Health Tips: ಪಾದದ ನೋವು ನಿವಾರಣೆಗೆ ಇಲ್ಲಿದೆ ಸಿಂಪಲ್ ಸಲಹೆಗಳು..!

Home Remedies: ಲವಂಗದಲ್ಲಿ ನೋವು ನಿವಾರಕ ಅಂಶಗಳಿವೆ. ಲವಂಗ ಎಣ್ಣೆಯನ್ನು ಪಾದಗಳಿಗೆ ಮಸಾಜ್ ಮಾಡುವುದರಿಂದ ಪಾದದ ನೋವು ನಿವಾರಣೆಯಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪಾದದ ನೋವು ಮತ್ತು ಹಿಮ್ಮಡಿ ನೋವಿನಿಂದ ಅನೇಕ ಜನರು ಬಳುತ್ತಿರುತ್ತಾರೆ. ಇದಕ್ಕೆ ಒಂದು ಕಾರಣ ಹೈ ಹೀಲ್ಡ್ ಪಾದರಕ್ಷೆ ಧರಿಸುವುದು ಎಂದರೆ ತಪ್ಪಾಗಲಾರದು. ಇದಲ್ಲದೆ, ಹೊಸ ಮತ್ತು ಕಷ್ಟಕರವಾದ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಿಂದಾಗಿ ಹಿಮ್ಮಡಿ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ, ಪಾದದ ನೋವು ತುಂಬಾ ಹೆಚ್ಚಾಗುತ್ತದೆ. ಇದರಿಂದ ಅಸಹನೀಯ ನೋವು ಮತ್ತು ಪಾದಗಳ ಕೆಳಗಿನ ಭಾಗದಲ್ಲಿ ಉರಿಯುವ ಅನುಭವವಾಗುತ್ತದೆ. ಕ್ಯಾಲ್ಸಿಯಂ ಕೊರತೆಯು ಪಾದದ ನೋವಿಗೆ ಒಂದು ಕಾರಣವಾಗಬಹುದು. ಕ್ಯಾಲ್ಸಿಯಂ ಕೊರತೆಯು ಮೂಳೆಗಳಲ್ಲಿ ನೋವು ಉಂಟುಮಾಡುತ್ತದೆ ಮತ್ತು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಆದರೆ ಪಾದದ ನೋವಿನಿಂದ ಪರಿಹಾರ ಪಡೆಯಲು ನೀವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. ಹಾಗಿದ್ರೆ ಪಾದದ ನೋವನ್ನು ನಿವಾರಿಸುವಂತಹ ಕೆಲ ಮನೆಮದ್ದುಗಳ ಬಗ್ಗೆ ತಿಳಿಯೋಣ.

    ಶುಂಠಿ ಕಷಾಯ: ಶುಂಠಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಪಾದದ ನೋವನ್ನು ನಿವಾರಿಸಲು ಶುಂಠಿ ಸಹಾಯ ಮಾಡುತ್ತದೆ. ಶುಂಠಿ ಕಷಾಯವನ್ನು ಕುಡಿಯುವುದರಿಂದ ಪಾದದ ನೋವು ಮತ್ತು ಉರಿಯೂತವನ್ನು ನಿವಾರಿಸಬಹುದು.

    ಲವಂಗ ಎಣ್ಣೆ: ಲವಂಗದಲ್ಲಿ ನೋವು ನಿವಾರಕ ಅಂಶಗಳಿವೆ. ಲವಂಗ ಎಣ್ಣೆಯನ್ನು ಪಾದಗಳಿಗೆ ಮಸಾಜ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.

    ಅರಿಶಿನ: ಅರಿಶಿನವನ್ನು ತರಕಾರಿ ರುಚಿಯನ್ನು ಹೆಚ್ಚಿಸಲು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ . ಅದೇ ಅರಿಶಿನದಲ್ಲಿ ಉರಿಯೂತವನ್ನು ಕಡಿಮೆಗೊಳಿಸುವ ಗುಣಗಳಿದ್ದು, ಇದರ ಸೇವನೆಯು ಪಾದದ ನೋವು ಕಡಿಮೆ ಮಾಡುತ್ತದೆ. ಇದಕ್ಕಾಗಿ ನೀವು ಅರಿಶಿನ ಹಾಲು ಕುಡಿಯುವ ಮೂಲಕ ಪರಿಹಾರ ಕಾಣಬಹುದು.

    ಸಾಸಿವೆ ಬೀಜಗಳು: ಸಾಸಿವೆ ಬೀಜಗಳನ್ನು ಎಣ್ಣೆ ತಯಾರಿಸಲು ಮತ್ತು ಟೆಂಪರಿಂಗ್‌ಗೆ ಮಸಾಲೆಗಳಾಗಿ ಬಳಸಲಾಗುತ್ತದೆ. ಆದರೆ ಸಾಸಿವೆ ಬೀಜಗಳು ಪಾದದ ನೋವನ್ನು ನಿವಾರಿಸುತ್ತದೆ. ಈ ಬೀಜವನ್ನು ಸಣ್ಣ ಬಟ್ಟಲಿನಲ್ಲಿ ಪುಡಿಮಾಡಿ. ಅವುಗಳನ್ನು ಬಕೆಟ್ ಬಿಸಿ ನೀರಿನಲ್ಲಿ ಬೆರೆಸಿ. ನಿಮ್ಮ ಪಾದಗಳನ್ನು ಈ ನೀರಿನಲ್ಲಿ 15 ನಿಮಿಷಗಳ ಕಾಲ ಇರಿಸಿ. ಹೀಗೆ ಮಾಡುವುದರಿಂದ ನೀವು ಪಾದದ ನೋವಿನಿಂದ ಪರಿಹಾರ ಪಡೆಯಬಹುದು.
    Published by:zahir
    First published: