊಳ್ಳುವಿಕೆಗಾಗಿ ಅದನ್ನು ನೆತ್ತಿಯ ಮೇಲೆ ಉಜ್ಜಿರಿ. ಇದನ್ನು 3 ರಿಂದ 5 ನಿಮಿಷಗಳ ಕಾಲ ಕಂಡೀಷನರ್ನಂತೆ ಬಿಡಿ.
ಈಗ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಪ್ರಕ್ರಿಯೆಯನ್ನು ಕ್ರಮೇಣ ಮಾಡುತ್ತ ಬನ್ನಿ. ಇದು ನಿಮ್ಮ ಕೂದಲಿನ ಆರೋಗ್ಯದಲ್ಲಿ ಸುಧಾರಣೆ ತರಲು ಸಹಾಯ ಮಾಡುತ್ತದೆ. ನೀವು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಇದನ್ನು ಬಳಸಬಹುದು.
ಇದನ್ನೂ ಓದಿ: ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಆಮ್ಲಾ ಮತ್ತು ಬೇವು ನಿಮ್ಮ ಕೂದಲಿಗೆ ಹೇಗೆ ಪ್ರಯೋಜನಕಾರಿಯಾಗಿದೆ
ಆಮ್ಲಾವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಅಗತ್ಯವಾದ ಜೀವಸತ್ವ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ್ದು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಸಂಶೋಧನೆಯ ಪ್ರಕಾರ, ಹಾಳಾದ ಕೂದಲಿನ ಆರೋಗ್ಯ ಸುಧಾರಿಸಲು ಆಮ್ಲಾ ಸಹಾಯ ಮಾಡುತ್ತದೆ.
ಕೂದಲು ಉದುರುವಿಕೆ ತಡೆಯುತ್ತದೆ ಮತ್ತು ತಲೆಹೊಟ್ಟು ನಿವಾರಣೆ ಮಾಡಲು ಸಹಕಾರಿ. ಆಮ್ಲಾ ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದಾಗಿ ಪರಾವಲಂಬಿ ಸೋಂಕಿನಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ.
ಕೂದಲು ತೊಳೆಯುವ ಮೊದಲು ಆಮ್ಲಾ ಹೇರ್ ಆಯಿಲ್ ಬಳಸಿ
ತೆಳ್ಳಗಿನ ಮತ್ತು ಒಣ ಕೂದಲಿನ ಸಮಸ್ಯೆ ನಿವಾರಿಸಲು, ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯುವ ಮೊದಲು ನೀವು ಆಮ್ಲಾ ಹೇರ್ ಆಯಿಲ್ ಬಳಸಬಹುದು. ಆಮ್ಲಾ ಎಣ್ಣೆಯು ಉತ್ತಮ ಕಂಡೀಷನರ್ ಮತ್ತು ಕೂದಲಿಗೆ ನೈಸರ್ಗಿಕ ಹೊಳಪು ನೀಡಲು ಸಹಾಯ ಮಾಡುತ್ತದೆ.
ತಲೆಹೊಟ್ಟು ಮತ್ತು ನೆತ್ತಿಯ ಸೋಂಕಿನ ಅಡ್ಡ ಪರಿಣಾಮ ಕಡಿಮೆ ಮಾಡುತ್ತದೆ ಬೇವು
ಬೇವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ. ಇದು ತಲೆಹೊಟ್ಟು ಮತ್ತು ನೆತ್ತಿಯ ಸೋಂಕಿನ ಅಡ್ಡ ಪರಿಣಾಮ ಕಡಿಮೆ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ, ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದೆ. ಮತ್ತು ಕೂದಲು ಉದುರುವಿಕೆ ತಡೆಗೆ ಸಹಕಾರಿ. ಬೇವು ಹೋಮಿಯೋಪತಿ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುವ ಮೂಲಿಕೆಯಾಗಿದೆ.
ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಈ ಪದಾರ್ಥಗಳಿದ್ದರೆ ಹೃದಯದ ಆರೋಗ್ಯಕ್ಕೆ ಬೆಸ್ಟ್ ಅಂತೆ!
ಹಲವು ರೀತಿಯಲ್ಲಿ ಕೂದಲಿಗೆ ಬೇವು ಬಳಕೆ ಮಾಡಿ
ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿ ವೈರಲ್, ಆಂಟಿ ಮೈಕ್ರೋಬಿಯಲ್, ಆಂಟಿ ಸೆಪ್ಟಿಕ್, ನೋವು ನಿವಾರಕ, ಆಂಟಿ ಪೈರೆಟಿಕ್, ಆಂಟಿ ಡಯಾಬಿಟಿಕ್ ಮತ್ತು ಆಂಟಿ ಫಂಗಲ್ ಗುಣಲಕ್ಷಣ ಹೊಂದಿವೆ. ಕೂದಲಿಗೆ ಬೇವನ್ನು ಹಲವು ರೀತಿಯಲ್ಲಿ ಬಳಸಬಹುದು. ಆಯುರ್ವೇದದ ಪ್ರಕಾರ, ಬೇವು, ಆಮ್ಲಾ, ಶಿಕಾಕಾಯಿ, ರೀತಾಗಳು ಕೂದಲಿಗೆ ಪ್ರಯೋಜನಕಾರಿಯಾದ ಗಿಡಮೂಲಿಕೆಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ