Beauty Tips: ಮನೆಯಲ್ಲಿಯೇ ನೈಲ್ ಆರ್ಟ್ ಮಾಡಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ

Nail Art: ನಿಮ್ಮ ಉಗುರಿನ ಅಂದವನ್ನು ಮನೆಯಲ್ಲಿಯೇ ಹೆಚ್ಚಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ನಾವು ಸಲೂನ್​ಗೆ ಹೋಗಿ ನಮ್ಮ ಉಗುರಿನ ಸೌಂದರ್ಯ ಹೆಚ್ಚಿಸುವುದು ಬೇಡ.

ಸಾಂದರ್ಭಿಕ  ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಉಗುರಿನ ಮೇಲೆ ವಿಭಿನ್ನ ಡಿಸೈನ್ ಮಾಡಿಕೊಳ್ಳುವುದನ್ನ ಇಷ್ಟಪಡುತ್ತೀರಾ? ನಿಮ್ಮ ಉಗುರುಗಳಿಗೆ ಅಂದ ನೀಡಲು ಹಲವಾರು ಸಲೂನ್​ಗಳಿವೆ, ಆದರೆ ಅದರ ಬದಲು ನೀವು ಮನೆಯಲ್ಲಿಯೇ ನಿಮ್ಮ ಉಗುರುಗಳ ಮೇಲೆ ಆರ್ಟ್ ಮಾಡಿಕೊಂಡರೆ ಹೇಗಿರುತ್ತದೆ. ಹೌದು, ಮನೆಯಲ್ಲಿ ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಫ್ರೆಂಚ್ ಮೆನಿಕ್ಯೂರ್
ನೀವು ನಿಮ್ಮ ಉಗುರುಗಳ ತುದಿಯನ್ನು ಬಿಳಿ ನೈಲ್ ಪೇಂಟ್ ಹಾಕಿ ಮಾಡಿಕೊಳ್ಳಬಹುದು ಅಥವಾ ಬಣ್ಣಗಳನ್ನು ಬಳಕೆ ಮಾಡಬಹುದು. ಫ್ರೆಂಚ್ ಮೆನಿಕ್ಯೂರ್ ನಿಮಗೆ ನಿಖರವಾಗಿ ಬರುವ ಅಗತ್ಯವಿಲ್ಲ. ಜೊತೆಗೆ ಹೆಚ್ಚಿನ ಕೌಶಲ್ಯ ಕೂಡ ಬೇಡ. ಇದನ್ನು ನೀವು ಸುಲಭವಾಗಿ ಮನೆಯಲ್ಲಿ ಮಾಡಬಹುದು. ಫ್ರೆಂಚ್ ಮೆನಿಕ್ಯೂರ್ ಮಾಡಿಕೊಳ್ಳಲು ನೀವು ಮಾಸ್ಕಿಂಗ್ ಟೇಪ್ ಬಳಸಿ ಪ್ರಯತ್ನಿಸಬಹುದು. ಸರಳವಾಗಿ ಹತ್ತು ಪಟ್ಟಿಗಳ ಟೇಪ್ ಕತ್ತರಿಸಿ ಅದನ್ನು ನಿಮ್ಮ ಉಗುರುಗಳ ಸುತ್ತಲೂ ಸುತ್ತಿ, ನಿಮ್ಮ ಉಗುರುಗಳ ತುದಿಗಳನ್ನು ಮಾತ್ರ ಹಾಗೆಯೇ ಬಿಡಿ. ಈಗ, ನಿಮ್ಮ ಬಿಳಿ ಪಾಲಿಶ್ ಅಥವಾ ಕಲರ್ ಪಾಲಿಶ್ ಬಳಿದು ಅದನ್ನು ಒಣಗಲು ಬಿಡಿ. ಟೇಪ್ ತೆಗೆದುಹಾಕಿ ಮತ್ತು ನಂತರ ನಿಮ್ಮ ಉಗುರುಗಳಿಗೆ ಸ್ಪಷ್ಟವಾದ ಹೊಳಪು ನೀಡಿ.

ಇದನ್ನೂ ಓದಿ: ಬೇಬಿ ವೈಪ್ಸ್ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

ಒಂಬ್ರೆ ಮೆನಿಕ್ಯೂರ್
ನೀವು ಒಂಬ್ರೆ ಮೆನಿಕ್ಯೂರ್ ಇಷ್ಟಪಡುವುದಾದರೆ ಅದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಒಂದು ಸ್ಪಂಜನ್ನು ತೆಗೆದುಕೊಂಡು ಅದನ್ನು ಸಣ್ಣ ಚೌಕಕಾರದಲ್ಲಿ ಕತ್ತರಿಸಿ, ಅದರ ಅರ್ಧದಷ್ಟು ಭಾಗವನ್ನು ಡಾರ್ಕ್ ಬಣ್ಣವನ್ನು ಮತ್ತು ಇನ್ನೊಂದನ್ನು ಲೈಟ್ ಬಣ್ಣವನ್ನು ಹಚ್ಚಿ. ನಿಮ್ಮ ಉಗುರುಗಳ ಮೇಲೆ ಸ್ಪಂಜನ್ನು ಸ್ಮೀಯರ್ ಮಾಡಿ. ಅಗತ್ಯವಿದ್ದಲ್ಲಿ ಸ್ಪಾಂಜ್‌ಗೆ ಎರಡೂ ಶೇಡ್‌ಗಳಲ್ಲಿ ಹೆಚ್ಚು ನೈಲ್ ಪಾಲಿಶ್ ಸೇರಿಸಿ. ಪಾಲಿಶ್ ಹಚ್ಚಿದ ನಂತರ ಅದು ಒಣಗುವವರೆಗೆ ಕಾಯಿರಿ, ಒಣಗಿದ ಮೇಲೆ ಇನ್ನೊಂದು ಕೋಟ್ ಹಾಕಿ.

ಡಾಟ್ ಡಿಸೈನ್
ನಿಮ್ಮ ಉಗುರಿನ ಮೇಲೆ ಚುಕ್ಕಿಗಳ ಡಿಸೈನ್ ಮಾಡಿಕೊಳ್ಳುವುದು ಇಷ್ಟಾನಾ? ಅದನ್ನು ಮಾಡಲು ಹಲವು ಪರಿಕರಗಳ ಅಗತ್ಯ ಇದೆ ಎಂದು ಯೊಚಿಸುತ್ತಿದ್ದರೆ, ಇಲ್ಲ. ಸಾಮಾನ್ಯವಾಗಿ ಸಲೂನ್​ಗ ಳಲ್ಲಿ ಕೆಲವು ವಸ್ತುಗಳನ್ನು ಹೊಂದಿರುತ್ತಾರೆ. ಆದರೆ ಮನೆಯಲ್ಲಿ ಮಾಡುವಾಗ ಇನ್ನು ಸುಲಭ. ನೀವು ಪಿನ್ ಅಥವಾ ಟೂತ್‌ಪಿಕ್‌ನಂತಹ ಸಾಮಾನ್ಯ ವಸ್ತುಗಳನ್ನು ಬಳಸಬಹುದು. ನೀವು ಮೊದಲು ನಿಮ್ಮ ನೆಚ್ಚಿನ ಬಣ್ಣವನ್ನು ಉಗುರಿಗೆ ಹಾಕಿ ಸ್ವಲ್ಪ ಸಮಯ ಒಣಗಲು ಬಿಡಿ. ತದನಂತರ ಪಿನ್ ಅಥವಾ ಪ್ಲ್ಯಾಟ್ ಆಗಿರುವ ಟೂತ್‌ಪಿಕ್‌ನ ತುದಿಯನ್ನು ನೈಲ್ ಪಾಲಿಶ್ ನಲ್ಲಿ ಅದ್ದಿರಿ ಮತ್ತು ನಿಮ್ಮ ಉಗುರುಗಳ ಮೇಲೆ ಉಗುರುಗಳ ಮೇಲೆ ಚುಕ್ಕೆಗಳನ್ನು ರಚಿಸಿ. ಅಲ್ಲದೇ ನೀವು ನೈಲ್ ಪಾಲಿಶ್ ಹಾಕಿದ ನಂತರ ಅದರ ಮೇಲೆ ಚಿತ್ರಗಳನ್ನು ಬರೆದುಕೊಳ್ಳಬಹುದು. ಈ ಹ್ಯಾಕ್ ಪೋಲ್ಕಾ ಡಾಟ್ ನೇಲ್ ಆರ್ಟ್ ಗೆ ಮಾತ್ರವಲ್ಲ ನಿಮ್ಮ ಉಗುರುಗಳ ಮೇಲೆ ಹೂವಿನ ಚಿತ್ರವನ್ನು ಬರೆಯಲು ಸಹಾಯ ಮಾಡುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: