ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಕೈ ಬೆರಳುಗಳ ಸೌಂದರ್ಯವನ್ನು ಹೆಚ್ಚಿಸಲು ನೈಲ್ ಪಾಲಿಶ್ ಬಳಕೆ ಮಾಡುತ್ತಾರೆ. ವಿವಿಧ ಬಣ್ಣದ ವಿವಿಧ ರೀತಿಯ ನೈಲ್ ಪಾಲಿಶ್ಗಳು ಈಗ ಲಭ್ಯವಿದೆ. ನೈಲ್ ಪಾಲಿಶ್ ಇಲ್ಲದೆ ಹೆಚ್ಚಿನ ಹೆಣ್ಣು ಮಕ್ಕಳು ಇರುವುದಿಲ್ಲ. ಮದುವೆ ಅಥವಾ ಇನ್ನಿತರ ಶುಭ ಕಾರ್ಯಗಳ ಸಮಾರಂಭಗಳಲ್ಲಂತೂ ವಿಧ ವಿಧವಾದ ನೈಲ್ ಪಾಲಿಶ್ ಬಳಕೆ ಸಾಮಾನ್ಯವಾದದ್ದು. ಇನ್ನು ನೈಲ್ ಪಾಲಿಶ್ಗಳನ್ನು ವಿವಿಧ ರೀತಿಯಲ್ಲಿ ಸ್ಟೈಲಿಶ್ ಆಗಿ ಹಾಕುವುದನ್ನ ನೋಡಿರುತ್ತೇವೆ. ನೀವು ಹಾಗೆಯೇ ನೈಲ್ ಪಾಲಿಶ್ ಹಾಕಿಕೊಳ್ಳುವುದು ಹೇಗೆ ಅಂತ ಯೊಚನೆ ಮಾಡುತ್ತಿದ್ರೆ ಇಲ್ಲಿದೆ ಪರಿಹಾರ.
ಹೌದು, ಕೇವಲ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಉಪಯೋಗಿಸಿ ನಿಮ್ಮ ಉಗುರುಗಳನ್ನು ಸುಂದರವಾಗಿ ಕಾಣುವಂತೆ ಮಾಡಬಹುದು. ಹೇಗೆ ಎಂಬುದು ಇಲ್ಲಿದೆ.
ನಿಮ್ಮ ಮನೆಗಳಲ್ಲಿ ಸೆಲ್ಲೋ ಫೆನ್ ಟೇಪ್ ಸಾಮಾನ್ಯವಾಗಿ ಇರುತ್ತದೆ. ಇದನ್ನು ಬಳಸಿ ನೀವು ವಿಭಿನ್ನವಾಗಿ ನೈಲ್ ಪಾಲಿಶ್ ಹಾಕಿಕೊಳ್ಳಬಹುದು. ಸೆಲ್ಲೋ ಫೇನ್ ಟೇಪ್ ತೆಗೆದುಕೊಂಡು ನಿಮ್ಮ ಉಗುರಿನ ಅರ್ಧ ಭಾಗಕ್ಕೆ ಅಂಟಿಸಿಕೊಳ್ಳಿ . ಇನ್ನುಳಿದ ಅರ್ಧ ಭಾಗಕ್ಕೆ ನಿಮಗಿಷ್ಟದ ಬಣ್ಣದ ನೈಲ್ ಪಾಲಿಶ್ ಅನ್ನು ಹಚ್ಚಿ . ಅದನ್ನು ಒಣಗಲು ಹೊತ್ತು ಬಿಡಿ. ಇದು ಒಣಗಿದ ನಂತರ ನಂತರ ಹಾಕಿರುವ ಸೆಲ್ಲೋ ಫೇನ್ ಟೇಪ್ ಅನ್ನು ತೆಗೆದುಹಾಕಿ. ಇನ್ನುಳಿದ ಅರ್ಧ ಭಾಗಕ್ಕೆ ಮೊದಲ ಬಣಕ್ಕೆ ಮ್ಯಾಚ್ ಆಗುವ ಇನ್ನೊಂದು ಬಣ್ಣದ ನೈಲ್ ಪಾಲಿಶ್ ಅನ್ನು ಹಾಕಿ. ಇದು ನೋಡಲು ಕೂಲ್ ಆಗಿ ಕಾಣುತ್ತದೆ.
ಇದನ್ನೂ ಓದಿ: ಟಾನ್ಸಿಲ್ ನೋವಿಗೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
ಮೊದಲು ನಿಮಗೆ ಬೇಕಾದ ಬಣ್ಣದ ಲೈಟ್ ಕಲರ್ ನೈಲ್ ಪಾಲಿಶ್ ಅನ್ನು ಉಗುರುಗಳಿಗೆ ಹಾಕಿ, ಅದನ್ನು ಒಣಗಿಸಿ . ನಂತರ ಡಾರ್ಕ್ ಕಲರ್ ನೈಲ್ ಪಾಲಿಶ್ ಅನ್ನು ತೆಗುದುಕೊಂಡು ಟೂತ್ ಪಿಕ್ ಸಹಾಯದಿಂದ ಪಾಲಿಶ್ ಮೇಲೆ ಚುಕ್ಕೆ ಚುಕ್ಕೆಯನ್ನು ಇಡಬೇಕು . ಅಲ್ಲದೇ ಡಾರ್ಕ್ ಬಣ್ಣದ ನೈಲ್ ಪಾಲೀಶ್ ಹಚ್ಚಿ ಅದರ ಮೇಲೆ ಲೈಟ್ ಬಣ್ಣದ ಚುಕ್ಕಿಗಳನ್ನು ಇಟ್ಟರೆ ತುಂಬಾ ಸುಂದರವಾಗಿ ಕಾಣುತ್ತದೆ. ನೀವು ಹಾಕಿರುವ ಬಟ್ಟೆಯಲ್ಲಿ ಯಾವ ಬಣ್ಣಗಳು ಇದೆ ಎಂಬುದನ್ನ ಗಮನಿಸಿ ಅದಕ್ಕೆ ತಕ್ಕಂತೆ ಬಣ್ಣಗಳನ್ನು ಮ್ಯಾಚ್ ಮಾಡಿ.
ಮೊದಲೇ ಹೇಳಿದಂತೆ ಮನೆಯಲ್ಲಿರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಉಗುರುಗಳನ್ನು ಸುಂದರಗೊಳಿಸಬಹುದು. ನಿಮ್ಮ ಮನೆಗಳಲ್ಲಿ ಇಯರ್ ಬಡ್ ಗಳು ಸಾಮಾನ್ಯ. ಇದನ್ನು ಬಳಸಿಕೊಂಡು ನೀವು ಸುಂದರವಾದ ನೈಲ್ ಆರ್ಟ್ ತಯಾರಿಸಬಹುದು. ಇಯರ್ ಬಡ್ ಅನ್ನು ಬಳಸಿ ನಿಮಗೆ ಬೇಕಾದ ನೈಲ್ ಪಾಲಿಶ್ ಅನ್ನು ಹಚ್ಚಿಕೊಳ್ಳಿ. ಆದಷ್ಟು ಡಾರ್ಕ್ ಬಣ್ಣವನ್ನು ಆಯ್ಕೆ ಮಾಡುವುದು ಉತ್ತಮ. ನಂತರ ಅದರ ಮೇಲೆ ಮತ್ತೊಂದು ಬಣ್ಣವನ್ನು ಹಾಕಿ, ಇಯರ್ ಬಡ್ ಮೂಲಕ ಅದರ ಮೇಲೆ ನಿಮಗೆ ಬೇಕಾದ ಚಿತ್ರವನ್ನು ಬರೆಯಬಹುದು. ಇದು ವಿಶಿಷ್ಟವಾದ ಲುಕ್ ನೀಡುವುದಲ್ಲದೆ ಹೆಚ್ಚು ಗಮನ ಸೆಳೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ