news18-kannada Updated:April 5, 2021, 3:02 PM IST
ಸಾಂದರ್ಭಿಕ ಚಿತ್ರ
ಬೇಸಿಗೆ ಕಾಲ ಶುರುವಾಗಿದೆ. ಜನರು ಕೂಡ ಬಿಸಿಲ ಬೇಗೆಯಿಂದ ಜನರು ಬಳಲುತ್ತಿದ್ದಾರೆ. ಇದರ ನಡುವೆ ತುರಿಕೆ ಸಮಸ್ಯೆಗಳೂ ಕೂಡ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಅತಿಯಾದ ಸೂರ್ಯನ ಶಾಖ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಸೂರ್ಯನ ಬೆಳಕು, ಧೂಳು ಅಥವಾ ಯಾವುದೇ ರೀತಿಯ ಸೋಂಕಿನಿಂದ ತುರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಅನೇಕರು ರಾಸಾಯನಿಕ-ಯುಕ್ತ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದರಿಂದ ದೇಹದ ಮೇಲೆ ಅಡ್ಡಪರಿಣಾಮಗಳು ಕಂಡು ಬರುವ ಸಾಧ್ಯತೆ ಕೂಡ ಇದೆ. ಇದಾಗ್ಯೂ ಕೆಲ ಮನೆಮದ್ದುಗಳ ಮೂಲಕ ಬೇಸಿಗೆಯಲ್ಲಿ ಉಂಟಾಗುವ ತುರಿಕೆ ಸಮಸ್ಯೆಯನ್ನು ಹೋಗಲಾಡಿಸಬಹುದು. ಅಂತಹ ಕೆಲ ಮನೆಮದ್ದುಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಅಲೋವೆರಾ ಜೆಲ್: ಅಲೋವೆರಾ ಜೆಲ್ ಬಳಕೆಯು ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಾಗಿ, 3-4 ಚಮಚ ಅಲೋವೆರಾ ಜೆಲ್ ಅನ್ನು ತೆಗೆದು ತುರಿಕೆ ಇರುವ ಭಾಗದ ಮೇಲೆ ಚೆನ್ನಾಗಿ ಹಚ್ಚಿ. ಅಲ್ಲದೆ 20 ನಿಮಿಷಗಳ ನಂತರ ಅದನ್ನು ನೀರಿನಿಂದ ತೊಳೆಯಿರಿ.
ಬೇವಿನ ಎಲೆಗಳು: ಬೇವಿನ ಎಲೆಗಳನ್ನು ತೊಳೆದು, ಪುಡಿಮಾಡಿ ಈ ಪೇಸ್ಟ್ ಅನ್ನು ತುರಿಕೆ ಇರುವ ಜಾಗದಲ್ಲಿ ಹಚ್ಚಿದರೆ ತುರಿಕೆ ನಿವಾರಣೆಯಾಗುತ್ತದೆ. ಹಾಗೆಯೇ ಬೇವಿನ ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಿ ತಣ್ಣಗಾಗಿಸಿ ಈ ನೀರಿನಿಂದ ಸ್ನಾನ ಸಹ ಮಾಡಬಹುದು.
ತುಳಸಿ ಎಲೆಗಳು: ತುಳಸಿ ಎಲೆಗಳನ್ನು ತೊಳೆದು ಅದನ್ನು ಅರೆದು, ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಸೇರಿಸಿ. ಈ ಪೇಸ್ಟ್ ಅನ್ನು ತುರಿಕೆ ಇರುವ ಜಾಗದಲ್ಲಿ ಅನ್ವಯಿಸುವುದರಿಂದ ಪರಿಹಾರ ಸಿಗುತ್ತದೆ. ಅಲ್ಲದೆ, ಚರ್ಮವು ತೇವಾಂಶವನ್ನು ಸಹ ಪಡೆಯುತ್ತದೆ.
ನಿಂಬೆ ರಸ: ಸ್ನಾನದ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಕಲಸಿ. ಬಳಿಕ ಆ ನೀರಿನಿಂದ ಸ್ನಾನ ಮಾಡಿ. ಇದರಿಂದ ಕೂಡ ತುರಿಕೆ ಸಮಸ್ಯೆ ದೂರವಾಗುತ್ತದೆ. ಹಾಗೆಯೇ ತುರಿಕೆ ಇರುವ ಜಾಗದ ಮೇಲೆ ನಿಂಬೆ ರಸವನ್ನು ಸಹ ಹಚ್ಚಬಹುದು.
ತೆಂಗಿನ ಎಣ್ಣೆ: ತುರಿಕೆ ನಿವಾರಿಸಲು ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು. ಇದಕ್ಕಾಗಿ, ಪ್ರತಿದಿನ ಸ್ನಾನ ಮಾಡಿದ ನಂತರ ದೇಹದಾದ್ಯಂತ ತೆಂಗಿನ ಎಣ್ಣೆಯನ್ನು ಹಚ್ಚಿ. ಇದು ಚರ್ಮದಲ್ಲಿನ ತೇವಾಂಶವನ್ನು ಸಹ ಉಳಿಸುತ್ತದೆ.
ಶ್ರೀಗಂಧ ಮತ್ತು ರೋಸ್ ವಾಟರ್: 2-3 ಟೀ ಸ್ಪೂನ್ ಶ್ರೀಗಂಧದ ಪುಡಿಯಲ್ಲಿ 5-6 ಟೀ ಸ್ಪೂನ್ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ತುರಿಕೆ ಇರುವ ಜಾಗದಲ್ಲಿ ಅನ್ವಯಿಸಿ. ಅದು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಕೂಡ ತುರಿಕೆ ಸಮಸ್ಯೆಯನ್ನು ದೂರ ಮಾಡಬಹುದು.
Published by:
zahir
First published:
April 5, 2021, 3:02 PM IST