ಸಂಧಿವಾತದ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ

ಗಂಟು ನೋವಿನ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಗಿಡಮೂಲಿಕಾ ಉತ್ಪನ್ನಗಳು ಲಭ್ಯವಿದೆ. ಇವುಗಳಲ್ಲಿ ಹೆಚ್ಚಿನವು ತೈಲೋತ್ಪನಗಳು. ಹೀಗಾಗಿ ಇದನ್ನು ಬಳಸುವುದು ಕೂಡ ಸುಲಭ.

zahir
Updated:June 28, 2019, 4:07 PM IST
ಸಂಧಿವಾತದ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ
@D E
  • Share this:
ಕೀಲು ನೋವು ಅಥವಾ ಸಂಧಿವಾತ. ಸಾಮಾನ್ಯವಾಗಿ ಕಾಲು ಮತ್ತು ಕೈಗಳ ಸಣ್ಣ ಕೀಲುಗಳಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಒಂದು ರೀತಿಯ ತೀವ್ರ ಉರಿಯೂತದಿಂದ ಕೂಡಿರುವ ಈ ಸಮಸ್ಯೆಗೆ ಅನೇಕ ರೀತಿಯ ನೋವು ನಿವಾರಕ ಉಪಶಮನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವುಗಳನ್ನು ಹೆಚ್ಚುಕಾಲ ತೆಗೆದುಕೊಂಡರೆ ಉಂಟಾಗುವ ಅಡ್ಡ ಪರಿಣಾಮವನ್ನು ಅಲ್ಲೆಗೆಳೆಯುವಂತಿಲ್ಲ. ಹೀಗಾಗಿ ಸಂಧಿವಾತದ ಆರಂಭದ ಸಮಸ್ಯೆಯನ್ನು ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಉತ್ತಮ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಸಂಧಿವಾತದ ಸಮಸ್ಯೆಯನ್ನು ನೈಸರ್ಗಿಕವಾಗಿ ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂಬುದಕ್ಕೆ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇವುಗಳನ್ನು ಪಾಲಿಸುವ ಮೂಲಕ ಆರಂಭದ ಹಂತದಲ್ಲಿ ಕೀಲು ನೋವಿನಂತಹ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ತೂಕ ಇಳಿಸಿ:

ಸಂಧಿವಾತದ ಸಮಸ್ಯೆಗೆ ಮತ್ತೊಂದು ಕಾರಣ ದೇಹ ತೂಕ. ದೇಹ ಭಾರದ ಶೇ.50ಕ್ಕಿಂತಲೂ ಹೆಚ್ಚಿನ ತೂಕವು ಗಂಟುಗಳ ಮೇಲೆ ಬೀಳುವುದರಿಂದ ಸಹ ಈ ಸಮಸ್ಯೆ ತಲೆದೂರುತ್ತದೆ. ದೇಹದ ಹೆಚ್ಚಿನ ತೂಕವು ಮೊಣಕಾಲುಗಳು, ಗಂಟು ಮತ್ತು ತೊಡೆಗಳ ಮೇಲೆ ಬೀಳುವಂತೆ ಮಾಡುವ ಮೂಲಕ ಸಹ ನೋವಿನಿಂದ ಪಾರಾಗಬಹುದು. ಹಾಗೆಯೇ ದೇಹದ ಚಲನಶೀಲತೆಯನ್ನು ಹೆಚ್ಚಿಸಿ, ಗಂಟುಗಳ ಮೇಲಿನ ಹಾನಿ ತಡೆಯಬೇಕಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ದೇಹದ ತೂಕವನ್ನು ನಿಯಂತ್ರಣದಲ್ಲಿಡಬೇಕು. ಅಥವಾ ದೇಹ ತೂಕವನ್ನು ಇಳಿಸಬೇಕು.

ಮಸಾಜ್ ಮಾಡಿ:
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಂಧಿವಾತದ ಸಮಸ್ಯೆಗೂ ಗಂಟುಗಳಲ್ಲಿ ಕಾಣಿಸಿಕೊಳ್ಳುವಂತ ಬಿಗಿತ ಕೂಡ ಕಾರಣವಾಗಿರಬಹುದು. ಇದನ್ನು ದಿನನಿತ್ಯ ಮಸಾಜ್ ಮಾಡುವುದರಿಂದ ನಿವಾರಣೆ ಮಾಡಬಹುದು. ನೋವು ಕಾಣಿಸಿಕೊಳ್ಳುವ ಜಾಗದಲ್ಲಿ ತೈಲದಿಂದ ಮಸಾಜ್ ಮಾಡಿದರೆ ಬಿಗಿತ ಬಿಡುವುದಲ್ಲದೆ, ನೋವು ಸಹ ಕಡಿಮೆಯಾಗುತ್ತದೆ. ಅನುಭವಿ ಮಸಾಜ್ ಥೆರಾಪಿಸ್ಟ್​ಗಳಿಂದ ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ.

ಗಿಡಮೂಲಿಕಾ ಚಿಕಿತ್ಸೆ:ಗಂಟು ನೋವಿನ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಗಿಡಮೂಲಿಕಾ ಉತ್ಪನ್ನಗಳು ಲಭ್ಯವಿದೆ. ಇವುಗಳಲ್ಲಿ ಹೆಚ್ಚಿನವು ತೈಲೋತ್ಪನಗಳು. ಹೀಗಾಗಿ ಇದನ್ನು ಬಳಸುವುದು ಕೂಡ ಸುಲಭ. ಇಂತಹ ಗಿಡ ಮೂಲಿಕೆ ಔಷಧಿಗಳನ್ನು ಬಳಸಿ ಸಂಧಿವಾತದ ಸಮಸ್ಯೆಯನ್ನು ಆರಂಭದಲ್ಲೇ ಹೋಗಲಾಡಿಸಲು ಪ್ರಯತ್ನಿಸಬಹುದು. ಆದರೆ ಆ ಬಳಿಕವು ನೋವು ತೀವ್ರವಾಗುತ್ತಿದ್ದರೆ ವೈದ್ಯರ ಪರೀಕ್ಷೆಗೆ ಒಳಗಾಗುವುದು ಉತ್ತಮ.

ಧ್ಯಾನ ಮಾಡಿ:
ಧ್ಯಾನ ಮಾಡುವುದರಿಂದ ಒತ್ತಡ ಕಡಿಮೆಯಾಗುವುದಲ್ಲದೆ, ಸಂಧಿವಾತದ ಮೇಲೂ ಪರಿಣಾಮ ಬೀರುತ್ತದೆ. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿರುವಂತಹ ಸಂಶೋಧನೆಯಿಂದ ಧ್ಯಾನ ಅಭ್ಯಾಸ ಮಾಡಿದರೆ ಗಂಟು ನೋವು ನಿವಾರಣೆ ಆಗುತ್ತದೆ ಎಂದು ಹೇಳಲಾಗಿದೆ. ಧ್ಯಾನದಿಂದಾಗಿ ಹೇಗೆ ಖಿನ್ನತೆ ನಿವಾರಣೆ ಆಗುತ್ತದೆಯೋ ಅದೇ ರೀತಿಯಲ್ಲಿ ಸಂಧಿವಾತದ ಸಮಸ್ಯೆ ಇಲ್ಲವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅರಿಶಿನ ಬಳಕೆ:
ಅರಿಶಿನವನ್ನು ಭಾರತೀಯರು ಅಡುಗೆಯಲ್ಲಿ ಉಪಯೋಗಿಸುವುದಲ್ಲದೆ ಮನೆಮದ್ದಾಗಿಯು ಬಳಸುತ್ತಾರೆ. ಇದರಲ್ಲಿರುವ ಕರ್ಕ್ಯುಮಿನ್ ಅಂಶ ಗಂಟು ನೋವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಇರುವುದರಿಂದ ಸಂಧಿವಾತದ ವಿರುದ್ಧ ಅದ್ಭುತವಾಗಿ ಕೆಲಸ ಮಾಡುತ್ತದೆ.

ಅಕ್ಯುಪಂಕ್ಚರ್:
ಅಕ್ಯುಪಂಕ್ಚರ್ ಎನ್ನುವುದು ಪ್ರಾಚೀನ ಚೀನಾದ ವೈದ್ಯಕೀಯ ಚಿಕಿತ್ಸಾ ವಿಧಾನವಾಗಿದ್ದು, ಈ ವಿಧಾನದಲ್ಲಿ ಕೆಲವೊಂದು ಬಿಂದುಗಳ ಮೇಲೆ ಸೂಜಿ ಹಾಕಲಾಗುತ್ತದೆ. ಇದು ಶಕ್ತಿಯನ್ನು ಮರಳಿ ಪಡೆಯುವಂತೆ ಮಾಡುವುದಲ್ಲದೆ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಸಂಧಿವಾತದ ನೋವಿಗೆ ಅಕ್ಯುಪಂಕ್ಚರ್ ವಿಧಾನ ಉತ್ತಮ ಎಂದು ಸಂಶೋಧನೆಗಳು ಹೇಳಿವೆ. ಹೀಗಾಗಿ ಸಂಧಿವಾತದ ಚಿಕಿತ್ಸೆ ಪಡೆಯಲು ನೀವು ಅನುಭವಿ ಅಕ್ಯುಪಂಕ್ಚರ್ ತಜ್ಞರನ್ನು ಭೇಟಿಯಾಗುವುದು ಉತ್ತಮ.

ಇದನ್ನೂ ಓದಿ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಯನ್ನು 'ಲಫಂಗಾ' ಎಂದು ಜರಿದ ಪತ್ನಿ ಹಸೀನ್..!
First published:June 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ