ಜಿರಳೆ ಕಾಟ ತಪ್ಪಿಸಲು ಇಲ್ಲಿದೆ ಸುಲಭ ಉಪಾಯ

home remedies: ಲವಂಗವನ್ನು ಕಿಚನ್ ಡ್ರಾಯರ್‌ಗಳಲ್ಲಿ ಇರಿಸಿದರೂ ಜಿರಲೆಗಳು ಬರುವುದಿಲ್ಲ. ಇದರ ವಾಸನೆಯಿಂದ ಜಿರಳೆಗಳು ಹೊರ ಹೋಗುತ್ತವೆ. ವಾರಕ್ಕೊಮ್ಮೆ ಜಿರಳೆಗಳಿರುವ ಜಾಗದಲ್ಲಿ ಲವಂಗವನ್ನು ಇರಿಸುವುದರಿಂದ ಕೀಟಗಳ ತೊಂದರೆಯನ್ನು ದೂರ ಮಾಡಬಹುದು.

zahir | news18-kannada
Updated:August 23, 2019, 1:10 PM IST
ಜಿರಳೆ ಕಾಟ ತಪ್ಪಿಸಲು ಇಲ್ಲಿದೆ ಸುಲಭ ಉಪಾಯ
cockroaches
zahir | news18-kannada
Updated: August 23, 2019, 1:10 PM IST
ಮನೆ ಮಳಿಗೆ ಎಂದ ಮೇಲೆ ಕೀಟಗಳ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ ಇದು ಸಾಮಾನ್ಯ ಸಮಸ್ಯೆಯಂತು ಅಲ್ಲ. ಏಕೆಂದರೆ ಮನೆ ಎಷ್ಟೇ ಸ್ವಚ್ಛಂದವಾಗಿದ್ದರೂ ಅತಿಥಿಗಳ ಬಂದಾಗ ಒಂದು ಜಿರಲೆ ಕಾಣಿಸಿಕೊಂಡರೂ ಮುಜುಗರಕ್ಕೀಡಾಗುತ್ತೀರಿ. ಹಾಗೆಯೇ ಅಡುಗೆ ಕೋಣೆಯಲ್ಲಿ ಜಿರಳೆಗಳು ಹೆಚ್ಚಾದಂತೆ ಅಪಾಯ ಕಟ್ಟಿಟ್ಟಬುತ್ತಿ. ಮನೆಯಲ್ಲಿರಿಸಿದ ಆಹಾರಗಳ ಮೇಲೆ  ಜಿರಳೆಗಳು ಓಡಾಡುವುದರಿಂದ ಫುಡ್​ ಪಾಯಿಸನ್ ಹಾಗೂ ಇನ್ನಿತರ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯವಾಗಿ ಜಿರಳೆಗಳು ತೇವಾಂಶ ಮತ್ತು ಕತ್ತಲೆಯಲ್ಲಿ ಬಹಳ ವೇಗವಾಗಿ ಮತ್ತು ಸುಲಭವಾಗಿ ಸಂತಾನೋತ್ಪತಿ ಮಾಡಿಕೊಳ್ಳುತ್ತವೆ. ಅವುಗಳನ್ನು ತೊಡೆದುಹಾಕುವುದು ಕೂಡ ಅಷ್ಟು ಸುಲಭವಲ್ಲ. ಏಕೆಂದರೆ ಇಂದಿನ ಮಾಡ್ಯುಲರ್ ಅಡಿಗೆ ಮನೆಗಳಲ್ಲಿ ಅವರು ಸಾಕಷ್ಟು ಮರೆಮಾಚುವ ಸ್ಥಳಗಳನ್ನು ಕೀಟಗಳು ಬಹಳ ಸುಲಭವಾಗಿ ವಾಸಸ್ಥಾನವಾಗಿಸುತ್ತದೆ. ಕತ್ತಲೆ ಹೊಂದಿರುವ ಜಾಗ ಮತ್ತು ನೀರಿನ ಸಿಂಕ್‌ನಿಂದ ತೇವಾಂಶ ಹೊಂದಿರುವ ಸ್ಥಳಗಳು ಜಿರಳೆಗಳಿಗೆ ಅನುಕೂಲಕರವಾಗಿರುತ್ತದೆ.

ಜಿರಳೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಕೀಟನಾಶಕಗಳಿದ್ದರೂ, ಅವುಗಳ ಬಳಕೆಯಿಂದ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಅಲರ್ಜಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಅವುಗಳನ್ನು ಹೇಗೆ ತೊಡೆದುಹಾಕಬೇಕು ಎಂದು ನಾವು ನಿಮಗೆ ತಿಳಿಸುತ್ತೇವೆ.

1- ಬೇ ಎಲೆಗಳ ಬಳಕೆ: ಅಡುಗೆಮನೆಯಲ್ಲಿ ಜಿರಳೆಗಳನ್ನು ಹೋಗಲಾಡಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಬೇ ಎಲೆಗಳ ಬಳಕೆ. ಅಡುಗೆಮನೆಯ ವಿವಿಧ ಮೂಲೆಗಳಲ್ಲಿ ಬೇ ಎಲೆಗಳನ್ನು ಅರೆದು ಇಟ್ಟುಬಿಡಿ. ಇದರ ಸುಗಂಧದಿಂದ ಜಿರಳೆಗಳು ಓಡಿಹೋಗುತ್ತವೆ. ಹಾಗೆಯೇ ಇದನ್ನು ಬದಲಾಯಿಸುತ್ತಿದ್ದರೆ ಜಿರಳೆಗಳು ಸಮಸ್ಯೆ ಇರುವುದಿಲ್ಲ.

2 - ಲವಂಗಗಳ ಬಳಕೆ: ಲವಂಗವನ್ನು ಕಿಚನ್ ಡ್ರಾಯರ್‌ಗಳಲ್ಲಿ ಇರಿಸಿದರೂ ಜಿರಲೆಗಳು ಬರುವುದಿಲ್ಲ. ಇದರ ವಾಸನೆಯಿಂದ ಜಿರಳೆಗಳು ಹೊರ ಹೋಗುತ್ತವೆ. ವಾರಕ್ಕೊಮ್ಮೆ ಜಿರಳೆಗಳಿರುವ ಜಾಗದಲ್ಲಿ ಲವಂಗವನ್ನು ಇರಿಸುವುದರಿಂದ ಕೀಟಗಳ ತೊಂದರೆಯನ್ನು ದೂರ ಮಾಡಬಹುದು.

3 - ಬೋರಿಕ್ ಪೌಡರ್ ಮತ್ತು ಸಕ್ಕರೆಯ ಮಿಶ್ರಣ: ಬೋರಿಕ್ ಪುಡಿ ಮತ್ತು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಜಿರಲೆಗಳಿರುವ ಮೂಲೆಗಳಲ್ಲಿ ಇರಿಸಿ. ವಿಶೇಷವಾಗಿ ಹೆಚ್ಚು ಕತ್ತಲೆ ಮತ್ತು ತೇವಾಂಶ ಇರುವ ಸ್ಥಳಗಳಲ್ಲಿ ಈ ಮಿಶ್ರಣವನ್ನು ಹಾಕಿದರೆ ಜಿರಲೆಗಳು ಓಡಿ ಹೋಗುತ್ತವೆ.

4- ಬೇವಿನ ಬಳಕೆ:  ಬೇವು ಮತ್ತು ಅದರ ಎಲೆಗಳು ಅನೇಕ ಸಮಸ್ಯೆಗಳಿಗೆ ರಾಮಬಾಣ. ಹಾಗೆಯೇ ಜಿರಳೆಗಳನ್ನು ತೊಡೆದುಹಾಕಲು ನೀವು ಬೇವಿನ ಎಣ್ಣೆ ಅಥವಾ ಪುಡಿ ಎರಡನ್ನೂ ಬಳಸಬಹುದು. ರಾತ್ರಿಯ ವೇಳೆ ಅಡುಗೆಮನೆಯಲ್ಲಿ ಮತ್ತು ಒದ್ದೆಯಾದ ಸ್ಥಳದಲ್ಲಿ ಬೇವಿನ ಎಣ್ಣೆ ಅಥವಾ ಪುಡಿಯನ್ನು ಹಾಕಿದರೆ ಜಿರಲೆಗಳು ಬರುವುದಿಲ್ಲ. ದಿನ ಕಳೆದಂತೆ ಇದೇ ಕ್ರಮವನ್ನು ಪುನರಾವರ್ತಿಸುತ್ತಿದ್ದರೆ ಜಿರಲೆ ಸಮಸ್ಯೆ ಮಾಯವಾಗುತ್ತವೆ.
Loading...

First published:August 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...