Beauty Care: ನೈಸರ್ಗಿಕ ಸೌಂದರ್ಯ ಕಾಪಾಡಿಕೊಂಡಿರುವ ನಟಿ ಮಲೈಕಾ ಅರೋರಾ ಬ್ಯೂಟಿ ರಹಸ್ಯ ಹೀಗಿದೆ

ಬಾಲಿವುಡ್ ಪ್ರಸಿದ್ಧ ನಟಿ ಮಲೈಕಾ ಅರೋರಾ ಅವರು 48ರ ಹರೆಯದಲ್ಲೂ ಯಂಗ್ ಮತ್ತು ಒಳ್ಳೆಯ ಸ್ಕಿನ್ ಹೊಂದಿದ್ದಾರೆ. ಅವರ ವಯಸ್ಸಾಗಿರುವ ಸಂಕೇತ ಅಪರೂಪವಾಗಿ ಕಂಡು ಬರುತ್ತದೆ. ಅವರ ತ್ವಚೆಯು 48ರ ಹರೆಯದಲ್ಲೂ ಯಂಗ್ ಆಗಿ ಕಾಣಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸೌಂದರ್ಯ ಹಾಗೂ ಸುಂದರವಾಗಿ (Beauty) ಕಾಣಬೇಕು ಎಂಬ ಆಸೆ ಎಲ್ಲರಲ್ಲೂ ಇರೋದು ಪ್ರಕೃತಿ (Natural) ಸಹಜ. ವಯಸ್ಸಾಗುತ್ತಾ ಹೋದಂತೆ ಸೌಂದರ್ಯ ಕಳೆಗುಂದುತ್ತೆ ಎಂಬ ಆತಂಕ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಅದಾಗ್ಯೂ ವಯಸ್ಸಾಗುತ್ತಾ ಹೋದಂತೆ ತುಂಬಾ ಜನ ಮಹಿಳೆಯರು ತಮ್ಮ ವಯಸ್ಸಾಗುವಿಕೆಯನ್ನು ಒಪ್ಪಿಕೊಳ್ಳಲಾಗದೇ ಒದ್ದಾಡುತ್ತಾರೆ. ಇನ್ನು ಕೆಲವರು ಸಾಕಷ್ಟು ಕೇರ್ ತೆಗೆದುಕೊಳ್ತಾರೆ. ತಮ್ಮ ಹೆಲ್ದೀ ಹಾಗೂ ಉತ್ತಮ ಜೀವನಶೈಲಿ, ಆಹಾರ ಸೇವನೆಯ ಮೂಲಕ ವಯಸ್ಸಾಗುವಿಕೆ ವಿರೋಧಿ ಗುಣ ಹೊಂದಲು ಪ್ರಯತ್ನಿಸುತ್ತಿರುತ್ತಾರೆ. ಇಂದು ನಾವು ಬಾಲಿವುಡ್ (Bollywood) ಪ್ರಸಿದ್ಧ ನಟಿ ಮಲೈಕಾ ಅರೋರಾ (Actress Malaika Arora) ಅವರು 48ರ ಹರೆಯದಲ್ಲೂ ಯಂಗ್ ಮತ್ತು ಒಳ್ಳೆಯ ಸ್ಕಿನ್ ಹೊಂದಿದ್ದಾರೆ.

  ನಟಿ ಮಲೈಕಾ ಅರೋರಾ ಸೌಂದರ್ಯ ರಹಸ್ಯ

  ಅವರ ವಯಸ್ಸಾಗಿರುವ ಸಂಕೇತ ಅಪರೂಪವಾಗಿ ಕಂಡು ಬರುತ್ತದೆ. ಅವರ ತ್ವಚೆಯು 48ರ ಹರೆಯದಲ್ಲೂ ಹದಿಹರೆಯದ ಯಂಗ್ ಆಗಿ ಕಾಣಿಸುತ್ತದೆ. ಮಲೈಕಾ ಸೌಂದರ್ಯದ ಹೊಳಪು ಯಂಗ್ ನಟಿಯರನ್ನೂ ನಾಚಿಸುವಂತಿದೆ. ಪ್ರತಿ ಹುಡುಗಿಯೂ ನಟಿಯರಂತೆ ದೋಷ ರಹಿತ ಚರ್ಮವನ್ನು ಹೊಂದಲು ಹಾತೊರೆಯುತ್ತಾರೆ.

  ತಾವು ಎಲ್ಲರಿಗಿಂತ ಚೆನ್ನಾಗಿ ಮತ್ತು ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಹಾಗಾಗಿ ತಮ್ಮ ತಮ್ಮ ಇಷ್ಟದ ನಟಿಯರ ಸೌಂದರ್ಯ ರಹಸ್ಯವನ್ನು ಫಾಲೋ ಮಾಡ್ತಾರೆ. ಮಲೈಕಾ ತನ್ನ ತ್ವಚೆಯ ಆರೈಕೆಗಾಗಿ ವಿವಿಧ ಮನೆಮದ್ದು ಬಳಸುತ್ತಾರೆ. ಅವುಗಳಲ್ಲಿ ಕೆಲವು ಅನುಸರಿಸಲು ತುಂಬಾ ಸುಲಭ ಮತ್ತು ಅಗ್ಗವಾಗಿವೆ. ಮಲೈಕಾ ಅರೋರಾ ಅವರ ಸೌಂದರ್ಯ ಆರೈಕೆಯನ್ನು ಯಾರು ಬೇಕಾದರೂ ತಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬಹುದು.

  ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಬೆಳಗಿನ ಉಪಹಾರ, ರಾತ್ರಿಯ ಊಟವನ್ನು ಹೇಗೆ? ಯಾವಾಗ ಮಾಡ್ಬೇಕು?

  ಸ್ಕ್ರಬ್

  ಮಲೈಕಾ ಅರೋರಾ ಡೆಡ್ ಸ್ಕಿನ್ ರಿಮೂವ್ ಮಾಡಲು ಸ್ಕ್ರಬ್ ಅನ್ನು ಬಳಸುತ್ತಾರೆ. ಅಡುಗೆ ಮನೆಯಲ್ಲಿರುವ ಪದಾರ್ಥಗಳಿಂದ ಮನೆಯಲ್ಲಿಯೇ ಸ್ಕ್ರಬ್ ತಯಾರಿಸುತ್ತಾರೆ. ಇದಕ್ಕಾಗಿ ಮಲೈಕಾ ಮೊದಲು ಕಾಫಿ ಪೌಡರ್ ತೆಗೆದುಕೊಂಡು ಅದಕ್ಕೆ ಬ್ರೌನ್ ಶುಗರ್ ಹಾಕಿ ನಂತರ ಎಣ್ಣೆ ಹಾಕುತ್ತಾರೆ. ಸಾಮಾನ್ಯವಾಗಿ ಈ ಮಿಶ್ರಣದಲ್ಲಿ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬೆರೆಸುತ್ತೇನೆ ಎಂದು ನಟಿ ಹೇಳಿದ್ದಾರೆ.

  ಬ್ರೌನ್ ಶುಗರ್ ಇಲ್ಲದಿದ್ದರೂ ಅಡುಗೆ ಮನೆಯಲ್ಲಿ ಇರುವ ಸಾಮಾನ್ಯ ಸಕ್ಕರೆಯನ್ನು ಬಳಸಬಹುದು ಎಂದು ತಮ್ಮ ಫಾಲೋವರ್ಸ್ ಗೆ ಸೂಚಿಸಿದ್ದಾರೆ. ಈ ಹೋಮ್ ಮೇಡ್ ಸ್ಕ್ರಬ್ ಅನ್ನು ಚರ್ಮದ ಮೇಲೆ ವೃತ್ತಾಕಾರದ ಚಲನೆಯಲ್ಲಿ ಉಜ್ಜಬೇಕು. ಮತ್ತು ನಂತರ ನೀರಿನಿಂದ ತೊಳೆಯಬೇಕು. ಇದನ್ನು ಮುಖಕ್ಕೆ ಮಾತ್ರವಲ್ಲದೆ ಇಡೀ ದೇಹಕ್ಕೆ ಬಳಸಬಹುದು.

  ದಾಲ್ಚಿನ್ನಿ ಫೇಸ್ ಪ್ಯಾಕ್

  ಮಲೈಕಾ ತ್ವಚೆಯ ಸಮಸ್ಯೆಗೆ ಹಾಗೂ ಮೊಡವೆ ಸಮಸ್ಯೆ ತೊಡೆದು ಹಾಕಲು ಮತ್ತು ಚರ್ಮದ ಸಮಸ್ಯೆ ನಿಯಂತ್ರಿಸಲು, ಅವರು ದಾಲ್ಚಿನ್ನಿ ಫೇಸ್ ಪ್ಯಾಕ್ ಅನ್ನು ಅನ್ವಯಿಸುತ್ತಾರೆ. ಇದಕ್ಕಾಗಿ ದಾಲ್ಚಿನ್ನಿ ಪುಡಿ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸ ಬೆರೆಸಿ ಫೇಸ್ ಪ್ಯಾಕ್ ತಯಾರಿಸುತ್ತಾರೆ. ಮುಖಕ್ಕೆ ಹಚ್ಚಿ, ಸುಮಾರು 15 ನಿಮಿಷಗಳ ಕಾಲ ಇರಿಸಿ, ನಂತರ ಸಾಮಾನ್ಯ ನೀರಿನಿಂದ ಮುಖ ಚೆನ್ನಾಗಿ ತೊಳೆಯುತ್ತಾರೆ. ವಾರಕ್ಕೆ ಎರಡು-ಮೂರು ಬಾರಿ ಪ್ಯಾಕ್ ಅನ್ನು ಅನ್ವಯಿಸುತ್ತಾರೆ.

  ಅಲೋವೆರಾ ಜೆಲ್

  ನಟಿ ಮಲೈಕಾ ಅವರು ಅಲೋವೆರಾ ಜೆಲ್ ಅನ್ನು ಹೆಚ್ಚು ಬಳಕೆ ಮಾಡುತ್ತಾರೆ. ಅದಕ್ಕಾಗಿ ಅಲೋವೆರಾವನ್ನು ಮನೆಯಲ್ಲೇ ಬೆಳೆಸಿದ್ದಾರೆ. ಅಲೋವೆರಾ ತುಂಡನ್ನು ತೆಗೆದುಕೊಂಡು ಅದನ್ನು ಕತ್ತರಿಸಿ ಜೆಲ್ ಅನ್ನು ಹೊರತೆಗೆಯಬೇಕು. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖವು ದಿನವಿಡೀ ಫ್ರೆಶ್ ಮತ್ತು ಸ್ಮೂಥ ಆಗಿರುತ್ತದೆ.

  ಇದನ್ನೂ ಓದಿ: ಥೈರಾಯ್ಡ್ ನಿಯಂತ್ರಣಕ್ಕೆ ಆಯುರ್ವೇದ ವಿಧಾನ! ಇದು ಅತ್ಯಂತ ಪ್ರಯೋಜನಕಾರಿ

  ವ್ಯಾಯಾಮದ ಸಲಹೆ

  ಮಲೈಕಾ ತನ್ನ ಹೊಳೆಯುವ ಚರ್ಮಕ್ಕಾಗಿ ಆಹಾರ ಮತ್ತು ವ್ಯಾಯಾಮದ ಬಗ್ಗೆ ಕಾಳಜಿ ವಹಿಸುತ್ತಾರೆ. ಮಾಯಿಶ್ಚರೈಸರ್ ನಿಂದ ಚರ್ಮವನ್ನು ಮೃದುವಾಗಿಡಲು ಬಳಸುತ್ತಾರೆ. ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಮಾಡಿದ ನಂತರ ಮಾಯಿಶ್ಚರೈಸರ್ ಬಳಸುತ್ತಾರೆ.
  Published by:renukadariyannavar
  First published: