ಕೂದಲು ಉದುರುವಿಕೆಗೆ ಪ್ರಮುಖವಾಗಿ ಏನು ಕಾರಣ ಗೊತ್ತಾ?

ಕೂದಲು ಉದುರುತ್ತಿದೆ ಎಂಬ ಆತಂಕವೇ ಇಂದು ಕೇಶ ಉದುರುವಿಕೆಗೆ ಕಾರಣ ಎನ್ನುತ್ತಾರೆ ವೈದ್ಯರು. ಸಾಮಾನ್ಯವಾಗಿರುವ ಒತ್ತಡದೊಂದಿಗೆ ತಲೆಗೂದಲು ಉದುರುತ್ತಿದೆ ಎಂಬ ಆತಂಕ ಮತ್ತಷ್ಟು ಕೂದಲನ್ನು ಇಲ್ಲದಂತೆ ಮಾಡುತ್ತದೆ.

zahir | news18
Updated:May 15, 2019, 6:20 PM IST
ಕೂದಲು ಉದುರುವಿಕೆಗೆ ಪ್ರಮುಖವಾಗಿ ಏನು ಕಾರಣ ಗೊತ್ತಾ?
@marketwatch.com
  • News18
  • Last Updated: May 15, 2019, 6:20 PM IST
  • Share this:
ತಲೆ ಕೂದಲು ಎಂಬುದು ಸೌಂದರ್ಯದ ಪ್ರತೀಕ. ಇದುವೇ ಆಧುನಿಕ ಜೀವನಶೈಲಿಯ ಹೊಸ ಚಿಂತೆಗೆ ಕಾರಣವಾಗುತ್ತಿದೆ. ಕೂದಲಿನ ಬಗ್ಗೆ ಕಾಳಜಿವಹಿಸದಿರುವುದೇ ಇಂದು ಕೂದಲು ಉದುರುವಿಕೆ ಕಾರಣ ಎನ್ನಬಹುದಾದರೂ, ಈ ಸಮಸ್ಯೆಗೆ ನಮ್ಮ ಆರೋಗ್ಯ ಕೂಡ ಅಷ್ಟೇ ಕಾರಣ ಎನ್ನುತ್ತಾರೆ ತಜ್ಞರು. ಅದರಲ್ಲೂ ಮಾನಸಿಕ ಒತ್ತಡಕ್ಕೆ ಒಳಗಾಗುವರರಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರುವುದು ಯುವ ಜನತೆ ಎಂದರೆ ತಪ್ಪಾಗಲಾರದು. ಹದಿ ಹರೆಯದಲ್ಲೇ ತಲೆಯಲ್ಲಿನ ಕೂದಲು ಉದುರು ವಯಸ್ಸಾದಂತೆ ಕಾಣುವುದು ಯುವ ತಲೆಮಾರಿನ ಆತಂಕಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಮಹಿಳೆಯರು ಹೆಚ್ಚು ಕೂದಲಿನ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಪುರುಷರೇ ಅಧಿಕ ಸಂಖ್ಯೆಯಲ್ಲಿ ಕೂದಲು ಉದುರುವಿಕೆಗೆ ಒಳಗಾಗುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಕೂದಲು ಉದುರುತ್ತಿದೆ ಎಂಬ ಆತಂಕವೇ ಇಂದು ಕೇಶ ಉದುರುವಿಕೆಗೆ ಕಾರಣ ಎನ್ನುತ್ತಾರೆ ವೈದ್ಯರು. ಸಾಮಾನ್ಯವಾಗಿರುವ ಒತ್ತಡದೊಂದಿಗೆ ತಲೆಗೂದಲು ಉದುರುತ್ತಿದೆ ಎಂಬ ಆತಂಕ ಮತ್ತಷ್ಟು ಕೂದಲನ್ನು ಇಲ್ಲದಂತೆ ಮಾಡುತ್ತದೆ. ಆರೋಗ್ಯವಂತ ವ್ಯಕ್ತಿಯ ತಲೆಯಿಂದ 30 ರಿಂದ 50 ಕೂದಲುಗಳು ಉದುರುವುದು ಸಾಮಾನ್ಯ. ಅದಕ್ಕಿಂತಲೂ ಹೆಚ್ಚಿನ ಕೂದಲು ಉದುರುತ್ತಿದ್ದರೆ ನಿಮಲ್ಲಿ ಮಾನಸಿಕ ಒತ್ತಡ, ಹಾರ್ಮೋನುಗಳ ವ್ಯತ್ಯಾಸವಿದೆ ಎಂದರ್ಥ.ಇನ್ನು ನೀವು ಅನಾರೋಗ್ಯದ ವೇಳೆ ತೆಗೆದುಕೊಳ್ಳುವ ಔಷಧಿಗಳ ದುಷ್ಪರಿಣಾಮದಿಂದ ಸಹ ಕೂದಲು ಉದುರಬಹುದು. ಇದುವೇ ಮುಂದೆ ಉದುರುವಿಕೆ ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರೊಬ್ಬರು.

ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ಕೊರತೆಯಿಂದಲೂ ಕೂದಲು ಉದುರುತ್ತದೆ. ಕೂದಲಿಗೆ ನೆರವಾಗುವಂತಹ ಪೌಷ್ಠಿಕಾಂಶಯುಕ್ತ ಆಹಾರಗಳ ಸೇವನೆಯಿಂದ ಆರಂಭದಲ್ಲೇ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚೆಚ್ಚು ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.

ವೈದ್ಯರ ಪ್ರಕಾರ, ಹಾರ್ಮೋನುಗಳ ಏರುಪೇರು ಮತ್ತು ವಂಶಪರಂಪರೆಯಿಂದ ಸಹ ತಲೆ ಕೂದಲನ್ನು ಕಳೆದುಕೊಳ್ಳಬಹುದು. ಇಂತಹ ವೇಳೆ ರಾಸಾಯನಿಕ ಉತ್ಪನ್ನಗಳ ಬದಲಾಗಿ ಮನೆಮದ್ದುಗಳನ್ನು ಬಳಸಿ ಕೂದಲನ್ನು ಉಳಿಸಿಕೊಳ್ಳಬೇಕು. ಮುಖ್ಯವಾಗಿ ಶುದ್ಧ ಕೊಬ್ಬರಿ ಎಣ್ಣೆ, ದಾಸವಾಳ ಗಿಡದ ಎಲೆಗಳನ್ನು ರುಬ್ಬಿ ಅದರಿಂದ ದೊರಕುವ ರಸವನ್ನು ತಲೆಗೆ ಲೇಪಿಸುವುದು ಉತ್ತಮ. ಹಾಗೆಯೇ ಕೂದಲಿಗೆ ಬಣ್ಣ ಹಚ್ಚುವುದರಿಂದ ಹಾಗೂ ಬ್ಲೀಚ್ ಮಾಡುವುದರಿಂದ ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂಬುದು ನೆನಪಿಟ್ಟುಕೊಳ್ಳಿ. ಅದೇ ರೀತಿ ಕ್ಲೋರಿನ್ ಯುಕ್ತ ನೀರಿನಲ್ಲಿ ಸ್ನಾನ ಮಾಡುವುದರಿಂದ ತಲೆ ಕೂದಲು ಬೇಗನೆ ಉದುರುತ್ತದೆ.

ಇದನ್ನೂ ಕ್ಲಿಕ್ ಮಾಡಿ:  IPL 2019: ಮೈದಾನದ ಹೊರಗೂ ಹೊಸ ದಾಖಲೆ ಬರೆದ 12ನೇ ಐಪಿಎಲ್..!

First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading