Hair Straightening: ಮನೆಯಲ್ಲಿಯೇ ಹೇರ್ ಸ್ಟ್ರೈಟ್ನಿಂಗ್ ಮಾಡ್ಕೋಬೇಕಾ? ಹಾಗಿದ್ರೆ ಇಲ್ಲಿದೆ ಟಿಪ್ಸ್

ಸ್ಟ್ರೈಟ್ನಿಂಗ್ ಮಾಡಿಕೊಳ್ಳಲು ಸ್ವಲ್ಪ ಹಣ ಕೂಡ ವೆಚ್ಚಮಾಡಬೇಕಾಗುತ್ತದೆ. ಹೀಗಾಗಿ ಹಲವರು ಇದರ ಸಹವಾಸವೇ ಬೇಡ ಅಂತಾ ದೂರು ಉಳಿದು ಬಿಡುತ್ತಾರೆ. ಆದರೆ ನೇರವಾದ ಕೂದಲು ಪಡೆಯುವ ಆಸೆ ಮಾತ್ರ ಹಾಗೆಯೇ ಇರುತ್ತದೆ. ಹಾಗಿದ್ರೆ ಇನ್ಮೇಲೆ ಈ ಚಿಂತೆ ಬೇಡ! ಏಕೆಂದರೆ ಮನೆಯಲ್ಲಿಯೇ ಸ್ಟ್ರೈಟ್ನರ್ ಕ್ರೀಮ್ ತಯಾರಿಸುವ ಅತ್ಯಂತ ಪರಿಣಾಮಕಾರಿ ವಿಧಾನವೊಂದನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಗುಂಗುರು ಕೂದಲಿದ್ದರೆ (Curly Hair) ಅಯ್ಯೋ ನನ್ನ ಕೂದಲು ನೀಳವಾಗಿ, ನೇರವಾಗಿ ಇರಬೇಕಿತ್ತು ಅನ್ನೋ ಆಸೆ, ಅದೇ ನೀಳವಾದ ಕೂದಲಿದ್ದರೆ ನನಗೆ ಕರ್ಲಿ ಹೇರ್ ಇರಬೇಕಿತ್ತು ಅನ್ನೋ ಬಯಕೆ. ಈ ರೀತಿ ಹೆಣ್ಣು ಮಕ್ಕಳು ಅಂದುಕೊಳ್ಳೋದು ಸಹಜ. ನೀವು ಕೂಡ ಹೀಗೆ ಅಂದುಕೊಳ್ಳುವವರಲ್ಲಿ ಖಂಡಿತ ಒಬ್ಬರಾಗಿರುತ್ತೀರಿ. ಆದರೆ ಗುಂಗುರು ಕೂದಲಿನ ಮಹಿಳೆಯರು (Women's), ತಮ್ಮ ಜೀವನದಲ್ಲಿ ಒಮ್ಮೆಯಾದರೂ ನೇರ ಕೂದಲು (Straight Hair) ಹೊಂದಲು ಬಯಸುತ್ತಾರೆ. ಅದಕ್ಕೆ ಅಂತಾನೆ ಯುವತಿಯರು ಪಾರ್ಲರ್ ಗಳಲ್ಲಿ (Parlor) ಶಾಶ್ವತವಾಗಿ ಕೂದಲನ್ನು ನೇರ ಮಾಡಿಸಿಕೊಳ್ಳುತ್ತಾರೆ. ಸ್ಟ್ರೈಟ್ನಿಂಗ್ (Straightening) ಮಾಡಿಕೊಳ್ಳಲು ಹೀಟಿಂಗ್ ಪ್ರಕ್ರಿಯೆ ಮಾಡಿಸಿಕೊಳ್ಳಬೇಕಾಗಿದ್ದು ಅದು ಕೂದಲಿನ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು.

ಸ್ಟ್ರೈಟ್ನಿಂಗ್ ಮಾಡಿಕೊಳ್ಳಲು ಸ್ವಲ್ಪ ಹಣ ಕೂಡ ವೆಚ್ಚಮಾಡಬೇಕಾಗುತ್ತದೆ. ಹೀಗಾಗಿ ಹಲವರು ಇದರ ಸಹವಾಸವೇ ಬೇಡ ಅಂತಾ ದೂರು ಉಳಿದು ಬಿಡುತ್ತಾರೆ. ಆದರೆ ನೇರವಾದ ಕೂದಲು ಪಡೆಯುವ ಆಸೆ ಮಾತ್ರ ಹಾಗೆಯೇ ಇರುತ್ತದೆ. ಆದರೆ ಇನ್ಮೇಲೆ ಈ ಚಿಂತೆ ಬೇಡ ಏಕೆಂದರೆ ಮನೆಯಲ್ಲಿಯೇ ಸ್ಟ್ರೈಟ್ನರ್ ಕ್ರೀಮ್ ತಯಾರಿಸುವ ಅತ್ಯಂತ ಪರಿಣಾಮಕಾರಿ ವಿಧಾನವೊಂದನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಈ ವಿಧಾನವು ಅತ್ಯಲ್ಪ ವೆಚ್ಚದ, ಅಡ್ಡ ಪರಿಣಾಮಗಳಿಲ್ಲದ ವಿಧಾನವಾಗಿದ್ದು, ನಿಮ್ಮ ಗುಂಗುರು ಕೂದಲಗಳನ್ನು ಸ್ಟ್ರೈಟ್ ಮಾಡುವಲ್ಲಿ ಸಹಕರಿಸುತ್ತದೆ.

ಹರ್ಬಲ್ ಹೇರ್ ಸ್ಟ್ರೈಟ್ನರ್ ಕ್ರೀಮ್ ತಯಾರಿಸುವ ಸರಳ ಮತ್ತು ಪರಿಣಾಮಕಾರಿ ವಿಧಾನ
ಹರ್ಬಲ್ ಹೇರ್ ಸ್ಟ್ರೈಟ್ನರ್ ಕ್ರೀಮ್‌ಗೆ ಬೇಕಾದ ವಸ್ತು

  • 2-3 ಸ್ಪೂನ್ ಬೇಯಿಸಿದ ಹಳೆಯ ಅನ್ನ

  • 1 ಚಮಚ ಕೆನೆ

  • 1 ಕಪ್ ತೆಂಗಿನ ಹಾಲು

  • 1 ಮೊಟ್ಟೆಯ ಬಿಳಿಭಾಗ

  • ತೆಂಗಿನ ಎಣ್ಣೆ 1 ಚಮಚ

  • 1 ಚಮಚ ನಿಂಬೆ ರಸ

  • ಅಲೋವೆರಾ ಜೆಲ್, ಅಗತ್ಯವಿದ್ದರೆ


ಇದನ್ನೂ ಓದಿ:  Side effects of having Tea: ಚಹಾ ಸೇವನೆಯಿಂದಾಗುವ ದುಷ್ಪರಿಣಾಮಗಳಿವು!

ವಿಧಾನ
ಮೊದಲು, ಒಂದು ಬಟ್ಟಲಿನಲ್ಲಿ ಅನ್ನ, ತೆಂಗಿನ ಹಾಲು, ಕೆನೆ, ಮೊಟ್ಟೆ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ನೀವು ಅಲೋವೆರಾ ಜೆಲ್ ಅನ್ನು ಕೂಡ ಇದಕ್ಕೆ ಸೇರಿಸಬಹುದು. ಮಿಶ್ರಣವು ತೆಳುವಾದ ಹದಕ್ಕೆ ಬರುವಂತೆ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಮುಗಿದ ನಂತರ, ತೆಂಗಿನ ಎಣ್ಣೆಯನ್ನು ಇದಕ್ಕೆ ಸೇರಿಸಿ. ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ.

ಕೂದಲಿಗೆ ಈ ಮಿಶ್ರಣ ಹಚ್ಚುವುದು ಹೇಗೆ?
ಮೊದಲನೆಯದಾಗಿ, ಕೂದಲನ್ನು ಸ್ವಚ್ಚಗೊಳಿಸಿ ಗಂಟುಗಳಿಲ್ಲದಂತೆ ಬಿಡಿಸಿ ಬಾಚಿಕೊಳ್ಳಿ. ನಂತರ ಕೂದಲನ್ನು ಮಧ್ಯದಿಂದ ಭಾಗಿಸಿ ಮತ್ತು ಬಲ ಭಾಗಕ್ಕೆ ಕ್ಲಿಪ್ ಹಾಕಿಕೊಳ್ಳಿ. ಬ್ರಷ್ ಮತ್ತು ಬಾಚಣಿಗೆ ತೆಗೆದುಕೊಳ್ಳಿ ಇದರಿಂದ ನೀವು ಮಿಶ್ರಣವನ್ನು ಕೂದಲು ಮತ್ತು ನೆತ್ತಿಗೆ ಅನ್ವಯಿಸಿ.

ಇದನ್ನೂ ಓದಿ:  Skin Care Tips: ನಲವತ್ತರ ಹರೆಯದಲ್ಲೂ ಯಂಗ್ ಆಗಿ ಕಾಣುವ ನಟಿ ಊರ್ವಶಿ ಧೋಲಾಕಿಯಾ ಬ್ಯೂಟಿ ಸೀಕ್ರೆಟ್​​ ಇದಂತೆ

ಇನ್ನೊಂದು ಬದಿಗೂ ಅದೇ ವಿಧಾನವನ್ನು ಅನುಸರಿಸಿ. ಮಿಶ್ರಣವನ್ನು ಒಂದು ಅಥವಾ ಎರಡು ಗಂಟೆಗಳ ಕಾಲ ಕೂದಲಿನ ಮೇಲೆ ಇರಿಸಿ. ಅದರ ನಂತರ ಕೂದಲನ್ನು ತೊಳೆಯಿರಿ. ನಿಮ್ಮ ಕೂದಲನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯುವುದನ್ನು ಖಚಿತಪಡಿಸಿಕೊಳ್ಳಿ. ಉತ್ತಮ ಫಲಿತಾಂಶಗಳಿಗಾಗಿ, ವಾರಕ್ಕೆ ಎರಡು ಬಾರಿ ಈ ಹರ್ಬಲ್ ಹೇರ್ ಸ್ಟ್ರೈಟ್ನರ್ ಕ್ರೀಮ್ ಅನ್ನು ಅನ್ವಯಿಸಿ.

ಪ್ರಯೋಜನಗಳು
ಸರಿಯಾಗಿ ಈ ಕ್ರಮವನ್ನು ವಾರಕ್ಕೆ ಎರಡು ಬಾರಿ ಅನ್ವಯಿಸುತ್ತಾ ಬಂದರೆ, ನೇರವಾದ, ಹೊಳೆಯುವ ಮತ್ತು ಮೃದುವಾದ ಕೂದಲು ನಿಮ್ಮದಾಗುತ್ತದೆ. ಅಲ್ಲದೇ ಈ ಕ್ರೀಮಿನೊಂದಿಗೆ ನೀವು ಹಾನಿಗೊಳಗಾದ ಕೂದಲು ಅಥವಾ ಒಡೆದ ತುದಿಗಳನ್ನು ಸಹ ನಿವಾರಿಸಬಹುದು. ಬಿಳಿ ಕೂದಲನ್ನು ನಿಯಂತ್ರಿಸಲು ಸಹ ಈ ಕ್ರೀಮ್ ಪರಿಣಾಮಕಾರಿಯಾಗಿದೆ. ಕೆಲವೇ ದಿನಗಳಲ್ಲಿ ನೀವು ಈ ವಿಧಾನದ ಪ್ರಯೋಜನ ಪಡೆಯಬಹುದು ಮತ್ತು ನೇರವಾದ ಕೂದಲಿನಿಂದ ಬಗೆ ಬಗೆಯ ಹೇರ್ ಸ್ಟೈಲ್ ಕೂಡ ಮಾಡಿಕೊಂಡು ನಿಮ್ಮ ಕನಸನ್ನು ನೆರವೇರಿಸಕೊಳ್ಳಬಹುದು.
Published by:Ashwini Prabhu
First published: