ರಿಮೂವರ್​ ಇಲ್ಲದೆ ಉಗುರು ಬಣ್ಣ ತೆಗೆಯುವ ಸುಲಭದ ಉಪಾಯಗಳು

news18
Updated:February 7, 2018, 5:15 PM IST
ರಿಮೂವರ್​ ಇಲ್ಲದೆ ಉಗುರು ಬಣ್ಣ ತೆಗೆಯುವ ಸುಲಭದ ಉಪಾಯಗಳು
news18
Updated: February 7, 2018, 5:15 PM IST
ನ್ಯೂಸ್​ 18 ಕನ್ನಡ

ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಈಗ ಲಿಂಗ ಬೇಧವಿಲ್ಲದೆ ಎಲ್ಲರೂ ಕೇಶ ಹಾಗೂ ತ್ವಚೆಯ ಆರೈಕೆ ಮಾಡುತ್ತಿದ್ದಾರೆ. ಅದರಲ್ಲೂ ಹುಡುಗಿಯರು ತ್ವಚೆ ಹಾಗೂ ಕೂದಲಿನ ಜತೆಗೆ ಈಗ ಉಗುರಿನ ಆರೈಕೆಯನ್ನೂ ಮಾಡುತ್ತಾರೆ. ಉಗುರನ್ನು ಸ್ವಚ್ಛಗೊಳಿಸಿ, ಅದಕ್ಕೆ ಬಣ್ಣ ಹಚ್ಚುವುದು. ಅದು ಮಾಸಿದ ನಂತರ ಬೇರೆ ಬಣ್ಣ ಹಚ್ಚುವುದು ಸಾಮಾನ್ಯ. ಆದರೆ ಬಣ್ಣ ಹಚ್ಚಿದ ನಂತರ ಅದನ್ನು ತೆಗೆಯಲು ನೇಲ್​ ಪಾಲಿಷ್​ ರಿಮೂವರ್​ ಅನ್ನು ಬಳಸುತ್ತಾರೆ.

ಆದರೆ ಬೇಕೆಂದಾಗಲೆಲ್ಲ ನೇಲ್​ ಪಾಲಿಷ್​ ರಿಮೂವರ್​ ಸಿಗುತ್ತದೆ ಎಂದಲ್ಲ. ಕೆಲವೊಮ್ಮೆ ನೇಲ್​ ಪಾಲಿಷ್​ ರಿಮೂವರ್​ ಸಿಗದಾಗ ಏನು ಮಾಬೇಕು ಎಂದು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಉಗುರು ಬಣ್ಣ ಬಳಸುವವರು ಒಂದಲ್ಲಾ ಒಂದು ದಿನ ಅನುಭವಿಸಿಯೇ ಇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಉಗುರು ಬಣ್ಣ ತೆಗೆಯಲು ನೈಸರ್ಗಿಕ ವಿಧಾನಗಳ ಮೊರೆ ಹೋಗಬಹುದು. ಅದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಉಗುರು ಬಣ್ಣವನ್ನು ತೆಗೆಯಬಹುದು.

ಟೂತ್ ಬ್ರಶ್​ಗೆ ಒಂದಿಷ್ಟು ಟೂತ್ ಪೇಸ್ಟ್ ಅನ್ನು ಹಚ್ಚಿ, ಉಗುರುಗಳ ಮೇಲೆ ನಿಧಾನವಾಗಿ ಉಜ್ಜಿ, ನಂತರ ಉಗುರುಗಳನ್ನು ನೀರಿನಿಂದ ತೊಳೆಯಿರಿ. ಆಗ ನಿಮ್ಮ ಉಗುರುಗಳಲ್ಲಿದ್ದ ಬಣ್ಣ ಮಾಯವಾಗುತ್ತದೆ. ಮನೆಯಲ್ಲಿ ಪಾತ್ರೆ, ಎಲೆಕ್ಟ್ರಾನಿಕ್​ ಉಪಕರಣಗಳನ್ನು ಸ್ವಚ್ಛಗೊಳಿಸುವ ಪದಾರ್ಥಗಳಿಂದಲೂ ನೇಲ್​ ಪಾಲಿಷ್​ ತೆಗೆಯಬಹುದು.

ಸುಗಂಧ ದ್ರವ್ಯವನ್ನು ಉಗುರಿನ ಮೇಲೆ ಸಿಂಪಡಿಸಿ, ನಂತರ ಅದನ್ನು ಹತ್ತಿಯಿಂದ ಸ್ವಚ್ಛಗೊಳಿಸಿದರೆ ಉಗುರು ಬಣ್ಣ ಮಾಯವಾಗುತ್ತದೆ. ಅಷ್ಟೇಅಲ್ಲದೆ ಹೇರ್ ಸ್ಪ್ರೇಯನ್ನು ಸಹ ಉಗುರು ಬಣ್ಣ ತೆಗೆಯಲು ಬಳಸಬಹುದು.
First published:February 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ