ಗಂಟಲು ನೋವು ಶಮನಕ್ಕೆ ಇಲ್ಲಿದೆ ಸರಳ ಮನೆಮದ್ದುಗಳು

natural remedies: ಗಂಟಲು ನೋವಿಗೆ ಅತ್ಯುತ್ತಮ ಔಷಧಿ ಎಂದರೆ ಬೆಳ್ಳುಳ್ಳಿ ಎಸಲುಗಳು. ಪ್ರತಿದಿನ ಎರಡು ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ನೋವು ಕಡಿಮೆಯಾಗುತ್ತದೆ.

zahir | news18-kannada
Updated:August 14, 2019, 2:46 PM IST
ಗಂಟಲು ನೋವು ಶಮನಕ್ಕೆ ಇಲ್ಲಿದೆ ಸರಳ ಮನೆಮದ್ದುಗಳು
ಸಾಂದರ್ಭಿಕ ಚಿತ್ರ
  • Share this:
ಮಳೆಗಾಲ ಮತ್ತು ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲಿ ಕಫ ಮತ್ತು ಕೆಮ್ಮು ಕೂಡ ಒಂದು. ಅದರಲ್ಲೂ ಈ ಸಮಸ್ಯೆಯಿಂದಾಗಿ ಗಂಟಲು ನೋವು ಸಹ ಕೆಲವೊಮ್ಮೆ ತಲೆದೂರುತ್ತದೆ. ಇದರಿಂದ ಆಹಾರ ಸೇವಿಸುವುದು ಕಷ್ಟವಾಗುತ್ತದೆ. ಈ ರೀತಿಯ ಸಮಸ್ಯೆ ಕಂಡು ಬರುತ್ತಿದ್ದರೆ ಕೆಲ ಮನೆಮದ್ದುಗಳ ಮೂಲಕ ಕೂಡ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಬೆಳ್ಳುಳ್ಳಿ ಮತ್ತು ಜೇನುತುಪ್ಪ:
ಬೆಳ್ಳುಳ್ಳಿ ಹಾಗೂ ಜೇನುತುಪ್ಪವನ್ನು ಮಿಶ್ರಣವನ್ನು ಮಾಡಿ ಗಂಟಲು ನೋವಿಗೆ ಪರಿಹಾರ ಕಾಣಬಹುದು. ಬೆಳ್ಳುಳ್ಳಿಯ ಎಸಲುಗಳನ್ನು ಜಜ್ಜಿ ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಸಿರಪ್ ರೂಪದಲ್ಲಿ ಮಾಡಿಟ್ಟು ಪ್ರತಿದಿನ ಕುಡಿಯುದರಿಂದ ಶೀಘ್ರ ನೋವು ನಿವಾರಣೆ ಆಗುತ್ತದೆ.

ಕರಿಮೆಣಸಿನ ಪುಡಿ:
ಚಳಿಗಾಲ ಹಾಗೂ ಶೀತದಿಂದ ಗಂಟಲು ನೋವಿನ ಸಮಸ್ಯೆ ಕಾಣಿಸಿಕೊಂಡರೆ ಕರಿಮೆಣಸಿನ ಪುಡಿ ಕಷಾಯ ಉತ್ತಮ ಮನೆಮದ್ದು. ಕರಿಮೆಣಸನ್ನು ಅರ್ಧ ಚಮಚ ಚಕ್ಕೆ ಪುಡಿ ಹಾಗೂ ಜೇನುತುಪ್ಪವನ್ನು ಮಿಶ್ರ ಮಾಡಿ ಸೇವಿಸಿದರೆ ನೋವಿಗೆ ಪರಿಹಾರ ಸಿಗುತ್ತದೆ.

ಬೆಳ್ಳುಳ್ಳಿ ಎಸಳುಗಳು:
ಗಂಟಲು ನೋವಿಗೆ ಅತ್ಯುತ್ತಮ ಔಷಧಿ ಎಂದರೆ ಬೆಳ್ಳುಳ್ಳಿ ಎಸಳುಗಳು. ಪ್ರತಿದಿನ ಎರಡು ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ನೋವು ಕಡಿಮೆಯಾಗುತ್ತದೆ. ಇನ್ನು ಹಸಿ ತಿನ್ನಲು ತೊಂದರೆಯಾದರೆ ಪ್ರತಿನಿತ್ಯದ ಆಹಾರದಲ್ಲೂ ಹೆಚ್ಚು ಬೆಳ್ಳುಳ್ಳಿ ಬಳಸಿ ಪರಿಹಾರ ಕಾಣಬಹುದು.ತುಳಸಿ ರಸ:
ಸಾಮಾನ್ಯವಾಗಿ ತುಳಸಿ ಗಿಡವು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ತುಳಸಿ ಎಲೆಯ ರಸಕ್ಕೆ ಬಿಸಿ ನೀರು, ಅರಿಶಿಣ ಮತ್ತು ಸೈಂಧವ ಉಪ್ಪು ಹಾಕಿ ಗಂಟಲನ್ನು ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ ಮತ್ತು ನಿಂಬೆ:
ಬೆಳ್ಳುಳ್ಳಿ ರಸ ಮತ್ತು ನಿಂಬೆರಸ ಕೂಡ ಗಂಟಲು ನೋವು ಶಮನಕ್ಕೆ ಸಿದ್ಧ ಔಷಧಿಯಾಗಿದೆ. ಬೆಳ್ಳುಳ್ಳಿ ರಸ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಅದನ್ನು ಸೇವಿಸುತ್ತಿದ್ದರೆ ಗಂಟಲು ನೋವು ಕಡಿಮೆಯಾಗುತ್ತದೆ. ಹಾಗೆಯೇ ಕಫದ ಸಮಸ್ಯೆಯು ದೂರವಾಗುತ್ತದೆ.

ಮೋಸಂಬಿ ಮತ್ತು ಜೇನುತುಪ್ಪ:
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಮೋಸಂಬಿಯಿಂದ ಕೂಡ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಮೋಸಂಬಿ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಗಂಟಲು ನೋವು ಕಡಿಮೆಯಾಗುತ್ತದೆ. ಹಾಗೆಯೇ ಗಂಟಲ ಕೆರೆತ ಸಹ ನಿವಾರಣೆಯಾಗುತ್ತದೆ.

ಶುಂಠಿ ಕಷಾಯ:
ಶುಂಠಿ ಕಷಾಯಕ್ಕೆ ಜೇನುತುಪ್ಪ ಮತ್ತು ನಿಂಬೆರಸವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಸಹ ಗಂಟಲು ನೋವು ನಿವಾರಣೆಯಾಗುತ್ತದೆ.

ಕಲ್ಲು ಸಕ್ಕರೆ:
ಗಂಟಲು ನೋವು ಅಥವಾ ಗಂಟಲು ಕೆರೆತದ ಸಮಯದಲ್ಲಿ ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಚೀಪುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಸಣ್ಣ ಮಕ್ಕಳಲ್ಲಿ ಕಾಡುವ ಗಂಟಲು ನೋವಿಗೆ ಅತ್ಯುತ್ತಮ ಮನೆ ಮದ್ದಾಗಿದೆ.
First published: August 14, 2019, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading