Home Made Cleaners : ಮನೆಯನ್ನು ಸ್ವಚ್ಛ ಮಾಡಲು ನೈಸರ್ಗಿಕವಾಗಿ ಕ್ಲೀನರ್​ಗಳನ್ನು ತಯಾರಿಸಿ

Earth Friendly Cleaners : ಸ್ವಚ್ಛಗೊಳಿಸಲು ನಾವು ಬಳಸುವ ವಸ್ತುಗಳು ನಿಜಕ್ಕೂ ಹಾನಿಕಾರಕವಾಗಬಹುದು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾ ಬೀರಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯ ಆರೈಕೆ ಮಾಡುವ ಅಗತ್ಯಗಳಲ್ಲಿ ಅತ್ಯಂತ ಮೂಲಭೂತ ಕೆಲಸವೆಂದರೆ ಮನೆಯನ್ನು ಸ್ವಚ್ಛ ಮಾಡುವುದು. ನಮ್ಮ ಸುತ್ತಲೂ ಸ್ವಚ್ಛವಾದ, ಸಕಾರಾತ್ಮಕ ಮನೆಯ ಸ್ಥಳವನ್ನು ಕಾಪಾಡಿಕೊಳ್ಳಲು ನಾವು ಯಾವಾಗಲೂ ಶ್ರಮಿಸುತ್ತಿದ್ದರೂ ಸಹ  ಸ್ವಚ್ಛಗೊಳಿಸಲು ನಾವು ಬಳಸುವ ವಸ್ತುಗಳು ನಿಜಕ್ಕೂ ಹಾನಿಕಾರಕವಾಗಬಹುದು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾ ಬೀರಬಹುದು. ನಾವು ಖರೀದಿಸುವ ಕೆಲವು ಸಾಮಾನ್ಯವಾಗಿ ಬಳಸುವ ಗೃಹ ಕ್ಲೀನರ್‌ಗಳಲ್ಲಿ ಡಿಫ್‌ಜೆಂಟ್‌ಗಳು ಮತ್ತು ಲಾಂಡ್ರಿ ಸೋಪ್‌ಗಳಲ್ಲಿ ಥಾಲೇಟ್ಸ್ ಮತ್ತು ಟ್ರೈಕ್ಲೋಸನ್ ರಾಸಾಯನಿಕಗಳು ಇರುತ್ತವೆ. ಕೆಲವು ಶ್ಯಾಂಪೂಗಳಲ್ಲಿ ಹಾಗೂ ಪಾತ್ರೆ ತೊಳೆಯುವ ದ್ರವ ಸೋಪ್‌ಗಳು, ಟೂತ್‌ಪೇಸ್ಟ್‌ಗಳು ಮತ್ತು ಡಿಯೋಡರೆಂಟ್‌ಗಳಲ್ಲಿ ಸಲ್ಫೇಟ್‌ ಸಾಮಾನ್ಯವಾಗಿದೆ. ಈ ರಾಸಾಯನಿಕಗಳು ಆರೋಗ್ಯದ ಮೇಲೆ ಪ್ರಭಾವ ಬೀರಿ,  ಹಾರ್ಮೋನುಗಳಿಗೆ ಹಾನಿಯಾಗುತ್ತದೆ. ಅದು ಸಂತಾನೋತ್ಪತ್ತಿ ಕಾರ್ಯಗಳು ಮತ್ತು ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತವೆ. 

ಇವುಗಳಿಗೆ ಪರಿಣಾಮಕಾರಿ ಪರಿಹಾರ ಎಂದರೆ  ಸುಲಭವಾದ ಮನೆಯಲ್ಲಿ ತಯಾರಿಸಿದ ಕ್ಲೀನರ್​ಗಳ ಬಳಕೆ.  ಮನೆಯಲ್ಲಿಯೇ ಕ್ಲೀನರ್​ಗಳನ್ನು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.

ಗಿಡಮೂಲಿಕೆ ಮತ್ತು ಮಸಾಲೆಯುಕ್ತ ವಿನೆಗರ್

ಮನೆಯಲ್ಲಿ ಸಿಗುವ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಹಾಗೂ  ಆಪಲ್ ಸೈಡರ್ ವಿನೆಗರ್ ಬಳಸಿ ಸರಳವಾಗಿ ಕ್ಲೀನರ್ ತಯಾರಿಸಬಹುದು. ಗಿಡಮೂಲಿಕೆ ಮತ್ತು ಮಸಾಲೆ ತುಂಬಿದ ವಿನೆಗರ್ ಮನೆಗಳಿಗೆ ಅತ್ಯಂತ ಪರಿಣಾಮಕಾರಿ ಕ್ಲೀನರ್ ಆಗಿದೆ. ಪುದೀನ, ತುಳಸಿ, ನಿಂಬೆರಸ ಅಥವಾ ಬೇವಿನ ಎಲೆಗಳು ಮತ್ತು ದಾಲ್ಚಿನ್ನಿ, ಲವಂಗ ಮತ್ತು ಶುಂಠಿಯಂತಹ ಮಸಾಲೆಗಳನ್ನು ಇದು ಹಲವು ಶಿಲೀಂಧ್ರ-ವಿರೋಧಿ, ವೈರಸ್-ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಮೂರು ದಿನಗಳ ಕಾಲ ವಿನೆಗರ್  ಹಾಕಿ ಜಾರ್‌ನಲ್ಲಿ ನೆನೆಸಿ. ಇದನ್ನು ಲೋಹ ಮತ್ತು ಸೆರಾಮಿಕ್ ಮೇಲೆ ಕ್ಲೀನರ್ ಆಗಿ ಬಳಕೆ ಮಾಡಬಹುದು. ಅಲ್ಲದೇ ನೀವು ಅದಕ್ಕೆ ಪ್ರತಿನಿತ್ಯ ಬಳಕೆ ಮಾಡುವಾಗ ಸ್ವಲ್ಪ ನೀರನ್ನು ಹಾಕಿ ಸ್ವಚ್ಛ ಮಾಡಲು ಬಳಸಬಹುದು. ಅಲ್ಲದೇ ಇದು ಚರ್ಮದ ಮೇಲೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ, ಮಕ್ಕಳು ನೆಲದ ಮೇಲೆ ಯಾವುದೇ ಚಿಂತೆಯಿಲ್ಲದೆ ಆಟವಾಡಬಹುದು.

ಇದನ್ನೂ ಓದಿ: ಆರೋಗ್ಯಕರ ತ್ವಚೆಗಾಗಿ ಪಾಲಿಸಬೇಕಾದ ಆಹಾರ ಕ್ರಮದ ವಿವರ ಇಲ್ಲಿದೆ..!

ನಿಂಬೆ ಹಣ್ಣು ಮತ್ತು ವಿನೆಗರ್

ನಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಬಳಸುತ್ತಿರುವ ಇನ್ನೊಂದು  ವಸ್ತುಗಳೆಂದರೆ ನಿಂಬೆ ಮತ್ತು ವಿನೆಗರ್ . ನಿಂಬೆ ಹಣ್ಣು ಅಥವಾ ನಿಂಬೆ ಸಿಪ್ಪೆಗಳು  ಅಲ್ಲದೇ ಇತರ ಸಿಟ್ರಸ್  ಅಂಶವಿರುವ ಹಣ್ಣಿನ ಸಿಪ್ಪೆಗಳನ್ನು ವಿನೆಗರ್‌ನಲ್ಲಿ ಸೇರಿಸಿ ಉತ್ತಮವಾದ ಕ್ಲೀನರ್ ತಯಾರಿಸಬಹುದು. ವಿನೆಗರ್​ನಲ್ಲಿ ಸಿಪ್ಪೆಗಳನ್ನು ಹಾಕಿ ಒಂದು ವಾರಗಳ ಕಾಲ ನೆನಸಿಡಿ. ಇದು ಒಳ್ಳೆಯ ಸುವಾಸನೆ ನೀಡುವುದಲ್ಲದೆ, ಕಬ್ಬಿಣದ ಪಾತ್ರೆಗಳು, ಕಿಚನ್ ಸಿಂಕ್, ಶೌಚಾಲಯ ಮತ್ತು ಬಾತ್ರೂಮ್ ಸ್ವಚ್ಛಗೊಳಿಸಲು ಹೆಚ್ಚು ಪರಿಣಾಮಕಾರಿಯಾಗಿದೆ. ಅಲ್ಲದೇ ಇದು ಪಾತ್ರೆಗಳ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ತೆಂಗಿನಕಾಯಿ ಸಿಪ್ಪೆ

ತೆಂಗಿನಕಾಯಿಯನ್ನು ಪ್ರತಿಯೊಬ್ಬರು ಬಳಕೆ ಮಾಡುತ್ತಾರೆ. ಇದರಿಂದ ಹಲವಾರು ಪ್ರಯೋಜನಗಳಿವೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ತೆಂಗಿನ ಕಾಯಿಯ ಹೊರ ಭಾಗದ ಸಿಪ್ಪೆಯನ್ನು ವಿನೆಗರ್​ನಲ್ಲಿ ಅದ್ದಿ ಸ್ವಚ್ಛ ಮಾಡಲು ಬಳಕೆ ಮಾಡಬಹುದು. ನೈಸರ್ಗಿಕ ಎಕ್ಸ್‌ಫೋಲಿಯೇಟರ್ ಅನ್ನು ಹೊರತುಪಡಿಸಿ, ಇದು ವಿಶಿಷ್ಟವಾದ  ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿದೆ. ಇದು  ಕಠಿಣವಾದ ಕಲೆಗಳನ್ನು ಸ್ವಚ್ಚ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ತುಳಸಿಯ ಎಲೆಗಳನ್ನು ಸೇವಿಸುವುದರಿಂದ ಏನೆಲ್ಲಾ ಅಡ್ಡ ಪರಿಣಾಮಗಳಾಗುತ್ತದೆ ಗೊತ್ತಾ?

ಸಾವಯವ ಪದಾರ್ಥಗಳು

ಸಾವಯವ ಪದಾರ್ಥಗಳ ಮಿಶ್ರಣ ಮನೆಯನ್ನು ಸ್ವಚ್ಚ ಮಾಡಲು ಸಹಾಯ ಮಾಡುತ್ತದೆ. ಅಡುಗೆ ಮನೆಯ ತ್ಯಾಜ್ಯಗಳು, ನೈಸರ್ಗಿಕ ಸಕ್ಕರೆ ಮತ್ತು ನೈಸರ್ಗಿಕವಾಗಿ ಬರುವ ಯೀಸ್ಟ್ ಬಳಸಿ ಇದನ್ನು ತಯಾರಿಸಬಹುದು.   ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹಣ್ಣು ಮತ್ತು ತರಕಾರಿ ಸಿಪ್ಪೆಗಳು, ಬೆಲ್ಲ ಅಥವಾ ಕಂದು ಸಕ್ಕರೆ, ನೀರು ಮತ್ತು ಗಾಳಿಯಾಡದ ಪ್ಲಾಸ್ಟಿಕ್ ಕಂಟೇನರ್. ಇದು ಶಕ್ತಿಯುತವಾದ ನೈಸರ್ಗಿಕ ಕ್ಲೀನರ್ ಆಗಲಿದ್ದು, ಇದನ್ನು ಎಲ್ಲ ವಸ್ತುಗಳನ್ನು ಸ್ವಚ್ಛ ಮಾಡಲು ಬಳಕೆ ಮಾಡಲಾಗುತ್ತದೆ.
Published by:Sandhya M
First published: