ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ ಬಾಲಿವುಡ್ ನಟ ! ನೀವು ಯಾವಾಗ?

zahir | news18
Updated:June 14, 2019, 7:51 PM IST
ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ ಬಾಲಿವುಡ್ ನಟ ! ನೀವು ಯಾವಾಗ?
@newsclick.in
  • News18
  • Last Updated: June 14, 2019, 7:51 PM IST
  • Share this:
ಜಗತ್ತು ವೇಗವಾಗಿ ಬೆಳೆಯುತ್ತಿದೆ. ಪ್ರತಿಯೊಂದು ವಿಷಯಗಳು ಅಭಿವೃದ್ಧಿಯತ್ತ ಸಾಗುತ್ತಿದೆ. ಇದೆಲ್ಲದರ ನಡುವೆ ಮನುಷ್ಯ ಮಾತ್ರ ತಮ್ಮ ಮೂಲ ಮೌಲ್ಯಗಳನ್ನು ಮತ್ತು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಸಾಮಾನ್ಯವಾಗಿ ರಸ್ತೆ ಅಪಘಾತಗಳನ್ನು ನೋಡಿ ಮತ್ತು ಅಪಘಾತಕ್ಕೀಡಾದ ಅಸಹಾಯಕ ಸ್ಥಿತಿಯಲ್ಲಿರುವ ಗಾಯಾಳುಗಳಿಗೆ ಸ್ಪಂದಿಸದೇ ಹೋಗುವವರೇ ಹೆಚ್ಚು.

ಆದರೆ ನೆನಪಿಟ್ಟುಕೊಳ್ಳಿ. ಅದೇ ಸ್ಥಾನದಲ್ಲಿ ನೀವಿದಿದ್ದರೆ? ಮನುಷ್ಯನ ಮಾನವೀಯತೆ ಗುಣದಲ್ಲಿದೆ ಮನುಷ್ಯತ್ವ. ಬಹಳಷ್ಟು ಮಂದಿ ಕಾಳಜಿಗಿಂತ ಹೆಚ್ಚಾಗಿ ಕುತೂಹಲದಿಂದ ನಿಂತು ನೋಡುತ್ತಾರೆ. ಇದಕ್ಕಿಂತ ಕೆಟ್ಟ ಸಂಗತಿ ಎಂದರೆ ಕೆಲವರು ತಮ್ಮ ಸ್ಮಾರ್ಟ್ ಫೋನ್​ಗಳಿಂದ ಗಂಭೀರ ಅಪಘಾತದ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತಾರೆ. ಆದರೆ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನಕ್ಕೆ ಅಥವಾ ಅಂಬುಲೆನ್ಸ್​ಗೆ ಕರೆ ಮಾಡುವುದಿಲ್ಲ ಮುಂದಾಗುವುದಿಲ್ಲ.

ಇದು ಬದಲಾಗಬೇಕು. ರಸ್ತೆ ಅಪಘಾತ ನಡೆದ ಸಂದರ್ಭಗಳಲ್ಲಿ ಜೀವ ಉಳಿಸುವ ಉತ್ತಮ ದಾರಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಬಾಲಿವುಡ್​ನ ಶ್ರೇಷ್ಠ ನಟ ಮತ್ತು ನಿರ್ದೇಶಕ ನಾಸುರುದ್ದೀನ್ ಶಾ ಇಂತಹ ಕಾರ್ಯಕ್ಕೆ  ಕೈ ಜೋಡಿಸಿದ್ದಾರೆ ಮತ್ತು ಬೆಂಬಲ ಸೂಚಿಸಿದ್ದಾರೆ. ಭಾರತದಲ್ಲಿ ಪ್ರತಿ ಗಂಟೆಗೆ 18 ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇಂಥ ಸಂದರ್ಭದಲ್ಲಿ ಅನುಕಂಪದಿಂದ ಸ್ಪಂದಿಸಿ, ಜೀವ ಉಳಿಸಬೇಕೆಂದು ನಾಸರುದ್ದೀನ್ ಶಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಗೋಲ್ಡನ್ ಟೈಂ:

ನಾವು ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಸಂಗತಿ ಇದು- ಅಪಘಾತ ನಡೆದ ಮೊದಲ ಒಂದು ಗಂಟೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ನೆರವು ನೀಡಿದರೆ ಜೀವ ಉಳಿಸಬಹುದು. ಅವಘಡ ಸಂಭವಿಸಿದ ಮೊದಲ ಒಂದು ಗಂಟೆ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿಯೇ ಇದನ್ನು ಗೋಲ್ಡನ್ ಟೈಂ ಎನ್ನಲಾಗುತ್ತದೆ. ಅಪಘಾತ ಸಂಭವಿಸಿದ ಮೊದಲ ಕೆಲವು ನಿಮಿಷಗಳಲ್ಲೇ ನೆರವಿಗೆ ಧಾವಿಸುವುದರಿಂದ ಒಂದು ಜೀವನವನ್ನು ಉಳಿಸಬಹುದಷ್ಟೇ ಅಲ್ಲದೆ, ಗಾಯದ ತೀವ್ರತೆಯನ್ನು ತಗ್ಗಿಸಬಹುಯದು.

ರಸ್ತೆ ಅಪಘಾತಕ್ಕೊಳಗಾದವರ ನೆರವಿಗೆ ಧಾವಿಸಲು ಜನ ಹೆದರುವುದು ಏಕೆ?

• ಅಂಬುಲೆನ್ಸ್ ಬರುವವರೆಗೆ ಗಾಯಾಳುಗಳನ್ನು ಅಗತ್ಯ ಸುರಕ್ಷತೆಯನ್ನು ಒದಗಿಸುವ ಕ್ರಮ ಏನೆಂಬುದು ಅವರಿಗೆ ತಿಳಿದಿರುವುದಿಲ್ಲ.• ಗಾಯಾಳುವನ್ನು ಅಪಘಾತದಿಂದ ಸ್ಥಳ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಬೇಕೆ ಅಥವಾ ದೇಹಕ್ಕೆ ಹೆಚ್ಚಿನ ಹಾನಿಯಾಗದಂತೆ ಹೇಗೆ ಎತ್ತುವುದು ತಿಳಿದಿರುವುದಿಲ್ಲ. ಜೊತೆಗೆ ಹೀಗೆ ನಿಂತು ನೋಡುವವರು ತುರ್ತುಪರಿಸ್ಥಿತಿ ನಿಭಾಯಿಸುವ ವಿಷಯದಲ್ಲಿ ಅನುಭವಿಗಳಾಗಿರುವುದಿಲ್ಲ.

• ಪೊಲೀಸ್ ಕೇಸಿನಲ್ಲಿ ಸಿಲುಕಿಕೊಳ್ಳುವ ಭೀತಿ ಮತ್ತು ಆಸ್ಪತ್ರೆ ಮತ್ತು ಪೊಲೀಸ್ ಸ್ಟೇಷನ್​ಗೆ ಭೇಟಿ ನೀಡುತ್ತಲೇ ಇರಬೇಕಾಗುತ್ತದೆ ಎಂಬ ಭಯವೂ ಕಾರಣವಾಗಿರುತ್ತದೆ.

• ತಮ್ಮ ವೈಯಕ್ತಿಕ ಸಮಯ ಮತ್ತು ಇತರೆ ವೃತ್ತಿ ಬದ್ಧತೆಯ ಸಮಯವನ್ನು ವಿನಿಯೋಗಿಸುವುದು ಮತ್ತು ಪೊಲೀಸ್ ವಿಚಾರಣೆಯ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ವ್ಯತಿರಿಕ್ತವಾಗಿ ದೆಹಲಿಯಲ್ಲಿ ಸರ್ಕಾರವು ರಸ್ತೆ ಅಪಘಾತ ಸಂದರ್ಭಲ್ಲಿ ನೆರವಾದವರಿಗೆ ರೂ.2000 ಬಹುಮಾನ ನೀಡಿ ಮತ್ತು ಸನ್ಮಾನಿಸುತ್ತಿದೆ.

• ಪೊಲೀಸ್ ವಿಚಾರಣೆ ಎದುರಿಸುವುದು ಮತ್ತು ವರದಿ ನೀಡುವುದು ಮತ್ತು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ನೀಡಬೇಕೆಂಬ ಭಯ.

• ಅನಿಯಮಿತವಾಗಿ ಕಾನೂನು ಪ್ರಕ್ರಿಯೆಯ ಸಂಕಷ್ಟದಲ್ಲಿ ಭಾಗಿಯಾಗುವುದು.

ರಸ್ತೆ ಅಪಘಾತ ಸಂದರ್ಭದಲ್ಲಿ ಮೊದಲ ಅರವತ್ತು ನಿಮಿಷಗಳಲ್ಲಿ ಜೀವ ಉಳಿಸುವುದು ಹೇಗೆ?

• ಅಂಬುಲೆನ್ಸ್​ಗಾಗಿ 108 ಸಂಖ್ಯೆ ಕರೆ ಮಾಡಿ

• ಅಪಘಾತ ನಗರ ಸರಹದ್ದಿನಲ್ಲೇ ಆಗಿದ್ದರೆ, 100 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ.

• 1033ಕ್ಕೆ ಕರೆ ಮಾಡಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 24*7  ಟಾಲ್ ಫ್ರಿ ಸಹಾಯವಾಣಿ ಸೇವೆಯಾಗಿದೆ. ಅಪಘಾತ ಅಥವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ತುರ್ತು ಸಂದರ್ಭಗಳು ಒದಗಿ ಬಂದರೆ, ಇಲ್ಲಿಗೆ ಕರೆ ಮಾಡಬಹುದು. ಕರೆ ಮಾಡಿದ ಬಳಿಕ ನೆರವಿಗಾಗಿ ಕಾಯಬೇಕು- https://ihmcl.com/24x7-national-highways-helpline-1033/

• ಗಾಯಾಳುಗಳ, ಮೊಬೈಲ್ ಫೋನ್ ಕಾಂಟ್ಯಾಕ್ಟ್ ಲಿಸ್ಟ್ ನೋಡಿ ಅವರ ಕುಟುಂಬಕ್ಕೆ ಕರೆ ಮಾಡಿ ಮಾಹಿತಿ ನೀಡಿ. ತುರ್ತು ಸಂದರ್ಭಗಳಲ್ಲಿ ಫೋನಿನ ಹೋಮ್ ಸ್ಕ್ರೀನ್​ನಲ್ಲಿರುವ ನಂಬರ್​ಗಳಿಗೆ ಕರೆ ಮಾಡಿ. ಒಂದು ವೇಳೆ ಫೋನ್ ಲಾಕ್ ಇದ್ದರೂ ಕರೆ ಮಾಡಬಹುದು.

• ಗಾಯಾಳುವಿನ ಸುತ್ತ ನೆರೆದ ಜನರನ್ನು ಶಾಂತಗೊಳಿಸಿ ಮತ್ತು ಗಾಯಾಳುವಿಗೆ ಸೂಕ್ತ ರೀತಿಯಲ್ಲಿ ಗಾಳಿ ಲಭ್ಯವಾಗುವಂತೆ ಜಾಗ ಮಾಡಿಕೊಡಿ.

• ಅಲ್ಲಿ ನೆರೆದವರಿಗೆ ಅಪಘಾತ ಸ್ಥಳಕ್ಕೆ ವಾಹನಗಳು ಬರದಂತೆ, ಅನ್ಯ ಮಾರ್ಗವಾಗಿ ಚಲಿಸುವುದಕ್ಕೆ ನೆರವಾಗುವ ಕಾರ್ಯದಲ್ಲಿ ತೊಡಗಿಸಿ, ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಿ.

• ಅಂಬುಲೆನ್ಸ್ ಶೀಘ್ರವಾಗಿ ಸ್ಥಳ ತಲುಪುವುದಕ್ಕೆ ಅನುಕೂಲಕವಾಗುವಂತೆ ಅಪಘಾತವಾಗಿರುವ ರಸ್ತೆಯನ್ನು ಟ್ರಾಫಿಕ್ ಮುಕ್ತವಾಗಿರುವಂತೆ ನೋಡಿಕೊಳ್ಳಿ. ವಾಹನಗಳು ನಿಧಾನ ಮಾಡದೆ, ಎಡಸಾಲಿನಲ್ಲಿ ಸಾಗುವಂತೆ ನಿರ್ದೇಶಿಸಿ.

• ಒಂದು ವೇಳೆ ಗಾಯಾಳು ಹೆಲ್ಮೆಟ್ ತೊಟ್ಟಿದ್ದರೆ, ತಲೆಗೆ ಪೆಟ್ಟಾಗದಂತೆ ನಿಧಾನವಾಗಿ ಪಟ್ಟಿಯನ್ನು ಬಿಚ್ಚಿ, ಹೆಲ್ಮೆಟ್ವನ್ನು ತೆಗೆಯಿರಿ.

• ತೊಟ್ಟ ಬಟ್ಟೆಯನ್ನು ಕುತ್ತಿಗೆ, ಎದೆ ಮತ್ತು ಸೊಂಟದ ಭಾಗದಲ್ಲಿ ಸಡಿಲ ಮಾಡಿ. ನಿಮಗೆ ತಿಳಿದಿದ್ದರೆ ಪ್ರಥಮ ಚಿಕಿತ್ಸೆಯನ್ನು ನೀಡಿ. ಇಲ್ಲವಾದರೆ ಅರೆ ವೈದ್ಯಕೀಯ ಸೇವೆ ಅಥವಾ ವೃತ್ತಿಪರ ನೆರವಿಗಾಗಿ ಕಾಯಿರಿ.

• ಗಾಯಾಳುವಿಗೆ ರಕ್ತ ಸ್ರಾವವಾಗುವಷ್ಟು ತೀವ್ರ ಗಾಯವಾಗಿದ್ದರೆ, ಗಾಯವಾದ ಸ್ಥಳದಲ್ಲಿ ಏನಾದರೂ ಸಿಕ್ಕಿ ಕೊಂಡಿದೆಯೇ ಪರೀಕ್ಷಿಸಿ. ಅದನ್ನು ತೆಗೆಯಲು ಹೋಗಬೇಡಿ. ಅದರಿಂದ ಇನ್ನಷ್ಟು ಹಾನಿ ಆಗಬಹುದು. ರಕ್ತ ಕಣಗಳು, ನರಗಳು ಮತ್ತು ಅತಿಯಾದ ರಕ್ತಸ್ರಾವಕ್ಕೆ ಕಾರಣವಾಗಬಹುದು.

• ರಕ್ತಸ್ರಾವವಾಗುತ್ತಿರುವ ಗಾಯದ ಮೇಲೆ ಬಟ್ಟೆ ಕಟ್ಟುವ ಮೂಲಕ ರಕ್ತಸ್ರಾವ ನಿಲ್ಲಿಸಿ• ಕಾಲುಗಳಲ್ಲಿ ರಕ್ತಸ್ರಾವವಾಗುತ್ತಿದ್ದಲ್ಲಿ, ರಕ್ತ ತಡೆಯಲು ಎತ್ತರಕ್ಕೆ ಎತ್ತಿ.

• ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದರೆ ಅಥವಾ ವಾಂತಿಯಾಗುತ್ತಿದ್ದರೆ, ಅವರನ್ನು ಹೊರಳಿಸಿ, ಆಘಾತವಾಗುವುದನ್ನು ತಪ್ಪಿಸಿ.

• ಗಾಯದ ಸುತ್ತ ನಿಧಾನವಾಗಿ ಒತ್ತಡ ಹಾಕಿ ಮತ್ತು ಬಾಯಿಯ ಬಳಿ ಆದ ಗಾಯವನ್ನು ಮುಚ್ಚಲು ಚರ್ಮವನ್ನು ಒತ್ತುವ ಮೂಲಕ ಒತ್ತಿ ಹಿಡಿಯುಲು ಪ್ರಯತ್ನಿಸಿ. ಇದು ರಕ್ತಸ್ರಾವ ವನ್ನು ಕಡಿಮೆ ಮಾಡುತ್ತದೆ ಮತ್ತು ಗಾಯಾಳು ರಕ್ತಸ್ರಾವದಿಂದಲೇ ಸಾವನ್ನಪ್ಪುವುದನ್ನು ತಡೆಯುತ್ತದೆ.

• ವ್ಯಕ್ತಿಯೂ ತೀವ್ರವಾಗಿ ಗಾಯಗೊಂಡಿದ್ದರೆ, ನೆರವು ಸಿಗದೇ ಇರುವ ಅಥವಾ ತಡವಾಗುತ್ತಿರುವ ಸಂದರ್ಭದಲ್ಲಿ ಹತ್ತಿರದ ಆಸ್ಪತ್ರೆಗೆ ಒಯ್ಯಲು ಪ್ರಯತ್ನಿಸಿ. ಇದರಿಂದ ಗೋಲ್ಡನ್ ಸಮಯದೊಳಗೆ ಅಗತ್ಯ ಚಿಕಿತ್ಸೆ ಸಿಗಬಹುದು.

https://www.facebook.com/DiageoRTS18/videos/380691759340658/

ಭಯ ಮತ್ತು ಆತಂಕಗಳಿಂದ ನಿಮ್ಮಲ್ಲಿರುವ ಜವಾಬ್ದಾರಿಯುತ ನಾಗರಿಕನ ಗುಣ ಮತ್ತು ಉತ್ತಮ ವ್ಯಕ್ತಿಯಾಗುವುದನ್ನು ತಡೆಯಬೇಡಿ. ರಾಷ್ಟ್ರಪತಿ ಕೋವಿಂದ್ ಅವರು ಉತ್ತಮ ನಾಗರಿಕ ಮಸೂದೆಯನ್ನು 2016ರಲ್ಲಿ ಅನುಮತಿ ನೀಡಿದ್ದಾರೆ. ಹಾಗೆಯೇ ಸುಪ್ರೀಂ ಕೋರ್ಟ್ ಉತ್ತಮ ನಾಗರಿಕ ಕಾನೂನನ್ನು ಅಂಗೀಕರಿಸಿತು. ಈ ಕಾನೂನು, ರಸ್ತೆ ಅಪಘಾತದಲ್ಲಿ ಗಾಯಾಳುಗಳಿಗೆ ನೆರವಾಗುವ ನಾಗರಿಕರಿಗೆ ಕಾನೂನಿನ ತೊಡಕುಗಳು ಮತ್ತು ಕಿರಿಕಿರಿಗಳಿಂದ ಕಾನೂನು ರಕ್ಷಣೆಯನ್ನು ಒದಗಿಸುತ್ತದೆ.

ನಿಮ್ಮ ಮಾನವೀಯತೆ ಮತ್ತು ನಿಮ್ಮೊಳಗಿನ ನಾಯಕತ್ವದ ಗುಣ ತೋರ್ಪಡಿಸಿ ಮತ್ತು ಅಪಘಾತದ ಸಂತ್ರಸ್ತರ ನೆರವಾಗಿ. ಇದರಿಂದ ಅಪಘಾತದಿಂದ ಆಗುವ ಸಾವಿನ ಸಂಖ್ಯೆಗಳನ್ನು ಕಡಿಮೆ ಮಾಡಬಹುದು. ಇಂತಹದೊಂದು ರಸ್ತೆ ಅಪಘಾತದ ಕುರಿತಾದ ಜಾಗೃತಿ ಮೂಡಿಸುವ ಕಾರ್ಯಕ್ಕೆ ಡಿಯಾಗೊ ಮತ್ತು ನೆಟ್​ವರ್ಕ್​ 18 ಬೆಂಬಲವಾಗಿ ನಿಂತಿದೆ.

First published:June 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ